From Wikipedia, the free encyclopedia
ಸತ್ಯವತಿ ರಾಥೋಡ್ (ಜನನ ೩೧ ಅಕ್ಟೋಬರ್ ೧೯೬೯) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ೨೦೧೯ ರಿಂದ ತೆಲಂಗಾಣದ ಬುಡಕಟ್ಟು ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.[೧] ಇವರು ತೆಲಂಗಾಣದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದ ಮೊದಲ ಬುಡಕಟ್ಟು ಮಹಿಳೆ ಎನಿಸಿದ್ದಾರೆ. ಅವರು ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ . ರಾಥೋಡ್ ಅವರು ಈ ಹಿಂದೆ ತೆಲುಗು ದೇಶಂ ಪಕ್ಷದಿಂದ ೨೦೦೯ ರಲ್ಲಿ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಡೋರ್ನಕಲ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಸತ್ಯವತಿ ರಾಥೋಡ್ ಅವರು ೧ ಅಕ್ಟೋಬರ್ ೧೯೬೯ ರಂದು ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಕುರವಿ ಮಂಡಲದ ಪೆದ್ದ ತಾಂಡಾ ಕುಗ್ರಾಮದಲ್ಲಿ (ಆ ಸಮಯದಲ್ಲಿ ಆಂಧ್ರಪ್ರದೇಶದ ಭಾಗವಾಗಿತ್ತು) ಜನಿಸಿದರು. ಐದು ಒಡಹುಟ್ಟಿದವರಲ್ಲಿ ಇವರು ಕಿರಿಯರಾಗಿದ್ದಾರೆ, ಇವರ ಪೋಷಕರು ಲಿಂಗ್ಯಾ ನಾಯ್ಕ್ ಮತ್ತು ದಾಸ್ಮಿ ಬಾಯಿ. [೨] [೩]
೮ನೇ ತರಗತಿಯ ನಂತರ ಸತ್ಯವತಿ ರಾಥೋಡ್ ಶಾಲೆಯನ್ನು ತೊರೆದು ಗೋವಿಂದ್ ರಾಥೋಡ್ ಅವರನ್ನು ವಿವಾಹವಾದರು. [೪] ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. [೪] ಜುಲೈ ೨೦೦೯ ರಲ್ಲಿ ರಸ್ತೆ ಅಪಘಾತದಲ್ಲಿ ಗೋವಿಂದ ರಾಥೋಡ್ ನಿಧನರಾದರು [೫]
ನಂತರ ಸತ್ಯವತಿಯವರು ಮುಕ್ತ ವಿಶ್ವವಿದ್ಯಾಲಯವೊಂದರಿಂದ ಪದವಿ ಪಡೆದರು. [೪]
ಸತ್ಯವತಿಯವರು ತನ್ನ ರಾಜಕೀಯ ಜೀವನವನ್ನು ೧೯೮೯ ರಲ್ಲಿ ಪ್ರಾರಂಭಿಸಿದರು. ಅವರು ತೆಲುಗು ದೇಶಂ ಪಕ್ಷಕ್ಕೆ ಸೇರಿದರು ಮತ್ತು ಅದೇ ವರ್ಷ ಡೋರ್ನಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ರೆಡ್ಯಾ ನಾಯ್ಕ ಅವರ ವಿರುದ್ಧ ಸೋತರು. ೧೯೯೫ ರಲ್ಲಿ ಗುಂಡ್ರಾತಿಮಡುಗು ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ ೨೦೦೬ ರಲ್ಲಿ, ಅವರು ನರಸಿಂಹುಲಪೇಟೆಯ ಜಿಲ್ಲಾ ಪರಿಷತ್ತು ಚುನಾವಣೆಯಲ್ಲಿ ವಿಜೇತರಾದರು. [೪]
೨೦೦೯ ರ ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ರಾಥೋಡರು ಡೋರ್ನಕಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. [೬] ಮಾರ್ಚ್ ೨೦೧೪ ರಲ್ಲಿ, ಅವರು ತೆಲುಗು ದೇಶಂ ಪಕ್ಷವನ್ನು ತೊರೆದರು ತೆಲಂಗಾಣ ರಾಷ್ಟ್ರ ಸಮಿತಿಗೆ ಪಕ್ಷಕ್ಕೆ ಸೇರಿದರು. [೭] ಅವರು ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪ ರಲ್ಲಿ ಅದೇ ಸ್ಥಾನದಿಂದ ಮತ್ತೆ ಸ್ಪರ್ಧಿಸಿದರು, ಮತ್ತೆ ಕಾಂಗ್ರೆಸ್ನ ರೆಡ್ಯಾ ನಾಯ್ಕರ ವಿರುದ್ಧ ಸೋತರು. [೬] ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿಲ್ಲ. [೮]
ಮಾರ್ಚ್ ೨೦೧೯ ರಲ್ಲಿ, ಅವರು ತೆಲಂಗಾಣ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. [೯] ಸೆಪ್ಟೆಂಬರ್ ೨೦೧೯ ರಲ್ಲಿ, ರಾಥೋಡ್ ಅವರು ಕೆ. ಚಂದ್ರಶೇಖರ ರಾವ್ ಅವರ ಎರಡನೇ ಕ್ಯಾಬಿನೆಟ್ನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. [೧೦] ಅವರು ತೆಲಂಗಾಣದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಪರಿಶಿಷ್ಟ ಪಂಗಡದ ಮೊದಲ ಮಹಿಳೆಯಾಗಿದ್ದಾರೆ. [೪]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.