ಮಾನವ ದೇಹದ ಡಿಎನ್ಎಗಳಲ್ಲಿರುವ ವಂಶವಾಹಿ ಅಂಶ ಅಥವಾ ಭಾಗವನ್ನು ಲ್ಯಾಕ್ ಒಪೆರಾನ್ ಅಥವಾ ಒಪೆರಾನ್ ಎಂದು ಕರೆಯುತ್ತಾರೆ. ಮಾನವ ಮತ್ತು ಇತರೆ ಪ್ರಾಣಿಗಳ ಅನ್ನನಾಳ ಮತ್ತು ಕರುಳಿನ ಬ್ಯಾಕ್ಟೀರಿಯಾದಲ್ಲಿರುವ ಲ್ಯಾಕ್ಟೋಸ್ ನ ಚಲನೆ ಮತ್ತು ಚಯಾಪಚಯ ಕ್ರಿಯೆಗೆ ಲ್ಯಾಕ್ ಒಪೆರಾನ್ ಅತ್ಯಗತ್ಯ. ಒಪೆರಾನ್ ಮೂರು ವಿಧದ ನೆರೆಹೊರೆಯ ಸಂರಚನಾ ವಂಶವಾಹಿ ಹಾಗೂ ಪ್ರವರ್ತಕ, ಆಂತ್ಯಿಕ (terminator) ಮತ್ತು ಚಾಲಕ ಅಥವಾ ನಿರ್ವಾಹಕಗಳನ್ನು ಹೊಂದಿರುತ್ತದೆ. ಗ್ಲೂಕೋಸ್ ಮತ್ತು ಲ್ಯಾಕ್ಟೋಸ್ ಗಳ ಲಭ್ಯತೆ ಸೇರಿದಂತೆ ಹಲವಾರು ಅಂಶಗಳ ಮೇಲೆ ಲ್ಯಾಕ್ ಒಪೆರಾನ್ ಕಾರ್ಯ ನಿರ್ವಹಿಸುತ್ತದೆ (ನಿಯಂತ್ರಿಸುತ್ತದೆ). ವಂಶವಾಹಿಗಳನ್ನು ನಿಯಂತ್ರಿಸುವ ಲ್ಯಾಕ್ ಒಪೆರಾನ್ ನ ಕಾರ್ಯ ನಿರ್ವಹಣೆಯನ್ನು ಮೊಟ್ಟಮೊದಲ ಸಂಕೀರ್ಣ ವಂಶವಾಹಿ ಕಾರ್ಯ ವಿಧಾನ ಎಂದು ಸ್ಪಷ್ಟಪಡಿಸಬಹುದು ಹಾಗೂ ನ್ಯೂಕ್ಲಿಯಸ್ ಹೊಂದಿಲ್ಲದ ಜೀವಕೋಶಗಳ ಸಮೂಹದ (prokaryotic) ವಂಶವಾಹಿ ನಿಯಂತ್ರಣಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ.
ಸ್ವಾಭಾವಿಕ ಪರಿಸರ ಅಥವಾ ಸಹಜ ವಾತಾವರಣದಲ್ಲಿ, ಲ್ಯಾಕ್ ಒಪೆರಾನ್ ಲ್ಯಾಕ್ಟೋಸ್ ನ ಪರಿಣಾಮಕಾರಿ ಜೀರ್ಣಕ್ರಿಯೆಗೆ ಅವಕಾಶ ಕಲ್ಪಿಸುತ್ತದೆ. ಮಾನವ ದೇಹದ ಜೀವಕೋಶವು ಲ್ಯಾಕ್ಟೋಸ್ ಅನ್ನು ಇಂಧನ (ಶಕ್ತಿ ಉತ್ಪಾದನೆ) ಮೂಲವಾಗಿ ಉಪಯೋಗಿಸಿ, ಜೀರ್ಣಕ್ರಿಯೆ ಮೂಲಕ ಲ್ಯಾಕ್ಟೋಸನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಇದಕ್ಕಾಗಿ, ಜೀವಕೋಶವು ಬೀಟಾ-ಗ್ಯಾಲಕ್ಟೋಸಿಡೇಸ್ ಕಿಣ್ವ (enzyme) ಗಳನ್ನು ಉತ್ಪಾದಿಸುತ್ತದೆ. ಆದರೆ, ದೇಹದಲ್ಲಿ ಲ್ಯಾಕ್ಟೋಸ್ ಸಿಗದಿದ್ದಾಗ ಅಥವಾ ಗ್ಲೂಕೋಸ್ ನಂತಹ ಇಂಧನ ಮೂಲಗಳು ಅತ್ಯಧಿಕ ಪ್ರಮಾಣದಲ್ಲಿ ಲಭ್ಯವಿದ್ದಾಗಲೂ ಈ ಜೀವಕೋಶವು ಕಿಣ್ವಗಳನ್ನು (enzymes) ಉತ್ಪಾದಿಸಲು ಅಸಮರ್ಥವಾಗುತ್ತದೆ. ಅಗತ್ಯ ಬಿದ್ದಾಗ ಮಾತ್ರ ಜೀವಕೋಶವು, ಇಂಧನ ಉತ್ಪಾದಿಸುವ ಬೀಟಾ-ಗ್ಯಾಲಕ್ಟೋಸಿಡೇಸ್ ಕಿಣ್ವ, ಬೀಟಾ-ಗ್ಯಾಲಕ್ಟೋಸಿಡ್ ಚಲನಾ ಪ್ರೋಟಿನ್ ಮತ್ತು ಥಿಯೋಗಾಲಕ್ಟೋಸಿಡ್ ಟ್ರಾನ್ಸ್ಅಸಿಟಿಲೇಸ್ (galactoside O-acetyltransferase ಎಂದೂ ಕರೆಯುತ್ತಾರೆ) ಕಿಣ್ವಗಳನ್ನು ಉಪಯೋಗಿಸಲು ನೆರವಾಗುವಂತೆ, ಲ್ಯಾಕ್ ಒಪೆರಾನ್ ಎರಡು-ಭಾಗಗಳುಳ್ಳ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಜೀವಕೋಶವು ಲ್ಯಾಕ್ ನಿಯಂತ್ರಕ ದ ಜೊತೆಗೂಡಿ ನಿಯಂತ್ರಣ ವ್ಯವಸ್ಥೆಯನ್ನು ಸಾಧಿಸುತ್ತದೆ, ಲ್ಯಾಕ್ ನಿಯಂತ್ರಕ ಲ್ಯಾಕ್ಟೋಸ್ ಗೈರುಹಾಜರಿಯಲ್ಲಿ ಉತ್ಪಾದನೆ ನಿಲ್ಲಿಸುತ್ತದೆ ಮತ್ತು ವಿಚ್ಛಿನ್ನಕಾರಕ ತೀವ್ರಕ ಪ್ರೊಟೀನ್ (Catabolite activator protein (CAP), ಗ್ಲೂಕೋಸ್ ಗೈರುಹಾಜರಿಯಲ್ಲಿ ಉತ್ಪಾದನೆಗೆ ನೆರವಾಗುತ್ತವೆ. ಎರಡು ವಿಧದ ಈ ನಿಯಂತ್ರಣ ಕಾರ್ಯ ವಿಧಾನವು ಎರಡು ಪ್ರತ್ಯೇಕ ಬೆಳವಣಿಗೆಯ ಹಂತಗಳಲ್ಲಿ ಗ್ಲೂಕೋಸ್ ಮತ್ತು ಲ್ಯಾಕ್ಟೋಸ್ ನ ಅನುಕ್ರಮ ಬಳಕೆಗೆ ಕಾರಣವಾಗುತ್ತದೆ, ಮತ್ತು ಈ ವಿಧಾನವನ್ನು ಬೆಳವಣಿಗೆಯ ಜೋಡಿ ಹಂತ ಅಥವಾ diauxie ಎಂದು ಕರೆಯುತ್ತಾರೆ.
ಸಮಾನ ರೂಪದ ದೈಆಕ್ಸಿಕ್ ಬೆಳವಣಿಗೆ ಸ್ವರೂಪಗಳನ್ನು ಡೆಕ್ಸ್ಟ್ರೋಸ್ ಮತ್ತು ಲೀವ್ಯುಲೋಸ್ ಸಕ್ಕರೆ ಪ್ರಮಾಣಗಳ ಮಿಶ್ರಣದ ಬ್ಯಾಕ್ಟೀರಿಯಾ ಬೆಳವಣಿಗೆಗಳಲ್ಲೂ ಕಾಣಬಹುದಾಗಿದೆ, ಉದಾಹರಣೆಗೆ, ಗ್ಲೂಕೋಸ್ ಮತ್ತು ಕ್ಸ್ಯೆಲೋಸ್ (xylose) ಗಳ ಮಿಶ್ರಣ ಅಥವಾ ಗ್ಲೂಕೋಸ್ ಮತ್ತು ಅರಬಿನೋಸ್ ಗಳ ಮಿಶ್ರಣ ಇತ್ಯಾದಿ. ದೈಆಕ್ಸಿಕ್ ಬೆಳವಣಿಗೆ ಸ್ವರೂಪಗಳನ್ನು ಒಳಗೊಂಡ ವಂಶವಾಹಿಗಳ ನಿಯಂತ್ರಣ ಕಾರ್ಯವಿಧಾನಕ್ಕೆ xyl operon ಮತ್ತು ara operon ಎನ್ನುತ್ತಾರೆ.