![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/5d/Mohanlal_Viswanathan_BNC.jpg/640px-Mohanlal_Viswanathan_BNC.jpg&w=640&q=50)
ಮೋಹನ್ ಲಾಲ್
ದಕ್ಷಿಣ ಭಾರತೀಯ ನಟ ಮತ್ತು ನಿರ್ಮಾಪಕ / From Wikipedia, the free encyclopedia
ಮೋಹನ್ ಲಾಲ್ (ಮಲಯಾಳಂ:മോഹന്ലാല്) ಎಂಬ ಏಕ ಹೆಸರಿನಿಂದ ಕರೆಯಲ್ಪಡುವ ಮೋಹನ್ ಲಾಲ್ ವಿಶ್ವನಾಥನ್ ನಾಯರ್ (೧೯೬೦ರ ಮೇ ೨೧ರಂದು ಜನಿಸಿದರು)[1] ಒಬ್ಬ ಭಾರತೀಯ ಚಲನಚಿತ್ರ ನಟ ಮತ್ತು ನಿರ್ಮಾಪಕರಾಗಿದ್ದಾರೆ. ಅವರು ಮುಖ್ಯವಾಗಿ ಮಲಯಾಳಂ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು - ಎರಡು ಅತ್ಯುತ್ತಮ ನಟ ಪ್ರಶಸ್ತಿಗಳು, ಒಂದು ವಿಶೇಷ ಜ್ಯೂರಿ ಪ್ರಶಸ್ತಿ ಮತ್ತು ಒಂದು ಅತ್ಯುತ್ತಮ ಚಿತ್ರಕ್ಕಾಗಿ ಪ್ರಶಸ್ತಿ (ನಿರ್ಮಾಪಕರಾಗಿ) ಮೊದಲಾದವನ್ನು ಪಡೆದಿದ್ದಾರೆ. ಕೇರಳದ ಯಾವುದೇ ನಟರಿಗಿಂತ ಹೆಚ್ಚು ಬಾರಿ ಅಂದರೆ ಆರು ಬಾರಿ ಅತ್ಯುತ್ತಮ ನಟ ಕೇರಳ ರಾಜ್ಯ ಪ್ರಶಸ್ತಿಯನ್ನು ಮೋಹನ್ಲಾಲ್ ತಮ್ಮದಾಗಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಾಗಿ ೨೦೦೧ರಲ್ಲಿ ಭಾರತ ಸರ್ಕಾರ ಮೋಹನ್ಲಾಲ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ೨೦೦೯ರಲ್ಲಿ ಅವರು ಪ್ರಾದೇಶಿಕ ಸೈನ್ಯ(ಟೆರಿಟೋರಿಯಲ್ ಆರ್ಮಿ)ದಿಂದ ಲೆಫ್ಟೆನಂಟ್ ಕರ್ನಲ್ ಎಂಬ ಗೌರವ ಸ್ಥಾನವನ್ನು ಪಡೆದರು.[2] ಇದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಒಬ್ಬ ನಟನು ಗೌರವ ಸೈನ್ಯ ಸ್ಥಾನವನ್ನು ಪಡೆಯುವುದರ ಮೊದಲ ನಿದರ್ಶನವಾಗಿತ್ತು. ೨೦೧೦ ರಲ್ಲಿ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಅನ್ನು ನೀಡಿ ಪುರಸ್ಕರಿಸಿತು.[3]