ರೀಬಾಕ್
From Wikipedia, the free encyclopedia
ರೀಬಾಕ್ ಇಂಟರ್ನ್ಯಾಶನಲ್ ಲಿಮಿಟೆಡ್ , ಜರ್ಮನಿಯ ಕ್ರೀಡಾವಸ್ತ್ರ ಕಂಪನಿಯಾದ ಅಡಿಡಾಸ್ನ ಅಂಗಸಂಸ್ಥೆಯಾಗಿದೆ. ಇದು, ಅಥ್ಲೆಟಿಕ್ ಪಾದರಕ್ಷೆಗಳು, ಉಡುಪುಗಳು ಮತ್ತು ಸಾಮಗ್ರಿಗಳ ತಯಾರಿಕಾ ಕಂಪನಿಯಾಗಿದೆ. ಈ ಹೆಸರು ಆಫ್ರಿಕನ್ನರ ಒಂದು ಜಾತಿಯ ಆಫ್ರಿಕನ್ ಹುಲ್ಲೆ ಅಥವಾ ಗ್ಯಾಜೆಲ್ (ಒಂದು ಜಾತಿಯ ಜಿಂಕೆ)ನ ಉಚ್ಚಾರಣೆ ರೆಬಕ್ನಿಂದ ಬಂದಿದೆ. 1890ರಲ್ಲಿ ಇಂಗ್ಲೆಂಡ್ನ ಬೋಲ್ಟನ್ನ ಈಶಾನ್ಯಕ್ಕೆ 6 ಮೈಲಿ ದೂರದಲ್ಲಿರುವ ಹೊಲ್ಕೊಂಬ್ ಬ್ರೂಕ್ ಎಂಬ ಒಂದು ಹಳ್ಳಿಯಲ್ಲಿ, ಜೋಸೆಫ್ ಫಾಸ್ಟರ್ ಸಾಮಾನ್ಯವಾದ ಓಡಲು ಬಳಸುವ ಶೂಗಳನ್ನು ತಯಾರಿಸಿ, ಮಾರುತ್ತ ಜೀವನನಡೆಸಿದ್ದರು. ಒಮ್ಮೆ ಅವರಿಗೆ ಓಡಲು ಬಳಸುವ ಸ್ಪೈಕ್ ಇರುವ ಅಂದರೆ ಕೆಳಗೆ ಚಿಕ್ಕ ಮೊಳೆಗಳಿರುವ ಹೊಸಬಗೆಯ ಶೂ ಮಾಡುವ ಯೋಚನೆ ಬಂದಿತು. ಅವರ ಈ ಯೋಚನೆ ಕಾರ್ಯಗತವಾಗುತ್ತಿದ್ದಂತೆ, ತಮ್ಮ ಮಗನನ್ನೂ ಸೇರಿಸಿಕೊಂಡು 1895ರಲ್ಲಿ ಜೆ.ಡಬ್ಲ್ಯು. ಫೋಸ್ಟರ್ ಆಂಡ್ ಸನ್ಸ್ ಎಂಬ ಶೂ ಕಂಪನಿಯನ್ನು ಸ್ಥಾಪಿಸಿದರು.[2]
![]() | |
ಸಂಸ್ಥೆಯ ಪ್ರಕಾರ | Subsidiary of Adidas AG[1] |
---|---|
ಸ್ಥಾಪನೆ | Bolton, ಇಂಗ್ಲೆಂಡ್ (1895) |
ಮುಖ್ಯ ಕಾರ್ಯಾಲಯ | Canton, Massachusetts, U.S. |
ಉದ್ಯಮ | Sportswear and Sports Goods |
ಉತ್ಪನ್ನ | Footwear Accessories Sportswear |
ಜಾಲತಾಣ | http://www.reebok.com |
1960ರಲ್ಲಿ, ಈ ಸ್ಥಾಪಕರ ಇಬ್ಬರು ಮೊಮ್ಮಕ್ಕಳು ಜೋ ಮತ್ತು ಜೆಫ್ ಫೋಸ್ಟರ್ ಕಂಪನಿಯನ್ನು ಇಂಗ್ಲೆಂಡ್ನಲ್ಲಿ ರೀಬಾಕ್ ಎಂದು ಮರುನಾಮಕರಣ ಮಾಡಿದರು. ಜೋ ಫೋಸ್ಟರ್ ಹುಡುಗನಾಗಿದ್ದಾಗ ರೇಸ್ ಒಂದರಲ್ಲಿ ಗೆದ್ದಾಗ ದೊರೆತ ಶಬ್ದಕೋಶದಲ್ಲಿ ಈ ಪದವನ್ನು ಕಂಡಿದ್ದನು, ಆ ಶಬ್ದಕೋಶವು ದಕ್ಷಿಣ ಆಫ್ರಿಕಾದ ಆವೃತ್ತಿಯಾಗಿತ್ತು, ಆದ್ದರಿಂದಲೇ ಅದರಲ್ಲಿ ಈ ಪದವಿತ್ತು.[3] ಕಂಪನಿಯು ಜೆ.ಡಬ್ಲ್ಯು.ಫೋಸ್ಟರ್ನ ಪರಂಪರೆಗೆ ತಕ್ಕಂತೆಯೇ ಬೆಳೆಯಿತು. ಬ್ರಿಟನ್ನಲ್ಲಿ ಮೊದಲ ದರ್ಜೆಯ ಪಾದರಕ್ಷೆಗಳನ್ನು ಗ್ರಾಹಕರಿಗೆ ತಯಾರಿಸುತ್ತಿತ್ತು. 1979ರಲ್ಲಿ, ಪೌಲ್ ಫೈರ್ಮನ್ ಎಂಬ ಅಮೆರಿಕದ ಕ್ರೀಡಾ ಸಾಮಗ್ರಿಗಳ ವಿತರಕ ಒಂದು ಜೊತೆ ರೀಬಾಕ್ಗಳನ್ನು ಒಂದು ಅಂತಾರಾಷ್ಟ್ರೀಯ ವ್ಯಾಪಾರಿ ಪ್ರದರ್ಶನದಲ್ಲಿ ಕಂಡನು. ಆತ ಅವುಗಳನ್ನು ಉತ್ತರ ಅಮೆರಿಕದಲ್ಲಿ ಮಾರಾಟ ಮಾಡಲು ಮಾತುಕತೆ ನಡೆಸಿದನು.[2]