![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/25/The_Normal_Distribution.svg/langkn-640px-The_Normal_Distribution.svg.png&w=640&q=50)
ಸಂಖ್ಯಾಶಾಸ್ತ್ರ
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
![Thumb image](http://upload.wikimedia.org/wikipedia/commons/thumb/2/25/The_Normal_Distribution.svg/640px-The_Normal_Distribution.svg.png)
ಸಂಖ್ಯಾಶಾಸ್ತ್ರ ವು ಅಂಕಿಅಂಶ ಸಂಗ್ರಹಣೆ, ಅನುಕ್ರಮ ವಿಶ್ಲೇಷಣೆ, ವ್ಯಾಖ್ಯಾನ ಅಥವಾ ಅರ್ಥವಿವರಣೆ ಮತ್ತು ಪ್ರಸ್ತುತ ಸಂಬಂಧ ಹೊಂದಿದೆ. ಕೆಲವರು ಇದನ್ನು ಗಣಿತ ವಿಜ್ಞಾನ ಎನ್ನುವರು.[1] ಇನ್ನೂ ಕೆಲವರು ಅಂಕಿಅಂಶದ ಸಂಗ್ರಹಣೆ, ವ್ಯಾಖ್ಯಾನ ಎಂದು ಪರಿಗಣಿಸಿದ್ದಾರೆ. ಗಣಿತಶಾಸ್ತ್ರದ[2] ಭಾಗವೆಂದೂ ಹೇಳುತ್ತಾರೆ.[3] ಸಂಖ್ಯಾಶಾಸ್ತ್ರಜ್ಞರು ವಿನ್ಯಾಸ ಪ್ರಯೋಗಗಳ ಮತ್ತು ಸಮೀಕ್ಷೆಯ ಉದಾಹರಣೆಗಳಿಂದ ಅಂಕಿಅಂಶದ ಗುಣಮಟ್ಟವನ್ನು ಸುಧಾರಿಸುತ್ತಾರೆ. ಅಂಕಿಅಂಶ ಮತ್ತು ಸಂಖ್ಯಾಶಾಸ್ತ್ರದ ಮಾದರಿಗಳನ್ನು ಬಳಸಿ, ನಿಖರ ಊಹೆ ಮತ್ತು ಮುಂದಾಲೋಚನಾ ಸಾಧನಗಳನ್ನು ಒದಗಿಸುತ್ತದೆ. ಸಂಖ್ಯಾಶಾಸ್ತ್ರವು ವಿಶಾಲ ರೂಪದಲ್ಲಿ ನೈಸರ್ಗಿಕ ಮತ್ತು ಸಾಮಾಜಿಕ ವಿಜ್ಞಾನಗಳು, ಸರಕಾರ ಮತ್ತು ವ್ಯವಹಾರ ಸೇರಿದಂತೆ ಹಲವು ಪ್ರಕಾರದ ಶೈಕ್ಷಣಿಕ ವಿಭಾಗಗಳಿಗೆ ಅನ್ವಯವಾಗುತ್ತದೆ.
ಸಂಖ್ಯಾಶಾಸ್ತ್ರದ ಪದ್ಧತಿಗಳನ್ನು ಅಂಕಿಅಂಶದ ಸಂಗ್ರಹಗಳನ್ನು ಸಂಕ್ಷಿಪ್ತಗೊಳಿಸಲು ಮತ್ತು ವಿವರಿಸಲು ಬಳಸಬಹುದಾಗಿದೆ. ಇದನ್ನು ವಿಶಾಲ ತಳಹದಿಯ ಸಂಖ್ಯಾಶಾಸ್ತ್ರ ಎಂದು ಕರೆಯುತ್ತಾರೆ. ಸಂಶೋಧನೆಯಲ್ಲಿ ಪ್ರಯೋಗಗಳ ಫಲಿತಾಂಶ, ಸಂವಹನ ನಡೆಸಲು ಸಂಖ್ಯಾಶಾಸ್ತ್ರವು ಉಪಯುಕ್ತವಾಗಿದೆ. ಇದೂ ಅಲ್ಲದೇ, ಸರ್ವೇಕ್ಷಣೆಗಳಲ್ಲಿನ ಆಯ್ಕೆ ಮತ್ತು ಅನಿಶ್ಚಿತತೆಯಿಂದಾಗಿ ಅಂಕಿಅಂಶದಲ್ಲಿನ ಸ್ವರೂಪಗಳನ್ನು ತಿಳಿಸುವ ಆಧಾರದ ಮೇಲೆ ಅವುಗಳ ಮಾದರಿಗಳನ್ನು ವಿಂಗಡಿಸಲಾಗುತದೆ. ಅಧ್ಯಯನ ಮಾಡಬೇಕಿರುವ ಪ್ರಕ್ರಿಯೆ ಮತ್ತು ಪರಿಶೀಲಿಸಿದ ಮೊತ್ತದ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳಲು ಬಳಸಲಾಗುತ್ತದೆ. ಇದನ್ನು ತಾರ್ಕಿಕ ಸಂಖ್ಯಾಶಾಸ್ತ್ರ ಎಂದು ಕರೆಯುತ್ತಾರೆ. ತರ್ಕಬದ್ಧವಾಗಿ ಸಿದ್ದಾಂತವನ್ನು ರೂಪಿಸುವುದಕ್ಕಾಗಿ ಮುಂದಾಲೋಚನೆಯನ್ನು (ಅಂಕಿಅಂಶದ ಆಧಾರದ ಮೇಲೆ) ಒದಗಿಸುವುದನ್ನು, ಒಂದು ವೈಜ್ಞಾನಿಕ ಪ್ರಗತಿಯ ಪ್ರಮುಖ ಭಾಗವೆಂದು ಹೇಳಬಹುದು. ಈ ಸಿದ್ಧಾಂತವನ್ನು ಇನ್ನಷ್ಟು ಸಾಬೀತುಪಡಿಸಲು, ಮುಂಬರುವ ಭವಿಷ್ಯವನ್ನು ವೈಜ್ಞಾನಿಕ ವಿಧಾನದ ಮುಂದುವರಿದ ಭಾಗದಂತೆ ಪರಿಗಣಿಸಲಾಗುತ್ತದೆ. ತಾರ್ಕಿಕ ಸಂಖ್ಯಾಶಾಸ್ತ್ರವು ನಿಜವಾಗಿದ್ದರೆ, ಹೊಸ ಅಂಕಿಅಂಶದ ವಿವರಣಾತ್ಮಕ ವಿಷಯವು ಆ ಊಹೆಯ ದೃಡತೆಯನ್ನು ಹೆಚ್ಚಿಸುತ್ತದೆ. ವಿವರಣಾತ್ಮಕ ಸಂಖ್ಯಾಶಾಸ್ತ್ರ ಮತ್ತು ತಾರ್ಕಿಕ ಸಂಖ್ಯಾಶಾಸ್ತ್ರವು (ಭವಿಷ್ಯದ ಸಂಖ್ಯಾಶಾಸ್ತ್ರ ಎಂದೂ ಕರೆಯಲ್ಪಡುವುದು) ಒಟ್ಟಾಗಿ ಅನ್ವಯಿಸಿದ ಸಂಖ್ಯಾಶಾಸ್ತ್ರ ದೊಂದಿಗೆ ಸೇರಿಕೊಳ್ಳುತ್ತದೆ.[4]
ವಿಷಯದ ಸೈದ್ದಾಂತಿಕ ಆಧಾರ ಪರಿಗಣಿಸಿ, ಈ ವಿಭಾಗವನ್ನು ಗಣಿತದ ಸಂಖ್ಯಾಶಾಸ್ತ್ರ ಎಂದೂ ಕರೆಯುತ್ತಾರೆ.
ಸಂಖ್ಯಾಶಾಸ್ತ್ರ ಪದಕ್ಕೆ ವಚನದ ಹಂಗಿಲ್ಲ. ಇದು ಏಕವಚನ ಅಥವಾ ಬಹುವಚನವಾಗಿಲ್ಲ.[5] ಅದರ ಏಕವಚನ ಪ್ರಕಾರದಲ್ಲಿ, ಈ ಲೇಖನದಲ್ಲಿ ಚರ್ಚಿಸಿದಂತೆ ಸಂಖ್ಯಾಶಾಸ್ತ್ರ ವನ್ನು ಗಣಿತದ ವಿಜ್ಞಾನದೊಂದಿಗೆ ಉಲ್ಲೇಖಿಸಲಾಗುವುದು. ಅದರ ಬಹುವಚನ ಪ್ರಕಾರದಲ್ಲಿ, ಸಂಖ್ಯಾಶಾಸ್ತ್ರ ವು ಅಂಕಿಅಂಶದ ಸಂಗ್ರಹಣೆಯ ಗಣಮಟ್ಟವನ್ನು (ನಡುವೆದಂತಹ) ಉಲ್ಲೇಖಿಸುವ ಸ್ಟ್ಯಾಟಿಸ್ಟಿಕ್ ಎಂಬ ಪದದ ಬಹುವಚನ ರೂಪವಾಗಿದೆ.[6]