![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/31/Wikimedia_Foundation_logo_-_vertical.svg/langkn-640px-Wikimedia_Foundation_logo_-_vertical.svg.png&w=640&q=50)
ವಿಕಿಮೀಡಿಯ ಪ್ರತಿಷ್ಠಾನ
From Wikipedia, the free encyclopedia
37.7891838°N 122.4033522°W / 37.7891838; -122.4033522
![]() | |
ಸಂಕ್ಷಿಪ್ತ ಹೆಸರು | WMF |
---|---|
ಸ್ಥಾಪಿಸಿದವರು | ಜಿಮ್ಮಿ ವೇಲ್ಸ್ |
ಶೈಲಿ | 501(c)(3), ದತ್ತಿ ಸಂಸ್ಥೆ |
Purpose | ಉಚಿತ, ಮುಕ್ತ ವಿಷಯ, ವಿಕಿ ಆಧಾರಿತ ಅಂತರ್ಜಾಲ ಯೋಜನೆಗಳು |
ಸ್ಥಳ |
|
ಪ್ರದೇಶ | ವಿಶ್ವಾದ್ಯಂತ |
Membership | ಮಂಡಳಿ ಮಾತ್ರ |
Key people | ಮರಿಯ ಸೆಫಿಡಾರಿ (ಮಂಡಳಿಯ ಅಧ್ಯಕ್ಷೆ)[2] ಕ್ಯಾಥರೀನ್ ಮಾಹೆರ್ (ಕಾರ್ಯ ನಿರ್ದೇಶಕರು) ಜನೀನ್ ಉಜ್ಝೆಲ್ (ಮುಖ್ಯ ಕಾರ್ಯನಿರ್ವಹಣಾಧಿಕಾರಿ) |
ವಿಕಿಮೀಡಿಯ ಪ್ರತಿಷ್ಠಾನ, ( ಡಬ್ಲ್ಯುಎಂಎಫ್, ವಿಕಿಮೀಡಿಯ ಫೌಂಡೇಶನ್, ಅಥವಾ ಸರಳವಾಗಿ ವಿಕಿಮೀಡಿಯ) ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಮೆರಿಕದ ಲಾಭರಹಿತ ಮತ್ತು ದತ್ತಿ ಸಂಸ್ಥೆಯಾಗಿದೆ .[3] ನೈಜ ಮಾಹಿತಿಯು ಎಲ್ಲರಿಗೂ ಮುಕ್ತವಾಗಿ ಸಿಗುವಂತೆ ಇರಬೇಕು ಎಂಬ ಘನ ಉದ್ದೇಶವನ್ನು ಇಟ್ಟುಕೊಂಡು ಸ್ಥಾಪಿತವಾದ ಒಂದು ಸಂಸ್ಥೆ. ಈ ಸಂಸ್ಥೆ- ವಿಕಿಪೀಡಿಯ, ವಿಕಿವಾಯೇಜ್, ವಿಕಿಕೋಟ್, ವಿಕಿಸೋರ್ಸ್ ಮತ್ತಿತರ ಮುಕ್ತ ಮಾಹಿತಿಗಳಿರುವ ಸಹೋದರ ಜಾಲತಾಣಗಳನ್ನು ನಡೆಸುವ ಮೂಲಕ, ವಿಶ್ವದ ಜನರಿಗೆ ಜ್ಞಾನವನ್ನು ಮುಕ್ತವಾಗಿ ಮತ್ತು ಉಚಿತವಾಗಿ ಹಂಚುತ್ತಿದೆ.
ಜಿಮ್ಮಿ ವೇಲ್ಸ್ ಅವರು, ವಿಕಿಪೀಡಿಯಾ ಮತ್ತು ಇತರ ವಿಕಿಮೀಡಿಯ ಯೋಜನೆಗಳನ್ನು ನಿರ್ವಹಿಸಲು ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸುವ ಸಲುವಾಗಿ ೨೦೦೩ರಲ್ಲಿ ವಿಕಿಮೀಡಿಯ ಪ್ರತಿಷ್ಠಾನವನ್ನು ಸ್ಥಾಪಿಸಿದರು.[4][5]
2020 ರ ನವೀಕರಣದಂತೆ, ಪ್ರತಿಷ್ಠಾನವು 300 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ, ವಾರ್ಷಿಕ ಆದಾಯವು US $ 109.9 ದಶಲಕ್ಷಕ್ಕಿಂತ ಹೆಚ್ಚಿನದಾಗಿದೆ. ಮರಿಯಾ ಸೆಫಿದಾರಿ ಅವರು ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಕ್ಯಾಥರೀನ್ ಮಾಹೇರ್ ಅವರು ಮಾರ್ಚ್ 2016 ರಿಂದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.[6]