ಸದಸ್ಯ:Varshini Chandrashekar/ನನ್ನ ಪ್ರಯೋಗಪುಟ
From Wikipedia, the free encyclopedia
ಏಕಾಣುಜೀವಿಶಾಸ್ತ್ರ
ಅತ್ಯಂತ ಕೆಳದರ್ಜೆಯ ಮತ್ತು ಒಂದೇ ಕೋಶವಿರುವ ಜೀವಿಗಳಾದ ಏಕಾಣುಜೀವಿಗಳ (ಬ್ಯಾಕ್ಟೀರಿಯಾ) ಶಾಸ್ತ್ರೀಯ ಅಭ್ಯಾಸ (ಬ್ಯಾಕ್ಟೀರಿಯಾಲಜಿ).[1] ಈ ಶಾಸ್ತ್ರದ ಶಾಖೆಗಳು ಅನೇಕ ವಿಜ್ಞಾನ ಕ್ಷೇತ್ರಗಳಲ್ಲಿ ವ್ಯಾಪಿಸಿವೆ. ಉದಾಹರಣೆಗೆ ವೈದ್ಯವಿಜ್ಞಾನದ ಸೂಕ್ಷ್ಮಜೀವಿಶಾಸ್ತ್ರ (ಮೈಕ್ರೊಬಯಾಲಜಿ), ಕೃಷಿ ವಿಜ್ಞಾನದ ಭೂ ಏಕಾಣುಜೀವಿಶಾಸ್ತ್ರ (ಸಾಯಿಲ್ ಬ್ಯಾಕ್ಟೀರಿಯಾಲಜಿ), ಕೈಗಾರಿಕಾ ಕ್ಷೇತ್ರದ ಏಕಾಣುಜೀವಿಶಾಸ್ತ್ರ (ಇಂಡಸ್ಟ್ರೀಯಲ್ ಬ್ಯಾಕ್ಟೀರಿಯಾಲಜಿ)-ಇತ್ಯಾದಿ. ಒಂದೇ ಕೋಶವುಳ್ಳ ಈ ಜೀವಿಗಳು ಅತಿಸೂಕ್ಷ್ಮ. ಇವು ಕಣ್ಣುಗಳಿಗೆ ಅಗೋಚರ. ಸೂಕ್ಷ್ಮದರ್ಶಕಗಳ ಮೂಲಕ ಮಾತ್ರ ಇವನ್ನು ನೋಡಬಹುದು. ಇವುಗಳಲ್ಲಿ ಅನೇಕ ವಿಧಗಳಿವೆ. ಕೆಲವು ಮಾನವವರ್ಗಕ್ಕೆ ಉಪಕಾರಿಗಳು ಮತ್ತೆ ಕೆಲವು ಅಪಕಾರಿಗಳು ಏಕಾಣುಜೀವಿಗಳು ಪ್ರಾಣಿವರ್ಗಕ್ಕೆ ಸೇರಿದವುಗಳೇ ಅಥವಾ ಸಸ್ಯವರ್ಗಕ್ಕೆ ಸೇರಿದವೆ? ಸಸ್ಯವರ್ಗಕ್ಕೆ ಸೇರಿದ ಶೈವಲ ಮತ್ತು ಶಿಲೀಂಧ್ರಗಳಿಗಿಂತಲೂ ಪ್ರಾಣಿವರ್ಗಕ್ಕೆ ಸೇರಿದ ಮೂಲಜೀವಿಗಳಿಗಿಂತಲೂ (ಪ್ರೋಟೊeóÉೂೀವಾ) ಇವು ಮೂಲಜೀವಿಗಳೆಂದು ಪರಿಗಣಿಸಲಾಗಿದೆ. ಹೋಲಿಕೆಯಲ್ಲಿ ಶೈವಲ ಶಿಲೀಂಧ್ರಗಳಿಗೇ ಸಮೀಪ ಸಂಬಂಧ. ಆದ್ದರಿಂದ ಏಕಾಣುಜೀವಿಗಳನ್ನು ಸ್ಕೀeóÉೂೀಮೈಸೀಟ ಎಂಬ ದಂಡಾಣುಜೀವಿಗಳ ಗುಂಪಿನಲ್ಲಿ ಶೈವಲ ಶಿಲೀಂಧ್ರಗಳ ನಡುವೆ ತೋರಿಸಲಾಗಿದೆ.[2]