ಯೂಟ್ಯೂಬ್
From Wikipedia, the free encyclopedia
ಯೂಟ್ಯೂಬ್ ಒಂದು ವೀಡಿಯೋ ಹಂಚಿಕೊಳ್ಳುವ ಜಾಲತಾಣವಾಗಿದ್ದು, ಇಲ್ಲಿ ಬಳಕೆದಾರರು ತಮ್ಮ ವೀಡಿಯೋಗಳನ್ನು ಅಪ್ಲೋಡ್ ಮಾಡಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ. PayPalನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಉದ್ಯೋಗಿಗಳು ಯೂಟ್ಯೂಬ್ ಅನ್ನು ಫೆಬ್ರವರಿ 2005ನಲ್ಲಿ ಸೃಷ್ಟಿಸಿದರು.[3] ನವೆಂಬರ್ 2006ನಲ್ಲಿ, ಯೂಟ್ಯೂಬ್ LLC ಯನ್ನು Google Inc. ಕಂಪನಿಯು $ 1.65 ಬಿಲಿಯನ್ಗಳಿಗೆ ಕೊಂಡುಕೊಂಡಿತು, ಮತ್ತು ಈಗ ಅದು Googleನ ಉಪಾಂಗ ಸಂಸ್ಥೆಯಾಗಿ ಕಾರ್ಯಾಚರಣೆ ನಡೆಸುತ್ತದೆ.
ಜಾಲತಾಣದ ವಿಳಾಸ | https://www.youtube.com |
---|---|
ಘೋಷಣೆ | Broadcast Yourself |
ತಾಣದ ಪ್ರಕಾರ | ಅಂಗಸಂಸ್ಥೆ |
ನೊಂದಾವಣಿ | ಐಚ್ಛಿಕ |
ಲಭ್ಯವಿರುವ ಭಾಷೆ | ಆಂಗ್ಲ |
ಬಳಕೆದಾರರು(ನೊಂದಾಯಿತರೂ ಸೇರಿ) | ೨೦೩ ಕೋಟಿ |
ವಿಷಯದ ಪರವಾನಗಿ | ಪ್ರಮಾಣಿತ ಪರವಾನಗಿ ಮತ್ತು ಕ್ರಿಯೇಟಿವ್ ಕಾಮನ್ |
ಬಳಸಿದ ಭಾಷೆ | ಪೈಥಾನ್, ಸಿ++, ಜಾವಾ, ಜಾವಾಸ್ಕ್ರಿಪ್ಟ್, ಗೋ, ಗಿಸ್(Guice) |
ಒಡೆಯ | ಆಲ್ಫಾಬೆಟ್ ಇಂಕ್. |
ಪ್ರಾರಂಭಿಸಿದ್ದು | ಫೆಬ್ರವರಿ ೧೪, ೨೦೦೫ |
ಆದಾಯ | ೧೯೮೦ ಕೋಟಿ ಡಾಲರ್(೨೦೨೦ರಲ್ಲಿ)[1] |
ಅಲೆಕ್ಸಾ ಶ್ರೇಯಾಂಕ | ೨[2] |
ಈ ಕಂಪನಿ ಕ್ಯಾಲಿಫೊರ್ನಿಯದ ಸ್ಯಾನ್ ಬ್ರೂನೊದಲ್ಲಿ ನೆಲೆಗೊಂಡಿದೆ ಮತ್ತು ಅಡೋಬ್ ಫ್ಲಾಶ್ ವೀಡಿಯೊ ತಂತ್ರಜ್ಞಾನ ಬಳಸಿ ಬಳಕೆದಾರ-ಉತ್ಪಾದಿಸಿದ ಹಲವು ಬಗೆಯ ವೀಡಿಯೋ ವಿಷಯಗಳನ್ನು ಪ್ರದರ್ಶಿಸುತ್ತದೆ. ಇದರಲ್ಲಿ ಚಲನಚಿತ್ರದ ತುಣುಕುಗಳು, ಟಿವಿ ತುಣುಕುಗಳು ಮತ್ತು ಸಂಗೀತದ ವೀಡಿಯೋ ಸೇರಿದಂತೆ ವೀಡಿಯೋ ಬ್ಲಾಗಿಂಗ್ ಹಾಗೂ ಚಿಕ್ಕ ಗಾತ್ರದ ಸ್ವತಂತ್ರ ವೀಡಿಯೋಗಳಂತಹ ಹವ್ಯಾಸಿ ವಿಷಯಗಳು ಒಳಗೊಂಡಿವೆ. ಯೂಟ್ಯೂಬ್ನ ಹೆಚ್ಚಿನ ವಿಷಯಗಳನ್ನು ಬಳಕೆದಾರ ವ್ಯಕ್ತಿಗಳು ಸೇರಿಸಿದ್ದಾರೆ, ಆದರು ಯೂಟ್ಯೂಬ್ ಪಾಲುದಾರರ ಕಾರ್ಯಕ್ರಮದ ಅಂತರ್ಗತವಾಗಿ CBS,BBC,UMGಯಂತಹ ಮಾಧ್ಯಮ ಸಂಸ್ಥೆಗಳು ಮತ್ತು ಬೇರೆ ಸಂಘಗಳು ಅವರದೇ ಆದ ಕೆಲವು ವಸ್ತುಗಳನ್ನು ಜಾಲತಾಣದ ಮೂಲಕ ನೀಡುತ್ತಾರೆ.[4]
ನೋಂದಣೆ ಮಾಡಿಕೊಳ್ಳದ ಬಳಕೆದಾರರು ವೀಡಿಯೋಗಳನ್ನು ಬರೀ ನೊಡಬಹುದು. ಆದರೆ, ನೋಂದಣೆ ಆದ ಬಳಕೆದಾರರು ಮಿತಿ ಇಲ್ಲದಷ್ಟು ಸಂಖ್ಯೆಯ ವೀಡಿಯೋಗಳನ್ನು ಸೇರಿಸಲು ಪರವಾನಗಿ ಇದೆ. ಯಾವುದಾದರೂ ವೀಡಿಯೋಗಳು ವಯಸ್ಕರ ಅಂಶಗಳನ್ನು ಹೊಂದಿವೆ ಎಂದು ಕಂಡುಬಂದಾಗ, ಅದನ್ನು ಕೇವಲ ನೋಂದಣಿಯಾದ 18 ವರ್ಷಕ್ಕೂ ಮೇಲ್ಪಟ್ಟ ಬಳಕೆದಾರರಿಗೆ ಮಾತ್ರ ಲಭ್ಯವಿರುವಂತೆ ಮಾಡಿದೆ. ಅವಮಾನ, ಅಶ್ಲೀಲ ವಿಷಯಗಳ ನಿರೂಪಣೆ, ಕೃತಿಸ್ವಾಮ್ಯದ ಉಲ್ಲಂಘನೆಗಳು ಮತ್ತು ಅಪರಾಧಿ ಪ್ರವೃತ್ತಿಯನ್ನು ಉತ್ತೇಜಿಸುವ ವಿಷಯಗಳ ವೀಡಿಯೋಗಳನ್ನು ಸೇರಿಸುವುದನ್ನು ಯೂಟ್ಯೂಬ್ನ ಸೇವಾ ನಿಬಂಧನೆಗಳು ನಿಷೇಧಿಸುತ್ತವೆ. ನೋದಣೆಯಾದ ಬಳಕೆದಾರರ ಖಾತೆಯನ್ನು "ಚ್ಯಾನಲ್ಸ್" ಎಂದು ಕರೆಯಲಾಗುತ್ತದೆ.[5]