![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/80/Wikipedia-logo-v2.svg/langkn-640px-Wikipedia-logo-v2.svg.png&w=640&q=50)
ವಿಕಿಪೀಡಿಯ
ಯಾರು ಬೇಕಾದರೂ ಸಂಪಾದಿಸಬಲ್ಲ ಸ್ವತಂತ್ರ ವಿಶ್ವಕೋಶ / From Wikipedia, the free encyclopedia
ವಿಕಿಪೀಡಿಯವು (ಇಂಗ್ಲಿಷ್: Wikipedia ) ಒಂದು ಅಂತರಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ.
Quick Facts ಜಾಲತಾಣದ ವಿಳಾಸ, ಘೋಷಣೆ ...
![]() ![]() | |
ಜಾಲತಾಣದ ವಿಳಾಸ | wikipedia.org |
---|---|
ಘೋಷಣೆ | ಯಾರಾದರು ಸಂಪಾದಿಸಬಲ್ಲ ಸ್ವತಂತ್ರ ವಿಶ್ಚಕೋಶ |
ವಾಣಿಜ್ಯ ತಾಣ | ಅಲ್ಲ |
ಲಭ್ಯವಿರುವ ಭಾಷೆ | 287 ಸಂಪಾದನೆಗಳು[1] |
ಬಳಕೆದಾರರು(ನೊಂದಾಯಿತರೂ ಸೇರಿ) | 69,189 ಸಕ್ರಿಯ ಸಂಪಾದಕರು(ನವೆಂಬರ್ 2014),೮೭,೭೫೧ ಒಟ್ಟು ಸಂಪಾದಕರು. |
ವಿಷಯದ ಪರವಾನಗಿ | CC Attribution / Share-Alike 3.0 ಬಹುತೇಕ ಎಲ್ಲ ಪಠ್ಯ GFDLನಲ್ಲಿ ಕೂಡ ದ್ವಿ-ಪರವಾನಿಗೆ ಹೊಂದಿವೆ; ಚಿತ್ರ ಮಾಧ್ಯಮ ಪರವನಿಗೆ ವಿವಿಧತರ. |
ಬಳಸಿದ ಭಾಷೆ | PHP[2] |
ಒಡೆಯ | ವಿಕಿಮೀಡಿಯ ಫೌ಼ಂಡೇಷನ್ |
ಸೃಷ್ಟಿಸಿದ್ದು | ಜಿಮ್ಮಿ ವೇಲ್ಸ್, ಲ್ಯಾರಿ ಸ್ಯಾಂಗರ್ |
ಪ್ರಾರಂಭಿಸಿದ್ದು | ಜನವರಿ 15, 2001 (2001-01-15) |
ಅಲೆಕ್ಸಾ ಶ್ರೇಯಾಂಕ | ![]() |
ಸಧ್ಯದ ಸ್ಥಿತಿ | ಜಾರಿಯಲ್ಲಿದೆ |
Close
ಇದು ಪ್ರಸ್ತುತ ವಿಕಿಮೀಡಿಯ ಫೌ಼ಂಡೇಷನ್ (wikimedia foundation) ಎಂಬ ಅಮೆರಿಕದ ಸ್ಯಾನ್ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಭೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ. ಇದರ ಸೇವೆಯು ಉಚಿತವಾಗಿದ್ದು, ಅಂತರಜಾಲ ಸಂಪರ್ಕವನ್ನು ಹೊಂದಿರುವ ಯಾರು ಬೇಕಾದರೂ ಸೇವೆಯನ್ನು ಪಡೆಯಬಹುದಾಗಿದೆ. ಪ್ರಸ್ತುತ ಇದು ಏಳನೇ ಅತಿ ಪ್ರಸಿದ್ಧ ಜಾಲತಾಣವಾಗಿದೆ (ಜನವರಿ ೨೦೧೫ ಕ್ಕೆ ಇದ್ದಂತೆ).
![Thumb image](http://upload.wikimedia.org/wikipedia/commons/d/d3/Wikimedia.png)
![Thumb image](http://upload.wikimedia.org/wikipedia/commons/thumb/8/8f/149_New_Montgomery_Street%2C_San_Francisco.jpg/640px-149_New_Montgomery_Street%2C_San_Francisco.jpg)
![Thumb image](http://upload.wikimedia.org/wikipedia/commons/thumb/3/32/Wikimedia_Foundation_Office_Officey_Photos-5.jpg/640px-Wikimedia_Foundation_Office_Officey_Photos-5.jpg)