ಲಿಂಕಿನ್ ಪಾರ್ಕ್
From Wikipedia, the free encyclopedia
.ಕ್ಯಾಲಿಫೊರ್ನಿಯಾದ ಅಗೌರಾ ಹಿಲ್ಸ್ ನಲ್ಲಿ ಪ್ರಖ್ಯಾತ ಅಮೆರಿಕದ ಲಿಂಕಿನ್ ಪಾರ್ಕ್ ರಾಕ್ ಬ್ಯಾಂಡ್ ವಾದ್ಯವೃಂದ ಜಗತ್ಪ್ರಸಿದ್ದಿ ಪಡೆದಿದೆ. ಇದು 1996ರಲ್ಲಿ ರಚನೆಗೊಂಡು 2000ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಚೊಚ್ಚಿಲ ಅಲ್ಬಮ್ ಹೈಬ್ರೀಡ್ ಥೆಯರಿ ಯು ಡೈಮಂಡ್ RIAA ಸಂಸ್ಥೆಯಿಂದ 2005ರಲ್ಲಿ ಪ್ರಮಾಣಪತ್ರದ ಪ್ರಶಸ್ತಿಪಡೆದುಕೊಂಡು [2] ಪ್ರಸಿದ್ದವಾಯಿತು. ಅದರ 2003ರಲ್ಲಿಯ ಸ್ಟುಡಿಯೊ ಅಲ್ಬಮ್ ಮೀಟರೊ ಬಿಡುಗಡೆಯಾಯಿತು.ಮೊದಲಿನ ಯಶಸ್ವು ಹಾಗೇ ಮುಂದುವರೆದು ಬಿಲ್ ಬೋರ್ಡ್ 200 ನ ಅಲ್ಬಮ್ ಪಟ್ಟಿಯಲ್ಲಿ ಶ್ರೇಯಾಂಕಿತಗೊಂಡಿತು. ಇದರ ಜೊತೆಯಲ್ಲಿಯೇ ವಿಶ್ವಾದ್ಯಂತ್ಯದ ವ್ಯಾಪಕ ಪ್ರವಾಸ ಮತ್ತು ಅದರ ಸಾಮಾಜಿಕ ಧಾರ್ಮಿಕ ಕಾರ್ಯಗಳು [3] ಪ್ರಾರಂಭಗೊಂಡವು.[4] ಇಸವಿ 2003ರಲ್ಲಿ MTV2 ಸಂಸ್ಥೆಯು ಲಿಂಕಿನ್ ಪಾರ್ಕರ್ ನ್ನು ಆರನೆಯ ಪ್ರಸಿದ್ದ ಮ್ಯುಸಿಕ್ ವಿಡಿಯೊ ಯುಗ ಮತ್ತು ಮೂರನೆಯ ಅತ್ಯುತ್ತಮ ನೂತನ ಸಹಸ್ರಮಾನದ ಓಯಾಸಿಸ್ ಮತ್ತು ಕೊಲ್ದ್ ಪ್ಲೇ ಎಂದು ಈ ಬ್ಯಾಂಡ್ ನ್ನು [4] ಹೆಸರಿಸಿದೆ.
ಲಿಂಕಿನ್ ಪಾರ್ಕ್ | |
---|---|
ಹಿನ್ನೆಲೆ ಮಾಹಿತಿ | |
ಅಡ್ಡಹೆಸರು | Xero (1996–1998)[1] Hybrid Theory (1998–1999)[1] |
ಮೂಲಸ್ಥಳ | Agoura Hills, California, United States |
ಸಂಗೀತ ಶೈಲಿ | Alternative rock, nu metal, rap rock |
ಸಕ್ರಿಯ ವರ್ಷಗಳು | 1996–present |
Labels | Warner Bros., Machine Shop |
Associated acts | Dead by Sunrise, Fort Minor, Jay-Z, White Pegacorn, Tasty Snax, Relative Degree, Grey Daze, Bucket of Weenies |
ಅಧೀಕೃತ ಜಾಲತಾಣ | www.linkinpark.com |
ಸಧ್ಯದ ಸದಸ್ಯರು | Chester Bennington Rob Bourdon Brad Delson David "Phoenix" Farrell Joe Hahn Mike Shinoda |
ಮಾಜಿ ಸದಸ್ಯರು | Kyle Christener Scott Koziol Mark Wakefield |
ತನ್ನ ಅಲ್ಬಮ್ ಗಳಲ್ಲಿ ನವೀನ ಹೊಸಶೈಲಿಗಳನ್ನು ಅಳವಡಿಸಿಕೊಂಡಿರುವ ಅದು ನು ಮೆಟಲ್ (ನು ಅಂದರೆ ಗ್ರೀಕ್ ವರ್ಣಮಾಲೆಯ 13ನೆಯ ಅಕ್ಷರ )ಮತ್ತು ರಾಪ್ ರಾಕ್ ಗಳನ್ನು ಆಕಾಶವಾಣಿ ರೇಡಿಯೊದ ಶಬ್ದತರಂಗಗಳನ್ನು ಒಟ್ಟುಗೂಡಿಸಿದ ಒಂದು ಹೊಸ ಪ್ರಯೋಗವೆನಿಸಿದೆ.ಅತ್ಯಂತ ಉತ್ತಮ ಧ್ವನಿ ಪ್ರಕಾರವನ್ನು ಹೈಬ್ರೀಡ್ ಥೆಯರಿ ಮತ್ತು ಮೀಟೊರಾ ದಲ್ಲಿ ಬಳಸಿ ಶ್ರೋತೃವರ್ಗವನ್ನು [5][6][7] ಮುಟ್ಟಿದೆ.ಅದರ ಮುಂದಿನ ಸ್ಟುಡಿಯೊ ಅಲ್ಬಮ್ ಮಿನ್ಯುಟ್ಸ್ ಟು ಮಿಡ್ ನೈಟ್ ,ಇದು 2007ರಲ್ಲಿ ಹೊರಬಂದಿದೆ,ಇದರಲ್ಲಿ ರಾಕ್ ಬಾಂಡ್ ತನ್ನ ನವ್ಯ ಸಂಗೀತಗಾರಿಕೆಗೆ ಒತ್ತು [8] ನೀಡಿದೆ. ಈ ಅಲ್ಬಮ್ ಬಿಲ್ಬೋರ್ಡನ ಪಟ್ಟಿಯಲ್ಲಿಅಗ್ರ ಸ್ಥಾನ ಗಳಿಸಿತಲ್ಲದೇ ಆ ವರ್ಷದ ಅತ್ಯುತ್ತಮ ಸಾಪ್ತಾಹಿಕ ಅಲ್ಬಮ್ ಗಳಲ್ಲಿ ಮೂರನೆಯ ಶ್ರೇಯಾಂಕದಲ್ಲಿ ನಿಂತು ಸಾಧನೆ [9][10] ಮಾಡಿದೆ. ಈ ಬ್ಯಾಂಡ್ ವಿಭಿನ್ನ ಕಲಾವಿದರೊಂದಿಗೆ ಸಹಯೋಗ ಹೊಂದಿದ್ದು ಅದರಲ್ಲೂ ಅತ್ಯಂತ ಹೆಸರಾಂತ ರಾಪರ,ಜಯ-Z ಅವರೊಂದಿಗೆ ತನ್ನ ಮ್ಯಾಶಪ್ ಅಲ್ಬಮ್ ಕೊಲಿಜನ್ ಕೋರ್ಸ್ ಮತ್ತು ರಿನಿಮೇಶನ್ (ಪುನಃಶ್ಚೇತನಗೊಳಿಸುವಿಕೆ) ಗಳೊಡನೆ ಅದು ತನ್ನ ವಿಸ್ತಾರವನ್ನು [6] ವ್ಯಾಪಿಸಿಕೊಂಡಿದೆ. ಲಿಂಕಿನ್ ಪಾರ್ಕ್ [11] ವಿಶ್ವಾದ್ಯಾಂತ 50ದಶಲಕ್ಷ ಅಲ್ಬಮ್ ಗಳನ್ನು ಮಾರಿ ದಾಖಲೆ ಸೃಷ್ಟಿಸಿತು.ಅದೂ ಅಲ್ಲದೇ ಎರಡು ಬಾರಿ ಗ್ರಾಮ್ಮಿ ಪ್ರಶಸ್ತಿ [12][13] ಗಳಿಸಿತು.