From Wikipedia, the free encyclopedia
ವಾಯುರೇಚಕ ಎಂದರೆ ವಾಯುಸಂಮರ್ದ ತತ್ತ್ವವನ್ನು ಆಧರಿಸಿ ಕೆಲಸ ಮಾಡುವ ರೇಚಕಗಳ ಪೈಕಿ ಒಂದು (ಏರ್ ಪಂಪ್). ಅಲ್ಪಸಂಮರ್ದ ಪ್ರದೇಶದಿಂದ ಅಧಿಕ ಸಂಮರ್ದ ಪ್ರದೇಶಕ್ಕೆ ವಾಯುವನ್ನು ಸ್ಥಳಾಂತರಿಸಲು ಇದನ್ನು ಬಳಸುವುದಿದೆ. ಎಲ್ಲ ವಾಯುರೇಚಕಗಳು ಚಲಿಸುವ ಒಂದು ಭಾಗವನ್ನು (ಗಾಳಿಕೋಳಿ, ಆಡುಬೆಣೆ, ಪ್ರಚೋದಕ, ಕಂಪನಫಲಕ ಇತ್ಯಾದಿ) ಹೊಂದಿರುತ್ತವೆ. ಇದು ಗಾಳಿಯ ಹರಿವನ್ನು ನಡೆಸುತ್ತದೆ. ವಾಯುವನ್ನು ಚಲಿಸಿದಾಗ, ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗುತ್ತದೆ. ಆ ಪ್ರದೇಶ ಮತ್ತಷ್ಟು ಗಾಳಿಯಿಂದ ತುಂಬಿಕೊಳ್ಳುತ್ತದೆ.[1] ವಾಯುರೇಚಕದಲ್ಲಿ ಮೂರು ಪ್ರಕಾರಗಳಿವೆ:
ಮೂರು ಪ್ರಕಾರದ ರೇಚಕಗಳಿದ್ದರೂ ವಾಯುಚೋಷಕವನ್ನೇ ಸಾಮಾನ್ಯವಾಗಿ ವಾಯುರೇಚಕ ಎಂದು ಕರೆಯುವುದು ರೂಢಿ. ಚಿತ್ರದಲ್ಲಿ ಬಾಯ್ಲ್ನ ವಾಯುರೇಚಕವನ್ನು ತೋರಿಸಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.