ಯುನೈಟೆಡ್ ಅರಬ್ ಎಮಿರೇಟ್ಸ್
From Wikipedia, the free encyclopedia
ಕನ್ನಡದಲ್ಲಿ ಸಂಯುಕ್ತ ಅರಬ್ ಅಮೀರತ್ ಸಂಸ್ಥಾನವು ಅಥವಾ ಸಂಯುಕ್ತ ಅರಬ್ ಅಮೀರತ್ತುಗಳು (ಆಂಗ್ಲದಲ್ಲಿ United Arab Emirates (UAE); ಯುನೈಟೆಡ್ ಆ್ಯರಬ್ ಎಮಿರೇಟ್ಸ್) ವಾಯವ್ಯ ಏಷ್ಯೆಯ ಮಧ್ಯಪ್ರಾಚ್ಯದಲ್ಲಿ ಏಳು ಸ್ವಯಾಡಳಿತ ಎಮಿರ್ ಪ್ರಭುತ್ವ ಸಂಸ್ಥಾನಗಳ ಒಕ್ಕೂಟವಾಗಿರುವ ರಾಷ್ಟ್ರ. ಅರಬ್ಬಿಯಲ್ಲಿ ಈ ದೇಶವನ್ನು ಅಲಿಮಾರಾತ್ ಅಲರಬೀಯ ಅಲ್ಮುತ್ತಹಿದ; الإمارات العربية المتحدة ಎಂದು ಕರೆಯಲಾಗುತ್ತದೆ. ಯು.ಎ.ಇ. ಅರಬ್ ಜಂಬೂದ್ವೀಪದ ಆಗ್ನೇಯ ಭಾಗದಲ್ಲಿದೆ. ಪರ್ಷಿಯನ್ ಕೊಲ್ಲಿಯ ಅಂಚಿನಲ್ಲಿರುವ ಯು.ಎ.ಇ. ಯ ನೆರೆರಾಷ್ಟ್ರಗಳೆಂದರೆ ಒಮಾನ್ ಮತ್ತು ಸೌದಿ ಅರೆಬಿಯ. ಒಕ್ಕೂಟದ ಏಳು ಸಂಸ್ಥಾನಗಳು ಇವು : ಅಭ್ ಧಾಬಿ, ಅಜ್ಮಾನ್, ಷಾರ್ಜಾ, ದುಬೈ, ರಾಸ್-ಅಲ್-ಖೈಮಾ, ಫುಜೈರಾ ಮತ್ತು ಉಮ್ಮ್-ಅಲ್-ಖುಮೈನ್. ೧೯೭೦ರ ದಶಕದಲ್ಲಿ ಇಲ್ಲಿನ ತೈಲೋದ್ಯಮವು ತೀವ್ರಗತಿಯಲ್ಲಿ ಅಭಿವೃದ್ಧಿಗೊಂಡು ಇಂದು ಯು.ಎ.ಇ. ವಿಶ್ವದ ಸಂಪದ್ಭರಿತ ದೇಶಗಳಲ್ಲಿ ಒಂದಾಗಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ الإمارات العربية المتحدة Al-Imārāt al-‘Arabīya al-Muttaḥida | |
---|---|
Motto: "xx" | |
Anthem: Ishy Bilady | |
Capital | ಅಬು ಧಾಬಿ |
Largest city | ದುಬೈ |
Official languages | ಅರಾಬಿಕ್ ಭಾಷೆ |
Demonym(s) | Emirati |
Government | ಒಕ್ಕೂಟದ ಸಾಂವಿಧಾನಿಕ ಅರಸೊತ್ತಿಗೆ |
• ರಾಷ್ಟ್ರಾಧ್ಯಕ್ಷ | ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ |
• ಪ್ರಧಾನಿ | ಮೊಹಮ್ಮದ್ ಬಿನ್ ರಷೀದ್ ಅಲ್ ಮಕ್ತೂಮ್ |
ಸ್ಥಾಪನೆ ಡಿಸೆಂಬರ್ 2 1971 | |
• Water (%) | ನಗಣ್ಯ |
Population | |
• 2005 estimate | 4,496,000 (113ನೆಯದು) |
• 2006 census | 4,588,697 |
GDP (PPP) | 2007 estimate |
• Total | $159.3 ಬಿಲಿಯನ್ (54ನೆಯದು) |
• Per capita | $35,516 (16ನೆಯದು) |
GDP (nominal) | 2006 estimate |
• Total | $164 ಬಿಲಿಯನ್ (38ನೆಯದು) |
• Per capita | $42,275 (16th) |
HDI (2007) | 0.868 Error: Invalid HDI value · 39ನೆಯದು |
Currency | ಯು.ಎ.ಇ. ದಿರ್ರಮ್ (AED) |
Time zone | UTC+4 (GMT+4) |
• Summer (DST) | UTC+4 (ಪರಿಗಣನೆಯಲ್ಲಿಲ್ಲ) |
Calling code | 971 |
ISO 3166 code | AE |
Internet TLD | .ae |
ಉತ್ತರ ಅಕ್ಷಾಂಶ 220-26030† ಮತ್ತು ಪೂರ್ವರೇಖಾಂಶ 510-56030† ನಡುವೆ ಇದೆ. ಪೂರ್ವದಲ್ಲಿ ಒಮಾನ್ ಖಾರಿ, ಉತ್ತರದಲ್ಲಿ ಪರ್ಷಿಯನ್ ಖಾರಿ, ಆಗ್ನೇಯದಲ್ಲಿ ಒಮಾನ್ದೇಶ, ಪಶ್ಚಿಮ-ದಕ್ಷಿಣ ಗಳಲ್ಲಿ ಸೌದಿ ಅರೇಬಿಯ ಇದನ್ನು ಸುತ್ತುವರಿದಿವೆ. ರಾಜಧಾನಿ ಅಬುಧಾಬಿ.
ಈ ಅರಬ್ ಸಂಯುಕ್ತ ಪ್ರದೇಶ ಪೂರ್ವಪಶ್ಚಿಮವಾಗಿ 563 ಕಿಮೀ ಉತ್ತರ ದಕ್ಷಿಣವಾಗಿ 402 ಕಿಮೀ ಇದ್ದು 777 ಕಿಮೀ ತೀರ ಪ್ರದೇಶ ಹೊಂದಿದೆ. ಈ ಪ್ರದೇಶದವರೆಲ್ಲ ಅರಬ್ ಮುಸ್ಲಿಮರು. ಅರಾಬಿಕ್ ಇಲ್ಲಿನ ಆಡಳಿತ ಭಾಷೆ. ದುಬೈಯೊಂದು ದೊಡ್ಡ ಬಂದರು ಹಾಗೂ ವ್ಯಾಪಾರ ಕೇಂದ್ರ.