ಮೆಲ್ಬರ್ನ್
From Wikipedia, the free encyclopedia
ಮೆಲ್ಬರ್ನ್ , (/[unsupported input]ˈmɛlbərn/, ಸ್ಥಳೀಯವಾಗಿ [ˈmælbən, -bn̩][3][4]) ವಿಕ್ಟೋರಿಯಾ ರಾಜ್ಯದ ರಾಜಧಾನಿಯಾಗಿದ್ದು, ಅತ್ಯಂತ ಜನಪ್ರಿಯ ನಗರವಾಗಿದೆ, ಹಾಗು ಸಿಡ್ನಿಯ ನಂತರ ಆಸ್ಟ್ರೇಲಿಯಾದ ಎರಡನೇ ಅತ್ಯಂತ ಜನಪ್ರಿಯ ನಗರವೆನಿಸಿದೆ.[2] ಮೆಲ್ಬರ್ನ್ ಸಿಟಿ ಸೆಂಟರ್("ಸೆಂಟ್ರಲ್ ಬಿಸ್ನೆಸ್ ಡಿಸ್ಟ್ರಿಕ್ಟ್" ಅಥವಾ "CBD" ಎಂದೂ ಸಹ ಕರೆಯಲ್ಪಡುತ್ತದೆ)[5] ವಿಸ್ತಾರವಾದ ಭೌಗೋಳಿಕ ಪ್ರದೇಶದ ಪ್ರಮುಖ ಕೇಂದ್ರಭಾಗ (ಅಥವಾ "ಮೆಟ್ರೋಪಾಲಿಟನ್ ಪ್ರದೇಶ") ಹಾಗು ಜನಗಣತಿಯ ಸಂಖ್ಯಾಶಾಸ್ತ್ರೀಯ ವಿಭಾಗವೆನಿಸಿದೆ—ಹಾಗು ಇವೆಲ್ಲವಕ್ಕೂ "ಮೆಲ್ಬರ್ನ್" ಎಂಬುದು ಸಾಮಾನ್ಯ ಹೆಸರಾಗಿದೆ. ಜೂನ್ ೨೦೦೯ರವರೆಗೂ, ವಿಸ್ತಾರವಾದ ಭೌಗೋಳಿಕ ಪ್ರದೇಶವು ಸರಿಸುಮಾರು ನಾಲ್ಕು ದಶಲಕ್ಷ ಜನಸಂಖ್ಯೆಯನ್ನು ಹೊಂದಿತ್ತು.[1][6] ಮೆಲ್ಬರ್ನ್ ನ ನಿವಾಸಿಗಳನ್ನು ಮೇಲ್ಬರ್ನಿಯನ್ಸ್ ಎಂದು ಕರೆಯಲಾಗುತ್ತದೆ.[7]
Melbourne Victoria | |||||||||
---|---|---|---|---|---|---|---|---|---|
Coordinates | 37°48′49″S 144°57′47″E | ||||||||
Population | 4,077,036(Metropolitan area)[1] (2nd) | ||||||||
• Density | ೧,೫೬೬/km2 (4,060/sq mi) (Urban area; 2006)[2] | ||||||||
Established | 30 August 1835 | ||||||||
Elevation | 31 m (102 ft) | ||||||||
Area | ೮,೮೦೬ km2 (೩,೪೦೦�0 sq mi)(LGAs total) | ||||||||
Time zone | AEST (UTC+10) | ||||||||
• Summer (DST) | AEDT (UTC+11) | ||||||||
LGA(s) | 31 Municipalities across Greater Melbourne | ||||||||
County | Grant, Bourke, Mornington | ||||||||
State electorate(s) | 54 electoral districts and regions | ||||||||
Federal Division(s) | 23 Divisions | ||||||||
|
ಮಹಾನಗರವು, ಪೋರ್ಟ್ ಫಿಲಿಪ್ ಎಂದು ಕರೆಯಲ್ಪಡುವ ದೊಡ್ಡದಾದ ನೈಸರ್ಗಿಕ ಕೊಲ್ಲಿಯಲ್ಲಿ ಸ್ಥಿತವಾಗಿದೆ, ಜೊತೆಗೆ ನಗರದ ಹೃದಯಭಾಗವು ಯಾರ್ರ ನದಿಯ ನದಿಮುಖದಲ್ಲಿ ಸ್ಥಾಪಿತವಾಗಿದೆ(ಇದು ಕೊಲ್ಲಿಯ ಉತ್ತರ-ದಿಕ್ಕಿನಲ್ಲಿ ಸ್ಥಿತವಾಗಿದೆ).[5] ಮಹಾನಗರ ಪ್ರದೇಶವು ನಂತರದಲ್ಲಿ ನಗರದ ಮಧ್ಯಭಾಗದಿಂದ ಪೋರ್ಟ್ ಫಿಲಿಪ್ ನ ಪೂರ್ವ ಹಾಗು ಪಶ್ಚಿಮ ತೀರ ರೇಖೆಗಳೊಂದಿಗೆ ದಕ್ಷಿಣಕ್ಕೆ ವಿಸ್ತರಿಸುತ್ತದೆ, ಹಾಗು ಒಳನಾಡಿಗೆ ವಿಸ್ತರಣೆಯನ್ನು ಹೊಂದುತ್ತದೆ. ನಗರದ ಹೃದಯಭಾಗವು ಮೆಲ್ಬರ್ನ್ ನಗರವೆಂದು ಕರೆಯಲ್ಪಡುವ ಪುರಸಭೆಯಲ್ಲಿ ಸ್ಥಿತವಾಗಿ, ಹಾಗು ಮೆಟ್ರೋಪಾಲಿಟನ್ ಪ್ರದೇಶವು ೩೦ಕ್ಕೂ ಹೆಚ್ಚಿನ ಪುರಸಭೆಗಳನ್ನು ಒಳಗೊಂಡಿದೆ.[8]
ಮೆಲ್ಬರ್ನ್ ನಗರವು ೧೮೩೫ರಲ್ಲಿ (ಆಸ್ಟ್ರೇಲಿಯಾದಲ್ಲಿ ಯುರೋಪಿಯನ್ನರು ನೆಲೆಗೊಂಡ೪೭ ವರ್ಷಗಳ ನಂತರ) ವ್ಯಾನ್ ಡಿಯೇಮೆನ್'ಸ್ ಲ್ಯಾಂಡ್ ನ ನೆಲೆಗಾರರು ಸ್ಥಾಪಿಸಿದರು.[9] ಇದಕ್ಕೆ ೧೮೩೭ರಲ್ಲಿ ಗವರ್ನರ್ ರಿಚರ್ಡ್ ಬೌರ್ಕೆ, ಮೆಲ್ಬರ್ನ್ ನ ಎರಡನೇ ವೈಕೌಂಟ್(ಅರ್ಲ್ ಗೂ, ಬ್ಯಾರನ್ ಗೂ ನಡುವಣ ಅಂತಸ್ತಿನ ಬ್ರಿಟಿಶ್ ವರಿಷ್ಠ) ವಿಲ್ಲಿಯಮ್ ಲ್ಯಾಂಬ್ ರ ಗೌರವಾರ್ಥವಾಗಿ ಈ ಹೆಸರನ್ನು ಇರಿಸಿದರು.[9] ಮೆಲ್ಬರ್ನ್ ನನ್ನು ಒಂದು ನಗರವೆಂದು ೧೮೪೭ರಲ್ಲಿ ರಾಣಿ ವಿಕ್ಟೋರಿಯಾ ಅಧಿಕೃತವಾಗಿ ಘೋಷಿಸಿದಳು.[10] ೧೮೫೧ರಲ್ಲಿ, ವಿಕ್ಟೋರಿಯಾದಲ್ಲಿ ಹೊಸದಾಗಿ ನಿರ್ಮಾಣಗೊಂಡಿದ್ದ ವಸಾಹತು ನೆಲೆಯ ರಾಜಧಾನಿ ನಗರವಾಯಿತು.[10] ೧೮೫೦ರಲ್ಲಿ ನಡೆದ ವಿಕ್ಟೋರಿಯನ್ ಗೋಲ್ಡ್ ರಷ್ ನ ಅವಧಿಯಲ್ಲಿ, ಇದನ್ನು ವಿಶ್ವದ ಅತ್ಯಂತ ದೊಡ್ಡ ಹಾಗು ಶ್ರೀಮಂತ ನಗರವಾಗಿ ಮಾರ್ಪಡಿಸಲಾಯಿತು.[11] ೧೯೦೧ರಲ್ಲಿ ಆಸ್ಟ್ರೇಲಿಯಾ ಒಕ್ಕೂಟವು ರಚನೆಯಾದ ನಂತರ, ಇದು ೧೯೨೭ರವರೆಗೂ ಆಸ್ಟ್ರೇಲಿಯಾ ರಾಷ್ಟ್ರದಲ್ಲಿ ಹೊಸತಾಗಿ ನಿರ್ಮಾಣಗೊಂಡಿದ್ದ ಸರ್ಕಾರದ ಹಂಗಾಮಿ ಪೀಠವಾಗಿ ಕಾರ್ಯ ನಿರ್ವಹಿಸಿತು.[12]
ಇಂದು ನಗರವು, ಕಲೆ, ವಾಣಿಜ್ಯ, ಶಿಕ್ಷಣ, ಮನರಂಜನೆ, ಕ್ರೀಡೆ ಹಾಗು ಪ್ರವಾಸದ ಕೇಂದ್ರಬಿಂದುವಾಗಿದೆ. ಇದು ಸಾಂಸ್ಕೃತಿಕ ಸಂಸ್ಥೆಗಳಾದ ಆಸ್ಟ್ರೇಲಿಯನ್ ಚಲನಚಿತ್ರ,(ಜೊತೆಗೆ ವಿಶ್ವದ ಮೊದಲ ಚಲನಚಿತ್ರದ ಮೂಲ ತಾಣವಾಗಿದೆ),[13][14] ಆಸ್ಟ್ರೇಲಿಯನ್ ದೂರದರ್ಶನ,[15] ಆಸ್ಟ್ರೇಲಿಯನ್ ರೂಲ್ಸ್ ಫುಟ್ಬಾಲ್,[16] ಆಸ್ಟ್ರೇಲಿಯನ್ ಚಿತ್ತಪ್ರಭಾವ ನಿರೂಪಣಾವಾದಿ ಕಲಾ ಚಳವಳಿ(ಇದು ಹೆಯಿಡೆಲ್ಬರ್ಗ್ ಪರಂಪರೆ ಎಂದು ಪರಿಚಿತವಾಗಿದೆ)[17] ಹಾಗು ಆಸ್ಟ್ರೇಲಿಯನ್ ನೃತ್ಯ ಶೈಲಿಗಳ(ಉದಾಹರಣೆಗೆ ನ್ಯೂ ವೋಗ್ ಹಾಗು ಮೆಲ್ಬರ್ನ್ ಶಫ್ಫಲ್) ಗಳ ಉಗಮಸ್ಥಾನವಾಗಿದೆ.[18][19] ಇದು ಸಮಕಾಲೀನ ಹಾಗು ಸಾಂಪ್ರದಾಯಿಕ ಆಸ್ಟ್ರೇಲಿಯನ್ ಸಂಗೀತಕ್ಕೂ ಸಹ ಪ್ರಮುಖ ಕೇಂದ್ರವೆನಿಸಿದೆ.[18] ಇದನ್ನು ಸಾಮಾನ್ಯವಾಗಿ "ಆಸ್ಟ್ರೇಲಿಯಾದ ಸಾಂಸ್ಕೃತಿಕ ರಾಜಧಾನಿ" ಎಂದು ಸೂಚಿಸಲಾಗುತ್ತದೆ.[20]
ಇಕನಾಮಿಸ್ಟ್ ಗ್ರೂಪ್ ನ ಇಂಟೆಲಿಜೆನ್ಸ್ ಯೂನಿಟ್ ನಡೆಸಿದ ಸಮೀಕ್ಷೆಯ ಪ್ರಕಾರ, ಮೆಲ್ಬರ್ನ್ ಮೂರು ವಿಶ್ವದ ಅತ್ಯಂತ ವಾಸಯೋಗ್ಯ ನಗರಗಳಲ್ಲಿ ಒಂದೆನಿಸಿದೆ(೨೦೦೨ರಿಂದೀಚೆಗೆ),[21][22][23][24] RMITನ ಗ್ಲೋಬಲ್ ಯೂನಿವರ್ಸಿಟಿ ಸಿಟೀಸ್ ಇಂಡೆಕ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ ಅಗ್ರ ೧೦ ಗ್ಲೋಬಲ್ ಯೂನಿವರ್ಸಿಟಿ ನಗರವೆಂದು ಪರಿಚಿತವಾಗಿದೆ(೨೦೦೬ರಿಂದೀಚೆಗೆ)[25][26][27] ಹಾಗು ೨ಥಿಂಕ್ ನೌ ಗ್ಲೋಬಲ್ ಇನೋವೇಷನ್ ಏಜೆನ್ಸಿ ಪ್ರಕಾರ ಅಗ್ರ ೨೦ ಗ್ಲೋಬಲ್ ಇನೋವೇಷನ್ ನಗರವೆಂದು ಪ್ರಸಿದ್ದವಾಗಿದೆ (೨೦೦೭ರಿಂದೀಚೆಗೆ).[28][29][30][31] ಈ ಮಹಾನಗರವು ವಿಶ್ವದ ಅತ್ಯಂತ ದೊಡ್ಡ ಟ್ರಾಮ್(ರಸ್ತೆ ರೈಲು ಕಂಬಿ) ವ್ಯವಸ್ಥೆಗೂ ಸಹ ತವರೆನಿಸಿದೆ.[32] ಮೆಲ್ಬರ್ನ್ ಗೆ ಪ್ರಯಾಣ ಸೇವೆಯನ್ನು ಒದಗಿಸುವ ಮುಖ್ಯ ವಿಮಾನ ನಿಲ್ದಾಣವೆಂದರೆ ಮೆಲ್ಬರ್ನ್ ವಿಮಾನ ನಿಲ್ದಾಣ.