From Wikipedia, the free encyclopedia
ಮೈಸೂರು ಪೇಟ ಮೈಸೂರು ಸಂಸ್ಥಾನದ ರಾಜಮನೆತನದವರು ತೊಡುವ ಭಾರತೀಯ ಉಡುಗೆ-ತೊಡುಗೆಗಳಲ್ಲಿ ಒಂದಾಗಿದೆ. ರಾಜ ಪೋಷಾಕಿನ ಬಣ್ಣಗಳಿಗೆ ಸರಿಹೊಂದುವಂಥ ರೇಷ್ಮೆನೂಲಿನಿಂದ ನೇಯ್ದ ಬಂಗಾರದ ಜರಿಯುಳ್ಳ ರತ್ನಖಚಿತ ಪೇಟ ಅಥವಾ ಮುಂಡಾಸನ್ನು ಮೈಸೂರು ಒಡೆಯರು ಧರಿಸುತ್ತಿದ್ದರು[1] ಮೈಸೂರು ದೀವಾನರು(ರಾಜರಿಂದ ನೇಮಿಸಲ್ಪಟ್ಟ ಪ್ರಧಾನ ಮಂತ್ರಿಗಳು) ಹಾಗು ರಾಜ್ಯಾಡಳಿತದಲ್ಲಿನ ಉನ್ನತ ಅಧಿಕಾರಿಗಳೂ ಸಾರ್ವಜನಿಕ ಭೇಟಿ ಹಾಗು ಸಭೆಗಳಲ್ಲಿ ಮೈಸೂರು ಪೇಟ ತೊಡುತ್ತಿದ್ದರು[1]
೧೯೪೭ರಲ್ಲಿ ಭಾರತವು ಸ್ವತಂತ್ರಗೊಂಡು ಅನೇಕ ಸ್ವತಂತ್ರ ರಾಜ ಸಂಸ್ಥಾನಗಳು ಭಾರತ ಪ್ರಜಾತಾಂತ್ರಿಕ ಒಕ್ಕೂಟಕ್ಕೆ ಸೇರಿದ ನಂತರ, ಸಮಾಜದ ವಿಶೇಷ ವ್ಯಕ್ತಿಗಳನ್ನು ಸಭೆ ಸಮಾರಂಭಗಳಲ್ಲಿ ಗೌರವಿಸಲು ಸಾಂಕೇತಿಕವಾಗಿ ಮೈಸೂರು ಪೇಟ ತೊಡಿಸಿ ಮತ್ತು ಶಾಲನ್ನು ಹೊದಿಸಿ ಸನ್ಮಾನಿಸಲಾಗುತ್ತದೆ.[1]
{{cite web}}
: Check |url=
value (help); Missing or empty |title=
(help)Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.