From Wikipedia, the free encyclopedia
ಲಕ್ಷ್ಮಣಾ ಜೂಲಾ ಎಂಬ ತೂಗು ಸೇತುವೆಯು ಭಾರತದ ಈಶಾನ್ಯ ರಾಜ್ಯ ಉತ್ತರಾಖಂಡದ ರಿಷಿಕೇಶ ನಗರದಲ್ಲಿ ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಈ ಸೇತುವೆಯು ೫ ಕಿ.ಮಿ.(೩ಮೈಲಿ)ನಷ್ಟು ವಿಸ್ತಾರವಾಗಿದೆ. ಈ ಸೇತುವೆಯು ತೆಹ್ರಿ ಗರ್ವಾಲ್ ಜಿಲ್ಲೆಯ ತಪೋವನದ ಎರಡು ಗ್ರಾಮಗಳನ್ನು ನದಿಯ ಪಶ್ಚಿಮ ದಂಡೆಯಲ್ಲಿ ಹಾಗು ಪೌರಿ ಗರ್ವಾಲ್ ಜಿಲ್ಲೆಯ ಜೊಂಕನ್ನು ಪೂರ್ವ ದಂಡೆಯಲ್ಲಿ ಸಂಪರ್ಕಿಸುತ್ತದೆ. ಈ ಸೇತುವೆಯು ಪಾದಚಾರಿಗಳ ಸೇತುವೆಯಾಗಿದ್ದು ಇದು ಮೋಟಾರ್ ಬೈಕ್ ಗಳ ಓಡಾಟಕ್ಕೂ ಬಳಕೆಯಾಗುತ್ತಿದೆ. ಇದು ನಗರದ ಹೊರವಲಯದಲ್ಲಿದ್ದರೂ,ಈ ಸೇತುವೆಯು ರಿಷಿಕೇಶದ ಸಾಂಪ್ರದಾಯಿಕ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಲಕ್ಷ್ಮಣಾ ಜೂಲಾದ ಕೆಳಭಾಗಕ್ಕೆ ಇರುವ ದೊಡ್ಡ ಸೇತುವೆಯೇ ರಾಮ ಜೂಲ, ಇದು ೨ಕಿ.ಮಿ.(೧.೨ಮೈಲಿ) ವಿಸ್ತೀರ್ಣದಲ್ಲಿದೆ.
ನವೆಂಬರ್ ೫,೨೦೨೦ ರ ಹೊತ್ತಿಗೆ, ಈ ಸೇತುವೆಯನ್ನು ಪಾದಚಾರಿಗಳ ಪ್ರವೇಶಕ್ಕೆ ನಿರ್ಬಂಧಿಸಿ, ಸಮಾನಾಂತರವಾದ ಬದಲಿ ಸೇತುವೆಯನ್ನು ನಿರ್ಮಿಸಿ, ಹಳೆಯ ಸೇತುವೆಯನ್ನು ಶಾಶ್ವತವಾಗಿ ಮುಚ್ಚುಲಾಗಿದೆ. ಎರಡೂ ಬದಿಯಲ್ಲಿರುವ ತಡೆಗೋಡೆಗಳು ಮೋಟಾರ್ಸೈಕಲ್ ಮತ್ತು ಸ್ಕೂಟರ್ಗಳು ಸೇರಿದಂತೆ ವಾಹನಗಳ ಸಂಚಾರವನ್ನು ತಡೆಯುತ್ತವೆ. ಹಾಗಿದ್ದರೂ, ಪಾದಚಾರಿಗಳ ಪ್ರವೇಶವು ಇನ್ನೂ ಸಾಧ್ಯವಿದೆ ಎಂಬುವುದು ಕೆಳಹಾದಿ ವೀಕ್ಷಕರಿಂದ ಧೃಢಕರಿಸಲ್ಪಟ್ಟಿದೆ. ಸೇತುವೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂಬ ಮಾಧ್ಯಮ ವರದಿಗಳು ಸಹ ಈ ಸಮಯದಲ್ಲಿ ನಿಖರವಾಗಿಲ್ಲ. ಸೇತುವೆ ಕ್ಷೀಣಿಸುತ್ತಿರುವ ಕಾರಣ ಅದನ್ನು ಬದಲಾಯಿಸಲಾಗುತ್ತಿದೆ. ಇತ್ತೀಚಿನ ಬೆಳವಣಿಗೆಗಳಿಗಾಗಿ ದಯವಿಟ್ಟು ಸುದ್ದಿ ವರದಿಗಳನ್ನು ನೋಡಿ. ಈ ಸೇತುವೆಯನ್ನು ದ್ವಿಚಕ್ರಗಳು ಅಥವ ನಾಲ್ಕುಚಕ್ರ ವಾಹನಗಳಿಗೆ ಮುಚ್ಚಲಾಗಿದ್ದು ಪಾದಚಾರಿಗಳಿಗೆ ಮುಕ್ತವಾಗಿದೆ.
ಲಕ್ಷ್ಮಣನು ಹಿಂದೂ ದೇವತೆಯಾದ ಗಂಗೆಯನ್ನು ಸೆಣಬಿನ ಹಗ್ಗಗಳಿಂದ ನಿರ್ಮಿಸಿರುವ ಸೇತುವೆಯ ಮೇಲೆ ದಾಟಿಸಿದನೆಂದು ಹೇಳಲಾಗಿದೆ .[1] ೧೯೨೯ ರಲ್ಲಿ ಲಕ್ಷ್ಮಣ್ ಜೂಲಾ ಪೂರ್ಣಗೊಂಡಿತು[2]
ಸೇತುವೆಯ ಪಶ್ಚಿಮ ಭಾಗದ ಬುಡದಲ್ಲಿ ಎರಡು ಫಲಕಗಳು ಅಸ್ತಿತ್ವದಲ್ಲಿವೆ.
ಮೊದಲ ಫಲಕ ಹೀಗಿದೆ:
ಎರಡನೇ ಫಲಕ ಹೀಗಿದೆ:
ಲಕ್ಷ್ಮಣ್ ಜೂಲಾ ತೂಗು ಸೇತುವೆ
ವ್ಯಾಪ್ತಿ - ೪೫೦ ಅಡಿಗಳು
ಬೇಸಿಗೆಯ ನೀರಿನ ಮಟ್ಟಕ್ಕಿಂತ ಮೇಲಿನ ರಸ್ತೆಯ ಎತ್ತರ - ೫೯ ಅಡಿಗಳು
ಈ ಸೇತುವೆಯು ೧೧ ಏಪ್ರಿಲ್ ೧೯೩೦ ರಂದು ಸಿ.ಐ.ಇ. ಕೆ.ಸಿ.ಎಸ್.ಐ. ಯುನೈಟೆಡ್ ಪ್ರಾಂತ್ಯಗಳ ಗವರ್ನರ್ ಎಚ್ಇ ಸರ್ ಮಾಲ್ಕಮ್ ಹ್ಯಾಲಿ ಅವರಿಂದ ಸಂಚಾರಕ್ಕೆ ಮುಕ್ತ ಮಾಡಲ್ಲ್ಪಮಾಡಲ್ಪಟ್ಟಿದೆ. ಈ ಸೇತುವೆಯನ್ನು ೧೯೨೭-೧೯೨೯ನೇ ವರ್ಷಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗಿದೆ. ಇದು ೨೮೪ ಅಡಿಗಳಷ್ಟು ಹಳೆಯ ಸೇತುವೆಯನ್ನು ಬದಲಾಯಿಸುತ್ತದೆ. ಇದು ರಾಯ್ ಬಹದ್ದೂರ್ ಶೆಪರ್ಷಾದ್ ತುಲ್ಶಾನರ ತಂದೆ ರಾಯ್ ಬಹದ್ದೂರ್ ಸೂರಜ್ಮಾಲ್ ಜುಂಜುನ್ವಾಲಾರವರ ಸ್ಮರಣಾರ್ಥ ಕೊಡುಗೆಯಾಗಿದ್ದು, ೨೦೦ ಅಡಿಗಳಷ್ಟು ಆಳದಲ್ಲಿದೆ. ಅಕ್ಟೋಬರ್ ೧೯೨೪ ರ ಮಹಾ ಪ್ರವಾಹದಿಂದ ಇದು ಕೊಚ್ಚಿಹೋಗಿದ್ದು, ಇದರ ಎಡಭಾಗದ ತಳಭಾಗವು ದುರ್ಬಲಗೊಂಡಿದೆ. ಹಳೆಯ ಸೇತುವೆಯ ಸ್ಥಳದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಈ ಹೊಸ ಸೇತುವೆಯನ್ನು ಪುನರ್ನಿರ್ಮಿಸಲು ಹೆಚ್ಚುವರಿ ವೆಚ್ಚವನ್ನು ರಾಯ್ ಬಹದ್ದೂರ್ ಶೆಪರ್ಶಾದ್ ತುಲ್ಶನ್ ಅವರ ತಂದೆಯ ಗೌರವಾನ್ವಿತ ಸ್ಮರಣೆಯನ್ನು ಉಳಿಸಲು ಕೊಡುಗೆ ನೀಡಿದ್ದಾರೆ ಮತ್ತು ಈ ಸೇತುವೆಯನ್ನು ದಾಟಲು ಯಾವುದೇ ಸುಂಕ ಅಥವಾ ತೆರಿಗೆ ವಿಧಿಸುವುದಾಗಲಿ ಅಥವಾ ಯಾವುದೇ ರೀತಿಯಲ್ಲಿ ಸ್ವೀಕರಿಸುವುದಾಗಲಿ ಮಾನ್ಯ ಮಾಡಲಾಗಿಲ್ಲ. .
ಎರಡನೇ ಫಲಕ ಹೀಗಿದೆ:
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.