From Wikipedia, the free encyclopedia
ವೊಲ್ವೆರಿನ್ (ಗುಲೋ ಗುಲೋ )ನನ್ನು, ಗ್ಲಟನ್ ಎಂದೂ ಸೂಚಿಸಲಾಗುತ್ತದೆ. ಸಾಂಧರ್ಬಿಕವಾಗಿ ಕಾರ್ಕಾಜೌ ಸ್ಕಂಕ್ ಬೇರ್ , ಕ್ವಿಕ್ ಹಾಚ್ ಅಥವಾ ಗುಲೋನ್ ಎಂದೂ ಕರೆಯಲಾಗುತ್ತದೆ, ಇದು ಭೂಮಿಯ ಮೇಲೆ-ವಾಸಮಾಡುವ ಅತಿ ದೊಡ್ಡ ಮುಸ್ಟೆಲಿಡ್ (ವೀಸಲ್) ಜಾತಿಯ ಹೊಟ್ಟೆಬಾಕ ಪ್ರಾಣಿ ಗುಲೋ . ಇದು ಒಂದು ಕುಳ್ಳ,ದಪ್ಪಗಿರುವ ಮತ್ತು ಬಲಯುತ ಮಾಂಸ ಖಂಡ ಹೊಂದಿರುವ ಮಾಂಸಾಹಾರಿ ಪ್ರಾಣಿ, ಹೆಚ್ಚಾಗಿ ಇತರ ಮುಸ್ಟೆಲಿಡ್ ಗಳಿಗಿಂತ ಒಂದು ಸಣ್ಣ ಕರಡಿಯನ್ನು ಹೋಲುತ್ತದೆ. ವೊಲ್ವೆರಿನ್ ಉಗ್ರಸ್ವಭಾವ ಮತ್ತು ಅದರ ತೂಕಕ್ಕಿಂತ ಅಧಿಕ ಪ್ರಮಾಣದ ಶಕ್ತಿ ಹೊಂದಿರುವುದಕ್ಕೆ ಪ್ರಸಿದ್ದಿಯಾಗಿದೆ. ಅದರ ಶಕ್ತಿಗಿಂತ ಹೆಚ್ಚು ಭಾರದ ಬೇಟೆಯನ್ನು ಕೊಲ್ಲುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.
ವೊಲ್ವೆರಿನ್ ಪ್ರಥಮವಾಗಿ ದೂರದ ಉತ್ತರ ಬೋರಿಯಲ್ ಕಾಡುಗಳು ಮತ್ತು ಉತ್ತರ ಧ್ರುವ ವಲಯದ ಸಮೀಪ ಮತ್ತು ಉತ್ತರ ಧ್ರುವದ ಅಲ್ಪೈನ್ ಟನ್ಡ್ರಾದಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಅಲಾಸ್ಕಾ, ಕೆನಡಾ, ಯೂರೋಪಿನ ನೊರ್ಡಿಕ್ ದೇಶಗಳು ಮತ್ತು ಪಶ್ಚಿಮ ರಷ್ಯಾ ಮತ್ತು ಸೈಬೀರಿಯಾದುದ್ದಕ್ಕೂ ಕಾಣಸಿಗುತ್ತದೆ. ಅವುಗಳ ಸಂಖ್ಯೆಯು 19ನೇ ಶತಮಾನದಿಂದೀಚೆಗೆ ಕ್ರಮವಾಗಿ ಅಳಿವಿನ ಅಂಚಿಗೆ ಬಂದಿದೆ. ಇವುಗಳ ಅಮಿತ ಬೇಟೆ , ಕಾಡುಗಳ ನಾಶ ಮತ್ತು ನೆಲೆಯ ವಿಘಟನೆ ಯ ಆಘಾತ ಎದುರಿಸಿವೆ, ಹೀಗಾಗಿ ಅವುಗಳು ಯುರೋಪಿಯನ್ ಘಟ್ಟಗಳ ದಕ್ಷಿಣ ತುದಿಯಲ್ಲಿ ಪ್ರಮುಖವಾಗಿ ಅಸ್ತಿತ್ವದಲ್ಲಿಲ್ಲ. ಹೀಗಿದ್ದರೂ ಅವುಗಳ ಸಂಖ್ಯೆಯು ಉತ್ತರ ಅಮೆರಿಕ ಮತ್ತು ಉತ್ತರ ಏಷಿಯಾದಲ್ಲಿ ಕರ್ನಾಟಕದ
ಶಿವಮೊಗ್ಗಜಿಲ್ಲೆಯಲ್ಲೂoಕಂಡು್ಬರುತ್ತವೆ ಎಂದು s
ಟ tಕK
ಅಂದಾಜಿಸಲಾಗಿದೆ.[2]
ಆನುವಂಶಿಕ ಆಧಾರವು ವೊಲ್ವೆರಿನ್ ಹತ್ತಿರದಲ್ಲಿ ಟೈರಾ ಮತ್ತು ಮಾರ್ಟೆನ್ಸ್ (ಕ್ರಮವಾಗಿ ಐರಾ , ಮತ್ತು ಮಾರ್ಟೆಸ್ )ಅನ್ನು ಹೋಲುತ್ತದೆ ಎಂಬುದನ್ನು ಸೂಚಿಸುತ್ತದೆ. ಇವೆಲ್ಲವೂ ಅವುಗಳ ಯುರೇಷಿಯನ್ ಪೂರ್ವಿಕರ ವಂಶಕ್ಕೆ ಹೊಂದಾಣಿಕೆಯಾಗುತ್ತವೆ.[3]
ಗುಲೋ ಜಾತಿ ಯ ಒಳಗಡೆಯೇ, ಒಂದು ಉಪವಿಭಾಗವು ಎರಡು ಉಪಜಾತಿಗಳ ವರ್ಗ ಇದೆ : ಹಳೆಯ ಜಗತ್ತಿನ ರೂಪ ಗುಲೋ ಗುಲೋ ಗುಲೋ ಮತ್ತು ಹೊಸ ಜಗತ್ತಿನ ರೂಪ G. g. ಲುಸ್ಕುಸ್ . ಕೆಲವು ಲೇಖಕರು ವಿವರಿಸಿದಂತೆ ನಾಲ್ಕರಷ್ಟು ಅಧಿಕ ಉತ್ತರ ಅಮೆರಿಕಾದಲ್ಲಿ ಇದರ ಉಪಜಾತಿಗಳಿವೆ, ಇವುಗಳಲ್ಲಿ ಕೆಲವು ವನ್ಕೌವೆರ್ ದ್ವೀಪ ಕ್ಕೆ ಸೀಮಿತವಾಗಿವೆ. (G. g. ವನ್ಕೌವೆರ್ಎನ್ಸಿಸ್ ) ಮತ್ತು ಅಲಾಸ್ಕಾದ ಕೆನೈ ಪರ್ಯಾಯ ದ್ವೀಪಕ್ಕೆ ಸೇರಿದ (G. g. ಕತ್ಸ್ಚೆಮಕೆನ್ಸಿಸ್ ) ಆದರೂ, ಸದ್ಯಕ್ಕೆ ಸ್ವೀಕರಿಸಿದ ಜೀವಿವರ್ಗಿಶಾಸ್ತ್ರವು ಎರಡು ಭೂಖಂಡದ ಉಪಜಾತಿಗಳು ಅಥವಾ G. ಗುಲೋ ವನ್ನು ಉತ್ತರ ಭೂಖಂಡದುದ್ದಕ್ಕೂ ಕಂಡುಬರುವ ಏಕೈಕ ಜೀವಿವರ್ಗಿ(ಹೊಲರಕ್ಟಿಕ್)ಎಂದು ಗುರುತಿಸುತ್ತದೆ.[4]
ಇತ್ತೀಚಿಗೆ ಸಂಶೋಧಿಸಿ ಸಂಕಲನಗೊಳಿಸಿದ ಆನುವಂಶಿಕ ಆಧಾರವು ಹೆಚ್ಚಿನ ಉತ್ತರ ಅಮೆರಿಕಾದ ವೊಲ್ವೆರಿನ್ ಗಳು ಒಂದೇ ಮೂಲದ ವಂಶ ಪರಂಪರೆಯಿಂದ ಬಂದಿದೆ ಎಂಬುದನ್ನು ಸೂಚಿಸುತ್ತದೆ, ಪ್ರಾಯಶಃ ಇದರ ಹುಟ್ಟು ಬೇರಿನ್ಗಿಯ ದ ಕಳೆದ ಹಿಮಕ್ರಿಯೆಯಿಂದ ಆಗಿರಬಹುದು. ಜೊತೆಗೆ ಇದು ನಂತರದಲ್ಲಿ ವ್ಯಾಪಕವಾಗಿ ಬೆಳೆದಿದೆ, ಆದರೂ ಈ ನಿರ್ಣಯಕ್ಕೆ ಗಮನಾರ್ಹ ಅನಿಶ್ಚಿತತೆ ಇದೆ. ಏಕೆಂದರೆ ಬಹುತೇಕ ಖಾಲಿಯಾದ ದಕ್ಷಿಣ ಶ್ರೇಣಿಯ ವ್ಯಾಪ್ತಿಯಲ್ಲಿ ಅವುಗಳ ಮಾದರಿಗಳನ್ನು ಸಂಗ್ರಹಿಸುವುದು ತುಂಬಾ ಕಷ್ಟಕರ.[4]
ಅಂಗರಚನಾದೃಷ್ಟಿಯಿಂದ, ವೊಲ್ವೆರಿನ್ ಒಂದು ಕುಳ್ಳಗಿನ ದಪ್ಪಗಿರುವ ಮತ್ತು ಬಲಯುತ ಮಾಂಸಖಂಡಯುಳ್ಳ ಪ್ರಾಣಿ. ಚಿಕ್ಕ ಕಾಲುಗಳು, ಅಗಲವಾದ ಮತ್ತು ಗುಂಡನೆಯ ತಲೆ, ಮತ್ತು ಚಿಕ್ಕ ಕಣ್ಣುಗಳು ಜೊತೆಗೆ ಗುಂಡಾಗಿ ಚಿಕ್ಕದಾಗಿರುವ ಕಿವಿಗಳನ್ನು ಹೊಂದಿದೆ. ಇದು ಇತರ ಮುಸ್ಟೆಲಿಡ್ ಗಳಿಗಿಂತ ಹೆಚ್ಚಾಗಿ ಒಂದು ಕರಡಿಯನ್ನು ಹೋಲುತ್ತದೆ. ಅದರ ಕಾಲುಗಳು ಕಿರಿದಾಗಿವೆ, ಆದರೆ ಅದರ ಅಗಲವಾದ ಐದು-ಕಾಲ್ಬೆರಳುಗಳ ಪಂಜಗಳು ಮತ್ತು ಪ್ಲಾನ್ಟಿಗ್ರೇಡ್ ಭಂಗಿಯು ಆಳವಾದ ಮಂಜಿನಲ್ಲಿ ಅದರ ಚಲನೆಗೆ ಸಹಾಯ ಮಾಡುತ್ತದೆ.[5]
ಒಂದು ಬೆಳೆದ ವೊಲ್ವೆರಿನ್ ನ ತೂಕ ಒಂದು ಮಧ್ಯಮ ನಾಯಿಯಷ್ಟಿದೆ, ಅದರ ಉದ್ದವು ಸಾಮಾನ್ಯವಾಗಿ 65 – 87 ಸೆಂ.ನಷ್ಟಿರುತ್ತದೆ (25 - 34 ಇಂಚುಗಳು), ಅದರ ಬಾಲವು 17 – 26 ಸೆಂ.ನಷ್ಟಿರುತ್ತದೆ (7-10 ಇಂಚುಗಳು), ಅದರ ತೂಕವು 10–25 ಕೆಜಿಯಷ್ಟಿರುತ್ತದೆ (22 - 55 lb), ಆದರೂ ವಿಶೇಷವಾಗಿ ದೊಡ್ಡ ಗಂಡು ಪ್ರಾಣಿಯು 31 ಕೆಜಿ ಯಷ್ಟು ತೂಕವಿರುತ್ತದೆ (70 lb).[6] ಗಂಡು ಪ್ರಾಣಿಗಳು ಹೆಣ್ಣು ಪ್ರಾಣಿಗಳಿಗಿಂತ 30ರಷ್ಟು ಅಧಿಕ ದೊಡ್ದದಾಗಿರುತ್ತವೆ.
ಇದು ಭೂಚರ ಮುಸ್ಟೆಲಿಡ್ ಗಳಲ್ಲೇ ದೊಡ್ಡದು; ಸಮುದ್ರ ವಾಸಿಗಳಾದ ಕಡಲ ಉದ್ರಗಳು ಮತ್ತು ದೈತ್ಯ ಉದ್ರಗಳು ಮಾತ್ರ ದೊಡ್ದದಾಗಿರುತ್ತವೆ. ವೊಲ್ವೆರಿನ್ ಗಳು ದಪ್ಪನಾದ, ಕಪ್ಪಗಿನ, ಎಣ್ಣೆ ತುಂಬಿದ ತುಪ್ಪಳ ಹೊಂದಿವೆ. ಇವು ಅಧಿಕವಾಗಿ ಜಲಭೀತಿಯುಳ್ಳದ್ದಾಗಿರುತ್ತವೆ, ಹೀಗಾಗಿ ಇವುಗಳು ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದು ಬೇಟೆಗಾರರು ಮತ್ತು ಚರ್ಮಕ್ಕಾಗಿ ಕೊಲ್ಲುವವರ ಆಕರ್ಷಣೆಗೆ ಕಾರಣವಾಗಿದೆ. ಇದನ್ನು ಉತ್ತರ ಧ್ರುವದ ಹವಾಮಾನಕ್ಕೆ ಅನುಗುಣವಾಗಿ ಜಾಕೆಟ್ ಮತ್ತು ತೊಗಲಿನ ಕೋಟುಗಳಲ್ಲಿ ಒಳ ಉಡುಪಾಗಿ ಬಳಸಲಾಗುತ್ತದೆ. ಒಂದು ತೆಳುವಾದ ಬೆಳ್ಳಿ ಬಣ್ಣದ ಮುಖವಾಡವು ಕೆಲವು ಪ್ರಾಣಿಗಳಲ್ಲಿ ವಿಶೇಷವಾಗಿದೆ, ಮತ್ತು ಒಂದು ಮಸುಕಾದ ತೊಗಲಿನ ಪಟ್ಟೆಯು ಭುಜದ ಉತ್ತರ ಭಾಗದ ಪಕ್ಕಕ್ಕೆ ಸುತ್ತುವರಿಯುತ್ತದೆ. ಅದರ ಹಿಂಭಾಗದಿಂದ ಸ್ವಲ್ಪ ಮೇಲೆ ಅದರ 25–35 ಸೆಂ. ಉದ್ದದ ಪೊದೆಯಾದ ಬಾಲದ ಮೇಲೆ ಹಾದು ಹೋಗುತ್ತದೆ. ಕೆಲವು ಪ್ರಾಣಿಗಳಲ್ಲಿ ಗಮನ ಸೆಳೆಯುವ ಬಿಳಿ ಕೂದಲಿನ ಕಲೆಯು ಗಂಟಲು ಅಥವಾ ಎದೆಯ ಮೇಲೆ ಕಂಡು ಬರುತ್ತದೆ.[5]
ಹಲವು ಇತರ ಮುಸ್ಟೆಲಿಡ್ ಗಳಂತೆ, ಸಮರ್ಥವಾದ ಗುದ ದ್ವಾರಕ್ಕೆ ಸಮೀಪ ವಾಸನಾ ಶಕ್ತಿ ಗ್ರಂಥಿಗಳನ್ನು ಹೊಂದಿದೆ. ಇದನ್ನು ತಾನಿರುವ ಪ್ರದೇಶ ಗುರುತಿಸಲು ಮತ್ತು ಲೈಂಗಿಕ ಸಂಕೇತ ನೀಡಲು ಬಳಸಿಕೊಳ್ಳುತ್ತವೆ. ಅದಕ್ಕಿರುವ ತೀಕ್ಷ್ಣ ವಾಸನೆಯಿಂದಾಗಿ ಅದಕ್ಕೆ "ಸ್ಕಂಕ್ ಬೇರ್" ಮತ್ತು "ನಾಸ್ಟಿ ಕ್ಯಾಟ್" ಎಂಬ ಅಡ್ಡ ಹೆಸರುಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ವೊಲ್ವೆರಿನ್ ಗಳು, ಇತರ ಮುಸ್ಟೆಲಿಡ್ಗಳಂತೆ, ಒಂದು ವಿಶೇಷವಾದ ಮೇಲಿನ ಪೇಷಕಗಳನ್ನು ಅದರ ಬಾಯಿಯ ಹಿಂಭಾಗದಲ್ಲಿ ಹೊಂದಿರುತ್ತದೆ ಇದು 90 ಡಿಗ್ರಿಯಲ್ಲಿ, ಬಾಯಿಯ ಒಳ ದಿಕ್ಕಿಗೆ ಚಲಿಸುತ್ತದೆ. ಈ ವಿಶೇಷವಾದ ಲಕ್ಷಣವು ವೊಲ್ವೆರಿನ್ ಗಳಿಗೆ ಅದರ ಬೇಟೆಯಿಂದ ಮಾಂಸವನ್ನು ಹರಿಯಲು ಅಥವಾ ಹಿಮದಿಂದ ಗಟ್ಟಿಗೊಂಡ ಕೊಳೆತ ಮಾಂಸ ಹರಿಯಲು ಸಹಾಯ ಮಾಡುತ್ತದೆ.[7][8]
ವೊಲ್ವೆರಿನ್, ಇತರ ಮುಸ್ಟೆಲಿಡ್ ಗಳಂತೆ, ಅದರ ಗಾತ್ರದಿಂದಾಗಿ ಅಸಾಧಾರಣ ಬಲ ಹೊಂದಿದೆ. ಅದು ತನ್ನ ಬೇಟೆಯನ್ನು ಹೆಗ್ಗಡವೆಗಳಷ್ಟು ದೊಡ್ಡದಾಗಿ ಕೊಲ್ಲುವ ರೀತಿಗೆ ಹೆಸರಾಗಿದೆ, ಆದರೂ ಇವುಗಳ ವೈಶಿಷ್ಟ್ಯವೆಂದರೆ ಚಳಿಗಾಲದಲ್ಲಿನ ಹಸಿವಿನಿಂದ ಅಥವಾ ಆಳವಾದ ಹಿಮದಲ್ಲಿ ಸಿಕ್ಕಿಹಾಕಿಕೊಂಡರೆ ಮಾತ್ರ ದುರ್ಬಲಗೊಳ್ಳುತ್ತವೆ. ಪುರಾತನ ಜಗತ್ತಿನಲ್ಲಿ ಬೀಡುಬಿಟ್ಟ ವೊಲ್ವೆರಿನ್ ಗಳು (ಸ್ಪಷ್ಟೊಕ್ತವಾಗಿ, ಫೆನ್ನೋಸ್ಕ್ಯಾಂಡಿಯ) ಅವುಗಳ ಉತ್ತರ ಅಮೆರಿಕ ದ ಸಂಬಂಧಿಪ್ರಾಣಿಗಳಿಗಿಂತ ಹೆಚ್ಚು ಚುರುಕಿನ ಬೇಟೆಗಾರರು ಎನಿಸಿವೆ.[9] ಇದು ಏಕೆಂದರೆ ಯುರೇಶಿಯಾದಲ್ಲಿ ಸ್ಪರ್ಧೆಯೊಡ್ಡಬಹುದಾದ ಪರಭಕ್ಷಕ ಸಂಖ್ಯೆಯು ಹೆಚ್ಚಾಗಿ ದಟ್ಟವಾಗಿಲ್ಲ, ಇದು ವೊಲ್ವೆರಿನ್ ಗಳನ್ನು ಹೆಚ್ಚು ಕ್ರಿಯಾಶೀಲವನ್ನಾಗಿ ಮಾಡಿ ಇತರ ಪ್ರಾಣಿಗಳು ಸಾಯಿಸುವುದಕ್ಕೆ ಕಾದು ನಂತರ ಅದನ್ನು ಕಸಿದುಕೊಳ್ಳುವ ಬದಲು ತಾನೇ ಬೇಟೆಯಾಡುವಂತೆ ಮಾಡುತ್ತದೆ. ಅವುಗಳು ಯಾವಾಗಲು ತೋಳಗಳು ತಿಂದುಬಿಟ್ಟ ಕೊಳೆತ ಮಾಂಸವನ್ನು ತಿನ್ನುತ್ತವೆ. ಹೀಗಾಗಿ ತೋಳಗಳ ಸಂತತಿಯಲ್ಲಿ ಬದಲಾವಣೆಯಾದರೆ ವೊಲ್ವೆರಿನ್ ಗಳ ಸಂತತಿಗೆ ಧಕ್ಕೆ ಬರಬಹುದು.[10] ವೊಲ್ವೆರಿನ್ ಗಳು ಸಾಂಧರ್ಭಿಕವಾಗಿ ಸಸ್ಯಾಹಾರ ಪದಾರ್ಥವನ್ನು ಇಷ್ಟಪಡುತ್ತವೆ.[11]
ಶಕ್ತಿಯುತವಾದ ದವಡೆ, ತೀಕ್ಷ್ಣ ಪಂಜಗಳು ಮತ್ತು ಒಂದು ದಪ್ಪ ತೊಗಲಿನ ನೈಸರ್ಗಿಕ ಕವಚದಿಂದ ಸಜ್ಜಿತಗೊಂಡಿವೆ.[12] ವೊಲ್ವೆರಿನ್ ಗಳು ದೊಡ್ಡ ಸಂಖ್ಯೆಯಲ್ಲಿ ಎದುರಾಳಿಗಳಿಂದ ಅಥವಾ ಅಸಂಖ್ಯಾತ ಪರಭಕ್ಷಕರಿಂದ ತನ್ನನ್ನು ರಕ್ಷಿಸಿಕೊಳ್ಳುತ್ತದೆ.[13] 27-ಪೌಂಡ್ ತೂಕದ ವೊಲ್ವೆರಿನ್ ಒಂದು ಕಪ್ಪು ಕರಡಿ ಯಿಂದ ಬೇಟೆಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತದೆ. ಇದಕ್ಕಾಗಿಯೇ ಒಂದು ಬಲಯುತ ಪ್ರಾಣಿ ಎನ್ನುವ ಹೆಸರೂ ದೊರೆತಿದೆ. (ವಯಸ್ಕ ಗಂಡುಗಳು 400 ರಿಂದ 500 ಪೌಂಡ್ ತೂಗುತ್ತವೆ). ದುರಾದೃಷ್ಟವಶಾತ್ ಮುಸ್ಟೆಲಿಡ್, ಅಂತಿಮವಾಗಿ ಈ ಸ್ಪರ್ಧೆಯಲ್ಲಿ ಕರಡಿಗೆ ಮಣಿಯಿತು.[14] ವೊಲ್ವೆರಿನ್ ಗಳು ಕಿರುಕುಳ ನೀಡುವುದಕ್ಕೆ ಮತ್ತು ತೋಳಗಳಿಗೆ ಮತ್ತು ಕೂಗರ್ ಗಳನ್ನು ಬೆದರಿಸುವ ಪ್ರಯತ್ನಕ್ಕೆ ಹೆಸರುವಾಸಿಯಾಗಿವೆ.
ಬೇಸಿಗೆಯು ಕೂಡುವ ಕಾಲ, ಆದರೆ ಭ್ರೂಣವು(ಬ್ಲಾಸ್ಟೋಸಿಸ್ಟ್) ನಿಜವಾಗಿ ಗರ್ಭಕೋಶ ಸೇರುವುದನ್ನು ಚಳಿಗಾಲದ ಪ್ರಾರಂಭದವರೆಗೂ ತಡೆಯಲಾಗುತ್ತದೆ. ಹೀಗಾಗಿ ಭ್ರೂಣದ ಬೆಳವಣಿಗೆಯನ್ನು ನಿಧಾನಗೊಳಿಸಲಾಗುತ್ತದೆ. ಹೆಣ್ಣುಗಳು ಆಹಾರದ ಕೊರತೆಯಿದ್ದರೆ ಪದೇ ಪದೇ ಮರಿಯನ್ನು ಹಾಕುವುದಿಲ್ಲ. ವೊಲ್ವೆರಿನ್ ನ ಗರ್ಭಾವಸ್ಥೆಯ ಅವಧಿಯು 30–50 ದಿನಗಳು. ವಿಶಿಷ್ಟವಾಗಿ ಎರಡು ಅಥವಾ ಮೂರು ಮರಿಗಳು("ಮರಿಗಳು") ವಸಂತ ಕಾಲದಲ್ಲಿ ಜನಿಸುತ್ತವೆ. ಮರಿಗಳು ವೇಗವಾಗಿ ಬೆಳವಣಿಗೆಯಾಗುತ್ತವೆ, ಮರಿ ತನ್ನ ವಯಸ್ಕ ಗಾತ್ರವನ್ನು ಅದರ ಜೀವಿತಾವಧಿಯ ಮೊದಲ ವರ್ಷದಲ್ಲೇ ತಲುಪುತ್ತದೆ. ಇದು ಐದರಿಂದ (ಕೆಲವು ಪ್ರಾಣಿಗಳಲ್ಲಿ ಇದು ಅಪವಾದವಾಗಿದೆ) ಹದಿಮೂರು ವರ್ಷಗಳ ತನಕವೂ ತಲುಪಬಹುದು.[ಸೂಕ್ತ ಉಲ್ಲೇಖನ ಬೇಕು]
ವಯಸ್ಸಾದ ವೊಲ್ವೆರಿನ್ ಗಳಿಗೆ ಸ್ವಾಭಾವಿಕವಾದ ಯಾವುದೇ ಪರಭಕ್ಷಕಗಳಿರುವುದಿಲ್ಲ, ಹೀಗಿದ್ದರೂ ಅವುಗಳು ಇತರ ದೊಡ್ಡ ಪರಭಕ್ಷಕಗಳ ಜೊತೆಗೆ ಜಾಗ ಹಾಗು ಆಹಾರದ ವಿಷಯಕ್ಕಾಗಿ ಕಾದಾಡುತ್ತವೆ(ಮತ್ತು ಇವುಗಳು ಸಾಯಲೂ ಬಹುದು). ಚಿಕ್ಕ ವಯಸ್ಸಿನವುಗಳು ಹೆಚ್ಚು ಗಾಯಗೊಳಿಸುತ್ತವೆ; ಹಸುಳೆಗಳನ್ನು (ಮರಿಗಳು) ಹಲವು ಬಾರಿ ಪರಭಕ್ಷಕ ಹಕ್ಕಿಗಳು ಉದಾಹರಣೆಗೆ ಹದ್ದುಗಳು ಹೊತ್ತೊಯ್ಯುತ್ತವೆ.[15]
ವೊಲ್ವೆರಿನ್ ಗಳು ಪ್ರಮುಖವಾಗಿ ಉತ್ತರ ವಲಯದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತದೆ. ಉದಾಹರಣೆಗೆ ಉತ್ತರ ಧ್ರುವದ ವಲಯ ಮತ್ತು ಅಲಾಸ್ಕಾದ ಅಲ್ಪೈನ್ ಪ್ರದೇಶಗಳು, ಉತ್ತರ ಕೆನಡಾ, ಸೈಬೀರಿಯ ಮತ್ತು ಸ್ಕ್ಯಾಂಡಿನೇವಿಯಾ; ಅವುಗಳು ರಷ್ಯಾ, ಬಾಲ್ಟಿಕ್ ದೇಶಗಳು ಮತ್ತು ಉತ್ತರ ಚೈನಾ ಮತ್ತು ಮಂಗೋಲಿಯಾ ಕ್ಕೆ ಕೂಡ ಸ್ಥಳೀಯ ಪ್ರಾಣಿಗಳು. 2008 ಮತ್ತು 2009ರಲ್ಲಿ, ವೊಲ್ವೆರಿನ್ ಗಳು ದೂರದ ದಕ್ಷಿಣದವರೆಗೂ, ತಾಹೋ ಸರೋವರಸಮೀಪದ ಸಿಯರ್ರ ನೆವಾಡಾದಲ್ಲಿ 1922 ನಂತರ ಮೊದಲ ಬಾರಿಗೆ ಕಂಡುಬಂದವು.[16][17] ಇವುಗಳು ಕಡಿಮೆ ಸಂಖ್ಯೆಯಲ್ಲಿ ರಾಕಿ ಪರ್ವತಗಳು ಮತ್ತು ಯುನಿಟೆಡ್ ಸ್ಟೇಟ್ಸ್ ನ ಉತ್ತರ ಜಲಪಾತಗಳಲ್ಲಿ ಕಂಡು ಬರುತ್ತವೆ. ಆದಾಗ್ಯೂ, ಹೊಸ ಜಗತ್ತಿನ ಹೆಚ್ಚಿನ ವೊಲ್ವೆರಿನ್ ಗಳು ಕೆನಡಾದಲ್ಲಿ ವಾಸಿಸುತ್ತವೆ.[11]
ವನ್ಯಜೀವಿ ಸಂರಕ್ಷಣಾ ಸಂಸ್ಥೆಯು ಜೂನ್ 2009ರಲ್ಲಿ ವರದಿ ಮಾಡಿದಂತೆ ವೊಲ್ವೆರಿನ್ ಸಂಶೋಧಕರು ಮೂರು ತಿಂಗಳಿನಿಂದ ಅದರ ಜಾಡನ್ನು ಹುಡುಕಿಕೊಂಡು ಉತ್ತರ ಕೊಲೋರಾಡೋವನ್ನೂ ದಾಟಿ ಹೋಗಿದ್ದರು. ಸಂಸ್ಥೆಯ ಅಧಿಕಾರಿಗಳು ಗಂಡು ವೊಲ್ವೆರಿನ್ ಮರಿಯನ್ನು ಗ್ರಾಂಡ್ ಟೆಟನ್ ರಾಷ್ಟ್ರೀಯ ಉದ್ಯಾನದ ಸಮೀಪ ವ್ಯೋಮಿಂಗ್ವರೆಗೂ ಹಿಂಬಾಲಿಸಿದರು. ಅದು ದಕ್ಷಿಣ ದಿಕ್ಕಿನಲ್ಲಿ ಸರಿ ಸುಮಾರು 500 ಮೈಲುಗಳವರೆಗೂ ಸಾಗಿತು. ಅದು 1919 ನಂತರ ಕೊಲೋರಾಡೋದಲ್ಲಿ ಕಂಡ ಮೊದಲ ವೊಲ್ವೆರಿನ್ ಆಗಿತ್ತು. ಅದರ ಗೋಚರತೆಯನ್ನು ಕೊಲೋರಾಡೋ ವನ್ಯಜೀವಿ ವಿಭಾಗದವರು ದೃಢಪಡಿಸಿದರು.[11]
ಜಗತ್ತಿನ ಒಟ್ಟು ವೊಲ್ವೆರಿನ್ ಗಳ ಸಂಖ್ಯೆಯು ತಿಳಿದುಬಂದಿಲ್ಲ. ಪ್ರಾಣಿಯು ಕಡಿಮೆ ಸಂಖ್ಯೆಯ ಒಂದು ಸಾಂದ್ರತೆಯನ್ನು ಪ್ರದರ್ಶಿಸುತ್ತದೆ. ಇವುಗಳಿಗೆ ಒಂದು ದೊಡ್ಡ ವಸತಿ ಪ್ರದೇಶದ ಅಗತ್ಯವಿದೆ.[10] ಒಂದು ಗಂಡು ವೊಲ್ವೆರಿನ್ ನ ವ್ಯಾಪ್ತಿಯು 620 km² (240 sq mi)ವರೆಗೂ ಹರಡಿದೆ. ಇದು ಹಲವಾರು ಹೆಣ್ಣು ವೊಲ್ವೆರಿನ್ ಗಳ ವ್ಯಾಪ್ತಿಯನ್ನು ಸುತ್ತುಗಟ್ಟಿದೆ. ಹೆಣ್ಣು ವೊಲ್ವೆರಿನ್ ಗಳು ಬಹಳ ಚಿಕ್ಕದಾದ ವಾಸಸ್ಥಾನದ ವ್ಯಾಪ್ತಿಯನ್ನು ಹೊಂದಿವೆ. ಇದು ಸರಿಸುಮಾರು 130–260 km² (50-100 sq mi)ಗಳಾಗಿದೆ. ವಯಸ್ಕ ವೊಲ್ವೆರಿನ್ ಗಳು ತಮ್ಮದೇ ಲಿಂಗದ ಬೆಳೆದ ಪ್ರಾಣಿಗಳ ಜೊತೆಗೆ ವ್ಯಾಪ್ತಿಯ ಅತಿಕ್ರಮಣ-ವಾಗದಂತೆ ಹೆಚ್ಚಿನ ಭಾಗಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತವೆ.[8] ರೇಡಿಯೋ ಶೋಧವು ಸೂಚಿಸುವಂತೆ ಒಂದು ಪ್ರಾಣಿಯು ಕೆಲವೇ ತಿಂಗಳುಗಳಲ್ಲಿ ನೂರಾರು ಮೈಲುಗಳ ವ್ಯಾಪ್ತಿ ಆಕ್ರಮಿಸಬಹುದು.
ದೇಶ | ಸಂಖ್ಯೆ | ಪ್ರದೇಶ | ವರ್ಷ | ಸಂಖ್ಯೆಯ ಸ್ಥಿತಿ |
---|---|---|---|---|
ಸ್ವೀಡನ್ | 265+[5] | ನೋರ್ರ್ಬೊಟ್ಟೆನ್[5] | 1995-97[5] | ಸ್ಥಿರ [5] |
ನಾರ್ವೆ | 150+[5] | ಸ್ನೋಹೆಟ್ಟ ಪ್ರಸ್ಥಭೂಮಿ ಮತ್ತು ಉತ್ತರ [5] | 1995-97[5] | ಕ್ಷೀಣ[5] |
ಫಿನ್ಲೆಂಡ್ | 155–170[5] | ಕರೆಲಿಯ ಮತ್ತು ಉತ್ತರ[5] | 2008[5] | ಸ್ಥಿರ[5] |
ರಷ್ಯಾ | 1500[5] | ಟೈಗ[5] | 1970, 1990,[5] | ಕ್ಷೀಣ[5] |
ರಷ್ಯಾ - ಕೋಮಿ | 885[5] | - | 1990[5] | - |
ರಷ್ಯಾ - ಆರ್ಚ್ಯೆನ್ಜೆಲ್ಸ್ಕ್ ಒಬ್ಲಾಸ್ಟ್ | 410[5] | ನೆನೆಟ್ಸ್ಕಿ ಸ್ವನಿಯಂತ್ರಿತ ಪ್ರದೇಶ[5] | 1990[5] | ಸೀಮಿತ[5] |
ರಷ್ಯಾ - ಕೋಲ ಪ್ರಸ್ಥಭೂಮಿ | 160[5] |
ಬೇಟೆಯಾಧಾರಿತ ಜಿಲ್ಲೆಗಳು[5] |
1990[5] |
ಕ್ಷೀಣ[5] |
ತಿಳಿದುಬಂದಿಲ್ಲ[18] |
ಕೊಬುಕ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ[18],ಸೇಲವಿಕ್ ರಾಷ್ಟ್ರೀಯ ವನ್ಯಜೀವಿ ಆಶ್ರಯ ತಾಣ[18] | 1998[18] | ಕ್ಷೀಣ[18] | |
USA - ಅಲಾಸ್ಕಾ[19] | 3.0 (± 0.4 SE) ವೊಲ್ವೆರಿನ್ ಗಳು/1,000 km 2[19] | ಟರ್ನ್ಅಗೈನ್ ಆರ್ಮ್ ಮತ್ತು ಕೆನೈ ಪರ್ವತಗಳು[19] | 2004[19] | -[19] |
USA - ಕ್ಯಾಲಿಫೋರ್ನಿಯಾ[10] | ತಿಳಿದು ಬಂದಿಲ್ಲ | ತಾಹೋ ರಾಷ್ಟೀಯ ಅರಣ್ಯ[10] | 2008[10] | ತಿಳಿದು ಬಂದಿಲ್ಲ [10] |
ಕೆನಡಾ - ಯುಕೋನ್ | 9.7 (± 0.6 SE) ವೊಲ್ವೆರಿನ್ ಗಳು/1,000 km 2[19] | ಓಲ್ಡ್ ಕ್ರೌ ಫ್ಲಾಟ್ಸ್[19] | 2004[19] | -[19] |
ಕೆನಡಾ - ಒಂಟಾರಿಯೋ [20] | ಅಸ್ಪಷ್ಟ[20] | ರೆಡ್ ಲೇಕ್ - ಸಿಔಕ್ಸ್ ಲುಕ್ ಔಟ್ ನಿಂದ ಫೋರ್ಟ್ ಸೇವೆರ್ನ್ ತನಕ - ಪೆವನುಕ್ಕ್[20] | 2004[20] | ಬೆಳೆಯುವಷ್ಟು ಸ್ಥಿರವಾಗಿದೆ[20] |
ಕೆನಡಾ - ಒಟ್ಟಾರೆಯಾಗಿ[21] | 15000ದಿಂದ 19000[21] | ಒಟ್ಟಾರೆ[21] | -[21] | ಸ್ಥಿರ[21] |
ದೊಡ್ಡ ಭೂ ಪ್ರದೇಶಗಳ ಅವಶ್ಯಕತೆಯು ಮಾನವ ಬೆಳವಣಿಗೆಯ ಜೊತೆ ವೊಲ್ವೆರಿನ್ ಗಳ ಹೋರಾಟವನ್ನು ಹುಟ್ಟುಹಾಕುತ್ತದೆ. ಬೇಟೆಯಾಡುವುದು ಮತ್ತು ಅದನ್ನು ಕೊಲ್ಲುವುದು ಇನ್ನೂ ಹೆಚ್ಚಾಗಿ ಅದರ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಇದು ಅವುಗಳನ್ನು ದೊಡ್ಡ ಸಂಖ್ಯೆಯಲ್ಲಿ ಅವುಗಳ ಪೂರ್ವ ವ್ಯಾಪ್ತಿ ಪ್ರದೇಶದಿಂದ ಕಣ್ಮರೆಯಾಗುವುದಕ್ಕೆ ಕಾರಣವಾಗುತ್ತದೆ. ಅವುಗಳನ್ನು ವಿಪತ್ತಿನ ಅಂಚಿನಲ್ಲಿರುವ ಪ್ರಾಣಿಗಳೆಂದು ಘೋಷಣೆ ಮಾಡುವ ಪ್ರಯತ್ನವು ಸಣ್ಣ ಮಟ್ಟದಲ್ಲಿ ಯಶಸ್ವಿಯಾಗಿದೆ.[10]
ವೊಲ್ವೆರಿನ್ ಒಂದು ಅತೃಪ್ತ ಗ್ಲಟನ್ ಎಂಬ ಪ್ರಶ್ನಾತೀತವಾದ ಪ್ರಸಿದ್ದಿಯು (ವಂಶದ ಲ್ಯಾಟಿನ್ ಹೆಸರು ಗುಲೋ ಎಂದು ಬಿಂಬಿತವಾಗಿದೆ) ತಪ್ಪು ವ್ಯುತ್ಪತ್ತಿಯ ಒಂದು ಅಂಶದಿಂದ ಉಂಟಾಗಿರಬಹುದು. ಪ್ರಾಣಿಯ ಹಳೆಯಸ್ವೀಡಿಶ್ ಹೆಸರು fjellfräs ಅರ್ಥ "fjell (ಪರ್ವತ) ಬೆಕ್ಕು," ಜರ್ಮನ್ ನಲ್ಲಿ ಸೃಷ್ಟಿಯಾದ ಪದ Vielfraß , ಸರಿಸುಮಾರು ಇದರರ್ಥ "ಹೆಚ್ಚು ಕಬಳಿಸುವ" ಎಂಬುದಾಗಿದೆ. ಅದರ ಹೆಸರು ಇತರ ಪಶ್ಚಿಮ ಜರ್ಮನಿಯ ಭಾಷೆಗಳಲ್ಲೂ ಸಮಾನವಾಗಿದೆ (ಉದಾಹರಣೆಗೆ{ 0}ಡಚ್ ಭಾಷೆಯಲ್ಲಿ ವೀಲ್ವ್ರಾಟ್ ).
ಫಿನ್ನಿಶ್ ಹೆಸರು ಅಹಮ , ಅಹ್ಮಟ್ಟಿ ಎಂಬ ಪದದಿಂದ ವ್ಯುತ್ಪತ್ತಿ ಹೊಂದಿದೆ, ಇದು "ಗ್ಲಟನ್" ಎಂದು ಪರಿವರ್ತನೆಗೊಂಡಿದೆ. ಇದೆ ರೀತಿಯಾಗಿ, ಎಸ್ಟೋನಿಯನ್ ಹೆಸರು ಅಹ್ಮ್ , ಇದು ಫಿನ್ನಿಶ್ ಹೆಸರಿನ ಅರ್ಥಕ್ಕೆ ಸಮನಾರ್ಥಕವಾಗಿದೆ. ರಷ್ಯನ್ ನಲ್ಲಿ ಪೋಕೋಮಾಕ್ಸ (ರೋಸೋಮಖ) ಮತ್ತು ಪೋಲಿಷ್ ಮತ್ತು ಜೆಕ್ ಹೆಸರು ರೋಸೋಮಕ್ ಹೆಸರುಗಳು ಫಿನ್ನಿಶ್ ನ ರಸ್ವ-ಮಹ (ದಪ್ಪ ಹೊಟ್ಟೆ) ಎಂಬ ಪದದಿಂದ ಎರವಲಾಗಿ ಪಡೆದಂತೆ ತೋರುತ್ತದೆ. ಇದೆ ರೀತಿಯಾಗಿ, ಹಂಗೇರಿಯನ್ ಹೆಸರು ರೋಜ್ಸೋಮಕ್ ಅಥವಾ ಟೋರ್ಕೊಸ್ಬೊರ್ಜ್ ಇದರರ್ಥ ಹೊಟ್ಟೆಬಾಕುತನದ ನೆಲಕರಡಿ.
ಫ್ರೆಂಚ್ ಮಾತನಾಡುವ ಕೆನಡಾದ ಭಾಗಗಳಲ್ಲಿ, ವೊಲ್ವೆರಿನ್ ನನ್ನು ಕಾರ್ಕಾಜೌ ಎಂದು ಕರೆಯಲಾಗುತ್ತದೆ. ಇದನ್ನು ಇನ್ನೂ-ಐಮುನ್ ಅಥವಾ ಮೊನ್ಟಾಗ್ನೈಸ್ ಕುವಕುವತ್ಶೆಯು ಎಂಬ ಪದದಿಂದ ಎರವಲು ಪಡೆಯಲಾಗಿದೆ.[22]
ಹೊಟ್ಟೆಬಾಕ ಎಂಬ ಅರ್ಥ ಕೊಡುವ ಪದವು ಇಂಗ್ಲಿಷ್ ನಲ್ಲಾಗಲಿ ಅಥವಾ ಉತ್ತರ ಜೆರ್ಮನಿಯ ಭಾಷೆಗಳಲ್ಲಾಗಲಿ ಬಿಂಬಿತವಾಗಿಲ್ಲ. ಇಂಗ್ಲಿಷ್ ನಲ್ಲಿ ವೊಲ್ವೆರಿನ್ (ಇದು ಅನಿಶ್ಚಿತ ಮೂಲದ ಪ್ರಾರಂಭಿಕ ರೂಪ ವೊಲ್ವೇರಿಂಗ್ ಪದಕ್ಕೆ ಪರ್ಯಾಯ) ಪದವು ಪ್ರಾಯಶಃ 'ಒಂದು ಸಣ್ಣ ತೋಳ' ಎಂಬುದನ್ನು ಸೂಚಿಸುತ್ತದೆ. ಓಲ್ಡ್ ನೋರ್ಸ್ ನಲ್ಲಿನ ಹೆಸರು ಜರ್ಫ್ರ್ , ಸಾಮಾನ್ಯವಾಗಿ ಐಸ್ ಲ್ಯಾಂಡ್ ನ ಹೆಸರು ಜರ್ಫಿ ಎಂಬ ಸ್ವಾಭಾವಿಕ ಹೆಸರಿನೊಂದಿಗೆ ಇರುತ್ತದೆ. ಸಾಮಾನ್ಯ ನೋರ್ವೇಜಿಯನ್ ಹೆಸರು ಜೆರ್ವ್ , ಸಾಮಾನ್ಯಸ್ವೀಡಿಶ್ ಹೆಸರು ಜರ್ವ್ ಮತ್ತು ಸಾಮಾನ್ಯಡಾನಿಶ್ಹೆಸರು jærv . ನವೀನ ಸ್ವೀಡಿಶ್ ಪದ djärv ಅದೇ ರೀತಿಯಲ್ಲಿ ಉಚ್ಚರಿಸಲಾಗುತ್ತದೆ, ಮತ್ತು ಇದನ್ನು ನೇರವಾಗಿ ಧೈರ್ಯವುಳ್ಳ ಅಥವಾ ಧೈರ್ಯ ಎಂದೇ ತರ್ಜುಮೆ ಮಾಡಲಾಗುತ್ತದೆ.
ಹಲವು ನಗರ, ತಂಡ, ಮತ್ತು ಸಂಸ್ಥೆಗಳು ವೊಲ್ವೆರಿನ್ ಅನ್ನು ಒಂದು ಅದೃಷ್ಟದ ಪ್ರಾಣಿಯೆಂದು ಬಳಕೆ ಮಾಡುತ್ತಾರೆ. ಉದಾಹರಣೆಗೆ, U.S. ರಾಜ್ಯ ಮಿಚೀಗನ್ , ಸಾಂಪ್ರದಾಯಿಕವಾಗಿ, "ವೊಲ್ವೆರಿನ್ ರಾಜ್ಯ" ವೆಂದೇ ಹೆಸರಾಗಿದೆ. ಅದಲ್ಲದೇ ಮಿಚಿಗನ್ ವಿಶ್ವವಿದ್ಯಾನಿಲಯವು ವೊಲ್ವೆರಿನ್ ನನ್ನು ಅದೃಷ್ಟದ ಪ್ರಾಣಿಯೆಂದು ಪರಿಗಣಿಸುತ್ತದೆ. ಇದರ ಒಡನಾಟ ಮತ್ತು ಸುದೀರ್ಘವಾದ ಅದರ ಉಪಯೋಗ ಸಾಬೀತಾಗಿದೆ: ಉದಾಹರಣೆಗೆ, ಹಲವು ಡೆಟ್ರಾಯ್ಟ್ ಜನರು ಅಮೆರಿಕನ್ ಅಂತರ್ಯುದ್ದ ದಲ್ಲಿ ಸ್ವ-ಇಚ್ಛೆಯಿಂದ ಭಾಗಿಯಾದರು. ಮಿಚಿಗನ್ ಬ್ರಿಗೆಡ್ ನ ಮುಂದಾಳು ಜಾರ್ಜ್ ಆರ್ಮ್ಸ್ತ್ರೊಂಗ್ ಕಸ್ಟೆರ್, ಅವರನ್ನು "ವೊಲ್ವೆರಿನ್ ಗಳೆಂದು" ಕರೆಯುತ್ತಾನೆ. ಇದರ್ರ ಮೂಲ ಸ್ವರೂಪ ಮತ್ತು ಹುಟ್ಟಿನ ಬಗ್ಗೆ ಅಸ್ಪಷ್ಟತೆಯಿದೆ; ಇದು 18ನೇ ಶತಮಾನದಲ್ಲಿ ಸುಲ್ಟ್ ಸ್ಟೇ. ಮಾರೀ ಯಲ್ಲಿ ವೊಲ್ವೆರಿನ್ ಗಳ ತುಪ್ಪಳದ ವ್ಯಾಪಾರದಿಂದ ಹುಟ್ಟಿಕೊಂಡಿರಬಹುದು ಅಥವಾ ಇದನ್ನು ಮಿಚಿಗನ್ ನಲ್ಲಿ ನೆಲೆನಿಂತಿದ್ದ ಜನರಿಗೆ ಅಗೌರವ ತೋರುವ ಉದ್ದೇಶದಿಂದ ಉಗ್ರವಾದ ಸಸ್ತನಿಗೆ ಹೋಲಿಸಲಾಗಿದ್ದನ್ನು ಸ್ಮರಿಸಿಕೊಳ್ಳಲು ಇದನ್ನು ಹುಟ್ಟುಹಾಕಿರಬಹುದು. ವೊಲ್ವೆರಿನ್ ಗಳು, ಹೀಗಿದ್ದರೂ, ಮಿಚಿಗನ್ ನಲ್ಲಿ ಅತ್ಯಂತ ವಿರಳವಾಗಿದೆ. ಫೆಬ್ರವರಿ 2004ರಲ್ಲಿ ಉಬ್ಲಿ ಹತ್ತಿರ ಕಂಡು ಬಂದದ್ದೆ 200 ವರ್ಷಗಳಲ್ಲಿ ಮಿಚಿಗನ್ ನಲ್ಲಿ ಕಂಡ ಮೊದಲ ಅಧಿಕೃತ ಅದರ ಗೋಚರತೆಯ ತಾಣ.[23]
ವೊಲ್ವೆರಿನ್ ಪ್ರಮುಖವಾಗಿ ಇನ್ನೂಜನಾಂಗದ ಪುರಾಣದಲ್ಲಿ ಬಿಂಬಿತವಾಗಿದೆ. ಇವರು ಪೂರ್ವ ಕ್ಯುಬೆಕ್ ಮತ್ತು ಲ್ಯಾಬ್ರಾಡಾರ್ನ ಜನಸಮೂಹ. ಒಂದು ಹೇಳಿಕೆ ಪ್ರಕಾರ ಇನ್ನೂ ಜನಾಂಗದ ಪುರಾಣವೊಂದರಲ್ಲಿ, ಅದು ಜಗತ್ತಿನ ಸೃಷ್ಟಿಕರ್ತ ಎನ್ನಲಾಗಿದೆ.[24]
ಸುಮಾರು 91 ನಿಮಿಷದ ಚಲನಚಿತ್ರ, ರನ್ನಿಂಗ್ ಫ್ರೀ (ಒನ್ ಪವ್ ಎಂದೇ ಪರಿಚಿತ) ಒಂದು ಚಿಕ್ಕ ಹುಡುಗ ಮತ್ತು ಒಂದು ಅಲಾಸ್ಕನ್ ವೊಲ್ವೆರಿನ್ ಜೊತೆಗಿನ ಅವನ ಗೆಳೆತನದ ಚಿತ್ರ. ವಶದಲ್ಲಿದ್ದಾಗ ಜನಿಸಿದ ವೊಲ್ವೆರಿನ್ ಗಳನ್ನು ಚಿತ್ರದಲ್ಲಿ ತೋರಿಸಲಾಯಿತು. ಇದನ್ನು U.S.D.A. ಪರವಾನಗಿ ಹೊಂದಿದ ಚಿತ್ರತಯಾರಕ, ಸ್ಟಿವ್ ಕ್ರೋಸ್ಚೆಲ್ ನಿರ್ದೇಶಿಸಿದರು. ವೊಲ್ವೆರಿನ್ ಗಳ ಹಲವು ದೃಶ್ಯಗಳು ತಮ್ಮ ಸ್ವಾಭಾವಿಕ ನೆಲೆಯಲ್ಲಿ ಚಿತ್ರಿಸಿದಂತೆ ತರಬೇತಿ ಪಡೆದ ವೊಲ್ವೆರಿನ್ ಗಳ ಸಾಕ್ಷ್ಯಚಿತ್ರದ ದೃಶ್ಯಗಳು. ಚಿತ್ರವು ಅಕ್ಟೋಬರ್ 5, 1994ರಲ್ಲಿ ಪ್ರದರ್ಶಿತವಾಯಿತು. ದಿ ಅಮೆರಿಕನ್ ಹ್ಯುಮೆನ್ ಸೊಸೈಟಿ ಯು ಚಿತ್ರೀಕರಣದ ಪ್ರಾರಂಭದಲ್ಲಿ ಮತ್ತು ಕೆಲವು ಚಿತ್ರೀಕರಣದ ಸಮಯದಲ್ಲೂ ತೊಡಗಿಸಿಕೊಂಡಿತು.[31]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.