![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/61/Rudramadevi.jpg/640px-Rudramadevi.jpg&w=640&q=50)
ರುದ್ರಮ ದೇವಿ
From Wikipedia, the free encyclopedia
ರಾಣಿ ರುದ್ರಮ ದೇವಿ (ನಿಧನ ೧೨೮೯ ಅಥವಾ ೧೨೯೫), ಅಥವಾ ರುದ್ರದೇವ ಮಹಾರಾಜ, ದಕ್ಷಿಣ ಭಾರತದ ಕಾಕತೀಯ ಸಾಮ್ರಾಜ್ಯವನ್ನು ೧೨೬೩ರಿಂದ ತನ್ನ ಮರಣದವರೆಗೂ ಆಳಿದ ಸಾಮ್ರಾಜ್ಞಿ. ಭಾರತದ ಇತಿಹಾಸದಲ್ಲಿ ಆಳ್ವಿಕೆ ನಡೆಸಿದ ಕೆಲವೇ ಮಹಿಳೆಯರ ಪಟ್ಟಿಗೆ ರುದ್ರಮ ದೇವಿ ಸೇರುತ್ತಾಳೆ. ಅದರಲ್ಲಿ ಯಶಸ್ವಿಯಾಗುವ ಸಲುವಾಗಿ ತನ್ನ ಪುರುಷ ಚಿತ್ರವನ್ನು ಬಳಸಿದಳು. ಆಕೆ ಕಾಕತೀಯರ ಅತ್ಯಂತ ಪ್ರಸಿದ್ದ ಅರಸ ಗಣಪತಿದೇವನ ಪ್ರೀತಿಯ ಪುತ್ರಿ ರುದ್ರಾಂಬಾ ಆಗಿ ಜನಿಸಿದಳು.ಆತನಿಗೆ ಪುತ್ರ ಸಂತಾನವಿರಲಿಲ್ಲ. ಹಾಗಾಗಿ ಆಕೆಗೆ ಪುತ್ರಿಕಾ ಸಮಾರಂಭದಲ್ಲಿ ಪುರುಷನ ಹೆಸರಿಟ್ಟು ಆಡಳಿತದ ಗದ್ದುಗೆಗೇರಿಸಲಾಯಿತು[1][2].
Quick Facts ರುದ್ರಮ ದೇವಿ, ಪೂರ್ವಾಧಿಕಾರಿ ...
ರುದ್ರಮ ದೇವಿ | |
---|---|
![]() | |
ರುದ್ರಮ ದೇವಿಯ ಪ್ರತಿಮೆ | |
ಪೂರ್ವಾಧಿಕಾರಿ | ಗಣಮತಿದೇವ |
ಉತ್ತರಾಧಿಕಾರಿ | ಪ್ರತಾಪರುದ್ರ |
ಗಂಡ/ಹೆಂಡತಿ | ವೀರಭದ್ರ |
ತಂದೆ | ಗಣಪತಿದೇವ |
ಮರಣ | ೧೨೮೯ ಅಥವಾ ೧೨೯೫ ಬಹುಶಃ ಚಂದುಪಟ್ಲ (ಈಗಿನ ತೆಲಂಗಾಣ, ಭಾರತ) |
Close