ರೊನಾಲ್ಡಿನೊ
From Wikipedia, the free encyclopedia
ರೊನಾಲ್ಡೊ ಡೆ ಅಸ್ಸಿಸ್ ಮೊರೈರಾ (ಪೋರ್ಟೊ ಅಲೆಗ್ರೆನಲ್ಲಿ 21 ಮಾರ್ಚ್ 1980ರಲ್ಲಿ ಜನನ. ಸಾಮಾನ್ಯವಾಗಿ ರೊನಾಲ್ಡಿನೊ ಅಥವಾ ರೊನಾಲ್ಡಿನೊ ಗೌಚೊ ಎಂದು ಹೆಸರುವಾಸಿಯಾಗಿದ್ದ,[2] ಬ್ರೆಜಿಲ್ ದೇಶದ ಈ ಫುಟ್ಬಾಲ್ ಆಟಗಾರ. ರೊನಾಲ್ಡಿನೊ ಇಟಾಲಿಯನ್ ಸರಣಿಗಳ ಸೀರಿ A ಪರ ಮಿಲನ್ ಮತ್ತು ಬ್ರೆಜಿಲ್ ರಾಷ್ಟ್ರೀಯ ತಂಡಗಳಿಗಾಗಿ ಆಡುತ್ತಾರೆ. ಅವರ ತಲೆಮಾರಿನವರಲ್ಲಿ ಹುಟ್ಟು ಪ್ರತಿಭಾಶಾಲಿ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Personal information | |||
---|---|---|---|
Full name | Ronaldo de Assis Moreira | ||
Date of birth | (1980-03-21) ೨೧ ಮಾರ್ಚ್ ೧೯೮೦ (ವಯಸ್ಸು ೪೪) | ||
Place of birth | Porto Alegre, ಬ್ರೆಜಿಲ್ | ||
Height | 1.82 m (6 ft 0 in)[1] | ||
Playing position | Winger / Attacking midfielder | ||
Club information | |||
Current club | Milan | ||
Number | 80 | ||
Youth career | |||
1997–1998 | Grêmio | ||
Senior career* | |||
Years | Team | Apps† | (Gls)† |
1998–2001 | Grêmio | 44 | (21) |
2001–2003 | Paris Saint-Germain | 55 | (17) |
2003–2008 | Barcelona | 145 | (70) |
2008– | Milan | 40 | (11) |
National team‡ | |||
1999– | Brazil | 87 | (32) |
Honours
| |||
† Appearances (Goals). |
ಪೋರ್ಚುಗೀಸ್ನಲ್ಲಿ "ಲಿಟಲ್ ರೊನಾಲ್ಡೊ" ಎಂದು ಕರೆಸಿಕೊಳ್ಳುವ ರೊನಾಲ್ಡಿನೊ ಅವರು ಬ್ರೆಜಿಲ್ನಲ್ಲಿ ಈಗಾಗಲೇ ರೊನಾಲ್ಡಿನೊ ಎಂದು ಹೆಸರಾಗಿದ್ದು,ರೊನಾಲ್ಡೊ ಅವರಿಂದ ಪ್ರತ್ಯೇಕವಾಗಿ ಗುರುತಿಸಲು "ಗೌಚೊ" ಎಂಬ ಉಪನಾಮ ಅಥವಾ ಅಡ್ಡಹೆಸರನ್ನು ಬ್ರೆಜಿಲ್ನಲ್ಲಿ ಬಳಸಲಾಗುತ್ತಿದೆ. ರೊನಾಲ್ಡೊ ಯುರೋಪ್ಗೆ ತೆರಳಿದ ಬಳಿಕ ತಮ್ಮ ಪ್ರಥಮ ಹೆಸರಿನಲ್ಲೇ ಮುಂದುವರೆದು, ರೊನಾಲ್ಡಿನೊ "ಗೌಚೊ" ಅಡ್ಡಹೆಸರನ್ನು ಕೈಬಿಟ್ಟು ರೊನಾಲ್ಡಿನ್ಹೊ ಎಂಬ ಮೂಲ ಹೆಸರು ಉಳಿಸಿಕೊಂಡರು.
ಮಿಲನ್್(ಉತ್ತರ ಇಟಲಿಯ ಲ್ಯಾಂಬಾರ್ಡಿ ರಾಜಧಾನಿ) ಗೆ ತೆರಳುವ ಮುನ್ನ,ಪ್ಯಾರಿಸ್ ಸೇಂಟ್-ಜರ್ಮನ್ ಮತ್ತು FC ಬಾರ್ಸಿಲೋನಾ ಪರ ಆಡಿ, ಅವರ ಜತೆ 2006ರಲ್ಲಿ ಪ್ರಥಮ ಚಾಂಪಿಯನ್ಸ್ ಲೀಗ್ನಲ್ಲಿ ಜಯಗಳಿಸಿದರು. ಜನವರಿ 2007ರಲ್ಲಿ ಅವರು ಸ್ಪೇನ್ ನ ಪೌರತ್ವದೊಂದಿಗೆ ಅಲ್ಲಿನ ನಾಗರಿಕರೆನಿಸಿದರು.[3]