ಯೆಹೂದಿ ಮೆನುಹಿನ್
From Wikipedia, the free encyclopedia
ಯೆಹೂದಿ ಮೆನುಹಿನ್ ಇವರು ೧೯೧೬ ಎಪ್ರಿಲ್ ೨೨ರಂದು ಅಮೇರಿಕದ ನ್ಯೂಯಾರ್ಕ್ ನಗರದಲ್ಲಿ ಜನಿಸಿದರು.ಕೇವಲ ಮೂರು ವರ್ಷದವರಿರುವಾಗಲೆ ಇವರು ಸಿಗ್ಮಂಡ್ ಎ೦ಕರ್ ಎನ್ನುವವರ ಬಳಿ ಪಿಟೀಲು ಕಲಿಯತೊಡಗಿದರು. ಏಳು ವರ್ಷದವರಿದ್ದಾಗಲೆ ತಮ್ಮ ಮೊದಲ ಕಛೇರಿಯನ್ನು ನೀಡಿದರು. ಆ ಬಳಿಕ ರೊಮಾನಿಯಾದ ಸಂಗೀತಗಾರ ಹಾಗು ಪಿಟೀಲುವಾದಕ ಜಾರ್ಜ ಎನೆಸ್ಕು ಇವರ ಬಳಿಯಲ್ಲಿ ಶಿಕ್ಷಣ ಪಡೆದರು.
ತನ್ನಂತರ ತಮ್ಮ ಸೋದರಿ, ಪಿಯಾನೊ ವಾದಕಿ ಹೆಪ್ಝಿಬಾ ಜೊತೆಗೆ ಅನೇಕ ಸಂಗೀತ ಕಾರ್ಯಕ್ರಮಗಳನ್ನು ಜರುಗಿಸಿದರು.