ಶಿಶುವಿಹಾರ
From Wikipedia, the free encyclopedia
Kindergarten (ಸಹಾಯ·ಮಾಹಿತಿ)(ಜರ್ಮನ್, ಅಕ್ಷರಶಃ "ಮಕ್ಕಳ ತೋಟ" ಎಂಬ ಅರ್ಥವನ್ನು ನೀಡುತ್ತದೆ.)ಇದು ಚಿಕ್ಕ ಮಕ್ಕಳಿಗಾಗಿ ರೂಪಿಸಿರುವ ಶಿಕ್ಷಣದ ಒಂದು ಮಾದರಿ. ಇದು ಮನೆಯ ಕಲಿಕೆಯಿಂದ ಬದಲಾವಣೆಯನ್ನು ಹೊಂದಿ ಮಕ್ಕಳಿಗೆ ಇಲ್ಲಿ ವಿಧ್ಯುಕ್ತವಾದ ಕಲಿಕೆಯ ಆರಂಭವಾಗುತ್ತದೆ. ಮತ್ತೊಂದು ಅರ್ಥನಿರೂಪಣೆ ಎಂದರೆ, ಇದು ಆರಂಭಿಕ ಬಾಲ್ಯ ಶಿಕ್ಷಣ ಹಾಗು ಶಾಲಾಪೂರ್ವ ಶಿಕ್ಷಣವನ್ನು ಹೋಲುತ್ತದೆ, ಇದು ಆರು ಅಥವಾ ಏಳು ವರ್ಷದ ಪೂರ್ವ ಹಾಗು ಓದಲು ಮನೆಗಳಿಂದ ಶಿಕ್ಷಣ ಪ್ರಪಂಚದೆಡೆ ಹೊರಬರುತ್ತಿರುವ ಪುಟಾಣಿಗಳಿಗೆ ನೀಡುವ ಶಿಕ್ಷಣವಾಗಿದೆ. ಮಕ್ಕಳಿಗೆ ಮೂಲಭೂತ ಸಾಮರ್ಥ್ಯ ಹಾಗು ಜ್ಞಾನವನ್ನು ಸೃಜನಾತ್ಮಕ ಆಟ ಹಾಗು ಸಾಮಾಜಿಕವಾಗಿ ಪರಸ್ಪರ ಮಾತುಕತೆ ಹಾಗು ಕೆಲವೊಂದು ಬಾರಿ ವಿಧ್ಯುಕ್ತ ಕಲಿಕೆಗಳ ಮೂಲಕ ಅಭಿವೃದ್ಧಿಪಡಿಸಿಕೊಳ್ಳಲು ಹೇಳಿಕೊಡಲಾಗುತ್ತದೆ.
ಸೂಚನೆ: ಲೇಖನ ವನ್ನು Preschool education ಲೇಖನದೊಂದಿಗೆ ವಿಲೀನ ಮಾಡಲು ಸೂಚಿಸಲಾಗಿದೆ. (ಚರ್ಚೆ) ಪ್ರಸ್ತಾಪಿಸಿದ ದಿನಾಂಕ: May 2010 |
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (June 2008) |
''
ಹಲವು ರಾಷ್ಟ್ರಗಳಲ್ಲಿ ಶಿಶುವಿಹಾರವು ಆರಂಭಿಕ ಬಾಲ್ಯ ಶಿಕ್ಷಣ ಶಾಲಾಪೂರ್ವ ವ್ಯವಸ್ಥೆಯ ಒಂದು ಭಾಗವಾಗಿದೆ. ಸ್ಥಳೀಯ ರೂಢಿಯನ್ನು ಅವಲಂಬಿಸಿ ಎರಡರಿಂದ ಏಳು ವರ್ಷಗಳ ನಡುವಿನ ಯಾವುದೇ ಅವಧಿಯಲ್ಲಿ ಮಕ್ಕಳು ಶಿಶುವಿಹಾರಕ್ಕೆ ಹೋಗುತ್ತಾರೆ.
ಅಮೆರಿಕ ಸಂಯುಕ್ತ ಸಂಸ್ಥಾನ ಹಾಗು ಕೆನಡಾದ ಆಂಗ್ಲೋಫೋನ, ಹಾಗು ಆಸ್ಟ್ರೇಲಿಯಾದ ಕೆಲವು ಭಾಗಗಳು, ನ್ಯೂ ಸೌತ್ ವೇಲ್ಸ್, ತಾಸ್ಮೇನಿಯ ಹಾಗು ಆಸ್ಟ್ರೇಲಿಯಾದ ರಾಜಧಾನಿ ಪ್ರದೇಶದಲ್ಲಿ ಶಿಶುವಿಹಾರ ಎಂಬ ಪದವು ಮೊದಲ ಎರಡು ವರ್ಷದ ಶಿಕ್ಷಣವನ್ನು ಅಥವಾ ಪ್ರಾಥಮಿಕ ಶಾಲೆಯನ್ನು ವಿವರಿಸಲು ಮಾತ್ರ ಸಾಮಾನ್ಯವಾಗಿ ಬಳಸಲಾಗುತ್ತದೆ, (ಕೆನಡಾದಲ್ಲಿ ಮೊದಲ ಎರಡು ವರ್ಷಗಳು). ಮೇಲೆ ಹೇಳಲಾಗಿರುವ ಕೆಲವು ರಾಷ್ಟ್ರಗಳಲ್ಲಿ, ಪೋಷಕರು ತಮ್ಮ ಮಕ್ಕಳನ್ನು ಶಿಶುವಿಹಾರದ ತರಗತಿಗೆ ಕಡ್ಡಾಯವಾಗಿ ಕಳುಹಿಸಬೇಕು (ಸಾಮಾನ್ಯವಾಗಿ ಐದನೇ ವರ್ಷ). ಅಮೆರಿಕ ಸಂಯುಕ್ತ ಸಂಸ್ಥಾನದ ಹಲವು ರಾಜ್ಯಗಳು, ಐದರಿಂದ ಆರು ವರ್ಷಗಳ ನಡುವಿನ ಮಕ್ಕಳಿಗೆ ಶಿಶುವಿಹಾರ ತರಗತಿಯನ್ನು ಉಚಿತವಾಗಿ ನಡೆಸುತ್ತವೆ, ಅದಲ್ಲದೇ ಇದನ್ನು ಕಡ್ಡಾಯಗೊಳಿಸಿಲ್ಲ, ಆದರೆ ಇತರ ರಾಜ್ಯಗಳಲ್ಲಿ ಶಿಶುವಿಹಾರಕ್ಕೆ ದಾಖಲಿಸಿಕೊಳ್ಳಲು ಮಕ್ಕಳಿಗೆ ಐದು ವರ್ಷ ತುಂಬಿರಬೇಕು. ಶಾಲಾಪೂರ್ವ ಅಥವಾ ಬಹಳ ಕಡಿಮೆಯಾಗಿ ಬಳಕೆಯಾಗುವ "Pre-K"(ಹಿಂದಿನ ನರ್ಸರಿ ಶಾಲೆ) ಎಂಬ ಪದಗಳು U.S.ನಲ್ಲಿ ಬಾಲ್ಯದ ಆರಂಭಿಕ ಶಿಕ್ಷಣಕ್ಕೆ ಸೂಚಿತವಾಗುತ್ತಿತ್ತು.
ಬ್ರಿಟಿಶ್ ಇಂಗ್ಲಿಷ್ ನಲ್ಲಿ, ನರ್ಸರಿ ಅಥವಾ ಪ್ಲೇಗ್ರೂಪ್ (ಶಾಲಾಪೂರ್ವದ ಆಟದ ತಂಡ) ಎಂಬ ಪದವನ್ನು ಶಾಲಾಪೂರ್ವದ ಶಿಕ್ಷಣಕ್ಕೆ ಸಾಮಾನ್ಯವಾಗಿ ಬಳಕೆಯಾಗುತ್ತಿತ್ತು. ಅದಲ್ಲದೇ ಶಿಶುವಿಹಾರ ಎಂಬ ಪದವನ್ನು, ಶಿಕ್ಷಣದ ವಿಶೇಷ ಮಾದರಿಗಳಿಗೆ, ಉದಾಹರಣೆಗೆ ಸ್ಟೆಯಿನರ್-ವಾಲ್ಡಾರ್ಫ್ ಶಿಕ್ಷಣವನ್ನು (ರುಡೊಲ್ಫ್ ಸ್ಟೆಯಿನರ್ ಪ್ರತಿಪಾದಿಸಿದ ಶೈಕ್ಷಣಿಕ ಸಿದ್ಧಾಂತ) ಹೊರತುಪಡಿಸಿ ವಿರಳವಾಗಿ ಬಳಸಲಾಗುತ್ತಿತ್ತು.