ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ
From Wikipedia, the free encyclopedia
ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯವು ಬೆಂಗಳೂರಿನ ಒಂದು ಪ್ರಮುಖ ಪ್ರವಾಸಿ ಸ್ಥಳ ಹಾಗು ಭಾರತದ ಅತ್ಯುನ್ನತ ವಸ್ತುಸಂಗ್ರಹಾಲಯಗಳಲ್ಲಿ ಒಂದು. ಇದು ಭಾರತ ಸರ್ಕಾರದ 'ರಾಷ್ಟ್ರೀಯ ವೈಜ್ಞಾನಿಕ ಸಂಗ್ರಹಾಲಯಗಳ ಸಭಾ'ಗೆ ಸೇರಿದೆ. ಭಾರತ ಸರ್ಕಾರದ ಔದ್ಯೋಗಿಕ ಮತ್ತು ವೈಜ್ಞಾನಿಕ ಸಂಶೋಧನ ಮಂಡಲಿ ಆರಂಭಿಸಿದ ಎರಡು ವಸ್ತುಸಂಗ್ರಹಾಲಯಗಳಲ್ಲಿ ಇದು ಒಂದು. 1962ರಲ್ಲಿ ಇದನ್ನು ಮಂಡಲಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು. ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿ ಈ ಸಂಗ್ರಹಾಲಯದ ಕಟ್ಟಡವು ನಿಂತಿದೆ. ಕಬ್ಬನ್ ಉದ್ಯಾನವನ್ನು ಸೇರಿದಂತಯೇ ಇದೆ. ವಿಶ್ವೇಶ್ವರಯ್ಯರವರ ಜನ್ಮ ಶತಾಬ್ದಿ ಆಚರಣೆಯ ಅಂಗವಾಗಿ ೧೯೬೨ ಇಸವಿಯಲ್ಲಿ ಇದನ್ನು ಸ್ಥಾಪಿಸಲಾಯಿತು. ಅಂದಿನಿಂದ ಇಲ್ಲಿಯವರಗೆ ಈ ಸಂಗ್ರಹಾಲಯವು ಮಕ್ಕಳ ಶಿಕ್ಷಣ ಪ್ರವಾಸಗಳಿಗೆ ನೆರವಾಗಿದೆ. ಪ್ರತಿ ವರುಷ ಈ ಸಂಗ್ರಹಾಲಯಕ್ಕೆ ಹತ್ತು ಲಕ್ಷ ಜನ ಬರುತ್ತಾರೆ ಎಂದು ಹೇಳಲಾಗಿದೆ.[1]
Visvesvaraya Industrial & Technological Museum | |
---|---|
ಸ್ಥಾಪಿಸಲಾದದ್ದು | 14 ಜುಲೈ 1962 (1962-07-14) |
ಸ್ಥಳ | Kasturba road, ಬೆಂಗಳೂರು, India |
ಕಕ್ಷೆಗಳು | 12.975100°N 77.596400°E / 12.975100; 77.596400 |
ವರ್ಗ | Science museum |
ಸಂದರ್ಶಕರು | 1 million+[ಸೂಕ್ತ ಉಲ್ಲೇಖನ ಬೇಕು] |
ನಿರ್ದೇಶಕ | K. Madangopal |
ಮೇಲ್ವಿಚಾರಕ | K. A. Sadhana, Sajoo Bhaskaran, Jyoti Mehra, Navaram Kumar, Shaik Rafi |
ಜಾಲತಾಣ | Official website |
ಈ ಕಟ್ಟಡವನ್ನು ಕಬ್ಬನ್ ಪಾರ್ಕ್ ನ ೪೦೦೦ ಮೀ ಚದರಡಿ ಪ್ರದೇಶದಲ್ಲಿ ನಿರ್ಮಿಸಲಾಯಿತು. ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ಮತ್ತು ಎಂಜಿನ್ಗಳನ್ನು ಇದು ಒಳಗೊಂಡಿದೆ. ಭಾರತದ ಮೊದಲ ಪ್ರಧಾನಿ, ಪಂಡಿತ್ ಜವಾಹರಲಾಲ್ ನೆಹರೂ ರವರು ೧೪ನೇ ಜುಲೈ ೧೯೬೨ ರಂದು ಇದನ್ನು ಪ್ರಾರಂಭಿಸಿದರು.[2] ಈ ಸಂಗ್ರಹಾಲಯದಲ್ಲಿ ನಾಲ್ಕು ವ್ಯವಸ್ಥಾವೇದಿಕೆಗಳಿವೆ (ಗ್ಯಾಲರಿ): 1 ಎಲೆಕ್ಟ್ರೋಟೆಕ್ನಿಕ್, 2 ಮೋಟೀವ್ ಪವರ್, 3 ಪಾಪ್ಯುಲರ್ ಸೈನ್ಸ್, 4 ಟಿಂಬರ್ ಅಂಡ್ ಪೇಪರ್. ಈ ಸಂಸ್ಥೆ ಸಂಚಾರ ಸಂಗ್ರಹಾಲಯವನ್ನು ವ್ಯವಸ್ಥೆಗೊಳಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನ ಏರ್ಪಡಿಸುತ್ತದೆ. ಸಂಗ್ರಹಾಲಯದ ಮೊದಲ ಗ್ಯಾಲರಿ 'ಎಲೆಕ್ಟ್ರಿಸಿಟಿ' ವಿಷಯದ ಮೇಲೆ ಸಾರ್ವಜನಿಕರಿಗೆ ೨೭ ಜುಲೈ ೧೯೬೫ ರಂದು ತೆರೆಯಲಾಯಿತು.[3]