![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/0/0f/Flag_of_Maldives.svg/langkn-640px-Flag_of_Maldives.svg.png&w=640&q=50)
ಮಾಲ್ಡೀವ್ಸ್
From Wikipedia, the free encyclopedia
ಮಾಲ್ಡೀವ್ಸ್ (ಧಿವೇಹಿ ಭಾಷೆ:ދިވެހިރާއްޖެ ಧಿವೆಹಿ ರಾಜೆ)ಅಥವಾ ಮಾಲ್ಡೀವ್ಸ್ ದ್ವೀಪಗಳು ಅಧಿಕೃತವಾಗಿ ಮಾಲ್ಡೀವ್ಸ್ ಗಣರಾಜ್ಯ, ಇದು ಹಿಂದೂ ಮಹಾಸಾಗರದಲ್ಲಿರುವ ದ್ವೀಪಗಳ ದೇಶ. ಭಾರತದ ಲಕ್ಷದ್ವೀಪದ ಎರಡು ಭಾಗದಲ್ಲಿ ದಕ್ಷಿಣೋತ್ತರವಾಗಿ ಇರುವ ಮಿನಿಕೊಯ್ ದ್ವೀಪ ಮತ್ತು ಚಾಗೋಸ್ ಆರ್ಚಿಪೆಲಾಗೊಗಳ ಮಧ್ಯೆ ಇಪ್ಪತ್ತಾರು ಹವಳದ್ವೀಪಗಳು ದ್ವಿಮುಖ ಸರಪಳಿಯ ರೂಪದಲ್ಲಿ ಹರಡಿಕೊಂಡಿವೆ. ಇದು ಲಕ್ಯಾಡಿವ್ ಸಮುದ್ರದಲ್ಲಿದೆ, ಶ್ರೀಲಂಕಾದ ನೈಋತ್ಯ ಭಾಗದಲ್ಲಿ ಸುಮಾರು ಏಳು ನೂರು ಕಿ.ಮೀ (435 mi)ದೂರದಲ್ಲಿದೆ.
ಮಾಲ್ಡೀವ್ಸ್ ಗಣರಾಜ್ಯ ދިވެހިރާއްޖޭގެ ޖުމްހޫރިއްޔާ ಮಾಲ್ಡೀವ್ಸ್ ಗಣರಾಜ್ಯ (Divehi Rājjey ge Jumhuriyyā) | |
---|---|
Anthem: Qaumii salaam "ರಾಷ್ಟ್ರದ ಏಕತೆಯೊಂದಿಗೆ ನಾವು ರಾಷ್ಟ್ರವನ್ನು ವಂದಿಸುವೆವು" | |
![]() | |
Capital and largest city | ಮಾಲೆ |
Official languages | ಧಿವೇಹಿ ಭಾಷೆ |
Ethnic groups (2001) | ≈98% Mahls (Divehin) ≈2% Others (Foreign labourers) |
Demonym(s) | Maldivian |
Government | ಅಧ್ಯಕ್ಷೀಯ ಗಣತಂತ್ರ |
• ರಾಷ್ಟ್ರಪತಿ | ಮೊಹ್ಮದ್ ನಶೀದ್ |
• ಮಾಲ್ಡೀವ್ಸ್ನ ಉಪರಾಷ್ಟ್ರಪತಿ | ಮೊಹಮ್ಮದ್ ವಹೀದ್ ಹಸ್ಸನ್ |
• ಮಜ್ಲಿಸ್ನ ಸ್ಪೀಕರ್ | ಅಬ್ದುಲ್ಲಾ ಶಹೀದ್ |
• ಮುಖ್ಯ ನ್ಯಾಯಾಧೀಶ | ಅಬ್ದುಲ್ಲಾ ಸಯೀದ್ |
ಸ್ವಾತಂತ್ರ್ಯ | |
• ಯುನೈಟೆಡ್ ಕಿಂಗ್ಡಂನಿಂದ | 26 ಜುಲೈ 1965 |
• Water (%) | ಅತ್ಯಲ್ಪ |
Population | |
• ೨೦೦೯ estimate | 396,334[1] (176ನೆಯ1) |
• 2006 census | 298,842[2] |
GDP (PPP) | ೨೦೦೮ರ estimate |
• Total | $1.713 ಶತಕೋಟಿ[3] |
• Per capita | $4,967[3] |
GDP (nominal) | 2008 estimate |
• Total | $1.261 ಶತಕೋಟಿ[3] |
• Per capita | $3,654[3] |
HDI (2007) | ![]() Error: Invalid HDI value · 95th |
Currency | Maldivian Rufiyaa (MVR) |
Time zone | UTC+5 |
Driving side | left |
Calling code | 960 |
Internet TLD | .mv |
ಮಾಲ್ಡೀವ್ಸ್ನ ಹವಳದ್ವೀಪ 90,೦೦೦ ಚದರ ಕಿ.ಮೀ ಭೂಪ್ರದೇಶದಲ್ಲಿ ಹರಡಿಕೊಂದಿದೆ, ಇದು ಜಗತ್ತಿನ ಅತ್ಯಂತ ವಿಭಿನ್ನವಾದ ದೇಶವಾಗಿ ಗುರುತಿಸಿಕೊಂಡಿದೆ. ಇದು ಮುಖ್ಯವಾಗಿ ಎರಡುನೂರು ವಸಾಹತುಗಳನ್ನು ಹೊಂದಿದ 1,192 ಕಿರು ದ್ವೀಪಗಳನ್ನು ಒಳಗೊಂಡಿದೆ.[5] ಮಾಲ್, ಮಾಲ್ಡೀವ್ಸ್ ಗಣರಾಜ್ಯದ ರಾಜಧಾನಿ ಹಾಗೂ ದೊಡ್ಡ ನಗರ ,(2006)ರ ಗಣತಿ ಪ್ರಕಾರ 103,693 ಜನಸಂಖ್ಯೆ ಹೊಂದಿದೆ. ಇದು ಕಾಪು ಹವಳದ್ವೀಪದಲ್ಲಿ ಉತ್ತರ ಮಲ್ ಹವಳದ್ವೀಪದ ದಕ್ಷಿಣದ ತುದಿಯಲ್ಲಿದೆ. ಇದು ಮಾಲ್ಡೀವ್ಸ್ನ ಆಡಳಿತದ ವಿಭಾಗವೂ ಆಗಿದೆ. ಪಾರಂಪರಿಕವಾಗಿ ಇದು ರಾಜರ ದ್ವೀಪವಾಗಿದ್ದು ಪುರಾತನ ಮಾಲ್ಡೀವ್ಸ್ ರಾಜವಂಶದದಿಂದ ಆಳ್ವಿಕೆ ನಡೆಸಲ್ಪಟ್ಟಿತ್ತು. ಅರಮನೆ ಇದ್ದ ಸ್ಥಳವಾಗಿತ್ತು.
ಮಾಲ್ಡೀವ್ಸ್, ಜನಸಂಖ್ಯೆ ಹಾಗೂ ಭೂಪ್ರದೇಶ ಎರಡರಲ್ಲೂ ಏಷ್ಯಾದ ಸಣ್ಣ ದೇಶವಾಗಿದೆ. 1.5 metres (4 ft 11 in)ಜೊತೆಗೆ ಭೂಗ್ರಹದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ ಅತ್ಯಂತ ತಳಮಟ್ಟದಲ್ಲಿರುವ ದೇಶವಾಗಿದೆ.[6] ಇದು ಜಗತ್ತಿನಲ್ಲಿಯೇ ಅತಿ ತಳಮಟ್ಟದ ಎತ್ತರದ ಪ್ರದೇಶವನ್ನು ಹೊಂದಿದ ದೇಶವಾಗಿದೆ.2.3 metres (7 ft 7 in)[6]