ಜನನ/ಜೀವನ

Thumb
ಆನೇಕಲ್ ಕಂಬದ ಗಣಪತಿ

ನಂದಿತಾ.ಜಿ ಯಾದ ನಾನು ದಿನಾಂಕ ೧೦.೧೧.೧೯೯೯ರಂದು ಮಧ್ಯರಾತ್ರಿ ಸುಮಾರು ೨:೩೦,ಬುಧವಾರದಂದ್ದು ತಾಯಿಯ ತವರು ಮನೆಯಾದ ಕನಕಪುರ ತಾಲ್ಲೂಕಿನ ಆಸ್ಪತ್ರೆಯಲ್ಲಿ ಎ.ವಿ.ಗಿರಿರಾಜು ಹಾಗೂ ಶಾರದ ದಂಪತಿಗೆ ದ್ವಿತೀಯ ಪುತ್ರಿಯಾಗಿ ಕ್ಷತ್ರೀಯ ವಂಶದಲ್ಲಿ ಜನಿಸಿದೆ.ನಾನು ನನ್ನ ಕುಟುಂಬದೊಂದಿಗೆ ಆನೇಕಲ್ ತಾಲ್ಲೂಕಿನಲ್ಲಿ ವಾಸವಿದ್ದೀನಿ.ನನ್ನ ತಂದೆಯವರು ಸಾರಿಗೆ ಸಂಸ್ಥೆಯಲ್ಲಿ ಕಾರ್ಯಾಪ್ರವೃತ್ತರಾಗಿದ್ದಾರೆ.ನನ್ನ ತಾಯಿ ಗೃಹಿಣಿ,ನನ್ನ ಅಕ್ಕ ನನ್ನ ಸಹೋದರಿ ಮಾತ್ರವಲ್ಲದೆ ನನ್ನ ಗೆಳತಿಯು ಹೌದು ,ಆಕೆ ಗೌಸಿಯ ಪಾಲಿಥೆನಿಕ್ ಫಾರ್ ವಿಮ್ಮೆನ್ ಕಾಲೇಜಿನಲ್ಲಿ ವಿದ್ಯಾಭ್ಯಾಸಮಾಡಿ ಈಗ ಫ್ಯಾಷನ್ ಡಿಸೈನರ್ರಾಗಿದ್ದಾರೆ. ನನ್ನ ಬಾಲ್ಯವನ್ನುನನ್ನ ಅಕ್ಕನೊಂದಿಗೆ ಕಳೆದೆ ಹಾಗೂ ನಮ್ಮ ಮನೆಯಲ್ಲಿ ಪುಟ್ಟ ನಾಯಿಮರಿ ಇರುವುದು ಅದರ ಹೆಸರು ಹ್ಯಾಪಿ.ಯಾವಾಗಲು ನಾನು ನನ್ನ ನಾಯಿಯ ಜೊತೆ ಸಮಯ ಕಳೆಯುತ್ತೇನೆ.ನಾವು ಸುಮಾರು ೨೫ ವರ್ಷಗಳಿಂದ ಆನೇಕಲ್ ಪಟ್ಟಣದಲ್ಲಿ ವಾಸವಿದ್ದೇವೆ.

ವಿದ್ಯಾಭ್ಯಾಸ

Thumb
ಕ್ರೈಸ್ಟ್ ವಿಶ್ವವಿದ್ಯಾಲಯ,ಬೆಂಗಳೂರು

ಆನೇಕಲ್ ತಾಲ್ಲೂಕಿನಲ್ಲಿರುವ ಲಿಂಕನ್ ಸ್ಮಾರಕ ಆಂಗ್ಲ ಪಾಠಶಾಲೆಗೆ ೨೦೦೨ರಲ್ಲಿ ಮಾಂಟೆಸ್ಸರಿಗೆ ಸೇರಿಕೊಂಡೆನು.೨೦೧೫ರಲ್ಲಿ ಹತ್ತನೇ ತರಗತಿಯನ್ನು ಮುಗಿಸಿ,ಶೇಕಡಾ ೮೨.೨೪% ಪಡೆದು ಉತ್ತೀರ್ಣಳಾಗಿರುವೆ.ಪದವಿ ಪೂರ್ವ ಶಿಷಣವನ್ನು ವಿಶ್ವಚೇತನ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡಿರುವೆ.ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡಾ ೮೮.೧೭% ದೊರಕಿದೆ.ಪಿ.ಯು.ಸಿಯ ನಂತರ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿಕಾಂ ಸೇರಲು ನಿರ್ಧಾರಮಾಡಿದೆ, ಕ್ರೈಸ್ಟ್ನಲ್ಲಿ ಬಿ.ಕಾಂಗೆ ಸೀಟು ಸಿಕ್ಕಿದಾಗ ನನ್ನಗಾದ ಖುಷಿ ವರ್ಣಿಸಲು ಆಸಾಧ್ಯ.ಬಿಕಾಂನಲ್ಲಿ ಹೆಚ್ಚು ಅಂಕಗಳಿಸಬೇಕೆಂಬ ಹಠವಿದೆ ಅದಕ್ಕಾಗಿ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೇನೆ.ಬಿಕಾಂ ಜೊತೆಗೆ ಸಿಎಸ್ಎಗೆ ಸೇರಿರುವೆ.ಬಿಕಾಂ ನಂತರ ಎಂಬಿಎ ಅಥವಾ ಸಿಎ ಮಾಡಬೇಕೆಂಬ ಆಸೆ ಇದೆ.ಅದಕ್ಕಾಗಿ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇನೆ.ವಿದ್ಯಾಭ್ಯಾಸದ ಜೊತೆ ಡಿ.ಸಿ.ಎ,ಡಿ.ಟಿ.ಪಿ,ಮೈಕ್ರೋಸಾಫ್ಟ್,ಟ್ಯಾಲಿ,ಫೋಟೋಶಾಪ್ ಕಲಿತಿರುವೆ.

ಪ್ರಶಸ್ತಿ

ನನ್ನಗೆ ಶಾಲೆಯಲ್ಲಿ ಹಾಗೂ ಕಾಲೇಜಿನಲ್ಲಿ ಹಲವು ಪ್ರಶಸ್ತಿಗಳು ದೊರಕಿದೆ ಬೆಸ್ಟ್ ಸ್ಟೂಡೆಂಟ್.ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ.ಪ್ರತಿಭಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ.ರಸಪ್ರಶ್ನೆ ಸ್ಪರ್ಧೆಯಲ್ಲಿ ನನ್ನ ತಂಡಕ್ಕೆ ಪ್ರಥಮ ಬಹುಮಾನ ಸಿಕ್ಕಿತ್ತು.ಸಂಗೀತದಲ್ಲಿ ತೃತೀಯ ಬಹುಮಾನ. ಕ್ರೀಡೆಯಲ್ಲಿ ಅನೇಕ ಪ್ರಶಸ್ತಿಗಳು ಲಭಿಸಿದೆ.ಶಾಲೆಯಲ್ಲಿ ನೃತ್ಯ ಮಾಡಿ ಬಹುಮಾನ ಗಳಿಸಿರುವೆ.ಕಳೆದ ವರ್ಷ ೨೦೧೭ನ ಕ್ರಿಸ್ಮಸ್ ಸಂದರ್ಭದಲ್ಲಿ ಆಯೋಜಿಸಿದ ಕೇಕ್ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಬಹುಮಾನ ದೊರಕಿತ್ತು.ಎರಡು ತಿಂಗಳ ಹಿಂದೆ ಕೇಶ ಸ್ಪರ್ಧೆ,ರಂಗೋಲಿ ಸ್ಪರ್ಧೆ,ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ.

ಹವ್ಯಾಸ

ನನ್ನಗೆ ಹೊಸವಿಷಯಗಳನ್ನು ಕಲಿಯುವುದೆಂದರೆ ತುಂಬಾ ಆಸಕ್ತಿ.ಬಿಡುವಿನ ಸಮಯದಲ್ಲಿ ಯಾವುದಾದರು ಹೊಸ ವಿಷಯಗಳನ್ನು ಕಲಿಯುತ್ತಿರುತ್ತೀನಿ.ನನ್ನ ಹವ್ಯಾಸಗಳೆನೆಂದರೆ ಹಾಡು ಹಾಡುವುದು,ಯೂಟೂಬ್ ನಲ್ಲಿ ಕಲೆಗಳ ಚಿತ್ರಗಳನ್ನು ನೋಡಿ ಅದನ್ನು ಮನೆಯಲ್ಲಿ ಪ್ರಯತ್ನ ಮಾಡುವುದು.ಕಾಲೇಜಿನಲ್ಲಿ ಬಿಡುವಿರುವಾಗ ಗ್ರಂಥಾಲಯಕ್ಕೆ ಹೋಗಿ ಪುಸ್ತಕಗಳನ್ನು ಓದುವುದೆಂದರೆ ಇಷ್ಟ.ನನ್ನಗೆ ದ.ರಾ.ಬೇಂದ್ರೆ ಪ್ರಶಸ್ತಿ ಸಿಕ್ಕಿದೆ.ನಾನು ಕ್ರಿಯೆಟಿವಿಟಿ,೩೦ ಸಮ್ ತಿಂಗ್ ಸಿಇಒ,ಪ್ರಕೃತಿ ಎಂಬ ಪುಸ್ತಕಗಳನ್ನು ಓದಿರುವೆ.ನನ್ನಗೆ ಹಲವು ಭಾಷೆಗಳನ್ನು ಕಲಿಯುವುದೆಂದರೆ ತುಂಬಾ ಇಷ್ಟ ನನ್ನಗೆ ಇಂಗ್ಲೀಷ್, ಕನ್ನಡ ,ಹಿಂದಿ ಭಾಷೆಗಳನ್ನು ಸಂಪೂರ್ಣವಾಗಿ ಮಾತನಾಡಲು ಹಾಗೂ ಬರೆಯಲು ಬರುತ್ತದೆ.ತೆಲುಗು,ತಮಿಳು,ಮಾಲಯಾಳಂ ಭಾಷೆಗಳನ್ನು ಕಲಿಯುತ್ತಿದ್ದೀನಿ.

ಆಚರಣೆ

Thumb
ಮೈಸೂರಿನ ದಸರ
Thumb
ದೀಪಾವಳಿ -ದೀಪಗಳ ಹಬ್ಬ

ನನ್ನ ಕುಟುಂಬವು ಮೈಸೂರು ರಾಜರ ಮನೆತನಕ್ಕೆ ಸೇರಿರುವುದರಿಂದ ನಾವು ದಸರವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತೇವೆ.ಮನೆಯಲ್ಲಿ ಗೊಂಬೆ ಕುರಿಸುವುದು.ಸಂಬಂಧಿಕರು,ಗೆಳೆಯರು ಮನೆಗೆ ಬರುತ್ತಾರೆ,ಎಲ್ಲರೂ ಮನೆಯಲ್ಲಿ ಸೇರಿದಾಗ ಆಗುವ ಖುಷಿಯೇ ಬೇರೆ ಹಾಗೂ ನಾವು ವರಲಕ್ಷೀ ಹಬ್ಬ,ಸಂಕ್ರಾಂತಿ, ಶಿವಾರಾತ್ರಿ,ದೀಪಾವಳಿಯನ್ನು ಆಚರಿಸುತೇವೆ.ನಾನು ಕ್ರಿಸ್ ಮಸ್ ಸಮಯದಲ್ಲಿ ಜೀಸಸ್ ಮುಂದೆ ಮೆಣದ ಬತ್ತಿಯನ್ನು ಹಚ್ಚಿ ಪ್ರರ್ಥಿಸುತ್ತೇನೆ.ನನ್ನ ಮನಸ್ಸಿಗೆ ಬೇಸರವಾದಾಗ ನನ್ನ ಮನೆಯ ಪಕ್ಕದಲ್ಲಿರುವ ಹೂ ತೋಟಕ್ಕೆ ಹೋಗುತ್ತೀನಿ ಅಲ್ಲಿ ಸ್ವಲ್ಪ ಸಮಯವನ್ನು ಕಳೆಯುತ್ತೇನೆ ಹಾಗೂ ನಮ್ಮ ಮನೆಯ ಪಕ್ಕದಲ್ಲಿ ಸಣ್ಣ ಮಗುವಿರುವುದು, ಅದರೊಂದಿಗೆ ಆಟವಾಡುತ್ತೀನಿ. ಮನಸ್ಸು ಹೀತವಾಗುತ್ತದೆ.

ಪ್ರವಾಸ

Thumb
ಮೈಸೂರು ಅರಮನೆ ರಾತ್ರಿಯ ವೇಳೆ

ಪ್ರಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸವನ್ನು ಮುಗಿಸಿದ ನಾನು. ಸುಮಾರು ೧೩ ವರ್ಷಗಳ ಕಾಲ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವೆ ಹಾಗೂ ಶಾಲೆಯಲ್ಲಿ ಕಳೆದ ಅಷ್ಟು ವರ್ಷಗಳನ್ನು ಮರೆಯಲು ಸಾಧ್ಯವಿಲ್ಲ.ನನ್ನ ಗೆಳೆಯರನ್ನು ನೋಡಲು ಕಾತುರಳಾಗಿದ್ದೀನಿ.ನಾನು ಶಾಲೆಯಿಂದ ಗೆಳೆಯರೊಂದಿಗೆ ಪ್ರವಾಸಕ್ಕೆ ಮೈಸೂರು,ಮಂಡ್ಯ,ತಲಕಾಡು,ಮಲೆನಾಡಿಗೆ ಹೋಗಿದ್ದೇವು.ಅವರೊಂದಿಗೆ ಕಳೆದ ಆ ಕ್ಷಣಗಳು ಮತ್ತೆ ಅನುಭವಿಸಲು ಸಾಧ್ಯವಿಲ್ಲ .ನನ್ನಗೆ ಮಂಗಳೂರಿನ ಪನ್ಮ್ಬೂರ್ ಸಮುದ್ರವೆಂದರೆ ತುಂಬಾ ಅತ್ಮೀಯಾವಾದ ತಾಣ .ನಾನು ಶಾಲೆಯಲ್ಲಿ ನನ್ನ ತರಗತಿಯ ನಾಯಕಿಯಾಗಿದ್ದೆ.ನನ್ನಲ್ಲಿ ನಾಯಕತ್ವದ ಗುಣಗಳಿವೆ.ಶಾಲೆಯಲ್ಲಿ ಗಣರಾಜ್ಯೋತ್ಸವ,ಸ್ವಾತಂತ್ರ್ಯ ದಿನಾಚಾರಣೆಗಳಲ್ಲಿ ಭಾಷಣ, ಕಾರ್ಯಕ್ರಮಗಳನ್ನು ನೆಡೆಸುವುದು ಹಾಗೂ ನನ್ನಗೇ ಸಂಗೀತ,ಚಿತ್ರಕಲೆ,ನೃತ್ಯ,ಕ್ರೀಡೆ,ನಟನೆಗಳೆಂದರೆ ಅಚ್ಚುಮೆಚ್ಚು ಹಲವು ಕಡೆ ಪ್ರದರ್ಶಿಸಿರುವೆ..ನನ್ನಗೆ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ ಏಪ್ರಿಲ್ ತಿಂಗಳಿನಲ್ಲಿ ಪರಿವಾರದೊಂದಿಗೆ ಜಾಲತಾಣಗಳಿಗೆ ಹೋಗುತ್ತೀನಿ.ಈ ವರ್ಷ ನಾನು ಮಲೆನಾಡು ಪ್ರದೇಶದ ಕಡೆ ಹೋಗಿದ್ದೆ.ಅಲ್ಲಿರುವ ಪ್ರಕೃತಿ ಸೌಂದರ್ಯವನ್ನು ಇಲ್ಲೆಲೂ ಕಾಣಲಾಗುವುದಿಲ್ಲ.ಸಮುದ್ರ ಅಲೆಗಳನ್ನು ವರ್ಣಿಸಲು ಆಸಾಧ್ಯವಾದದ್ದು.

ಸಮಾಜದ ಕಡೆ

ನನ್ನಲ್ಲಿ ಒಂದು ವಿಶೇಷವಾದ ಗುಣವಿದೆ.ಇದು ಎಲ್ಲರಲ್ಲಿಯೂ ಇದೆಯೇ ಇಲ್ಲವೋ ಗೊತ್ತಿಲ್ಲ,ಅದರೇ ಇದು ಎಲ್ಲರಲಿಯೂ ಇದ್ದಿದರೆ ನನ್ನಗೆ ಬಹಳ ಸಂತೋಷವಾಗುತ್ತದೆ ಹಾಗೂ ಪ್ರಾಣಿ,ಪಕ್ಷಿಗಳು ಚೆನ್ನಾಗಿ ಇರುತ್ತಿದ್ದವು.ನನ್ನಗೆ ನಾಯಿಗಳೆಂದರೆ ಅಪಾರ ಪ್ರೀತಿ ಎಲ್ಲಾದರು ನಾಯಿಯನ್ನು ಕಂಡರೆ ನನ್ನಲ್ಲಿ ಇರುವ ತಿಂಡಿಯನ್ನು ಕೊಟ್ಟುಬಿಡುತ್ತೀನಿ ಅಥವಾ ಸಮೀಪದಲ್ಲಿರುವ ಅಂಗಡಿಗೆ ಹೋಗಿ ಬಿಸ್ಕತ್ತು ತಗೊಂಡು ಬೀದಿನಾಯಿಗಳಿಗೆ ಹಾಕುತ್ತೀನಿ ಅವುಗಳಿಗೆ ಅಂದಿನ ಆಹಾರ ನೀಗೂತ್ತದೆ.ಇದರಿಂದ ನನ್ನಗೆ ಬಹಳ ಮನಸ್ಸಿಗೆ ಇತವೆನಿಸುತ್ತದೆ.ನಾನು ಕೆಲವೊಮ್ಮೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಕೆಲನಾಯಿಗಳಿಗೆ ಆಹಾರವಿಲ್ಲದೆ ಒಣಗಿಹೋಗಿರುವುದನ್ನು ನೋಡಿದಾಗ. ನಾನು ದೇವರಲ್ಲಿ ಕೇಳಿಕೊಳ್ಳುವುದೇನೆಂದರೆ ಅದಕ್ಕೆ ಹೇಗಾದರುಮಾಡಿ ಆಹಾರ ನೀಡೆಂದು ಕೇಳುವೆ.ನಮ್ಮ ಮನೆಯಲ್ಲಿ ಎಲ್ಲರಿಗೂ ನಾಯಿಗಳನ್ನು ಪ್ರೀತಿಸುವ ಗುಣವಿದೆ.ನಮ್ಮ ಮನೆಯಲ್ಲಿ ೪ ಬೀದಿನಾಯಿಗಳಿವೆದ ನನಗೆ ವಿಜಯ್ ಪ್ರಕಾಶ್ ರವರ ಸಂಗೀತವೆಂದರೆ ಬಹಳ ಅಚ್ಚುಮೆಚ್ಚು.ಅಶ್ವತ್ ರವರ ಹಾಡುಗಳೆಂದರೆ ಪ್ರಾಣ.ನನ್ನಗೆ ನನ್ನ ಭವಿಷ್ಯದಲ್ಲಿ ನನ್ನದೆಯಾದ ಸಂಸ್ಥೆಯನು ತೆರೆದು ಕನ್ನಡ ಜನತೆಗೆ ಮೊದಲ ಅದ್ಯತೆ ನೀಡಿ,ಕನ್ನಡ ತಾಯಿಯ ಋಣವನ್ನು ತೀರಿಸಬೇಕೆಂಬ ಅಂಬಲವಿದೆ.ನನಗೆ ಇನ್ಫೋಸಿಸ್ ನಾರಾಯಣ ಮೂರ್ತಿಯವರಂತಾಗಬೇಕು.ಅವರನ್ನು ಕಂಡರೆ ಅಪಾರ ಪ್ರೀತಿ,ಅಭಿಮಾನ. ಅವರಂತೆ ನಾನು ಕೂಡ ಆಗಬೇಕು.ನನಗೆ ಹೆಚ್ಚು ಸಮಾಜದ ಕಡೆ ಚಿಂತನೆ ಇದೆ.ನನ್ನ ಕೈಲಾದ ಸಹಾಯವನ್ನು ನಾನು ಮಾಡುತ್ತಿದ್ದೇನೆ. ನನ್ನಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕ ಪಂಡಿತ್ ಎಂದರೆ ಇಷ್ಟ.ನನ್ನಗೆ ಡಾ||ರಾಜ್ ಕುಮಾರ್ ರವರ ಚಿತ್ರಗಳೆಂದರೆ ತುಂಬಾ ಇಷ್ಟ.ಅವರ ನಟನೆಯು ಅದ್ಬುತವಾದ್ದದು.ನನ್ನಗೆ ಕನ್ನಡ ಚ್ರಿತಗಳೆಂದರೆ ತುಂಬಾ ಇಷ್ಟ ಅದರಲ್ಲೂ ಕಿರಿಕ್ ಪಾರ್ಟಿ, ತಾರಕ್,ರಾಜಹುಲಿ ಚಿತ್ರಗಳೆಂದರೆ ಇಷ್ಟ.

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.