ವಿಠ್ಠಲ ದೇವಸ್ಥಾನ, ಪಂಢರಪುರ
From Wikipedia, the free encyclopedia
ವಿಠ್ಠಲ ದೇವಸ್ಥಾನ, ಪಂಢರಪುರ ಇದು ಹಿಂದೂ ದೇವರಾದ ವಿಠ್ಠಲನ ಪೂಜಿಸುವ ಮುಖ್ಯ ಶ್ರದ್ಧಾ-ಭಕ್ತಿ ಕೇಂದ್ರ ಹಾಗು ಭಾರತದ ಸುಪ್ರಸಿದ್ಧ ತೀರ್ಥಕ್ಷೇತ್ರ.ಇಲ್ಲಿ ಶ್ರೀ ಕೃಷ್ಣ ಹಾಗು ಆತನ ಪತ್ನಿಯಾದ ರುಕ್ಮಿಣಿ ಶಿಲಾ ರೂಪದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಭಕ್ತ ಸಮೂಹದ್ದು. ಇದು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಪ್ರಮುಖ ದೇವಸ್ಥಾನಗಳಲ್ಲೊಂದು. ಭಕ್ತಾದಿಗಳು ತಮ್ಮ ಮನೆಗಳಿಂದ ಗುಂಪು ಗುಂಪಾಗಿ ಪಾದಯಾತ್ರೆ(ದಿಂಡಿಯಾತ್ರೆ) ಮಾಡಿ ಆಷಾಢ ಏಕಾದಶಿ ಹಾಗು ಕಾರ್ತಿಕ ಏಕಾದಶಿಗಳಂದು ವಿಶೇಷ ಪೂಜೆಗಳಿಗೆ ಹಾಗು ಹರಕೆಗಳಿಗೆ ಸೇರುತ್ತಾರೆ. ಫಂಢರಪುರ ದಲ್ಲಿ ಹರಿಯುವ ಪಾವನ ನದಿ ಚಂದ್ರಭಾಗಾ ದಲ್ಲಿ ಸ್ನಾನ ಮಾಡಿದರೆ ಎಲ್ಲ ಪಾಪಗಳು ನಾಶವಾಗುವುದಾಗಿ ಭಾವಿಸುತ್ತಾರೆ .
Quick Facts ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನ, ಹೆಸರು: ...
ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನ | |
---|---|
ದೇವಸ್ಥಾನದ ಮುಖ್ಯ(ಪೂರ್ವ) ದ್ವಾರದಲ್ಲಿ "ನಾಮದೇವನ ಮೆಟ್ಟಿಲು" ಇದೆ. ದ್ವಾರದ ಮುಂದೆ ಇರುವ ಚಿಕ್ಕ ದೇವಸ್ಥಾನ ಸಂತ ಚೋಖಮೆಲನ ಸಮಾಧಿ. | |
ಹೆಸರು: | ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನ |
ಕಟ್ಟಿದ ದಿನ/ವರ್ಷ: | ೧೩ನೆಯ ಶತಮಾನದ ಮುಂಚೆ |
ಪ್ರಮುಖ ದೇವತೆ: | ವಿಠೋಬ ಅಥವಾ ವಿಠ್ಠಲ |
ವಾಸ್ತುಶಿಲ್ಪ: | ಹೆಮದ್ಪನ್ತಿ |
ಸ್ಥಳ: | ಪಂಢರಪುರ, ಮಹಾರಾಷ್ಟ್ರ, ಭಾರತ |
ರೇಖಾಂಶ: | 17.67°N 75.33°E / 17.67; 75.33 |
Close