ವಿಶ್ವದ ಅದ್ಭುತಗಳು
From Wikipedia, the free encyclopedia
ವಿಶ್ವದಲ್ಲಿಯ ಮಾನವ ನಿರ್ಮಿತ ಮತ್ತು ನೈಸರ್ಗಿಕ ವಿಸ್ಮಯಗಳ ವಿಶ್ವದ ಅದ್ಭುತಗಳನ್ನು ಗುರುತಿಸಲು ಕಾಲಕಾಲಕ್ಕೆ ಹಲವಾರು ರೀತಿಯ ಪಟ್ಟಿಗಳನ್ನು ಮಾಡಲಾಗುತ್ತಿದೆ. ಪ್ರಾಚೀನ ವಿಶ್ವದ ಏಳು ಅದ್ಭುತಗಳು ಈ ರೀತಿಯ ಪಟ್ಟಿ ಗಳಲ್ಲಿ ಮೊದಲನೆಯದು. ಈ ಪಟ್ಟಿಯಲ್ಲಿ ಮಾನವನಿರ್ಮಿತ ಉತ್ಕೃಷ್ಟ ಪ್ರಾಚೀನಾವಶೇಷಗಳನ್ನು ಹೆಲೆನಿಕ್ ಸ್ಥಳ ವೀಕ್ಷಕರ ಮಾಹಿತಿ ಗ್ರಂಥದಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಪಟ್ಟಿ ಮಾಡಿದವುಗಳೆಲ್ಲ ಮೆಡಿಟರೇನಿಯನ್ ಭಾಗದಲ್ಲಿರುವವುಗಳಾಗಿವೆ. ಸಂಖ್ಯೆ 7 ಪರಿಪೂರ್ಣತೆ ಮತ್ತು ಅಧಿಕ್ಯವನ್ನು ಪ್ರತಿನಿಧಿಸುತ್ತದೆ ಎಂದು ಗ್ರೀಕರ ನಂಬಿಕೆಯಿರುವುದರಿಂದ ಈ ಸಂಖ್ಯೆಯನ್ನು ಅಯ್ಕೆಮಾಡಿಕೊಳ್ಳಲಾಗಿದೆ.[1] ಮಧ್ಯಯುಗ ಮತ್ತು ಆಧುನಿಕ ಯುಗದ ಅದ್ಭುತಗಳ ಪಟ್ಟಿಯ ಜೊತೆಗೆ ಇದೇ ರೀತಿಯ ಇನ್ನೂ ಹಲವಾರು ಪಟ್ಟಿಗಳನ್ನು ಮಾಡಲಾಗಿದೆ.