![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/e/e6/May_Sinclair_001.jpg/640px-May_Sinclair_001.jpg&w=640&q=50)
ಮೇ ಸಿಂಕ್ಲೇರ್
From Wikipedia, the free encyclopedia
ಮೇ ಸಿಂಕ್ಲೇರ್ ಎಂಬ ಕಾವ್ಯನಾಮದಿಂದ ಪ್ರಸಿದ್ದರಾಗಿರುವ ಮೇರಿ ಅಮೆಲಿಯಾ ಸೇಂಟ್ ಕ್ಲೇರವರು ಪ್ರಸಿದ್ದ ಬ್ರಿಟಿಷ್ ಬರಹಗಾರ್ತಿ. ಅವರು ಸುಮಾರು ಎರಡು ಡಜನ್ ಕಾದಂಬರಿಗಳು, ಸಣ್ಣ ಕಥೆಗಳು ಮತ್ತು ಕವಿತೆಗಳನ್ನು ಬರೆದಿದ್ದಾರೆ. ಅವರು ಜನಪ್ರಿಯ ಮತ್ತು ಅತ್ಯಂತ ಸಮೃದ್ಧರಾಗಿದ್ದು, ಹತ್ತೊಂಬತ್ತನೇ ಶತಮಾನದ ಅಂತ್ಯದ ಮತ್ತು ಇಪ್ಪತ್ತನೆಯ ಶತಮಾನದ ಆರಂಭದ ಅವಧಿಯಲ್ಲಿ ಇಪ್ಪತ್ತಮೂರು ಕಾದಂಬರಿಗಳು, ಮೂವತ್ತೊಂಬತ್ತು ಸಣ್ಣ ಕಥೆಗಳು ಹಾಗೂ ಹಲವಾರು ಕವನ ಸಂಗ್ರಹಗಳನ್ನು ಬರೆದ್ದಿದ್ದಾರೆ. ಅವರು ಮತದಾನದ ಹಕ್ಕು ಎಲ್ಲರಿಗೂ ಸಮಾನವಾಗಿ ಸಿಗಬೇಕೆಂದು ಹೋರಾಡಿದರು ಮತ್ತು 'ವುಮನ್ ರೈಟರ್ಸ್ ಸಫ್ರಿಜ್ ಲೀಗ್'ನಲ್ಲಿ ಸದಸ್ಯರಾಗಿದ್ದರು. ಮೇ ಸಿಂಕ್ಲೇರ್ ಆಧುನಿಕ ಕವಿತೆ ಮತ್ತು ಗದ್ಯೆಗಳ ವಿಮರ್ಶಕರಾಗಿದ್ದರು. ಒಬ್ಬ ವಿಮರ್ಶಕರಾಗಿ ಅವರು ಎಜ್ರಾ ಪೌಂಡ್ ಮತ್ತು ಇಮ್ಯಾಜಿಸ್ಟ್ ಕವಿಗಳ ಕೆಲಸಗಳನ್ನು ಮತ್ತು ಕಾದಂಬರಿಕಾರರು ಡೊರೊಥಿ ರಿಚರ್ಡ್ಸನ್ರನ್ನು ಇತರರಲ್ಲಿ ಉತ್ತೇಜಿಸಿದರು. ಡೊರೊಥಿ ರಿಚರ್ಡ್ಸನವರ ಕಾದಂಬರಿ ಅನುಕ್ರಮದ 'ಪಿಲ್ಗ್ರಿಮೇಜ್ನ' (೧೯೧೫-೧೯೬೭) ಮೊದಲ ಸಂಪುಟಗಳನ್ನು ವಿಮರ್ಶಿಸುವಾಗ, ಸಾಹಿತ್ಯಕ ಸನ್ನಿವೇಶದಲ್ಲಿ 'ಸ್ಟ್ರೀಮ್ ಆಫ್ ಕಾನ್ಷಿಯಸ್ನಸ್' ಶಬ್ದದವನ್ನು ಮೊದಲು ಬಳಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಮೇ ಸಿಂಕ್ಲೇರ್ | |
---|---|
![]() ೧೯೧೨ ರಲ್ಲಿ ಮೇ ಸಿಂಕ್ಲೇರ್ | |
ಜನನ | ೨೪ ಆಗಸ್ಟ್ ೧೮೬೩ Rock Ferry, Cheshire |
ಮರಣ | 14 ನವೆಂಬರ್ 1946(1946-11-14) Buckinghamshire, ಇಂಗ್ಲೆಂಡ್ |
ವೃತ್ತಿ | Novelist and poet |