ರಮ್ಯಾ ಕೃಷ್ಣನ್
ನಟಿ / From Wikipedia, the free encyclopedia
ರಮ್ಯಾ ಕೃಷ್ಣನ್ (ಜನನ ೧೫ ಸೆಪ್ಟೆಂಬರ್ ೧೯೭೦) ಭಾರತೀಯ ನಟಿ. ತೆಲುಗು , ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ನ೦ದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಇವರು ರಮ್ಯಾ ಕೃಷ್ಣ ಎಂಬ ಹೆಸರಿನಿಂದ ಹೆಸರುವಾಸಿಯಾಗಿದ್ದಾರೆ. ಪದಯಪ್ಪ ಚಲನಚಿತ್ರದಲ್ಲಿ ನೀಲಾ೦ಬರಿ ಪಾತ್ರವನ್ನು ನಿರ್ವಹಿಸಿದ್ದಾರೆ.[1] ಈ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದರು. ೨೦೦೯ರ ಕೊಂಚಮ್ ಇಷ್ಟಮ್ ಕೊಂಚಮ್ ಕಷ್ಟಮ್ ಚಲನಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟಿಯೆಂದು ಫಿಲ್ಮ್ಫೇರ್ ಪ್ರಶಸ್ತಿಯನ್ನು ನೀಡಲಾಗಿದೆ. ೨೦೧೫ರ ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ದೇವಿ ಎಂಬ ಪಾತ್ರವನ್ನು ನಿರ್ವಹಿಸಿ ಸಾರ್ವತ್ರಿಕ ಮೆಚ್ಚುಗೆಯನ್ನು ಪಡೆದಿದ್ದಾರೆ.[2] ಈ ಚಿತ್ರವು ಭಾರತದ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಒಂದು. ಇದರ ಎರಡನೆ ಭಾಗವೂ ಕೂಡ ಅತಿ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಕೂಡ ಒಂದಾಗಿದೆ. ಬಾಹುಬಲಿ: ದ ಬಿಗಿನ್ನಿಂಗ್ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ಪೋಷಕ ನಟಿ, ಫಿಲ್ಮ್ಫೇರ್ ಪ್ರಶಸ್ತಿ, ನಂದಿ ಪ್ರಶಸ್ತಿ[3] ದೊರೆತಿದೆ.[4]
ರಮ್ಯಾ ಕೃಷ್ಣನ್ | |
---|---|
ಜನನ | ೧೫ ಸೆಪ್ಟೆ೦ಬರ್ ೧೯೭೦ ಚೆನ್ನೈ, ತಮಿಳು ನಾಡು, ಭಾರತ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ನಟಿ |
ಸಕ್ರಿಯ ವರ್ಷಗಳು | ೧೯೮೪– |
ಸಂಗಾತಿ | ಕೃಷ್ಣ ವ೦ಶಿ (ವಿವಾಹ 2003) |
ಮಕ್ಕಳು | ೧ |