ಸಕ್ಕರೆ ಕೊರತೆ ರೋಗ
From Wikipedia, the free encyclopedia
ಸಾಮಾನ್ಯ ಮಟ್ಟಕ್ಕಿಂತ ಕಡಿಮೆರಕ್ತ ಗ್ಲುಕೋಸ್ ನ ಪರಿಣಾಮದಿಂದ ಉಂಟಾಗುವ ಸ್ಥಿತಿಯನ್ನು ಹೈಪೊಗ್ಲಿಸೀಮಿಯಾ ಅಥವಾ ಹೈಪೊಗ್ಲಿಸೆಮಿಯಾ ಎಂಬ ವೈದ್ಯಕೀಯ ಪದದಿಂದ ಕರೆಯಲಾಗುತ್ತದೆ.[1] ಈ ಪದದ ಅರ್ಥ "ಸಿಹಿ ಕೊರತೆ ರಕ್ತ" ಎಂದಾಗಿದೆ (ಜರ್ಮನ್.ಹೈಪೊ -ಗ್ಲೈಕಸ್ , ಹೈಮ ).
Hypoglycemia | |
---|---|
Classification and external resources | |
ICD-10 | E16.0-E16.2 |
ICD-9 | 250.8, 251.0, 251.1, 251.2, 270.3, 775.6, 962.3 |
DiseasesDB | 6431 |
MedlinePlus | 000386 |
eMedicine | emerg/272 med/1123 med/1939 ped/1117 |
MeSH | D007003 |
ಸಕ್ಕರೆ ಕೊರತೆ ಬೇನೆ (ಹೈಪೊಗ್ಲಿಸಿಮಿಯಾ) ಅನೇಕ ವಿಧದ ಲಕ್ಷಣಗಳು ಮತ್ತು ಪರಿಣಾಮಗಳನ್ನು ಉಂಟುಮಾಡುತ್ತದೆ ಆದರೆ ಮಿದುಳಿಗೆ ಇಂಧನದಂತಿರುವ ಗ್ಲುಕೋಸ್ನ ಅಸಮರ್ಪಕ ಪೂರೈಕೆಯಿಂದ ಪ್ರಮುಖ ಸಮಸ್ಯೆಗಳು ಉದ್ಬವಿಸುವುದರ ಫಲಿತಾಂಶವಾಗಿ ದುರ್ಬಲ ಕಾರ್ಯಚಟುವಟಿಕೆ(ನ್ಯೂರೋಗ್ಲೈಕೊಪೇನಿಯಾ)ಉಂಟಾಗುತ್ತದೆ. ಪರಿಣಾಮಗಳನ್ನು ಅಸ್ಪಷ್ಟವಾಗಿ ಈ ರೀತಿ ಹೇಳಬಹುದು, "ಅಹಿತಕರ ಅನಿಸಿಕೆ"ಯಿಂದ ರೋಗಗ್ರಸ್ಥವಾಗುವುದು, ಪ್ರಜ್ಞಾಹೀನತೆ ಮತ್ತು (ಅಪರೂಪಕ್ಕೆ)ಶಾಶ್ವತ ಮಿದುಳು ನಷ್ಟ ಅಥವಾ ಸಾವು ಕೂಡ ಸಂಭವಿಸಬಹುದು.ಸಕ್ಕರೆ ಖಾಯಿಲೆ ಚಿಕಿತ್ಸೆಯಲ್ಲಿ ಇನುಸಿಲಿನ್ ಅಥವಾ ಬಾಯಿಮೂಲಕ ತೆಗೆದುಕೊಳ್ಳುವ ನೀಡುವ ಔಷಧದ ಜಟಿಲತೆಯಿಂದ ಅತಿ ಸಾಮಾನ್ಯವಾದ ಮಧ್ಯಮ ಮತ್ತು ಗಂಭೀರ ಸ್ವರೂಪದ ಕೊರೆ ಸಕ್ಕರೆ ಬೇನೆ ಉಂಟಾಗುತ್ತದೆ. ಸಕ್ಕರೆ ಖಾಯಿಲೆ ಇಲ್ಲದವರಲ್ಲಿ ಸಕ್ಕರೆ ಕೊರತೆ ಬೇನೆ ಸಾಮಾನ್ಯವಾಗಿ ಉಂಟಾಗದಿದ್ದರೂ, ಅನೇಕ ಕಾರಣಗಳಿಂದ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು. ದೇಹದಲ್ಲಿ ಹೆಚ್ಚಾಗಿ ಉತ್ಪತ್ತಿಯಾದ ಇನ್ಸುಲಿನ್, ಕಾರ್ಬೋಹೈಡ್ರೇಟುಗಳ ಪ್ರಕೃತಿಜನ್ಯ ದೋಷಗಳು, ಕೊಬ್ಬು, ಅಮೈನೊ ಆಮ್ಲ ಅಥವಾಾ ಜೈವಿಕ ಆಮ್ಲದ ರಾಸಾಯನಿಕ ಕ್ರಿಯೆ, ಔಷಧಿಗಳು ಮತ್ತು ವಿಷಗಳು, ಮಧ್ಯಸಾರ,ಹಾರ್ಮೋನ್ಗಳ ನ್ಯೂನತೆಗಳು, ಕೆಲವು ಗಡ್ಡೆಗಳು, ಸೋಂಕಿಗೆ ಸಂಬಂಧಿಸಿದ ರಾಸಾಯನಿಕ ಕ್ರಿಯೆಗಳಲ್ಲಿನ ವ್ಯತ್ಯಾಸ, ಅಥವಾ ವಿವಿಧ ಅಂಗಗಳ ವೈಫಲ್ಯದ ಕಾರಣಗಳಿಂದ ಇದು ಉಂಟಾಗಬಹುದು.
ಸಕ್ಕರೆ ಕೊರತೆ ಬೇನೆಯನ್ನು,ಡೆಕ್ಸ್ಟ್ರೋಸ್(ಸಹಜವಾಗಿ ಉತ್ಪಾದಿಸಿದ ಸಕ್ಕರೆ) ಅಥವಾ ಬೇಗ ಜೀರ್ಣವಾಗುವಂತಹ ಕಾರ್ಬೋಹೈಡ್ರೇಟ್ಯುಕ್ತ ಆಹಾರ ನೀಡುವ ಮೂಲಕ ರಕ್ತ ಗ್ಲುಕೋಸ್ ಮಟ್ಟವನ್ನು ಸಾಮಾನ್ಯ ಮಟ್ಟಕ್ಕೆ ತ್ವರಿತವಾಗಿ ತರುವ ಮೂಲಕ ಚಿಕಿತ್ಸಿಸುತ್ತಾರೆ. ಕೆಲ ಸಂದರ್ಭಗಳಲ್ಲಿ ಗ್ಲುಕೊಗಾನ್ನ್ನು ಒಳ ತುಂಬಿಸುವ ಅಥವಾ ಚುಚ್ಚುಮದ್ದಿನ ಮೂಲಕ ನೀಡುತ್ತಾರೆ. ದೀರ್ಘಕಾಲೀನ ಅಥವಾ ಪದೇ ಪದೇ ಉದ್ಬವಿಸುವ ಸಕ್ಕರೆ ಕೊರತೆ ಬೇನೆಯನ್ನು ಇದರಲ್ಲಿ ಅಡಗಿರುವ ಕಾರಣಗಳನ್ನು ಹಿಂದಿಕ್ಕುವ ಅಥವಾ ತೊಡೆದುಹಾಕುವ ಮೂಲಕ, ಔಷಧಿಗಳಾದ ಡಯಾಝೊಕ್ಸೈಡ್, ಆಕ್ಟ್ರೋಟೈಡ್ ಅಥವಾ ಗ್ಲುಕೊಕಾರ್ಟಿಕಾಯ್ಡ್ಗಳು ಅಥವಾ ಶಸ್ತ್ರಚಿಕಿತ್ಸೆಯಿಂದ ಮೇದೋಜ್ಜೀರಕ ಗ್ರಂಥಿಯ ಬಹುಭಾಗವನ್ನು ತೆಗೆದುಹಾಕುವುದರೊಂದಿಗೆ ಊಟದ ಆವರ್ತನಗಳನ್ನು ಹೆಚ್ಚಿಸುವ ಮೂಲಕ ಈ ಬೇನೆಯನ್ನು ತಡೆಯಬಹುದಾಗಿದೆ
ಸಕ್ಕರೆ ಕೊರತೆ ರೋಗವೆಂದು ವ್ಯಾಖ್ಯಾನಿಸಲು ಬೇಕಾದ ಕಡಿಮೆ ರಕ್ತ ಗ್ಲುಕೋಸ್ ಮಟ್ಟವು , ಭಿನ್ನವಾದ ಸಂದರ್ಭಗಳಲ್ಲಿ ಹಾಗೂ ಭಿನ್ನವಾದ ಉದ್ದೇಶಗಳಿಗಾಗಿ ಬೇರೆ ಬೇರೆ ವ್ಯಕ್ತಿಗಳಿಗೆ ಇದು ಭಿನ್ನವಾಗಿರಬಹುದಾಗಿದೆ ಮತ್ತು ಕೆಲ ಸಂದರ್ಭದಲ್ಲಿ ಇದು ವಿವಾದಿತ ವಿಷಯವಾಗಿದೆ. ಬಹುತೇಕ ಆರೋಗ್ಯವಂತ ವಯಸ್ಕರು ಉಪವಾಸ ಗ್ಲುಕೋಸ್ ಮಟ್ಟವನ್ನು 70 ಎಂಜಿ/ಡಿಎಲ್(3.9 mmol/L)ಗೆ ಮೇಲ್ಪಟ್ಟು ನಿಭಾಯಿಸುತ್ತಾರೆ, ಮತ್ತು ಗ್ಲುಕೋಸ್ ಮಟ್ಟ 55 ಎಂಜಿ/ಡಿಎಲ್ (3 mmol/L)ಗಿಂತ ಕಡಿಮೆ ಮಟ್ಟಕ್ಕೆ ಇಳಿದಾಗ ಸಕ್ಕರೆ ಕೊರತೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.[2]
ವ್ಯಕ್ತಿಯಲ್ಲಿ ಕಾಣುತ್ತಿರುವ ಲಕ್ಷಣಗಳು ಸಕ್ಕರೆ ಕೊರತೆ ಬೇನೆಯಿಂದ ಉಂಟಾಗಿದ್ದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಕೆಲವು ಸಾರಿ ಕಷ್ಟಸಾಧ್ಯವಾಗುತ್ತದೆ. ಒಬ್ಬ ವ್ಯಕ್ತಿಯ ಲಕ್ಷಣಗಳು ಬೇರೆ ರೋಗದ ಕಾರಣವಾಗಿರದೆ ಸಕ್ಕರೆ ಕೊರತೆ ಬೇನೆಯ ಲಕ್ಷಣಗಳೆನ್ನಬಹುದೆಂಬುದಕ್ಕೆ ಎಂಡೋಕ್ರಿನೊಲಾಜಿಸ್ಟ್ಗಳು(ಗ್ಲುಕೋಸ್ ರಾಸಾಯನಿಕ ಕ್ರಿಯೆಗಳ ಅಸ್ವಸ್ಥತೆಯಲ್ಲಿ ತಜ್ಞತೆ ಹೊಂದಿರುವ ವೈದ್ಯರು),ವಿಪಲ್ನ ತ್ರಿಕೂಟಕ್ಕೆ ಉಲ್ಲೇಖಿಸಲ್ಪಟ್ಟ ಮಾನದಂಡವನ್ನು ಅಂತಿಮ ಸಾಕ್ಷ್ಯವೆಂದು ವಿಶಿಷ್ಟವಾಗಿ ಪರಿಗಣಿಸುತ್ತಾರೆ.[3]
- ಸಕ್ಕರೆ ಕೊರತೆ ಬೇನೆಯ ಕಾರಣದಿಂದ ಉಂಟಾಗುವುದೆಂದು ತಿಳಿದಿರುವ ಲಕ್ಷಣಗಳು
- ಲಕ್ಷಣಗಳು ಕಂಡುಬಂದಾಗ ಕಡಿಮೆ ಗ್ಲುಕೋಸ್ ಮಟ್ಟ
- ಗ್ಲುಕೋಸ್ನ್ನು ಸಾಮಾನ್ಯ ಸ್ಥಿತಿಗೆ ತಂದಾಗ ಲಕ್ಷಣಗಳ ಅಥವಾ ಸಮಸ್ಯೆಗಳ ಸುಧಾರಣೆ ಅಥವಾ ನಿವಾರಣೆ
ಹೈಪೊಗ್ಲಿಸಿಮಿಯಾ(ಸಾಮಾನ್ಯ ಬಳಕೆ)ಜನಪ್ರಿಯ ಸಂಸ್ಕೃತಿಯಲ್ಲಿ ಒಂದು ಪದ ಕೂಡ ಆಗಿದ್ದು, ಮತ್ತು ಒಂದು ಸಾಮಾನ್ಯ, ಆಗಾಗ ಸ್ವ-ರೋಗಪತ್ತೆಹಚ್ಚುವಿಕೆಗೆ ಪರ್ಯಾಯ ಔಷಧಿಯಾಗಿದೆ, ನಡುಕ ಮತ್ತು ವ್ಯತ್ಯಾಸಗೊಂಡ ಮನಸ್ಥಿತಿ ಹಾಗೂ ಯೋಚನೆಗಳಂತಹ ಗುಣಲಕ್ಷಣಗಳನ್ನು ಹೊಂದಿರುವ ಸ್ಥಿತಿಯಲ್ಲಿ, ಆದರೆ ಕಡಿಮೆ ಗ್ಲುಕೋಸ್ ಪ್ರಮಾಣವನ್ನು ಅಳೆಯದೆ ಅಥವಾ ಗಂಭೀರ ಹಾನಿಯ ಅಪಾಯವನ್ನುಂಟುಮಾಡದ ಸ್ಥಿತಿಯಲ್ಲಿ. ತಿನ್ನುವ ಅಭ್ಯಾಸಗಳನ್ನು ಬದಲಾಯಿಸುವ ಮೂಲಕ ಇದನ್ನು ಚಿಕಿತ್ಸಿಸಲಾಗುತ್ತದೆ.