![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/3a/Evening_in_Parambikkulam%252C_Kerala%252C_India.jpg/640px-Evening_in_Parambikkulam%252C_Kerala%252C_India.jpg&w=640&q=50)
ಸಂಜೆ
From Wikipedia, the free encyclopedia
ಸಂಜೆ (ಸಂಧ್ಯಾಕಾಲ, ಸಾಯಂಕಾಲ, ಬೈಗು) ಎಂದರೆ ದಿನದ ಕೊನೆಯಲ್ಲಿನ ಸಮಯಾವಧಿ, ಸಾಮಾನ್ಯವಾಗಿ ಸುಮಾರು ೫ ಅಥವಾ ೬ ಗಂಟೆಯಿಂದ ರಾತ್ರಿಯವರೆಗೆ. ಇದು ಬದಲಾಗುವ ಸಮಯಾವಧಿಯ ಪ್ರತಿದಿನದ ಖಗೋಳಶಾಸ್ತ್ರೀಯ ಘಟನೆಯಾಗಿದೆ ಮತ್ತು ಹಗಲು ಹಾಗೂ ರಾತ್ರಿಯ ನಡುವೆ ಬರುತ್ತದೆ. ಮಧ್ಯಾಹ್ನದ ನಂತರ ಹಾಗೂ ರಾತ್ರಿಗೆ ಮೊದಲಿನ ಈ ಅವಧಿಯಲ್ಲಿ ಹಗಲಿನ ಬೆಳಕು ಕಡಿಮೆಯಾಗುತ್ತ ಹೋಗುತ್ತದೆ. ಸಂಜೆಯು ಯಾವಾಗ ಆರಂಭವಾಗುತ್ತದೆ ಮತ್ತು ಮುಗಿಯುತ್ತದೆ ಎಂಬುದಕ್ಕೆ ಯಾವುದೇ ನಿಖರ ಸಮಯವಿಲ್ಲ. ಈ ಪದವು ವ್ಯಕ್ತಿನಿಷ್ಠವಾದರೂ, ಸಂಜೆಯು ಸಾಮಾನ್ಯವಾಗಿ ಸೂರ್ಯಾಸ್ತಕ್ಕೆ ಸ್ವಲ್ಪ ಮೊದಲು ಆರಂಭಗೊಂಡು, ಸಂಧಿಪ್ರಕಾಶದ ಅವಧಿಯಲ್ಲಿ ಇದ್ದು (ಸೂರ್ಯಾಸ್ತ ಮತ್ತು ಸಂಧಿಪ್ರಕಾಶ ವರ್ಷದಾದ್ಯಂತ ಬದಲಾಗುತ್ತವೆ),[1] ರಾತ್ರಿಯವರೆಗೆ (ಸಾಮಾನ್ಯವಾಗಿ ಖಗೋಳ ಸೂರ್ಯಾಸ್ತ) ಇರುತ್ತದೆ ಎಂದು ತಿಳಿಯಲಾಗುತ್ತದೆ. ಗಡಿಯಾರದ ಸಮಯದನುಸಾರವಾಗಿ ಯಾವುದೇ ನಿಖರ ವ್ಯಾಖ್ಯಾನ ಸಾಧ್ಯವಿಲ್ಲವಾದರೂ, ಇದು ಸಾಮಾಜಿಕವಾಗಿ ಸುಮಾರು ೫ ಅಥವಾ ೬ ಗಂಟೆಗೆ ಆರಂಭವಾಗಿ ರಾತ್ರಿ ಅಥವಾ ಮಲಗುವ ಸಮಯದವರೆಗೆ ಇರುತ್ತದೆ ಎಂದು ಪರಿಗಣಿಸಲಾಗುತ್ತದೆ.
![Thumb image](http://upload.wikimedia.org/wikipedia/commons/thumb/3/3a/Evening_in_Parambikkulam%2C_Kerala%2C_India.jpg/640px-Evening_in_Parambikkulam%2C_Kerala%2C_India.jpg)