ಯುನೈಟೆಡ್ ಕಿಂಗ್ಡಂ
ಯೂರೋಪ್ ಖಂಡದ ದೇಶ / From Wikipedia, the free encyclopedia
ಗ್ರೇಟ್ ಬ್ರಿಟನ್ ಹಾಗೂ ಉತ್ತರ ಐರ್ಲೆಂಡ್ನ ಯುನೈಟೆಡ್ ಕಿಂಗ್ಡಂ [13] (ಸಾಮಾನ್ಯವಾಗಿ ಯುನೈಟೆಡ್ ಕಿಂಗ್ಡಂ , ಅಂದರೆ UK ಅಥವಾ ಬ್ರಿಟನ್ ಎಂದು ಹೆಸರಾಗಿದೆ)[14] ಒಂದು ಸಾರ್ವಭೌಮ ಸಂಸ್ಥಾನವಾಗಿದ್ದು ಯುರೋಪ್ ಖಂಡದ ವಾಯುವ್ಯ ತೀರದ ಆಚೆಯಲ್ಲಿ ನೆಲೆಗೊಂಡಿದೆ. ಇದೊಂದು ದ್ವೀಪ ದೇಶ[15] ವಾಗಿದ್ದು,[16]ಗ್ರೇಟ್ ಬ್ರಿಟನ್, ಐರ್ಲೆಂಡ್ನ ಈಶಾನ್ಯ ಭಾಗ ಮತ್ತು ಅನೇಕ ಚಿಕ್ಕ ದ್ವೀಪಗಳನ್ನು ಒಳಗೊಂಡು ವ್ಯಾಪಿಸಿರುವ ದ್ವೀಪಸಮೂಹವಾಗಿದೆ. ಉತ್ತರ ಐರ್ಲೆಂಡ್, ಭೂ ಗಡಿಯನ್ನು ಹೊಂದಿರುವUKಯ ಏಕೈಕ ಭಾಗವಾಗಿದ್ದು ಆ ಗಡಿಯನ್ನು ಐರ್ಲೆಂಡ್ ಗಣರಾಜ್ಯದೊಂದಿಗೆ ಹಂಚಿಕೊಂಡಿದೆ.[17][18] ಈ ಭೂಗಡಿಯನ್ನು ಹೊರತುಪಡಿಸಿ UKಯು ಅಟ್ಲಾಂಟಿಕ್ ಸಾಗರ, ಉತ್ತರ ಸಮುದ್ರ, ಇಂಗ್ಲಿಷ್ ಕಡಲ್ಗಾಲುವೆಮತ್ತು ಐರಿಷ್ ಸಮುದ್ರಗಳಿಂದ ಆವೃತವಾಗಿದೆ. ಅತಿದೊಡ್ಡ ದ್ವೀಪವಾದ ಗ್ರೇಟ್ ಬ್ರಿಟನ್, ಕಡಲ್ಗಾಲುವೆಯ ಸುರಂಗದಿಂದ ಫ್ರಾನ್ಸ್ನೊಂದಿಗೆ ಸಂಪರ್ಕ ಹೊಂದಿದೆ.
- This article incorporates information from this version of the equivalent article on the English Wikipedia.
ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ | |
---|---|
Anthem: ಗಾಡ್ ಸೇವ್ ದ ಕಿಂಗ್[1] | |
Capital | ಲಂಡನ್ |
Largest city | London |
Official languages | ಆಂಗ್ಲ (de facto)[2] |
Recognised regional languages | Irish, Ulster Scots, Scottish Gaelic , ಸ್ಕಾಟಿಷ್, ವೆಲ್ಷ್, ಕಾರ್ನಿಶ್[3] |
Ethnic groups | ೯೨.೧% ಬಿಳಿಯರು ೪% ದಕ್ಷಿಣ ಏಷ್ಯನ್ನರು ೨.೦% ಕರಿಯರು ೧.೨% Mixed 0.4% Chinese 0.4% Other |
Religion | Anglican |
Demonym(s) | British, Briton |
Government | Parliamentary democracy and constitutional monarchy |
• Monarch | Charles III |
• Prime Minister | Rishi Sunak |
Legislature | Parliament |
• Upper house | House of Lords |
• Lower house | House of Commons |
Formation | |
• Acts of Union 1707 | 1 May 1707 |
• Act of Union 1800 | 1 January 1801 |
• Anglo-Irish Treaty | 12 April 1922 |
Area | |
• Total | 244,820 km2 (94,530 sq mi) (79th) |
• Water (%) | 1.34 |
Population | |
• 2009 estimate | 61,612,300[5] (22nd) |
• 2001 census | 58,789,194[6] |
• Density | 246/km2 (637.1/sq mi) (48th) |
GDP (PPP) | 2008 estimate |
• Total | $2.230 trillion[7] (7th) |
• Per capita | $36,523[7] (18th) |
GDP (nominal) | 2008 estimate |
• Total | $2.674 trillion[7] (6th) |
• Per capita | $43,785[7] (20th) |
Gini (2005) | 34[8] Error: Invalid Gini value |
HDI (2006) | 0.942[9] Error: Invalid HDI value · 21st |
Currency | Pound sterling[10] (GBP) |
Time zone | UTC+0 (GMT) |
• Summer (DST) | UTC+1 (BST) |
Driving side | left[11] |
Calling code | 44 |
Internet TLD | .uk[12] |
ಯುನೈಟೆಡ್ ಕಿಂಗ್ಡಂ ಒಂದು ಸಾಂವಿಧಾನಿಕ ರಾಜಪ್ರಭುತ್ವದ ಮತ್ತು ಏಕೀಕೃತ ಸಂಸ್ಥಾನವಾಗಿದ್ದು, ಇಂಗ್ಲೆಂಡ್, ಉತ್ತರ ಐರ್ಲೆಂಡ್, ಸ್ಕಾಟ್ಲೆಂಡ್ ಹಾಗೂ ವೇಲ್ಸ್ ಎಂಬ ನಾಲ್ಕು ದೇಶಗಳನ್ನು ಒಳಗೊಂಡಿದೆ.[19] ತನ್ನ ರಾಜಧಾನಿಯಾದ ಲಂಡನ್ನಲ್ಲಿ ಇದರ ಸರ್ಕಾರದ ಅಧಿಕಾರ ಕೇಂದ್ರವಿದ್ದು ಸಂಸದೀಯ ವ್ಯವಸ್ಥೆಯಿಂದ ಆಳಲ್ಪಡುತ್ತಿದೆಯಾದರೂ, ಕ್ರಮವಾಗಿ ಉತ್ತರ ಐರ್ಲೆಂಡ್, ವೇಲ್ಸ್ ಮತ್ತು ಸ್ಕಾಟ್ಲೆಂಡ್ನ ರಾಜಧಾನಿಗಳಾದ ಬೆಲ್ಫಾಸ್ಟ್, ಕಾರ್ಡಿಫ್ ಹಾಗೂ ಎಡಿನ್ಬರ್ಗ್ಗಳಲ್ಲಿರುವ ಮೂರು ಪ್ರಾತಿನಿಧಿಕ ರಾಷ್ಟ್ರೀಯ ಆಡಳಿತಗಳೂ ಈ ಆಳ್ವಿಕೆಯ ಜೊತೆಗಿವೆ. ಜೆರ್ಸಿ ಮತ್ತು ಗೆರ್ನ್ಸೆಯ ಕಡಲ್ಗಾಲುವೆ ದ್ವೀಪ ಅಧಿಕಾರ ಕ್ಷೇತ್ರಗಳು ಹಾಗೂ ಐಲ್ ಆಫ್ ಮ್ಯಾನ್ ಎಂಬ ಕಿರುದ್ವೀಪವು ರಾಜಪ್ರಭುತ್ವದ ಅಧೀನದಲ್ಲಿರುವ ಪ್ರದೇಶಗಳಾಗಿದ್ದು, ಅವು UKಯ ಅಂಗವಾಗಿಲ್ಲ.[20] UKಯು ಹದಿನಾಲ್ಕು ಸಾಗರೋತ್ತರ ಭೂ ಪ್ರದೇಶಗಳನ್ನು ಹೊಂದಿದ್ದು [21] ಅವೆಲ್ಲವೂ ಬ್ರಿಟಿಷ್ ಚಕ್ರಾಧಿಪತ್ಯದ ಅವಶೇಷ ಅಥವಾ ಕುರುಹುಗಳಾಗಿವೆ. ಈ ಚಕ್ರಾಧಿಪತ್ಯವು 1922ರ ಅವಧಿಯಲ್ಲಿನ ತನ್ನ ಉತ್ತುಂಗದ ಕಾಲದಲ್ಲಿ ವಿಶ್ವದ ಸರಿಸುಮಾರು ಕಾಲುಭಾಗದಷ್ಟು ಭೂ ಮೇಲ್ಮೈಯನ್ನು ಆವರಿಸಿಕೊಂಡು, ಇತಿಹಾಸದಲ್ಲೇ ಅತಿದೊಡ್ಡ ಚಕ್ರಾಧಿಪತ್ಯವಾಗಿತ್ತು. ಇದರ ಹಿಂದಿನ ವಸಾಹತುಗಳ ಬಹಳಷ್ಟು ಪ್ರದೇಶಗಳ ಭಾಷೆ, ಸಂಸ್ಕೃತಿ ಹಾಗೂ ಕಾನೂನು ವ್ಯವಸ್ಥೆಗಳಲ್ಲಿ ಬ್ರಿಟಿಷ್ ಆಡಳಿತದ ಪ್ರಭಾವವು ಮುಂದುವರೆದುಕೊಂಡು ಬಂದಿರುವುದನ್ನು ಕಾಣಬಹುದಾಗಿದೆ.
UKಯು ಒಂದು ಅಭಿವೃದ್ಧಿ ಹೊಂದಿದ ದೇಶವಾಗಿದ್ದು, ಅತ್ಯಲ್ಪ ಮೊತ್ತದ GDP ಗೆ ಸಂಬಂಧಿಸಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯನ್ನು ಹಾಗೂ ಖರೀದಿ ಸಾಮರ್ಥ್ಯದ ಹೋಲಿಕೆಗೆ ಸಂಬಂಧಿಸಿ ವಿಶ್ವದ ಏಳನೇ ಅತಿದೊಡ್ಡಆರ್ಥಿಕತೆಯನ್ನು ಹೊಂದಿದೆ.[7] ಇದು ವಿಶ್ವದ ಮೊದಲ ಕೈಗಾರಿಕೀಕೃತ ದೇಶವಾಗಿತ್ತು ಹಾಗೂ [22] 19ನೇ ಹಾಗೂ 20ನೇ ಶತಮಾನಗಳ ಅವಧಿಯಲ್ಲಿ ವಿಶ್ವದ ಅಗ್ರಗಣ್ಯ ಶಕ್ತಿಯಾಗಿತ್ತು.[23] ಆದರೆ ಎರಡು ಜಾಗತಿಕ ಸಮರಗಳ ಆರ್ಥಿಕ ವೆಚ್ಚ ಹಾಗೂ 20ನೇ ಶತಮಾನದ ದ್ವಿತೀಯಾರ್ಧದಲ್ಲಿನ ತನ್ನ ಚಕ್ರಾಧಿಪತ್ಯದ ಕುಸಿತದಿಂದಾಗಿ ಜಾಗತಿಕ ವಿದ್ಯಮಾನಗಳಲ್ಲಿ ಅದರ ಅಗ್ರಗಣ್ಯ ಪಾತ್ರವು ಕುಗ್ಗಿಹೋಯಿತು. ಇಷ್ಟಾಗಿಯೂ ಸಹ ಸದೃಢವಾದ ಆರ್ಥಿಕ, ಸಾಂಸ್ಕೃತಿಕ, ಸೈನಿಕ, ವೈಜ್ಞಾನಿಕ ಮತ್ತು ರಾಜಕೀಯ ಪ್ರಭಾವಗಳೊಂದಿಗೆ UKಯು ಪ್ರಮುಖ ಶಕ್ತಿಯಾಗಿಯೇ ಉಳಿದಿದೆ. ಇದೊಂದು ಅಣ್ವಸ್ತ್ರ ಶಕ್ತಿಯಾಗಿದ್ದು, ರಕ್ಷಣಾ ವೆಚ್ಚಗಳಿಗೆ ಸಂಬಂಧಿಸಿ ವಿಶ್ವದಲ್ಲೇ ನಾಲ್ಕನೇ ಉನ್ನತ ಸ್ಥಾನವನ್ನು ಹೊಂದಿದೆ. ಐರೋಪ್ಯ ಒಕ್ಕೂಟದಲ್ಲಿ ಇದೊಂದು ಸದಸ್ಯ ಸಂಸ್ಥಾನವಾಗಿದ್ದು, ಸಂಯುಕ್ತ ರಾಷ್ಟ್ರಗಳ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನವನ್ನು ಹೊಂದಿದೆ, ಮತ್ತು ಕಾಮನ್ವೆಲ್ತ್ ಒಕ್ಕೂಟದ ರಾಷ್ಟ್ರಗಳು, G8, OECD, NATO, ಹಾಗೂ ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯನಾಗಿದೆ. ರಿಯೊ ಅಪಾಪೊರಿಸ್ ಕೈಮನ್