ಶನೆಲ್
From Wikipedia, the free encyclopedia
ಶನೆಲ್ ಎಸ್.ಎ. , ಸಾಮಾನ್ಯವಾಗಿ "ಶನೆಲ್" ಎಂದು ಹೆಸರುವಾಸಿ '(English pronunciation: /ʃəˈnɛl/), ಇದು ಆಟ್ ಕೂಟೂರ್ನಲ್ಲಿ ಹೆಚ್ಚಾಗಿ ಗುರುತಿಸಲ್ಪಟ್ಟ ಹಾಗೂ ಫ್ಯಾಷನ್ ವಿನ್ಯಾಸಕಾರರಾದ ದಿವಂಗತ ಗೇಬ್ರಿಯೆಲ್ "ಕೊಕೊ" ಶನೆಲ್ ಅವರಿಂದ ಸ್ಥಾಪನೆಯಾದ ಒಂದು ಪರ್ಷಿಯನ್ ಫ್ಯಾಷನ್ ಹೌಸ್, ಐಷಾರಾಮಿ ಸಾಮಗ್ರಿಗಳನ್ನು ತಯಾರಿಸುವಲ್ಲಿ ನಿಷ್ಣಾತವಾಗಿದೆ (ಆಟ್ ಕೂಟೂರ್, ಸಿದ್ಧ-ಉಡುಪುಗಳು, ಕೈಚೀಲಗಳು, ಸುಗಂಧ ದ್ರವ್ಯಗಳು, ಮತ್ತು ಪ್ರಸಾಧನ ಸಾಮಾನುಗಳು ಮತ್ತು ಇತರೆಯವು ಸೇರಿವೆ).[1] ಫೋರ್ಬ್ಸ್ ನ ಪ್ರಕಾರ, ಹೌಸ್ ಆಫ್ ಶನೆಲ್ ಎಲೇನ್ ವರ್ತೈಮರ್ ಮತ್ತು ಜೆರಾರ್ಡ್ ವರ್ತೈಮರ್ ಅವರುಗಳ ಖಾಸಗಿ ಜಂಟಿ ಸ್ವಾಧೀನದಲ್ಲಿದೆ, ಇವರು ಆರಂಭದ (1924) ಶನೆಲ್ ಪಾಲುಗಾರ ಪಿಯರ್ ವರ್ತೈಮರ್ನ ಮರಿ ಮೊಮ್ಮಕ್ಕಳು.
This article contains wording that promotes the subject in a subjective manner without imparting real information. (August 2008) |
ಸಂಸ್ಥೆಯ ಪ್ರಕಾರ | Privately held |
---|---|
ಸ್ಥಾಪನೆ | 1909 / 1910 |
ಸಂಸ್ಥಾಪಕ(ರು) | Gabrielle "Coco" Chanel |
ಮುಖ್ಯ ಕಾರ್ಯಾಲಯ | Paris, ಫ್ರಾನ್ಸ್
135 Avenue Charles de Gaulle 92521 Neuilly-sur-Seine Cedex |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Alain Wertheimer, co-owner Gerard Wertheimer, co-owner Karl Lagerfeld, head designer |
ಉದ್ಯಮ | fashion |
ಉತ್ಪನ್ನ | haute couture, Perfume, Jewellery, Fashion accessory |
ಜಾಲತಾಣ | www.chanel.com |
ಈ ಕಂಪನಿಯು ಮೊದಲಿನಿಂದಲೂ ಅನೇಕ ಜನಪ್ರಿಯ ಪ್ರಸಿದ್ಧ ವ್ಯಕ್ತಿಗಳನ್ನು ರೂಪದರ್ಶಿಗಳನ್ನಾಗಿ ಹೊಂದಿದೆ, ಅವರಲ್ಲಿ ಕ್ಯಾಥರಿನ್ ಡೆನೆವ್ (1970ರ ದಶಕದ ಶನೆಲ್ ನಂ. 5 ರೂಪದರ್ಶಿ ವಕ್ತಾರ), ನಿಕೋಲ್ ಕಿಡ್ಮನ್ (2000 ದಶಕದ ಆರಂಭದ ಶನೆಲ್ ನಂ. 5 ರೂಪದರ್ಶಿ ವಕ್ತಾರ), ಆಡ್ರೆ ಟಟೌ (ಈಗಿನ ಶನೆಲ್ ನಂ. 5 ರೂಪದರ್ಶಿ ವಕ್ತಾರ), ಕೀರ ನೈಟ್ಲಿ (ಈಗಿನ ಕೊಕೊ ಮೇಡ್ಮೊಸೆಲ್ನ ರೂಪದರ್ಶಿ ವಕ್ತಾರ), ಮತ್ತು ಪ್ರಖ್ಯಾತ ನಟಿ ಮರ್ಲಿನ್ ಮನ್ರೊಳು (1950ರ ದಶಕದ ಶನೆಲ್ ನಂ. 5 ರೂಪದರ್ಶಿ ವಕ್ತಾರ) ಶನೆಲ್ ನಂ. 5 ಅನ್ನು ಅಕೆಯೇ ತನ್ನ ಮೇಲೆ ಎರಚಿಕೊಳ್ಳುತ್ತಿರುವಂತೆ ಚಿತ್ರೀಕರಿಸಲಾಗಿತ್ತು. ಈ ಚಿತ್ರವು ಶನೆಲ್ ಜಾಹೀರಾತುಗಳಲ್ಲಿ ಅತ್ಯಂತ ಹೆಸರುವಾಸಿಯಾದುದು, ಮತ್ತು ಮಾರುಕಟ್ಟೆಯ ಇತಿಹಾಸದಲ್ಲೇ ಬಹು ಜನಪ್ರಿಯ ಜಾಹೀರಾತು ಚಿತ್ರಗಳಲ್ಲೊಂದಾಗಿ ಮುಂದುವರೆದಿದೆ, ಎಣಿಕೆಯಿಲ್ಲದಷ್ಟು ಜೀವನ ಚರಿತ್ರೆಗಳಲ್ಲಿ ಬಳಸಲಾಗಿದೆ, ಮತ್ತು ಮರ್ಲಿನ್ ಮನ್ರೊ ರೂಪದರ್ಶಿಯಾಗಿರುವ ಇದನ್ನು ಈಗಲೂ ದೊಡ್ಡ ಪ್ರಮಾಣದಲ್ಲಿ ಭಿತ್ತಿ ಪತ್ರವಾಗಿ ಮಾರಲಾಗುತ್ತಿದೆ ಹಾಗೂ ಕಲಾತ್ಮಕ ಚಿತ್ರವಾಗಿ ಕೂಡ ಬಳಸಲಾಗುತ್ತಿದೆ. ಮರ್ಲಿನ್ ಮನ್ರೊರವರು ಈ ಸುಗಂಧ ದ್ರವ್ಯವನ್ನು ಖ್ಯಾತಿಗೊಳಿಸಿದರು.[2]