ಮೈಗ್ರೇನ್ (ಅರೆತಲೆ ನೋವು)
From Wikipedia, the free encyclopedia
Lua error in package.lua at line 80: module 'Module:Pagetype/setindex' not found. ಮೈಗ್ರೇನ್ ಒಂದು ನರವೈಜ್ಞಾನಿಕ ರೋಗಲಕ್ಷಣ, ದೈಹಿಕ ಗ್ರಹಿಕೆಯನ್ನು ವ್ಯತ್ಯಸ್ತಗೊಳಿಸುವ ಇದು ವಿಪರೀತ ತಲೆ ನೋವು ಮತ್ತು ವಾಕರಿಕೆ ಮೊದಲಾದವುಗಳನ್ನು ಉಂಟುಮಾಡುತ್ತದೆ. ಶರೀರ ವೈಜ್ಞಾನಿಕವಾಗಿ 'ಮೈಗ್ರೇನ್ ತಲೆನೋವು' ಒಂದು ನರವೈಜ್ಞಾನಿಕ ಸ್ಥಿತಿ, ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಇದು ಹೆಚ್ಚು. ಪ್ರಾಚೀನ ಫ್ರೆಂಚ್ನ migraigne ನಿಂದ migraine (ಮೈಗ್ರೇನ್) ಪದವನ್ನು ಎರವಲು ಪಡೆಯಲಾಗಿದೆ. (ಮೂಲತಃ "megrim" ಎಂದಿದ್ದ ಪದವನ್ನು 1777ರಲ್ಲಿ ಆಧುನಿಕ ಫ್ರೆಂಚ್ ಮಾದರಿಯಲ್ಲಿ ಮರುಉಚ್ಛಾರಣೆಗೆ ಒಳಪಡಿಸಲಾಯಿತು). ಈ ಫ್ರೆಂಚ್ ಪದ ಹಿಂದಿನ ಲ್ಯಾಟಿನ್ ಪದ hemicrania ಎಂಬ ಸಾಮಾನ್ಯ ಉಚ್ಛಾರಣೆಯಿಂದ ನಿಷ್ಪನ್ನಗೊಂಡಿದೆ. ಈ ಲ್ಯಾಟಿನ್ ಪದವೂ ಗ್ರೀಕ್ನಲ್ಲಿ "ಅರ್ಧ" ಮತ್ತು "ತಲೆಬುರುಡೆ" ಎಂಬರ್ಥವಿರುವ hemikrania ಎಂಬ ಗ್ರೀಕ್ ಪದವನ್ನು ಆಧರಿಸಿದೆ.[1]
Migraine | |
---|---|
Classification and external resources | |
ICD-10 | G43 |
ICD-9 | 346 |
OMIM | 157300 |
DiseasesDB | 8207 (Migraine) 31876 (Basilar) 4693 (FHM) |
MedlinePlus | 000709 |
eMedicine | neuro/218 neuro/517 emerg/230 neuro/529 |
MeSH | D008881 |
ಮೈಗ್ರೇನ್ ತಲೆನೋವು ಏಕಪಾರ್ಶ್ವೀಯವಾಗಿ, ಮಿಡಿಯುತ್ತದೆ ಹಾಗೂ ಇದು 4ರಿಂದ 72 ಗಂಟೆಗಳವರೆಗೆ ಇರುತ್ತದೆ;[2] ರೋಗಲಕ್ಷಣಗಳೆಂದರೆ - ವಾಕರಿಕೆ, ವಾಂತಿ, ಫೋಟೊಫೋಬಿಯ (=ಬೆಳಕಿನ ಭಯ) ಮತ್ತು ಫೋನೊಫೋಬಿಯ (=ದ್ವನಿ ಭಯ).[3][4][5] ಮೈಗ್ರೇನ್ ತಲೆನೋವಿನಿಂದ ಬಳಲುವ ಸರಿಸುಮಾರು ಮೂರನೇ ಒಂದರಷ್ಟು ಮಂದಿ ಅಸಾಮಾನ್ಯ ದೃಷ್ಟಿಯ, ಘ್ರಾಣ ಸಂಬಂಧಿ ಅಥವಾ ಇತರ ಇಂದ್ರಿಯ ಅನುಭವಗಳ ಸೆಳವು ಸೂಚನೆ(aura)ಯನ್ನು ಗ್ರಹಿಸುತ್ತಾರೆ. ಇವು ಮೈಗ್ರೇನ್ ಕಾಣಿಸಿಕೊಳ್ಳುವುದರ ಮುನ್ಸೂಚನಾ ಲಕ್ಷಣಗಳು.[6] ತಲೆನೋವಿಗೆ ನೋವು ಶಾಮಕ, ವಾಕರಿಕೆಗೆ ವಾಂತಿ-ಶಮನಕ್ಕೆ ಔಷಧಗಳನ್ನು ತೆಗೆದುಕೊಳ್ಳುವುದು ಹಾಗೂ ಪ್ರಚೋದಕ ಕಾರಣಗಳಿಂದ ದೂರವಿರುವುದು ಆರಂಭಿಕ ಚಿಕಿತ್ಸೆಯಾಗಿದೆ. ಮೈಗ್ರೇನ್ ತಲೆನೋವಿಗೆ ಕಾರಣ ತಿಳಿದಿಲ್ಲ; ಸಿರೊಟೋನಿನ್ ಸಂಬಂಧಿತ ನಿಯಂತ್ರಣ ವ್ಯವಸ್ಥೆಯಲ್ಲಿನ ಏರುಪೇರು ಇದಕ್ಕೆ ಕಾರಣವೆಂಬುದು ಸಾಮಾನ್ಯವಾಗಿ ಸಿದ್ಧಾಂತ . ಮೈಗ್ರೇನ್ ತಲೆನೋವಿನಲ್ಲಿ ಭಿನ್ನತೆಗಳಿವೆ, ಕೆಲವು ಮಿದುಳುಕಾಂಡ(ಬ್ರೈನ್ಸ್ಟೆಮ್)ದಲ್ಲಿ ಹುಟ್ಟುತ್ತವೆ (ಜೀವಕೋಶಗಳ ನಡುವೆ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಐಯಾನುಗಳ ಸಾಗಣೆ ಸರಿಯಾಗಿರದಿರುವುದು) ಮತ್ತೆ ಕೆಲವು ಆನುವಂಶೀಯವಾಗಿ ಬರುತ್ತವೆ.[7] ಮೈಗ್ರೇನ್ ತಲೆನೋವನ್ನು ಹೆಚ್ಚಿಸುವಲ್ಲಿ 60ರಿಂದ 65 ಪ್ರತಿಶತ ಆನುವಂಶೀಯ ಪ್ರಭಾವವಿದೆ ಎಂಬುದನ್ನು ಅವಳಿಗಳ ಮೇಲೆ ಮಾಡಿದ ಅಧ್ಯಯನಗಳು ಸೂಚಿಸುತ್ತವೆ.[8][9] ಹಾರ್ಮೋನಿನ ಏರಿಳಿತವೂ ಮೈಗ್ರೇನ್ಗೆ ಕಾರಣವಾಗುತ್ತದೆ: 75 ಪ್ರತಿಶತದಷ್ಟು ವಯಸ್ಕ ರೋಗಿಗಳು ಮಹಿಳೆಯರಾಗಿದ್ದಾರೆ, ಆದರೂ ಮೈಗ್ರೇನ್ ಹರೆಯದ ಹುಡುಗ ಮತ್ತು ಹುಡುಗಿಯರಲ್ಲಿ ಸಮ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ; ಮೈಗ್ರೇನ್ ತಲೆನೋವಿನ ಲಕ್ಷಣಗಳು ಗರ್ಭಣಿಯರಲ್ಲಿ ಕಾಣಿಸಿಕೊಳ್ಳುವುದಿಲ್ಲ, ಆದರೂ ಮೈಗ್ರೇನ್ ಇರುವ ಕೆಲವು ಮಹಿಳೆಯರಲ್ಲಿ ಗರ್ಭಿಣಿಯರಾದಾಗಲೂ ಆಗಾಗ ಕಾಣಿಸಿಕೊಳ್ಳುವುದುಂಟು. [ಸೂಕ್ತ ಉಲ್ಲೇಖನ ಬೇಕು]