![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/7/7e/Lilium_mackliniae.jpg/640px-Lilium_mackliniae.jpg&w=640&q=50)
ಲಿಲಿಯಮ್ ಮ್ಯಾಕ್ಲಿನಿಯೇ
From Wikipedia, the free encyclopedia
ಲಿಲಿಯಮ್ ಮ್ಯಾಕ್ಲಿನಿಯೇ ಎಂದು ಕರೆಯಲ್ಪಡುವ ಶಿರುಯಿ ಕಶೋಂಗ್ ಟಿಮ್ರಾವೊನ್ ಅಥವಾ ಶಿರುಯಿ ಲಿಲಿಯು, ಭಾರತದ ಮಣಿಪುರದ ಉಖ್ರುಲ್ ಜಿಲ್ಲೆಯ ಶಿರುಯಿ ಬೆಟ್ಟ ಶ್ರೇಣಿಗಳ ಮೇಲ್ಭಾಗದಲ್ಲಿ ಮಾತ್ರ ಕಂಡುಬರುವ ಅಪರೂಪದ ಭಾರತೀಯ ಜಾತಿಯ ಸಸ್ಯವಾಗಿದೆ.[1] ಇದು ಸಮುದ್ರ ಮಟ್ಟದಿಂದ ೧,೭೩೦– ೨, ೫೯೦ ಮೀಟರ್ (೫,೬೮೦– ೮,೫೦೦ ಅಡಿ) ಎತ್ತರದಲ್ಲಿದೆ. ಇದು ಪೂರ್ವದಲ್ಲಿ ಮಯನ್ಮಾರ್, ಪಶ್ಚಿಮದಲ್ಲಿ ಶಿರುಯಿ ಗ್ರಾಮ, ದಕ್ಷಿಣದಲ್ಲಿ ಚೊಯಿತಾರ್ ಗ್ರಾಮ ಮತ್ತು ಉತ್ತರದಲ್ಲಿ ಸಿಹೈ ಗ್ರಾಮದ ಗಡಿಯ ಬಳಿ ಇದೆ.
![Thumb image](http://upload.wikimedia.org/wikipedia/commons/thumb/7/7e/Lilium_mackliniae.jpg/320px-Lilium_mackliniae.jpg)
ನೆರಳನ್ನು ಪ್ರೀತಿಸುವ ಈ ಲಿಲ್ಲಿ ಸಸ್ಯವು, ತಿಳಿ ನೀಲಿ ಹಾಗೂ ಗುಲಾಬಿ ಬಣ್ಣದ ದಳಗಳನ್ನು ಹೊಂದಿದೆ. ಆದರೆ ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸಿದಾಗ ಇದು ಏಳು ಬಣ್ಣಗಳನ್ನು ಹೊಂದಿದೆ. ಇವು ಕಾಡಿನಲ್ಲಿ ಮಳೆಗಾಲದ ತಿಂಗಳುಗಳಾದ ಜೂನ್ ಮತ್ತು ಜುಲೈನಲ್ಲಿ ಹೂಬಿಡುತ್ತವೆ. ಅವು ಕಾಲೋಚಿತ ಹೂಬಿಡುವ ಸಸ್ಯಗಳಾಗಿವೆ ಮತ್ತು ಮೇ- ಜೂನ್ ತಿಂಗಳಿನಲ್ಲಿ ಅರಳಿದಾಗ ಅವು ಬಹು ಉತ್ತಮವಾಗಿರುತ್ತವೆ.[2]