ಯು. ಬಿ. ಪವನಜ
ಕನ್ನಡ ಮತ್ತು ಮಾಹಿತಿ ತಂತ್ರಜ್ಞರು / From Wikipedia, the free encyclopedia
ಡಾ. ಉಬರಡ್ಕ ಬೆಳ್ಳಿಪ್ಪಾಡಿ ಪವನಜ,[1] ಒಬ್ಬ ವಿಜ್ಞಾನಿ, ಸಾಫ್ಟವೇರ್ ತಂತ್ರಜ್ಞ. ಕನ್ನಡ ಮತ್ತು ಕಂಪ್ಯೂಟರ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಮಾಹಿತಿ ಸಾಹಿತ್ಯ ಲೇಖಕರಾಗಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಇವರ ಮಾಹಿತಿ ತಂತ್ರಜ್ಞಾನ ಸಂಬಂಧಿತ ಅಂಕಣಗಳು ಹಾಗೂ ಲೇಖನಗಳು ಪ್ರಕಟವಾಗಿವೆ. ಕರ್ನಾಟಕ ಸರಕಾರದ ಕನ್ನಡ ತಂತ್ರಾಂಶ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದ ಪ್ರಪ್ರಥಮ ಅಂತರಜಾಲ ತಾಣ ವಿಶ್ವಕನ್ನಡ.ಕಾಂದ ಸೃಷ್ಟಿಕರ್ತರಾಗಿದ್ದಾರೆ.
Quick Facts ಡಾ. ಯು.ಬಿ ಪವನಜ, ಜನನ ...
ಡಾ. ಯು.ಬಿ ಪವನಜ | |
---|---|
ಜನನ | ಪವನಜ ಉಬರಡ್ಕ |
ವಿದ್ಯಾಭ್ಯಾಸ | ಎಂ.ಎಸ್ಸಿ ರಸಾಯನಶಾಸ್ತ್ರ, ಪಿಎಚ್.ಡಿ |
Known for | ಕಂಪ್ಯೂಟರ್ ತಂತ್ರಾಂಶ ತಜ್ಞ, ಕನ್ನಡದ ಪ್ರಥಮ ಅಂತರಜಾಲತಾಣ ನಿರ್ಮಾಪಕ |
ಜಾಲತಾಣ | pavanaja |
Close