![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/a/a7/Location_of_Wellington.png/640px-Location_of_Wellington.png&w=640&q=50)
ವೆಲಿಂಗ್ಟನ್
From Wikipedia, the free encyclopedia
ವೆಲ್ಲಿಂಗ್ಟನ್ ನ್ಯೂಜಿಲೆಂಡ್ ನ ರಾಜಧಾನಿ ನಗರ ಹಾಗು ಅತ್ಯಧಿಕ ಜನಸಂಖ್ಯೆ ಹೊಂದಿರುವ ನಗರ ಪ್ರದೇಶ.ನಗರ ಪ್ರದೇಶವು ರಾಷ್ಟ್ರದ ನಾರ್ತ್ ಐಲ್ಯಾಂಡ್ ನ ನೈಋತ್ಯ ದಿಕ್ಕಿನ ತುದಿಯಲ್ಲಿ ನೆಲೆಗೊಂಡಿರುವುದರ ಜೊತೆಗೆ ಕುಕ್ ಸ್ಟ್ರೈಟ್ ಹಾಗು ರಿಮುಟಾಕ ರೇಂಜ್ ನಡುವೆ ನೆಲೆಸಿರುತ್ತದೆ.
Wellington
Te Whanga-nui-a-Tara | |
---|---|
main urban area | |
![]() Panorama of central Wellington | |
Nickname: Harbour City | |
![]() Wellington urban area within New Zealand | |
Country | New Zealand |
Region | Wellington |
Territorial authorities | Wellington City Lower Hutt City Upper Hutt City Porirua City |
Area | |
• Urban | ೪೪೪ km೨ (೧೭೧ sq mi) |
• Metro | ೧,೩೯೦ km೨ (೫೪೦ sq mi) |
Lowest elevation | ೦ m (೦ ft) |
Time zone | UTC+12 (NZST) |
• Summer (DST) | UTC+13 (NZDT) |
Postcode(s) | 6000 group, and 5000 and 5300 series |
Area code | 04 |
Local iwi | Ngāti Poneke, Ngāti Tama, Te Āti Awa |
Website | http://www.wellingtonnz.com/ |
ನಗರವು ರಷ್ಟು ನಿವಾಸಿಗಳಿಗೆ ಆಶ್ರಯವಾಗಿದೆ, ಜೊತೆಗೆ ಸುಮಾರು ೩,೭೦೦ ನಿವಾಸಿಗಳು ಸುತ್ತಮುತ್ತಲ ಹಳ್ಳಿಗಾಡಿನ ಪ್ರದೇಶಗಳಲ್ಲಿ ವಾಸಿಸುತ್ತಾರೆ.
ವೆಲ್ಲಿಂಗ್ಟನ್ ನಗರ ಪ್ರದೇಶವು ನಾರ್ತ್ ಐಲ್ಯಾಂಡ್ ನ ದಕ್ಷಿಣ ಭಾಗಕ್ಕಿರುವ ಪ್ರಮುಖ ಜನಸಂಖ್ಯಾ ಕೇಂದ್ರವಾಗಿದೆ, ಜೊತೆಗೆ ಇದು ವೆಲ್ಲಿಂಗ್ಟನ್ ಪ್ರದೇಶದ ಆಡಳಿತ ಕ್ಷೇತ್ರವಾಗಿದೆ - ಇದು ನಗರ ಪ್ರದೇಶದ ಜೊತೆಗೆ ಕಪಿಟಿ ಕೋಸ್ಟ್ ಹಾಗು ವೈರರಪ ಪ್ರದೇಶಗಳನ್ನು ಒಳಗೊಂಡಿದೆ. ನಗರ ಪ್ರದೇಶವು ನಾಲ್ಕು ನಗರಗಳನ್ನು ಒಳಗೊಂಡಿದೆ: ಕುಕ್ ಸ್ಟ್ರೈಟ್ ಹಾಗು ವೆಲ್ಲಿಂಗ್ಟನ್ ಬಂದರು ನಡುವಿನ ಪರ್ಯಾಯ ದ್ವೀಪದಲ್ಲಿರುವ ವೆಲ್ಲಿಂಗ್ಟನ್ ನಗರ, ಇದು ಪ್ರಮುಖ ವಾಣಿಜ್ಯ ಕೇಂದ್ರವಾಗಿರುವುದರ ಜೊತೆಗೆ ವೆಲ್ಲಿಂಗ್ಟನ್ ಜನಸಂಖ್ಯೆಯ ಅರ್ಧ ಪ್ರಮಾಣ ಹೊಂದಿದೆ; ಪೊರಿರುವಾ ಬಂದರಿನ ಉತ್ತರ ದಿಕ್ಕಿಗಿರುವ ಪೊರಿರುವಾ ನಗರ, ಇಲ್ಲಿ ಗಣನೀಯ ಪ್ರಮಾಣದಲ್ಲಿ ಮಓರಿ ಹಾಗು ಪೆಸಿಫಿಕ್ ದ್ವೀಪಗಳ ಸಮುದಾಯಗಳು ನೆಲೆಸಿವೆ; ಲೋಯರ್ ಹಟ್ಟ್ ನಗರ ಹಾಗು ಅಪ್ಪರ್ ಹಟ್ಟ್ ನಗರಗಳು ಈಶಾನ್ಯದ ಅತ್ಯಂತ ದೊಡ್ಡ ಉಪನಗರ ಪ್ರದೇಶಗಳಾಗಿವೆ, ಇವುಗಳು ಒಟ್ಟಾಗಿ ಹಟ್ಟ್ ವ್ಯಾಲಿ ಎಂದು ಪರಿಚಿತವಾಗಿವೆ.
ಕಳೆದ ೨೦೦೯ರ ಮರ್ಸರ್ ಕ್ವಾಲಿಟಿ ಆಫ್ ಲಿವಿಂಗ್ ಸರ್ವೇ ತನ್ನ ಪಟ್ಟಿಯಲ್ಲಿ ವೆಲ್ಲಿಂಗ್ಟನ್ ಗೆ ವಿಶ್ವದ ೧೨ನೇ ಸ್ಥಾನ ನೀಡಿದೆ.[2]