ದೇಹದ ಕಣಗಳಿಗೆ ಆಹಾರ ಮತ್ತು ಆಮ್ಲಜನಕಗಳನ್ನು ಒದಗಿಸುವ ವ್ಯವಸ್ಥೆಯೇ ರಕ್ತಸಂಚಲನೆ ಅಥವಾ ರಕ್ತಪರಿಚಲನೆ. ಆದಿ ಜೀವಿಗಳಾದ ಏಕಕಣ ಜೀವಿಗಳಲಿ,್ಲ ಆ ಒಂದು ಕಣವೇ ಹೊರಗಿಂದ ತನಗೆ ಬದುಕಲು ಬೇಕಾದ ಆಹಾರವನ್ನೂ ಆಮ್ಲಜನಕವನ್ನೂ ಹೀರಿಕೊಂಳ್ಳುತ್ತದೆ; ಹಾಗೆಯೇ ತನಗೆ ಬೇಡವಾದ ಇಂಗಾಲಾಮ್ಲ ಮತ್ತು ಕಶ್ಮಲಗಳನ್ನು ತನ್ನಕೋಶದಿಂದ ಹೊರಹಾಕುತ್ತದೆ. ಮುಂದೆ ವಿಕಾಸಗೊಂಡಂತೆ ಕೆಳ ತರಗತಿಯ ಜೀವಿಗಳಲ್ಲಿ ದೇಹದ ಅಂಗಾಂಗಳ ಜೀವಕಣಗಳಿಗೆ ಆಹಾರವನ್ನೂ ಆಮ್ಲಜನಕವನ್ನೂ ಒದಗಿಸುವ ಕೆಲಸವನ್ನು ಮತ್ತು ನಷ್ಟವಾದ ಕಣಗಳನ್ನೂ ಕಶ್ಮಲಗಳನ್ನೂ, ಆಮ್ಲಜನಕ ದಹಿಸಿ ಉಂಟಾದ ಇಂಗಾಲಾಮ್ಲವನ್ನೂ ಹೊರಕ್ಕೆ ಸಾಗಿಸುವ ಕೆಲಸವನ್ನು ರಕ್ತನಾಳಗಳು ಮಾಡುವುವು. ಯಾವತ್ತೂ ಪ್ರಾಣಿಗಳಲ್ಲಿ ಸಂಚರಿಸುವ ರಕ್ತದ್ರವ್ಯವು ಈ ಪ್ರಾಮುಖ್ಯ ಕೆಲಸಕ್ಕಾಗಿಯೇ ದೇಹದ ಎಲ್ಲೆಡೆಗಳಿಗೂ ಸಂಚರಿಸುವ ವ್ಯವಸ್ಥೆ ರೂಪುಗೊಂಡಿದೆ. ಈ ವ್ಯವಸ್ಥೆ ಹುಳು, ಕ್ರಿಮಿ, ಕೀಟ, ಪಶು ಪಕ್ಷಿ ಮೊದಲಾದ ಎಲ್ಲ ಜೀವಿಗಲಲ್ಲಿ ಕಾಣಬಹುದು.
ರಕ್ತನಾಳಗಳ ಹೆಸರುಗಳನ್ನು ಕನ್ನಡದಲ್ಲಿ ಬರೆದರೆ ಅಥವಾ ಭಾಷಾಂತರಿಸಿದರೆ, ಅರ್ಥವಾಗುವುದಿಲ್ಲವೆಂದು ಇಂಗ್ಲಿಷ್ ಬಾಷೆಯಲ್ಲಿಯೇ ಕೊಟ್ಟಿದೆ.
More information ನಾಳಗಳ ಹೆಸರು ...
ನಾಳಗಳ ಹೆಸರು
1.Subclavian artery
2.Subclavian vein
3.Cephalic vein
4.Axillary vein
5.Axillary artery
6.Aorta
7. Superior vena cava
8.Inferior Vena cava
9.Descending Aorta
10.Branchial artery
11.Basilic vein
12.Median cubital vein
13Cephalic vein
14.Ulnar artery
15.Radial artery
16.Palmar digital veins
17.Digital artery
18.Acuate Artery
19.Dorsal Digital Arteries
20. Basilar artery
21. Internal carotid artery
22. External carotid artery
23. External jugular vein
24. Internal jugular vein
25. Vertebral arteries
26. Common carotid arteries
27. Pulmonary arteries
28. Pulmonary veins
29. Heart
30. Celiac trunk
31. Hepatic vein
32. Renal veins
33. Renal artery
34. Gonadal vein
35. Gonadal artery
36. Common iliac vein
37. Common iliac arteryI
38. nternal iliac artery
39. Internal iliac vein
40. External iliac vein
41. External iliac artery
42. Great saphenous vein
43. Femoral artery
44. Femoral vein
45. Popliteal artery
46. Popliteal vein
47. Small saphenous vein
48. Anterior tibial artery
49. Posterior tibial artery
50. Peroneal artery
51. Anterior / posterior tibial veins
52. Dorsal venous arch
53. Dorsal digital vein
Close
ಜೀವಿಗಳ ದೇಹವು ನಾನಾ ಬಗೆಯ ಜೀವಕಣಗಳಿಂದ ಆಗಿದೆ. ಅವು ಜೀವದಿಂದಿರಲು ಮತ್ತು ಕೆಲಸಮಾಡಲು ಇಂಧನವಾಗಿ ಆಮ್ಲಜನಕ ಮತ್ತ ಇತರ ಬಗೆಯ ಆಹಾರ ದ್ರವ್ಯಗಳ ಸತತ ಪೂರಣವನ್ನು ಬಯಸುತ್ತವೆ. ಅವುಗಳನ್ನು ಸತತವಾಗಿ ಅವಕ್ಕೆ ಒದಗಿಸಬೇಕು. ಇದು ರಕ್ತ ಚಲನಾ ವ್ಯವಸ್ಥೆಯ ಮೊದಲ ಏರ್ಪಾಟು.
ಹಾಗೆ ಅವು ಸತತ ಆಮ್ಲಜನಕವನ್ನು ಬಳಸಿಕೊಂಡಾಗ ಇಂಗಾಲಾಮ್ಲವೆಂಬ ಬೇಡದ ಅನಿಲ ಬಿಡುಗಡೆಯಾಗುತ್ತದೆ, ಹಾಗೆಯೇ ದೇಹದ ಕಣಗಳಿಗೆ ಬೇಡವಾದ ಇತರೆ ಕಶ್ಮಲಗಳೂ ಉಂಟಾಗುವುದು. ಅವುಗಳನ್ನೆಲ್ಲಾ ಹೊರಕ್ಕೆ ಸಾಗಿಸಬೇಕು. ಇದು ವ್ಯವಸ್ಥೆಯ ಎರಡನೆಯ ವಿಷಯ.
ಇದಕ್ಕೆ ದೇಹದ ವಿವಿಧ ಭಾಗಗಳಿಗೆ ರಕ್ತನಾಳಗಳ ಮೂಲಕ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ತಳ್ಳುವ ವ್ಯವಸ್ಥೆ ಎಂಬುದು ಮೂರನೆಯದು.
ಇಂಗಾಲಾಮ್ಲ- ಕಶ್ಮಲಗಳನ್ನು ಹೀರಿಕೊಂಡು ಅಶುದ್ಧಗೊಂಡ ರಕ್ತವನ್ನು ಶುದ್ಧ ರಕ್ತವನ್ನಾಗಿ ಮಾರ್ಪಡಿಸುವುದು ನಾಲ್ಕನೆಯ ವ್ಯವಸ್ಥೆ.
ಹೀಗೆ ರಕ್ತ ಪರಿಚಲನೆ ಅಥವಾ ಸಂಚಲನೆ ನಾಲ್ಕು ಏರ್ಪಾಟುಗಳನ್ನು ಒಳಗೊಂಡಿದೆ.
ನಮಗೆ ಈ ರಕ್ತ ಪರಿಚಲನೆಯೆಂಬ ಸೂಕ್ಷ್ಮ ಏರ್ಪಾಟಿನ ವಿಷಯ ಸರಿಯಾಗಿ ತಿಳಿದು ಬಂದುದು ಕೇವಲ 400ವರ್ಷಗಳ ಹಿಂದೆ. ಇಂಗ್ಲೆಂಡಿನ ವೈದ್ಯನಾದ ವಿಲಿಯಂ ಹಾರ್ವೆ ((1578-1657) ಎಂಬುವವನಿಂದ. ಅವನಿಗಿಂತ ಸ್ವಲ್ಪ ಮೊದಲು ಮೈಕೇಲ್ ಸರ್ವೇಟಿಸ್ ಎಂಬ ಸ್ಪೇನಿಶ್ ವೈದ್ಯ ರಕ್ತವು ಸ್ವಾಶಕೋಶಗಳಿಗೂ ಹೃದಯಕ್ಕೂ ಆಗಾಗ ಹೋಗಿ ಬರುತ್ತದೆ ಎಮದು ತಿಲಿಸಿದ್ದ. ನಮ್ಮ ದೇಹದಲ್ಲಿ ಎಲ್ಲಿ ಚುಚ್ಚಿದರೂ ರಕ್ತ ಬಂದರೂ ಅದರ ಕೆಲಸವೇನು,ಶ್ವಾಸಕೋಶಕ್ಕೂಅದಕ್ಕೂ ಏನು ಸಂಬಂಧ ಎಂದು ತಿಳಿಯಲು 16ನೇಶತಮಾದವರೆಗೂ ಮಾನವ ಕಾಯಬೇಕಾಯಿತು.
ಡಾ ಹಾರ್ವೆ ಕಪ್ಪೆ, ಏಡಿ, ನಾಯಿ, ಹಂದಿ ಮೊದಲಾದ ಪ್ರಾಣಿಗಳ ಶರೀರ ವಿಚ್ಛೇದನ ಮಾಡಿ ರಕ್ತದ್ರವ್ಯ ದೇಹದಲ್ಲಿ ಸದಾಸಂಚರಿಸುತ್ತಲೇ ಇರುವುದೆಂದು ಕಂಡುಕೊಂಡ. ಹೃದಯ ಸಂಕುಚಿದಾಗ/ಮುದುಡಿದಾಗ ರಕ್ತಹೃದಯದಿಂದ ಮುಂದಕ್ಕೆ ಸಾಗುತ್ತದೆ; ಮತ್ತು ಒಂದು ಗಂಟೆಯಲ್ಲಿ ಹೃದಯವು 1000ಬಾರಿಯಾದರೂ ರಕ್ತವನ್ನು ಹೊರಕ್ಕೆ ತಳ್ಳುತ್ತಿರುತ್ತದೆ ಎಂದು ತಿಳಿಗುಕೊಂಡ. ಹಾಗೆ ಹೊರಗೆ ತಳ್ಳಲ್ಪಟ್ಟ ರಕ್ತ ಪುನಹ ಹೃದಯಕ್ಕೆ ಬಂದೇ ತಿರಬೇಕಾಗುವುದು ಎಂದು ತೀರ್ಮಾನಿಸಿದ. ಹೃದಯ ಹೋಗಿ ಅಲ್ಲಿಂದ ಹೃದಯಕ್ಕೆ ಮರಳಿಬಂದು ಅನಂತರ ದೇಹದ ವಿವಿಧ ಭಾಗಗಳಿಗೆ ಪಸರಿಸುತ್ತದೆ. ಅದು ದೇಹದ ಎಲ್ಲ ಭಾಗಗಳಿಗೆ ಮುಟ್ಟಿ ಅವಕ್ಕೆಬೇಕಾದ ಆಹಾರ ಪದಾರ್ಥಗಳನ್ನೊದಗಿಸಿ ಅವು ಕೊಉವ ಕಶ್ಮಲ ವಸ್ತುಗಳನ್ನು ಸ್ವೀಕರಿಸಿ ಮರಳಿ ಹೃದಯಕ್ಕೇ ಬರುತ್ತದೆ; ಅಲ್ಲಿಂದ ಶುದ್ಧಗೊಳ್ಳಲು ಶೌಅಸಕೋಶಗಳಿಗೆ ಹೋಗುತ್ತದೆ ಎಂದು ಡಾ. ಹಾರ್ವೆ ಪ್ರಥಮ ಬಾರಿಗೆ ಜಗತ್ತಿಗೆ ತಿಳಿಸಿದ. ಹೀಗೆ ಹೃದಯದ ಮತ್ತು ರಕ್ತದ ಪ್ರಾಮುಖ್ಯತೆ ಜನರಿಗೆ ತಿಳಿಯಿತು.
ರಕ್ತವಿಲ್ಲದಿದ್ದರೆ ಮಾನವನ (ಯಾವುದೇ ಪ್ರಾಣಿಯ) ದೇಹದ ಯಾವ ಅಂಗಗಳೂ ಕೆಲಸ ಮಾಡಲಾರವು. ಹೃದಯ ಚಲನೆ ಇಲ್ಲದೆ ನಿಂತರೆ - ಹಾಗೆ ರಕ್ತ ಸಂಚಲನೆಯಾಗದೇ ಹೋದರೆ ಮಾನವ ಅಥವಾ ಪ್ರಾಣಿ ಸತ್ತುಹೋಗಬಹುದು. ಯಾವುದಾದರೂ ಅಂಗಕ್ಕೆ ರಕ್ತ ಕೆಲವು ಸಮಯ ಪೂರೈಕೆಯಾಗದಿದ್ದರೆ ಅದು ನಿಷ್ಕ್ರಿಯವಾಗಬಹುದು. ಅದೂ ಮೆದುಳಿಗೆ ಮೂರು ನಾಲ್ಕು ನಿಮಿಷ ರಕ್ತ ಹೋಗದಿದ್ದರೆ ಅದರ ಜೀವಕೋಶಗಳು ಚೇತರಿಸಿಕೊಳ್ಳದಷ್ಟು ಹಾನಿಗೊಳ್ಳಬಹುದು. ಹೀಗೆ ಪ್ರತಿಕ್ಷಣದಲ್ಲೂ ಮಾನವನ ಅಂಗಾಂಗಳಲ್ಲಿರುವ ಜೀವಕೋಶಗಳಿಗೆ ಆಹಾರ ಪೂರೈಕೆ ಮಾಡಲು ರಕ್ತ ಸಂಚರಿಸುತ್ತಲೇ ಇರಬೇಕು. ಗರ್ಭಾವಸ್ಥೆಯಿಂದ ಹಿಡಿದು ಮನುಷ್ಯ ಸಾಯುವ ವರೆಗೂ ಸತತ ರಕ್ತ ದೇಹದಲ್ಲಿ ಹರಿಯುತ್ತಿರಬೇಕು. ಈ ಪ್ರಮುಖವಾದ ರಕ್ಕವನ್ನು ತಳ್ಳುತ್ತಾ ಸತತ ಚಲನೆಯಲ್ಲಿಡುವ ಯಂತ್ರ ವಿಶೇಷವೇ ಹೃದಯ.
ಮೇಲ್ತರದ ಪ್ರಾಣಿಗಳಲ್ಲಿ ರಕ್ತ ಸಂಚರಿಸುವ ವ್ಯವಸ್ಥೆಯೆಂಬುದು ರಕ್ತವನ್ನು ಕಳಿಸುವ ಮತ್ತು ತರಿಸುವ ಎರಡು ಬಗೆಯ ಏಪಾಟು. ದೇಹದ ಅಂಗಾಂಗಳಿಗೆ ಆಹಾರ ಆಮ್ಲಜನಕ ಇವುಗಳನ್ನು ಒದಗಿಸಲು ಕಳಿಸುವ ಏರ್ಪಾಟು ಒಂದಾದರೆ, ಅದು ಹೊತ್ತು ತರುವ ಕಶ್ಮಲ, ಇಂಗಾಲಾಮ್ಲಗಳನ್ನು ತೆಗೆದು ಶುದ್ಧಗೊಳಿಸುವ ವ್ಯವಸ್ಥೆಯ ಕೆಲಸ ಮತ್ತೊಂದು, ಹೀಗೆ ಎರಡೆರಡು ಕೆಲಸ ಮಾಡುವ ಅವಳಿ ಹೃದಯ ಬೇಕಾಗುವುದು. ಮಾನವನಿಗೆ (ಮೇಲ್ತರದ ಪ್ರಾಣಿಗಳಿಗೆ) ಈ ಎರಡು ಕೆಲಸ ಮಾಡುವ ಜೊತೆಗೂಡಿದ ಹೃದಯವಿದೆ. ಅದನ್ನು ನಾವು ಒಂದೇ ಹೃದಯವೆಂದು ಭಾವಿಸುತ್ತೇವೆ.
ಮಾನವನ ಬಲ ಭಾಗದ ಹೃದಯ ನಿರ್ವಹಿಸುವ ಶ್ವಾಸಕೋಶಕ್ಕೆ ಕಳಿಸುವ ರಕ್ತ ಸಂಚಲನೆಯ ಕೆಲಸಕ್ಕೆ “ಶ್ವಾಸಾಂಗ ರಕ್ತ ಪರಿಚಲನೆ” (Pulmonary Circulation) ಎನ್ನುವರು. ಎಡ ಭಾಗದ ಹೃದಯದ ಕೆಲಸ ಆಹಾರ ಹೊತ್ತ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಕಳಿಸುವ ಕೆಲಸ. ಆದ್ದರಿಂದ ಅದು ಹೆಚ್ಚು ಒತ್ತಡ ಹಾಕಿ ರಕ್ತವನ್ನು ತಳ್ಳಬೇಕು. ಅದಕ್ಕಾಗಿ ಇದು ಹೆಚ್ಚು ಬಲಿಷ್ಟ ಭಾಗ. ಈ ರಕ್ತ ಪರಿಚಲನೆಗೆ ಅಥವಾ ಸಂಚಲನೆಗೆ “ಶಾರೀರಿಕ ರಕ್ತ ಪರಿಚಲನೆ” (Systemic Circulation) ಎನ್ನುವರುಅ-೧.
ಹೀಗೆ ಇದನ್ನು ನಗರಗಳಲ್ಲಿ ಪ್ರತಿ ಮನೆಗೆ ನೀರು ಸರಬರಾಜು ಮಾಡುವ ಪಂಪ್ ಹೌಸ್ಗೆ ಹೋಲಿಸುತ್ತಾರೆ. ಆದರೆ ಇದರಲ್ಲಿ ನೀರು ಕಳಿಸುವುದು ಮಾತ್ರಾ ಇರುವುದು; ಹಿಂದಕ್ಕೆ ತರಿಸುವ ಕೆಲಸವಿಲ್ಲ. ಈ ಹೃದಯ ಮಾನವ ಜನನವಾಗುವ ಮೊದಲೇ ಕೆಲಸ ಆರಂಭಿಸಿ ಅವನು ಸಾಯುವವರೆಗೂ ಒಂದು ಕ್ಷಣವೂ ಬಿಡುವಿಲ್ಲದಂತೆ, ನಾವು ಸುಮ್ಮನೆ ಕುಳಿತಾಗಲೂ, ನಿದ್ದೆ ಮಾಡವಾಗಲೂ ಕೆಲಸಮಾಡುತ್ತಲೇ ಇರುವ 'ಪಂಪ್ಸೆಟ್'. ಈ ಪಂಪ್ಸೆಟ್ ಕೆಲಸ ಮಾಡಲು ಬೇಕಾದ ವಿದ್ಯುತ್ ಉತ್ಪಾದನೆಯನ್ನು ಮಾಡುವ ಡೈನಮೊ ರೀತಿಯ 'ಹೃತ್ಕುಳಿ ಗಂಟು' (ಸೈನೊಏಟ್ರಿಯಲ್ ನೋಡ್) ಮತ್ತು ಅದಕ್ಕೆ ಪೂರಕವಾಗಿ 'ಬ್ಯಾಕ್ಅಪ್ ಡೈನಮೊ' - 'ಕರ್ಣಕುಕ್ಷಿ ಗಂಟು' (ಏಟ್ರಿಯೊ ವೆಂಟ್ರಾಕುಲರ್ ನೊಡ್)ಗಳಿವೆ. ಅದರ ವಿದ್ಯುತ್ ಪ್ರಸರಣಕ್ಕೆ ಹೃದಯದ ತುಂಬ ವಿದ್ಯುತ್ ಜಾಲವಿದೆ. ಹೀಗೆ ಇದು ಮಾನವನಲ್ಲಿ ೧೦೦ ವರ್ಷ(ಬದುಕಿದವರಲ್ಲಿ) ಬಿಡುವಿಲ್ಲದೆ ಸತತ ದುಡಿಯುವ ಅದ್ಭುತ ಜೈವಿಕ ಬಲಿಷ್ಠ ಯಂತ್ರ.[1]
ಗಾತ್ರ, ತೂಕ, ಕೆಲಸ
ಹೃದಯವು ಶಂಖುವಿನ (ಕೋನ್) ಆಕಾರದಲ್ಲಿದ್ದು ಅದರ ದಪ್ಪ-ತಲ (ಬೇಸ್) ಮೇಲೆ ಇದ್ದು, ತುದಿ ಕೆಳಮುಖ ಹೊಂದಿದೆ. ವಯಸ್ಕರ ಹೃದಯ ಸುಮಾರು 250-350 ಗ್ರಾಂ. ತೂಕವನ್ನು ಹೊಂದಿದೆ. ಹೃದಯವು ಸಾಮಾನ್ಯವಾಗಿ ಒಂದು ಹಿಡಿ ಗಾತ್ರದಷ್ಟಿದೆ: ಉದ್ದ 12 ಸೆಂ (5 ಇಂ.), 8 ಸೆಂ (3.5 ಇಂ) ಅಗಲ ಮತ್ತು ದಪ್ಪ 6 ಸೆಂ (2.5 ಇಂ) [2]
ಹೆಚ್ಚಿನ ಜನರಲ್ಲಿ (ಸರಾಸರಿ) ಹೃದಯವು ಪ್ರತಿ ಬಡಿತಕ್ಕೆ 70 ಮಿಲಿ ಲೀ.ರಕ್ತವನ್ನು ಪಂಪ್ ಮಾಡುವುದು (ಹೊರಹಾಕುವುದು). ನಮ್ಮ ದೇಹ ಸುಮಾರು 5 ಲೀಟರ್ ರಕ್ತವನ್ನು ಹೊಂದಿವೆ. ಹೃದಯ ಬಡಿತ ನಮ್ಮ ವಿರಾಮದ/ಕೆಲಸದ ವೇಗವನ್ನು ಅವಲಂಬಿಸಿರುತ್ತದೆ.
ವಿರಾಮದಲ್ಲಿ ಹೆಚ್ಚು ಜನರ ಹೃದಯದ ಬಡಿತ (ಬೀಟ್ಸ್)ಒಂದು ನಿಮಿಷಕ್ಕೆ 70-72 ಇರುವುದು. ಆದ್ದರಿಂದ ಹೃದಯವು ಒಂದು ನಿಮಿಷದಲ್ಲಿ ಬಡಿತದ (ಬೀಟ್ಸ್) ಸಂಖ್ಯೆಯಂತೆ ಪಂಪ್ ಮಾಡುವ ರಕ್ತದ ಪ್ರಮಾಣವನ್ನು ಗುಣಿಸಿದಾಗ, 4.9 ಲೀಟರ್ ರಕ್ತವನ್ನು ತಳ್ಳಿರುತ್ತದೆ, ಅದು (ರಕ್ತ) ಬಹುತೇಕ ನಮ್ಮ ಇಡೀ ದೇಹದಲ್ಲಿ ಸಂಚರಿಸಿರುತ್ತದೆ. ಆದ್ದರಿಂದ,ರಕ್ತವು ಒಂದು ನಿಮಿಷದಲ್ಲಿ, ನಮ್ಮ ಇಡೀ ದೇಹದಲ್ಲಿ ಒಂದು ಸುತ್ತು ಸಂಚರಿಸಿರುತ್ತದೆ. ಏಕೆಂದರೆ ಸಂಚರಣೆ ಮುಂದುವರಿಸಲು ಅದೇ ರಕ್ತ ಪುನಹ ಅಲ್ಲಿಗೆ ಬಂದಿರಬೇಕು
ಇದರ ಪ್ರಕಾರ ಒಂದು ದಿನದಲ್ಲಿ ಹೃದಯವು ಅದರ ಕೋಣೆಗಳ ಮೂಲಕ 7257.6 (@70 ಮಿಲಿ ಲೀ/ಪ್ರತಿ ಬಡಿತX72) ಲೀಟರ್ ರಕ್ತವನ್ನು, ಪಂಪ್ ಮಾಡುವುದು. ಈ ಲೆಕ್ಕದಲ್ಲಿ ದಿನಕ್ಕೆ 7257.6 ಲೀಟರ್ ಎಂದರೆ; ಗಂಟೆಗೆ 302.4 ಲೀಟರ್ ರಕ್ತವನ್ನು ಹೊರ ಹಾಕುತ್ತದೆ. ಆದ್ದರಿಂದ ಮೇಲೆ ಹೇಳಿದಂತೆ ಹೃದಯದಿಂದ, ರಕ್ತ ದೇಹದಲ್ಲಿ ಒಂದು ಸುತ್ತು ಪ್ರವಾಸ ಮಾಡಲು ಸುಮಾರು ಒಂದು ನಿಮಿಷ ತೆಗೆದುಕೊಳ್ಳುತ್ತದೆ. ನಾವು ವೇಗವಾಗಿ ಚಲಿಸುತ್ತಿದ್ದರೆ, ಸಮಯ ಇನ್ನೂ ಕಡಿಮೆಯಾಗುವುದು. ಆಗ ನಮ್ಮ ಹೃದಯ ಪ್ರತಿ ನಿಮಿಷದಲ್ಲಿ ಇನ್ನೂ ಹೆಚ್ಚು ಬಾರಿ ರಕ್ತವನ್ನು ಪಂಪ್ ಮಾಡುವುದು.(ವೆಬ್ನ ಲೆಕ್ಕವನ್ನು ತಿದ್ದಿ ಸರಿಪಡಿಸಿದೆ) [3][4]
“ಹೃದಯ ಆವರ್ತನ”ವು (The cardiac cycle) ಹೃದಯವು ದೇಹದಾದ್ಯಂತ ರಕ್ತವನ್ನು ತಳ್ಳುವ ಕ್ರಿಯೆಯಲ್ಲಿ ಸಂಭವಿಸುವ, ಕುಗ್ಗುವ (ಸಂಕುಚಿಸುವ) ಮತ್ತು (ಹಿಗ್ಗಿ) ವಿಶ್ರಾಂತಿ ಪಡೆಯುವ ಕ್ರಿಯೆಯನ್ನು ವಿವರಿಸಲು ಬಳಸುವ ಪದ. “ಹೃದಯ ಬಡಿತದ ದರ” (Heart rate), ಹೃದಯದ ಆವರ್ತನವನ್ನು ವಿವರಿಸಲು ಬಳಸಲಾಗುವ ಒಂದು ಪದ. ಇದು ನಾಲ್ಕು ಪ್ರಮುಖ ಚಿಹ್ನೆಗಳು ಉಳ್ಳದ್ದು ಎಂದು ಹೆಸರುವಾಸಿಯಾಗಿದೆ ಮತ್ತು ನಿಯಂತ್ರಿತ ವೇರಿಯಬಲ್ (regulated variable) (ಪಲ್ಲಟ) ಉಳ್ಳದ್ದಾಗಿದೆ. ಸಾಮಾನ್ಯವಾಗಿ ಇದು ಒಂದು ನಿಮಿಷದಲ್ಲಿ ಹೃದಯವು (ಹೃದಯ ಬಡಿತಗಳ) ಸಂಕೋಚನವನ್ನು ಹೊಂದುವ ಸಂಖ್ಯೆಯಾಗಿರುತ್ತದೆ ಮತ್ತು "ನಿಮಿಷಕ್ಕೆ ಬಡಿತ ಅಥವಾ ಬೀಟ್ಸ್" ಎಂದು ವ್ಯಕ್ತಪಡಿಸಲಾಗುತ್ತದೆ (ಬಿಪಿಎಂ / ನಿಮಿಷಕ್ಕೆ ಹೃ..ಬಡಿತ ("beats per minute"=bpm)
ಸಂಕುಚನದಲ್ಲಿ ಹೃದಯ ಅಥವಾ ಹೃತ್’ಕುಕ್ಷಿಯಲ್ಲಿ ಸಂಕೋಚನದ ಒತ್ತಡದ ಅಲೆಗಳು ಉಂಟಾಗುವುವು. ಆ ಅಲೆಗಳು ಹೆಚ್ಚು ಸ್ಥಿತಿಸ್ಥಾಪಕವಾದ ಶುದ್ಧರಕ್ತನಾಳದಲ್ಲಿ (ಅಪಧಮನಿಯಲ್ಲಿ) ಅದರ ಗೋಡೆಗಳನ್ನು ತಾಳಬದ್ಧವಾಗಿ ಸರಿಸಿ ಹಿಗ್ಗಿಸುವುವು. ಇದರಿಂದ ಅಪಧಮನಿಯ ವಿಕೋಚನ ಗುಣವುಳ್ಳ ನಾಳದ ಗೋಡೆಯ ಮತ್ತು ಆಗ ಹಿಗ್ಗಲು ಅನುಕೂಲಿಯಾದ ರಕ್ತ ನಾಳದ ಮುಂಭಾಗದ ಗಿಣ್ಣುವಿಗೆ ರಕ್ತ ನುಗ್ಗುತ್ತದೆ. ಈ ನಾಳ ಮಿಡಿಯುವ ಗುಣದಿಂದ ಒತ್ತಡ ಹೆಚ್ಚಾಗುತ್ತದೆ, ಹೀಗೆ ಒತ್ತಡ ಮತ್ತು ಮಿಡಿಯುವಿಕೆಯಿಂದ ರಕ್ತ ಮುನ್ನುಗ್ಗುತ್ತದೆ. ಇದನ್ನು ಶುದ್ಧರಕ್ತನಾಳದ ಮೇಲೆ ಬರಳಿನಿಂದ ಮುಟ್ಟಿ ಪತ್ತೆ ಮಾಡಬಹುದು. ಶುದ್ಧ ರಕ್ತನಾಳದ (ಅಪಧಮನಿಯ) ಗೋಡೆಯಲ್ಲಿ ಬಿಟ್ಟು ಬಿಟ್ಟು ಆಗುವ ಹಿಗ್ಗುವಿಕಯಿಂದ ನಾಡಿ ಬಡಿತ ಉಂಟಾಗುವುದು.
ಹೃದಯ ಆವರ್ತನ (Cardiac Cycle)
ಪ್ರತಿಯೊಂದು “ಹೃದಯಬಡಿತ” ಮೂರು ಪ್ರಮುಖ ಹಂತಗಳನ್ನು ಒಳಗೊಂಡಿದೆ. ಹೃತ್ಕರ್ಣದ ಸಂಕುಚನ, ಹೃತ್ಕುಕ್ಷಿಯ ಸಂಕುಚನ ಮತ್ತು ಪೂರ್ಣ ಹೃದಯದ ವ್ಯಾಕೋಚನ. (ಕುಗ್ಗುವಿಕೆ-ಹಿಗ್ಗುವಿಕೆ)
1. ಹೃತ್ಕರ್ಣದ ಸಂಕೋಚನ (Atrial systole) ಹೃತ್ಕರ್ಣದ ಸಂಕುಚನದಿಂದ ಭಾಗದ ಹೃತ್ಕುಕ್ಷಿಯ ತುಂಬುವಿಕೆ;
2. ಹೃತ್ಕುಕ್ಷಿಯ ಸಂಕೋಚನ (Ventricular systole): ಹೃತ್ಕುಕ್ಷಿಗಳ ಸಂಕೋಚನದಿಂದ ರಕ್ತ, ಶ್ವಾಸಕೋಶದ ರಕ್ತನಾಳಗಳಿಗೆ (ಅಪಧಮನಿಯ) ಅಥವಾ ಅಯೋರ್ಟಾ ಶುದ್ಧರಕ್ತನಾಳಕ್ಕೆ (ಎಡದ ಮಹಾಪಧಮನಿಗೆ) ಚಿಮ್ಮುತ್ತವೆ (ಎಡ ಮತ್ತು ಬಲ ಹೃತ್ಕುಕ್ಷಿಯನ್ನು ಅವಲಂಬಿಸಿ.). ಹೃತ್ಕರ್ಣದ ಮತ್ತು ಹೃತ್ಕುಕ್ಷಿಯ ಸಂಕೋಚನ ವ್ಯಾಕೋಚನಗಳು ಒಟ್ಟಿಗೆ ಆಗುತ್ತದೆ.
3 .ವಿಶ್ರಾಂತಿ ಸಮಯ: ಸಂಪೂರ್ಣ ಹೃದಯದ ಸಂಕುಚನ- ವ್ಯಾಕೋಚನ ನಂತರ ಹೃದಯ ಕ್ಷಣಾರ್ಧ ವಿಶ್ರಾಂತಿ ಪಡೆದು ಮತ್ತೊಮ್ಮೆ ರಕ್ತ ತುಂಬಲು ರಕ್ತ ಕೋಣೆಗಳ ಹಿಗ್ಗು-ಕುಗ್ಗುವ ಚಕ್ರವನ್ನು ಬಿಡುವಿಲ್ಲದೆ ಮುಂದುವರಿಸುವದು.
ಹಿಗ್ಗಿದ-ಕುಗ್ಗಿದ ರಕ್ತದೊತ್ತಡ (Systolic and Diastolic Blood Pressure)
ಹೃದಯದ ಸಂಕೋಚನದ ಮತ್ತು ವ್ಯಾಕೋಚನದ ಆವರ್ತನದುದ್ದಕ್ಕೂ, ಸಕ್ರಿಯ ಹೃತ್ಕುಕ್ಷಿಯ ಸಂಕೋಚನದ ಹಂತಗಳಲ್ಲಿ ಶುದ್ಧರಕ್ತನಾಳದ (ಅಪಧಮನಿಯ) ರಕ್ತದ ಒತ್ತಡವು ಹೆಚ್ಚಾಗುತ್ತದೆ ಮತ್ತು ಹೃತ್ಕುಕ್ಷಿಯ ಭಾಗದ ತುಂಬುವಿಕೆಯ ಸಮಯದಲ್ಲಿ ಅಂದರೆ ಹೃತ್ಕರ್ಣದ ಸಂಕುಚನ ಸಮಯದಲ್ಲಿ ರಕ್ತದ ಒತ್ತಡವು ಕಡಿಮೆ ಆಗುವುದು.
ಈ, ಅಸ್ತಿತ್ವವುಳ್ಳ ಎರಡು ರೀತಿಯ ರಕ್ತದೊತ್ತಡಗಳು ಅಳೆಯಬಹುದಾದವು.
ಒಂದು ಸಂಕೋಚನದ ಸಮಯದಲ್ಲಿ: ಸಂಕೋಚನದ ರಕ್ತದೊತ್ತಡ ಮತ್ತು ಎರಡನೆಯದು ವಿಶ್ರಾಂತಿ ಸಮಯದಲ್ಲಿ: ವ್ಯಾಕೋಚನದ ರಕ್ತದೊತ್ತಡ; ಹೆಚ್ಚು
ಸಂಕೋಚನದ ರಕ್ತದೊತ್ತಡವು ವ್ಯಾಕೋಚನದ ರಕ್ತದೊತ್ತಡಕ್ಕಿಂತ ಯಾವಾಗಲೂ ಹೆಚ್ಚಿನದು. ಸಾಮಾನ್ಯವಾಗಿ ಸಂಕೋಚನದ ರಕ್ತದೊತ್ತಡ ಮತ್ತು ವ್ಯಾಕೋಚನದ ರಕ್ತದೊತ್ತಡವನ್ನು ಮೇಲೆ/ಕೆಳಗೆ; ಒಂದು ಅನುಪಾತ ಕ್ರಮದಲ್ಲಿ ಮಾಹಿತಿ ನೀಡಲಾಗುತ್ತದೆ. ಉದಾಹರಣೆಗೆ, 115/75 ಎಂ.ಎಂ. ಎಹ್.ಜಿ.( mmHG.); 115 ಎಂ.ಎಂ. ಎಹ್.ಜಿ.. ಒಂದು ಸಂಕೋಚನದ ರಕ್ತದೊತ್ತಡ ಮತ್ತು ಇನ್ನೊಂದು ವ್ಯಾಕೋಚನದ ರಕ್ತದೊತ್ತಡ. ಅಥವಾ 75 ಎಂ.ಎಂ. ಎಹ್.ಜಿ.. ಎಂದು ಸೂಚಿಸುತ್ತದೆ. ರಕ್ತದೊತ್ತಡದ ಸಾಮಾನ್ಯ ಶ್ರೇಣಿ 90/60 ಮತ್ತು 120/80 ಎಂ.ಎಂ. ಎಹ್.ಜಿ (mmHG.) ನಡುವೆ ಇರುವುದು. ಇದಕ್ಕೂ ಹೆಚ್ಚಿನದು ಇರುವಾಗ ಅಧಿಕ ರಕ್ತದೊತ್ತಡ ಸೂಚಿಸಬಹುದು (hypertension: High Blood Pressure). ಕಡಿಮೆ ಇದ್ದಾಗ ಒತ್ತಡ ರಕ್ತದೊತ್ತಡ ಸೂಚಿಸಬಹುದು ಶ್ರೇಣಿಯ ಹೆಚ್ಚಿನ ಒತ್ತಡ, ಕಡಿಮೆ ರಕ್ತದೊತ್ತಡ ಸೂಚಿಸಬಹುದು (hypotension: Low Blood Pressure).. ಆದರೂ ಇದು ನೇರವಾಗಿ ಹೃದಯ ಚಕ್ರದಲ್ಲಿ ಹೃದಯದ ರಕ್ತದ ಪ್ರಮಾಣ ಮತ್ತು ಅದರ ಹೊರತಳ್ಳುವಿಕೆಯನ್ನು (ಔಟ್ಪುಟ್) ಆಧರಿಸಿದೆ ಸಂಬಂಧಿಸಿದೆ (ಪರಿಸ್ಥಿತಿಗೆ ತಕ್ಕಂತೆ ಅನಿಯಂತ್ರಿತ ಅಥವಾ ಅಸ್ಥಿರವಾಗಿದೆ).[5]
ಒಬ್ಬ ವಯಸ್ಕನ ದೇಹದಲ್ಲಿ ಅವನ ದೇಹದ ಒಟ್ಟು ತೂಕದ ಸುಮಾರು 7% ರಷ್ಟು ರಕ್ತ ಎಂದರೆ ಸುಮಾರು ಸುಮಾರು 4.7 ರಿಂದ 5.7 ಲೀಟರ್ ನಷ್ಟು ರಕ್ತ ಇರುವುದು.. [6] ರಕ್ತವು ಪ್ಲಾಸ್ಮಾ, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಹಾಗು ಪ್ಲೇಟ್ ಒಳಗೊಂಡಿರುತ್ತದೆ. (ಈ ಪ್ರಮಾಣ ವ್ಯಕ್ತಿ ಸರಾಸರಿ ೬೫ ಕೆಜಿ.ಇಂದ ೮೫ ಕೆಜಿ ಇರುವ ಅಂದಾಜಿನಲ್ಲಿ ಹೇಳಿದ್ದು; ಕಡಿಮೆ ತೂಕದವರಿಗೆ ಕಡಿಮೆ ಪ್ರಮಾಣ ಇರಬಹುದು.) ವಿರುವ ಭಾರತೀಯರಲ್ಲಿ ರಕ್ತ ಪ್ರಮಾಣ ಇನ್ನೂ ಕಡಿಮೆ ಇರಬಹುದು)
ಹೃದಯದ ಎಡಭಾಗದಿಂದ ಹೊರಟ ಆಮ್ಲಜನಕ ಮತ್ತು ಆಹಾರಾಂಗಳನ್ನು ಹೊಂದಿದ ಈ ಶುದ್ಧ ರಕ್ತವು ದೇಹದ ಎಲ್ಲ ಭಾಗಗಳಿಗೂ ಪಸರಿಸಿ ಅಲ್ಲಿ ದೇಹದ ಜೀವಕಣಗಳಿಗೆ ಬೇಕಾದ ಆಮ್ಲಜನಕವನ್ನೂ ಆಹಾರಾಂಶವನ್ನು ಒದಗಿಸುವುದು. ಅಲ್ಲಿ ದೇಹದ ಜೀವಕಣಗಳ ಪರಿಶ್ರಮದಿಂದ ಆಮ್ಲಜನಕ ಉರಿದು ಇಂಗಾಲಾಮ್ಲ ಸಂಗ್ರಹವಾಗಿರುವುದು. ಮೊದಲು ಪಡೆದ ಗ್ಲೂಕೋಸ್ ಮೊದಲಾದ ಆಹಾರಾಂಶಗಳು ಉಪಯೋಗಸಲ್ಪಟ್ಟು, ಯೂರಿಯಾ ಮತ್ತು ಇತರೆ ಬೇಡವಾದ ಕಶ್ಮಲಗಳೂ ಸಂಗ್ರಹವಾಗಿರುವುದು. ಅವುಗಳನ್ನೆಲ್ಲಾ ತೆಗೆದುಕೊಂಡೊ ಮಲಿನವಾದ ರಕ್ತವು ಸುಪೀರಿಯರ್ ಮತ್ತು ಇನಫೀರಿಯರ್ ವಿನಾಕೇವಾ ಮೂಲಕ ಹೃದಯದ ಬಲ ಹೃತ್ಕರಣಕ್ಕೆ (ಬಲ ಅಟ್ರಿಯಮ್) ಬಂದು ಬೀಳುವುದು. ಅಲ್ಲಿ ಅದು ಸಂಕುಚಿಸಿದಾಗ ತ್ರಿದಳ ಕವಾಟವು ತೆರೆದುಕೊಳ್ಳುವುದು ಮತ್ತು ಬಲ ಹೃತ್ಕುಕ್ಷಿಗೆ (ಬಲ ವೆಂಟ್ರಿಕಲ್) ರಕ್ತವನ್ನು ತಳ್ಳುವುದು. ಈ ತ್ರಿದಳ ಕವಾಟವು ಒಂದೇ ದಿಕ್ಕನಲ್ಲಿ ತೆರೆಯುವುವು. ಹಾಗೆ ರಕ್ತವನ್ನು ತಳ್ಳಿದ ಕೂಡಲೆ ಆ ತ್ರಿದಳ ಕವಾಟ ರಕ್ತ ಹಿಂದಕ್ಕೆ ಬರದಂತೆ ಗಟ್ಟಿಯಾಗಿ ಮುಚ್ಚಿಕೊಳ್ಳುವುದು. ಬಲ ಹೃತ್ಕುಕ್ಷಿಯು ಸಂಕುಚಿಸಿ ರಕ್ತವನ್ನು ಕವಾಟದ ಮೂಲಕ ಶ್ವಾಸಕೋಶಕ್ಕೆ ಹೋಗುವ ಬಲ ಮತ್ತು ಎಡ ಶ್ವಾಸರಕ್ತನಾಳಗಳಿಗೆ (the pulmonary arteryಗೆ) ತಳ್ಳುವುದು. ಆ ರಕ್ತನಾಳದ ಕವಾಟ ಮುಚ್ಚಿಕೊಂಡು ರಕ್ತವನ್ನು ಮುಂದಕ್ಕೆ ಕಳಿಸುವುದು.ಅ-೧
ಈಗ ಬಲಹೃತ್ಕುಕ್ಷಿಯು ಸಂಕುಚಿಸಿ ಖಾಲಿಯಾದ ತಕ್ಷಣ ಮೇಲಿನ ಹೃತ್ಕರಣದ ತ್ರಿದಳ ಕವಾಟ ತೆರೆದು ರಕ್ತವನ್ನು ಪುನಃ ಕೆಳಗಿನ ಹೃತ್ಕುಕ್ಷಿಗೆ ತಳ್ಳುವುದು. ಕ್ಷಣವೂ ಬಿಡುವಿಲ್ಲದಂತೆ ಈ ಕೆಲಸ ನೆಡೆಯುವುದು. ಅದರ ವೇಗ ನಿಮಿಷಕ್ಕೆ 70 ಅಥವಾ 72 ಬಾರಿ, ಕೆಲಸ, ವ್ಯಾಯಾಮ, ಭಯ, ಸಿಟ್ಟು, ಗಾಬರಿಗಳಲ್ಲಿ ಎನ್ನೂ ಹೆಚ್ಚು ಬಾರಿ ,ತೀವ್ರತೆಗೆ ತಕ್ಕಂತೆ ಹೆಚ್ಚುವುದು.
ಹೀಗೆ ಬಲ ಮತ್ತು ಎಡ ಶ್ವಾಸರಕ್ತನಾಳ (left and right pulmonary arteries [one for each lung]), ಮೂಲಕ ಹರಿಯುವ ಮಲಿನ ರಕ್ತ ಶ್ವಾಸಕೊಶಗಳಿಗೆ ಹೋಗುವುದು. ಅದರ ಹೃದಯಕ್ಕೆ ಹೊಂದಿಕೊಂಡ ಒಮ್ಮುಖ ಕವಾಟ (pulmonary semilunar valve) ರಕ್ತ ಹಿಂದಕ್ಕೆ ಹೋಗದಂತೆ ನೋಡಿಕೊಳ್ಳುವುದು. ಶ್ವಾಸಕೊಶದಿಂದ ಬಂದ ಎಡ ಬಲ ದೊಡ್ಡ ಶ್ವಾಸರಕ್ತನಾಳಗಳು ಎಡ ಬಲ ಸ್ವಾಸಕೋಶಗಳನ್ನು ಪ್ರವೇಶಿಸುವುವು. ಈ ರಕ್ತ ನಾಳಗಳು ಆಮ್ಲಜನಕ ರಹಿತವಾಗಿದ್ದು ಇಂಗಾಲಾಮ್ಲವನ್ನು ಹೊಂದಿರತ್ತದೆ. ಶ್ವಾಸ ಕೋಶಗಳಲ್ಲಿ ಈ ಶ್ವಾಸ ನಾಳಗಳು ಕವಲುಗಳಾಗಿ ಒಡೆದು ತ್ತಿ ಮತ್ತೆ ಕಲುಗಳಾಗಿ ಕೊನೆಗೆ ಸೂಕ್ಷ್ಮ ನಾಳಗಳಾಗಿ (ದ್ರಾಕ್ಷಿ ಹಣ್ಣಿನ ಗೊಂಚಲಿನಂತೆ ಇರುವ) ಶ್ವಾಸಕೋಶದ ಅತಿ ಸೂಕ್ಷ್ಮ ಉಸಿರುಗುಳ್ಳೆಗಳನ್ನು ಹೊಂದಿರುತ್ತವೆ. ನಮ್ಮ ಒಳತೆಗೆದುಕೊಳ್ಳುವ ಉಸಿರಿನಿಂದ ಬಂದ ಗಾಳಿಯಲ್ಲಿ ಆಮ್ಲಜನಕ ವಿರುವದು. ಅಲ್ಲಿ ಹೃದಯದಿಂದ ಹೋದ ರಕ್ತನಾಳಗಳು ಅತ್ಯಂತ ಸೂಕ್ಷ್ಮವಾದ ಲೋಮನಾಳಗಳಾಗಿ ಕವಲೊಡೆದು ತಮ್ಮಲ್ಲಿರುವ ಇಂಗಾಲಾಮ್ಲವನ್ನು ಹೊರಹಾಕಿ ಆಮ್ಲಜನಕವನ್ನು ಹೀರಿ ಕೊಳ್ಳುತ್ತವೆ. ಹಾಗೆ ಹೀರಿಕೊಂಡ ನಂತರ ಆಮ್ಲಜನಕ ಭರಿತ ಲೋಮನಾಳಗಳು ಪುನಃ ಒಟ್ಟುಗೂಡಿ ಶ್ವಾಸ ಶುದ್ಧರಕ್ತನಾಳದ ಮೂಲಕ ಹೃದಯದ ಎಡ ಹೃತ್ಕರಣಕ್ಕೆ (ಎಡ ಅಟ್ರಿಯಮ್) ಬರುತ್ತದೆ.[6]
ಆಮ್ಲಜನಕ - ಇಂಗಾಲಾಮ್ಲ ವಿನಿಮಯ
ಶ್ವಾಸಕೋಶದ ಎದೆಗೂಡುಗಳು ಪೊರೆ ಚೀಲ ಎಂಬ ಚೀಲದ ಒಳಗಿದೆ. ಉಸಿರಾಟ ಹೆಚ್ಚು ಘರ್ಷಣೆ ಇಲ್ಲದೆ ನಡೆಯುತ್ತದೆ. ಒಳ ಮತ್ತು ಹೊರ ಗೋಡೆಗಳು ಪರಸ್ಪರ ಜಾರಿ ಘರ್ಷಣೆ ಇಲ್ಲದೆ ಉಸಿರಾಟದ ಕ್ರಿಯೆ ನಡೆಯುತ್ತದೆ. ಈ ಚೀಲ ಪ್ರತಿ ಶ್ವಾಸಕೋಶವನ್ನು ಸುತ್ತುವರಿದಿದ್ದು ಶ್ವಾಸಕವಲುಗಳು ಎಂಬ ಭಾಗಗಳಾಗಿ ಪ್ರತಿ ಶ್ವಾಸಕೋಶವನ್ನು ವಿಂಗಡಿಸುತ್ತದೆ. ಬಲ ಶ್ವಾಸಕೋಶ ಮೂರು ಕವಲು ಕೊಳವೆಗಳನ್ನು ಮತ್ತು ಎಡ ಎರಡು ಕವಲುಕೊಳವೆಗಳನ್ನು ಒಳಗೊಂಡಿದೆ. ಮತ್ತಷ್ಟು ಶ್ವಾಸ ಕೊಳವೆಗಳು ಮತ್ತೆ ಕಿರುಕವಲುಗಳಾಗಿ ವಿಂಗಡಿಸುತ್ತವೆ.ಅದರಲ್ಲಿ ಅಶುದ್ಧರಕ್ತನಾಳದಲ್ಲಿರುವ ರಕ್ತವು ಇಂಗಾಲಾಮ್ಲವನ್ನು ಬಿಡುಗಡೆಮಾಡಿ ಆಮ್ಲಜನಕವನ್ನು ಪಡೆಯುವುದು.
ಈ ಕ್ರಿಯೆ ಕಿರುಉಸಿರುಗುಳಿ (alveolus)ಯಲ್ಲಿ ನಡೆಯುವುದು. ಒಂದು ಕಿರುಉಸಿರುಗುಳಿ (alveolus) ಒಂದು ಟೊಳ್ಳಾದ ಕುಹರದ ರೂಪ ಹೊಂದಿರುವ ಒಂದು ಅಂಗ ರಚನೆ. ಮುಖ್ಯವಾಗಿ ಶ್ವಾಸಕೋಶದಲ್ಲಿ ಕಂಡುಬರುವ, ಶ್ವಾಸಕೋಶದ ಆಲ್ವಿಯೋಲೈ, ಉಸಿರಾಟದ ಶ್ವಾಸನಾಳಗಳ ಸೂಕ್ಷ್ಮ ಕುಳಿಗಳು ಹೊರಚಾಚುವಿಕೆಗಳುಳ್ಳವು; ರಕ್ತ ದಲ್ಲಿರುವ ಅನಿಲ ವಿನಿಮಯದ ಪ್ರಾಥಮಿಕ ತಾಣಗಳು.
ಶ್ವಾಸಕೋಶದ ಕವಲುಗಳು ವಿಭಜಿಸುತ್ತಾ ಹೋಗುತ್ತವೆ ಅವು ಸೂಕ್ಷ್ಮ ಆಲ್ವಿಯೋಲೈಗಳಾಗಿ, ಅಲ್ಲಿ ಅನಿಲ ವಿನಿಮಯ ಪ್ರಕ್ರಿಯೆ ನಡೆಯುತ್ತದೆ. ಅಲ್ಲಿ ಗಾಳಿಯು ತಲುಪುವ ತುದಿಯವರೆಗೆ, (ಅತಿ ಸೂಕ್ಷ್ಮ ನಾಳಗಳ ಪ್ರದೇಶ) ಒಟ್ಟಾರೆ, ಶ್ವಾಸಕೋಶದೊಳಗೆ ಗಾಳಿ ಸಂಚಾರ ಮಾರ್ಗ (ಏರ್ವೇಸ್-airways) ಸುಮಾರು 2,400 ಕಿಲೋಮೀಟರ್ ಉದ್ದ (1,500 ಮೈಲಿ ಉದ್ದದ ಗಾಳಿ ದಾರಿ); ಮತ್ತು 300 ರಿಂದ 500 ಮಿಲಿಯನ್ ಕಿರು ಉಸಿರುಕುಳಿಗಳನ್ನು (ಅಲ್ವಿಯೋಲೈಗಳನ್ನು) ಹೊಂದಿದೆ. ಅದರಲ್ಲಿರುವ (ದೇಹದಲ್ಲೆಡೆ ಇರುವ) ರಕ್ತದ ಲೋಮನಾಳಗಳು ಒಂದೊಂದೇ ರಕ್ತಕಣ ಸರಿದು ಹೋಗುವಷ್ಟು ಚಿಕ್ಕ ನಾಳಗಳನ್ನು ಹೊಂದಿರುತ್ತವೆ.
ಶ್ವಾಸಕೋಶದ ಒಳಭಾಗದ ಒಟ್ಟು ಮೇಲ್ಮೈ ವಿಸ್ತೀರ್ಣವು ಅಂದಾಜು 50 ರಿಂದ 75 ಚದರ ಮೀಟರ್ (540 - 810 ಚದರ ಅಡಿ) ಒಳಗಿದೆ. ಸರಿಸುಮಾರು ಒಂದು ಟೆನಿಸ್ ಮೈದಾನದ ಪ್ರದೇಶ.[7]
ಹೀಗೆ ನಾವು ಸೇವಿಸುವ ವಾಯುವಿನಿಂದ ರಕ್ತವು ಅತಿ ಸೂಕ್ಷ್ಮ ನಾಳಗಳ ಮೂಲಕ ಆಮ್ಲಜನಕವನ್ನು ಹೀರಿ, ಇಂಗಾಲಾಮ್ಲವನ್ನು ಹೊರಗೆಡವುತ್ತದೆ. ನಂತರ ಸೂಕ್ಷ್ಮರಕ್ತನಾಳಗಳು ಉಪನಾಳಗಳಾಗಿ ಕೂಡಿ ಅವು ಮತ್ತೆ ಒಂದುಗೂಡಿ ದೊಡ್ಡ ನಾಳವಾಗಿ ಹೊರಬಿದ್ದು ಹೃದಯದ ಎಡಭಾಗದ ಮೇಲಿನ ಕೋಣೆಯನ್ನು ಎಂದರೆ ಎಡ ಹೃತ್ಕರಣವನ್ನು ಶ್ವಾಸ ಶುದ್ಧರಕ್ತನಾಳಗಳ ಮೂಲಕ ಹೋಗಿ ಸೇರುತ್ತದೆ.ಅ-೧
(The systemic circulation is the circulation of the blood to all parts of the body except the lungs)
ಸರ್ವಾಂಗ ದೇಹದ ಪರಿಚಲನ ವ್ಯವಸ್ಥೆಗಳ ಪರಿಚಯ:
ರಕ್ತಪರಿಚಲನಾ ವ್ಯವಸ್ಥೆಯನ್ನು ಹೃದಯನಾಳದ ವ್ಯವಸ್ಥೆ ಅಥವಾ ರಕ್ತನಾಳೀಯ ಎಂಬ ಹೆಸರಿನಿಂದ ಕರೆಯುತ್ತಾರೆ. ಇದು ಒಂದು ಅಂಗ ವ್ಯವಸ್ಥೆ. ರಕ್ತವು ಪೋಷಕಾಂಶಗಳ ಅಮೈನೊ ಆಮ್ಲ ಹಾಗು ಎಲೆಕ್ಟ್ರೋಲೈಟ್ಸ್ಗಳನ್ನೂ ಆಮ್ಲಜನಕವನ್ನೂ ದೇಹದ ವಿವಿಧ ಕೋಶಗಳಿಗೆ ಪೂರೈಕೆ ಮಾಡುವುದು; ಇಂಗಾಲದ ಡೈಆಕ್ಸೈಡ್ನ್ನು ಹೊರಹಾಕಲು ಸಹಾಯ ಮಾಡುವುದು; ಹಾರ್ಮೋನುಗಳು ಮತ್ತು ರಕ್ತ ಕಣಗಳಿಗೆ ಪೋಷಣೆಯನ್ನು ಒದಗಿಸುವುದು; ಮತ್ತು ರೋಗಗಳ ವಿರುದ್ಧ ಹೋರಾಟ ಮಾಡಲು ಸಹಾಯ ಮಾಡುವುದು; ಉಷ್ಣತೆ ಮತ್ತು ಪಿಎಚ್ ಸ್ಥಿರಗೊಳಿಸಿ ಸಂತುಲನವನ್ನು/ ಸಮತೋಲನವನ್ನು ನಿರ್ವಹಿಸುವುದು ಇವು ರಕ್ತ ಪರಿಚಲನೆಯಲ್ಲಿ ನಡೆಯುವ ಕೆಲಸ.
ರಕ್ತ ಹರಿವಿನ ಅಧ್ಯಯನವನ್ನು ಹೆಮೊಡೈನಮಿಕ್ಸ್ ಎಂದು ಕರೆಯುತ್ತಾರೆ. ರಕ್ತದ ಹರಿವಿನ ಗುಣಗಳ ಅಧ್ಯಯನವನ್ನು ಹೆಮೊರಿಯೊಲೊಜಿ ಎಂದು ಕರೆಯುತ್ತಾರೆ. ರಕ್ತಪರಿಚಲನಾ ವ್ಯವಸ್ಥೆಯು ಸಾಮಾನ್ಯವಾಗಿ ಎರಡು ಪ್ರತ್ಯೇಕ ವ್ಯವಸ್ಥೆಯನ್ನು ಒಳಗೊಂಡಿದೆ. ಒಂದನೆಯದು ಹೃದಯನಾಳದ ವ್ಯವಸ್ಥೆ, ಇದರಲ್ಲಿ ರಕ್ತ ವಿತರಿಸುವ ಕ್ರಮವನ್ನು ಕಾಣಬಹುದು; ಇನ್ನೊಂದು ದುಗ್ಧನಾಳ ವ್ಯವಸ್ಥೆ; ಇದು ದುಗ್ಧರಸಗಳು ದುಗ್ಧರಸ ಗ್ರಂಥಿ (Lymph Node) ದೇಹದಲ್ಲಿ ಪ್ರಸರಣವಾಗುವ ಕ್ರಮ. ಈ ದುಗ್ಧರಸದ ಪರಿಚಲನೆಯು ರಕ್ತದ ಪರಿಚಲನೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ರಕ್ತವು ಪ್ಲಾಸ್ಮಾ, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಹಾಗು ಕಿರುಬಿಲ್ಲೆಗಳನ್ನು ಒಳಗೊಂಡ ಹೃದಯದಿಂದ ಪ್ರಸರಣವಾಗುವ ದ್ರವ. ದೇಹದ ಎಲ್ಲಾ ಅಂಗಾಂಶಗಳಿಗೆ ದೇಹದ ಜೀವ ಕೋಶಗಳಿಗೆ, ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಒದಗಿಸುವ ಮತ್ತು ತ್ಯಾಜ್ಯ ವಸ್ತುಗಳನ್ನು ದೇಹದ ಎಲ್ಲಾ ಜೀವಕೋಶಗಳಿಂದ ತೆಗೆದುಕೊಂಡು ನಿವಾರಿಸುವ ಕಶೇರುಕ ನಾಳೀಯ ಪರಿಚಲನಾ ವ್ಯವಸ್ಥೆ (ಮೇಲ್ತರದ ಬೆನ್ನೆಲುಬುಳ್ಳ ಪ್ರಾಣಿಗಳ ರಕ್ತ ಪರಿಚಲನೆಯ ಕ್ರಮ).
ಇದು (ದುಗ್ಧಪರಿಚಲನ ವ್ಯವಸ್ಥೆ); (ಜೀವಕೋಶಗಳ ನಡುವೆ ಇರುವ ಜಾಗದಲ್ಲಿ ಇರುವ ದ್ರವ) ತೆರಪಿನದ್ರವ ಸೋಸಿದ(ಫಿಲ್ಟರ್) ನಂತರದ ದುಗ್ಧರಸವು ಹೆಚ್ಚುವರಿ ರಕ್ತದ ಪ್ಲಾಸ್ಮಾದ ಮರುಬಳಕೆಯಾಗಿದೆ, ಅದು ತೆರಪಿನ ದ್ರವ (ಜೀವಕೋಶಗಳ ನಡುವಿನ ಜಾಗದ್ದು) ಸೋಸಿರುವ (ಫಿಲ್ಟರ್’ಡ್) ರಕ್ತದ ಪ್ಲಾಸ್ಮಾ ವನ್ನು ದುಗ್ಧನಾಳಕ್ಕೆ ಹಿಂದಿರುಗಿಸುತ್ತದೆ. ದುಗ್ಧರಸ ನಾಳಗಳ ದುಗ್ಧರಸ ಸಾಗಿಸುವ ತೆಳುವಾದ ಮಾಂಸದ ಗೋಡೆಯ, ಕವಾಟಗಳನ್ನೊಳಗೊಂಡಿರುವ ರಚನೆಗಳಾಗಿವೆ. ದುಗ್ಧನಾಳ ವ್ಯವಸ್ಥೆ ಭಾಗವಾಗಿ, ದುಗ್ಧರಸ ನಾಳಗಳ ಹೃದಯನಾಳದ (ರಕ್ತಪರಿಲನೆ) ವ್ಯವಸ್ಥೆ ಪೂರಕವಾಗಿರುತ್ತವೆ. ದುಗ್ಧರಸ ನಾಳಗಳು ಎಂಡೋಥೆಲಿಯಲ್ ಜೀವಕೋಶಗಳ ಮೂಲಕ ದ್ರವವನ್ನು ಪೂರೈಸುವುದು, ಮತ್ತು ಇದರ ನಾಳ ಮೆದು ಸ್ನಾಯುಗಳ ಒಂದು ತೆಳುವಾದ ಹೊಂದಿವೆ,Lymphatic vessel
1)ಹೃದಯನಾಳದ ವ್ಯವಸ್ಥೆಯು ರಕ್ತ, ಹೃದಯ ಮತ್ತು ರಕ್ತನಾಳಗಳನ್ನು ಒಳಗೊಂಡಿದೆ. (ಕಾರ್ಡಿಯೋವೆಸ್ಕುಲರ್ ಪದ "ಹೃದಯ" ಮತ್ತು "ಹಡಗಿನ/ನಾವೆ" ಎಂಬ ಅರ್ಥದ ಲ್ಯಾಟಿನ್ ಪದಗಳಿಂದ ಬಂದಿದೆ).
2) ದುಗ್ಧಪರಿಚಲನ ವ್ಯವಸ್ಥೆಯು, ದುಗ್ಧರಸ, ದುಗ್ಧ ಗ್ರಂಥಿಗಳು, ಮತ್ತು ದುಗ್ಧರಸ ನಾಳಗಳು ಇವುಗಳನ್ನು ಒಳಗೊಂಡಿದೆ. ಈ ದುಗ್ಧಪರಿಚಲನೆ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ ಮತ್ತ ರಕ್ತದಲ್ಲಿ ರಸಾಯನಿಕ ಸಮತೋಲನವನ್ನು ಕಾಯುವುದು.
ಮನುಷ್ಯ ಮತ್ತು ಇತರ ಕಶೇರುಕಗಳಲ್ಲಿ, (ಕ್ಷಿಪ್ತ) ಆವೃತ ಅಥವಾ ಮಚ್ಚಿದ ಹೃದಯನಾಳದ ವ್ಯವಸ್ಥೆಯನ್ನು ಹೊಂದಿದೆ (ರಕ್ತ ಅಪಧಮನಿಗಳು, ಅಭಿಧಮನಿಗಳು ಮತ್ತು ಲೋಮನಾಳಗಳು; (ರಕ್ತವು ಜಾಲವನ್ನು/ನಾಳವನ್ನು ಬಿಡುವುದಿಲ್ಲ ಎಂದು ಅರ್ಥ, ಕೆಲವು ಅಕಶೇರುಕ ಗುಂಪುಗಳು ಮುಕ್ತ (ತೆರೆದ) ಹೃದಯನಾಳದ ವ್ಯವಸ್ಥೆ ಹೊಂದಿವೆ. ಆದರೆ ಈ ಮುಂದುವರೆದ ಪ್ರಾಣಿಗಳಲ್ಲೂ ದುಗ್ಧಪರಿಲನಯ ಮುಕ್ತ ವ್ಯವಸ್ಥೆಯಲ್ಲಿ ತೆರಪಿನ ದ್ರವ (ನಾಳವಿಲ್ಲದ) ಪರಿಚಲನೆ ಇದೆ. ಈ ರಕ್ತಪರಿಚಲನೆಯ ವ್ಯವಸ್ಥೆಯಲ್ಲಿ ಹೆಚ್ಚುವರಿ ತೆರಪಿನ ದ್ರವಕ್ಕೆ(ಜೀವಕೋಶಗಳ ನಡುವಿರುವ ರಸ), ರಕ್ತಕ್ಕೆ ಮರಳಲು ಮಾರ್ಗಗಳನ್ನು ಒದಗಿಸುತ್ತವೆ. ಹೆಚ್ಚು ಪ್ರಾಚೀನ ಜೋಡಿಕೋಶ (ಡಿಪ್ಲೊಬ್ಲಾಸ್ಟಿಕ್) ಪ್ರಾಣಿ ಫೈಲ ವ್ಯವಸ್ಥೆಗಳಲ್ಲಿ ನಾಳ ಪರಿಚಲನೆ ವ್ಯವಸ್ಥೆಯಿಲ್ಲ. [8][9][10][11]
ಶಾರೀರಕ ರಕ್ತಪರಿಚಲನೆ
ಶಾರೀರಕ ರಕ್ತಪರಿಚಲನೆಯು, ಶ್ವಾಸಕೋಶ ಹೊರತುಪಡಿಸಿ ದೇಹದ ಎಲ್ಲಾ ಭಾಗಗಳಲ್ಲಿ ರಕ್ತ ಪರಿಚಲನಾ ವ್ಯವಸ್ಥೆಯಾಗಿದೆ. ಶ್ವಾಸಕೋಶದಿಂದ ಹೊರಟ ಶುದ್ಧ ರಕ್ತವು ಶ್ವಾಸ ಶುದ್ಧರಕ್ತನಾಳಗಳ (the pulmonary vein) ಮೂಲಕ ಎಡ ಹೃತ್ಕರಣವನ್ನು ಹೋಗಿ ಸೇರುತ್ತದೆ.[12]
ಸಂಕ್ಷಿಪ್ತ ನಿರೂಪಣೆ
ಶಾರೀರಕ ರಕ್ತಪರಿಚಲನೆಯು, ರಕ್ತಪರಿಚಲನಾ ವ್ಯವಸ್ಥೆಯ ಪ್ರಮುಖ ಭಾಗ. ರಕ್ತ ನಾಳಗಳ ಜಾಲವಾದ ಶುದ್ಧರಕ್ತನಾಳಗಳು (ಅಪಧಮನಿಗಳು) ಹೃದಯದಿಂದ ಆಮ್ಲಜನಕಯುಕ್ತ ರಕ್ತವನ್ನು ದೇಹದಲ್ಲಿ ಪರಿಚಲಿಸಿ ದೇಹದ ಜೀವಕೋಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ.ಹೀಗೆ ಆಮ್ಲಜನಕ ಒದಗಿಸಲು ಅತ್ಯಂತ ಸೂಕ್ಷ್ಮ ಲೋಮನಾಳಗಳಾಗಿ ಪರಿವರ್ತನೆಹೊಂದಿ, ಅವು ಇಂಗಾಲಾಮ್ಲ ಮತ್ತು ತ್ಯಾಜ್ಯಗಳನ್ನು ಸಂಗ್ರಹಿಸಿಕೊಂಡು ಒಟ್ಟು ಸೇರಿ ದೊಡ್ಡ ಅಶುದ್ಧರಕ್ತನಾಳಗಳಾಗುತ್ತವೆ. ನಂತರ ಆ ಅಶುದ್ಧರಕ್ತನಾಳಗಳು (ಅಭಿಧಮನಿಗಳು), ಹೃದಯಕ್ಕೆ -ಹೃದಯದ ಬಲ ಹೃತ್ಕರಣಕ್ಕೆ (ಬಲದ ಮೇಲಿನ ಕೋಣೆ) ಆಮ್ಲಜನಕ ರಹಿತವಾಗಿರುವ ರಕ್ತವನ್ನು ಹಿಂದಿರುಗಿಸುತ್ತವೆ. ಈ ವ್ಯವಸ್ಥೆಯಲ್ಲಿ ರಕ್ತನಾಳಗಳ ಉದ್ದ ಮಾನವ ದೇಹದಲ್ಲಿ (ಅಳತೆಯ ಪ್ರಕಾರ) ಸುಮಾರು 60,000 ಮೈಲಿ (96,560 ಕಿಲೋಮೀಟರ್).[13]
ರಕ್ತಪರಿಚಲನೆ ವಿವರ
ಹೃದಯಾಂಗ ರಕ್ತ ಪರಿಚಲನೆ
*ಹೃದಯದ ಮೇಲಿನ ಭಾಗವಾದ ಬಲ ಹೃತ್ಕರ್ಣಕ್ಕೆ ಹಿಂದಿರುಗಿದ ರಕ್ತವು ಪುನಃ ಆಮ್ಲಜನಕ ಪಡೆಯಲು ಮತ್ತು ಇಂಗಾಲದ ಡೈ ಆಕ್ಸೈಡ್ ತೆಗೆಯಲು ಶ್ವಾಸಕೋಶಗಳಿಗೆ ಹೋಗಿ ಆಮ್ಲಜನಕಯುಕ್ತ ರಕ್ತವನ್ನು ಪಡೆಯುತ್ತದೆ. ಅದು ಶ್ವಾಸ ಶುದ್ಧರಕ್ತನಾಳಗಳ (ಪಲ್ಮನರಿ ವೆಯಿನ್) ಮೂಲಕ ಎಡ ಹೃತ್ಕರ್ಣಕ್ಕೆ ಹಿಂದಿರುಗುವುದು. ಅಲ್ಲಿಂದ ಅದು ಬಲಿಷ್ಟವಾದ ಎಡ ಹೃತ್ಕರಣ ಸಂಕುಚಿಸಿ ದ್ವಿದಳ ಕವಾಟಗಳ ಮೂಲಕ ಬಲಿಷ್ಟ ಎಡ ಹೃತ್ಕುಕ್ಷಿಗೆ ತಳ್ಳುವುದು. ಅಲ್ಲಿಂದ ಶುದ್ಧರಕ್ತವು ಅಯೋರ್ಟಾ ಎಂಬ ದೇಹದ ಅತಿ ದೊಡ್ಡ ಶುದ್ಧರಕ್ತನಾಳ (ಮಹಾಪಧಮನಿಯ) ಮೂಲಕ ದೇಹದ ವಿವಿಧ ಭಾಗಗಳಿಗೆ ಪರಿಚಲಿಸುವುದು. ಸತತ ದುಡಿಯುವ ಹೃದಯ ತನ್ನ ಪೋಷಕ ಪಾಲನ್ನು ಮೊದಲು ಪಡೆಯುವುದು. ಹೃದಯದ ಸ್ನಾಯುಗಳಿಗೆ ಪೋಷಕಾಂಶ ಒದಗಿಸಲು ಆಯೋರ್ಟ ರಕ್ತನಾಳದ ಮೂಲದಲ್ಲಿಯೇ ಶುದ್ಧರಕ್ತದ ಎರಡು ನಾಳಗಳ ಕವಲು-ನಾಳಗಳ ಮೂಲಕ ಆರಂಭವಾಗುತ್ತದೆ. ಅವು ಬಲಹೃದಯನಾಳ ಮತ್ತು ಎಡ ಹೃದಯನಾಳಗಳು. (ಬಲ ಮತ್ತು ಎಡ ಕರೊನರಿ ಆರ್ಟರಿಗಳು).
* ಈ ಎಡ ಮತ್ತು ಬಲ ನಾಳಗಳು ಹೃದಯದ ಸ್ನಾಯುಗಳಿಗೆ ಪೋಷಕಾಂಶಗಳನ್ನು ಮತ್ತು ಆಮ್ಲಜನಕವನ್ನು ಒದಗಿಸಿದ ನಂತರ ಎರಡು ಅಶುದ್ಧಕ್ತನಾಳಗಳ (ಕರೋನರಿ ವೆಯಿನ್ಸ್ ಗಳ) ಮೂಲಕ ಬಲ ಹೃತ್ಕರ್ಣದ ಒಳಗೆ ಕರೊನರಿಸೈನಸ್ ಮೂಲಕ ಸೇರುತ್ತದೆ. ಹೃತ್ಕರ್ಣದ ಸಂಕುಚನ ಸಮಯದಲ್ಲಿ ಆ ರಕ್ತ ಹಿಂದಿರುಗದಂತೆ ಥೆಬೇಸಿಯನ್ ಕವಾಟವು (ಸೈನಸ್ ಕವಾಟ) ಮುಚ್ಚಿಕೊಂಡು ರಕ್ತವು ಹಿಂದಿರುಗಿವುದನ್ನು ತಡೆಯುತ್ತದೆ. ಹೃದಯದ ಕಶ್ಮಲವನ್ನು ಸಂಗ್ರಹಿಸಿದ ರಕ್ತದ ಚಿಕ್ಕ ಮಲಿನನಾಳಗಳು ನೇರವಾಗಿ ಹೃದಯದಲ್ಲಿ (ಹೆಚ್ಚು ಬಲಹೃತ್ಕರಣದಲ್ಲಿ) ಸ್ರವಿಸುತ್ತವೆ. ಃಈಗೆ ಹೃದಯವು ಶುದ್ಧ ಮತ್ತು ಮಲಿನ ರಕ್ತನಾಳಗಳ ಪ್ರತ್ಯೇಕ ವ್ಯವಸ್ಥೆಯನ್ನು ಹೊಂದಿದೆ.
ಮೆದುಳಿನ ಪರಿಚಲನೆ
ಮೆದುಳಿನ ಪರಿಚಲನೆಯು ಮೆದುಳಿನ ರಕ್ತ ನಾಳಗಳ ಜಾಲದ ಮೂಲಕ ರಕ್ತದ ಚಲನೆಯಿಂದ ಆಮ್ಲ ಜನಕ ಮತ್ತು ಪೋಷಕಾಂಶಗಳನ್ನು ಮೆದುಳಿಗೆ ಸರಬರಾಜು ಮಾಡುವ ಕ್ರಮ. ವಯಸ್ಕ ಮೆದುಳಿನ ರಕ್ತದ ಹರಿವಿನ ದರ, ಸಾಮಾನ್ಯವಾಗಿ ಹೃದಯ ಹೊರಹಾಕುವ (ತಳ್ಳುವ) 15% ನಷ್ಟು ಮತ್ತು ನಿಮಿಷಕ್ಕೆ 750 ಮಿಲಿಲೀಟರ್ಗಳಷ್ಟು.
ಶುದ್ಧರಕ್ತನಾಳಗಳು (ಅಪಧಮನಿಗಳು) ಆಮ್ಲಜನಕಯುಕ್ತ ರಕ್ತವನ್ನೂ, ಗ್ಲೂಕೋಸ್ ಮತ್ತು ಇತರೆ ಪೋಷಕಾಂಶಗಳನ್ನೂ ಮೆದುಳಿನ ಜೀವಕೋಶಗಳಿಗೆ ಕ್ಷಣವೂ ಬಿಡುವಿಲ್ಲದಂತೆ ತಲುಪಿಸುವುದು. ಅಲ್ಲಿನ ಮಲಿನ ರಕ್ತನಾಳಗಳು ಇಂಗಾಲಾಮ್ಲ, ಲ್ಯಾಕ್ಟಿಕ್ ಆಮ್ಲ, ಮತ್ತು ಇತರ ಚಯಾಪಚಯ ಉತ್ಪನ್ನಗಳನ್ನು ತೆಗೆದುಕೊಂಡು, ಆಮ್ಲಜನಕ ರಹಿತವಾಗಿರುವ ರಕ್ತವನ್ನು ಮತ್ತೆ ಹೃದಯಕ್ಕೆ ಸಾಗಿಸುವುವು.
ಏಕೆಂದರೆ,ಮೆದುಳು ಅದರ ರಕ್ತ ಪೂರೈಕೆ ವಿಷಯದಲ್ಲಿ ಹೊಂದಾಣಿಕೆಯಿಲ್ಲದ್ದು, ಬಹಳ ದುರ್ಬಲ, ಕ್ಷಣವೂ ರಕ್ತ ಪೂರೈಕೆಯಿಲ್ಲದೆ ಇರಲಾರದು. ಆದ್ದರಿಂದ ಮೆದುಳಿನ ರಕ್ತಪರಿಚಲನಾ ವ್ಯವಸ್ಥೆಯು ಅನೇಕ ರಕ್ಷಣೋಪಾಯಗಳನ್ನು ಹೊಂದಿದೆ. ಮಸ್ತಿಷ್ಕದ ಅಪಘಾತಗಳಲ್ಲಿ ಈ ರಕ್ಷಣೋಪಾಯಗಳ (ರಕ್ತದ ಪೂರೈಕೆ) ವೈಫಲ್ಯದ ಫಲಿತಾಂಶವನ್ನು ಸಾಮಾನ್ಯವಾಗಿ ಪಾರ್ಶ್ವವಾಯು (cerebrovascular accidents,commonly known as strokes) ಎಂದು ಕರೆಯಲಾಗುತ್ತದೆ. ಮೆದುಳಿನ ಪರಿಚಲನೆ ವಾಹಕವಾದ ರಕ್ತದ ಪ್ರಮಾಣವನ್ನು ಮೆದುಳಿನ ರಕ್ತದ ಹರಿವು (cerebral blood flow) ಎಂದು ಕರೆಯಲಾಗುತ್ತದೆ.
ಮೆದುಳಿಗೆ ರಕ್ತ ಪೂರೈಕೆ
ಮೆದುಳಿಗೆ ರಕ್ತ ಪೂರೈಕೆಯು ಸಾಮಾನ್ಯವಾಗಿ ಮೆದುಳಿಗೆ ರಕ್ತ ಪೂರೈಸುವ ವಿವಿಧ ಶುದ್ಧರಕ್ತನಾಳಗಳಿಗೆ ಸಂಬಂಧಿಸಿದ ‘ಮುಂಭಾಗದ ಮತ್ತು ಹಿಂಭಾಗದ’ ವು ಎಂದು ಎರಡು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವು, ಶುದ್ಧರಕ್ತನಾಳಗಳ ಎರಡು ಮುಖ್ಯ ಜೋಡಿ; ಆಂತರಿಕ ಶೀರ್ಷಧಮನಿ ಅಪಧಮನಿ (ಶುದ್ಧರಕ್ತನಾಳ) (ಮುಂದಿನ ಮೆದುಳಿನ ಸರಬರಾಜು ವ್ಯವಸ್ಥೆ) ಮತ್ತು ಬೆನ್ನುಮೂಳೆಯ ಅಪಧಮನಿಗಳು (ಹಿಂಭಾಗದ ಮೆದುಳು ಮತ್ತು ಮೆದುಳಿನ ಬುಡಕ್ಕೆ ಸರಬರಾಜು ವ್ಯವಸ್ಥೆ).
ಮುಂಭಾಗದ ಮತ್ತು ಹಿಂಭಾಗದ ಮೆದುಳಿನ ರಕ್ತ ಪ್ರಸರಣ ಪರಸ್ಪರ ಸಂಬಂಧ ಹೊಂದಿವೆ; ದ್ವಿಪಕ್ಷೀಯ ಹಿಂಭಾಗದನಾಳಕ್ಕೆ ಸಂವಹನ ಹೊಂದಿದ ಅಪಧಮನಿಗಳ ವ್ಯವಸ್ಥೆ ಹೊಂದಿದೆ (ಒಂದರಿಂದ ಮತ್ತೊಂದು ಅಗತ್ಯಬಿದ್ದಾಗ ರಕ್ತ ಪಡೆಯುವ ವ್ಯವಸ್ಥೆ).
ಅವು ವಿಲ್ಲೀಸ್ ವೃತ್ತದ, ಭಾಗವಾಗಿದೆ. ಮೆದುಳಿಗೆ ಬೆಂಬಲ (ಬ್ಯಾಕ್ಅಪ್) ಪರಿಚಲನೆ ಒದಗಿಸುತ್ತದವೆ. ಒಂದು ನಾಳ ಮುಚ್ಚಿದ (ರಕ್ತ ಕಟ್ಟಿದ) ಸಂದರ್ಭದಲ್ಲಿ ಪರಸ್ಪರ ತೆರೆದು ಮುಂಭಾಗದ ಮೆದುಳಿನ ಚಾವಣಿ ಮತ್ತು ಹಿಂಭಾಗದ ತಲ ಮೆದುಳಿನ ಉದ್ದಕ್ಕೂ ಪರಿಚಲನೆ ನಡುವೆ ಅಂತರಸಂಪರ್ಕಗಳನ್ನು ಒದಗಿಸುತ್ತದೆ. ಹೀಗೆ ಸಂಬಂಧಕಲ್ಪಿಸಿ ಅಪಧಮನಿಗಳು ರಕ್ತ ಪೂರೈಕೆ ಮಾಡುತ್ತವೆ, ವಿಲ್ಲೀಸ್ ಸರ್ಕಲ್ ಇಲ್ಲದಿದ್ದರೆ ರಕ್ತಕೊರತೆಯ ಆಗಿ ಎಂದು ಅಂಗಾಂಶಗಳಿಗೆ ರಕ್ತ ಕೊರತೆಯಾಗಿ ಅಪಾಯ ಒದಗುವುದು,. (Circle of Willis :ವಿಲ್ಲೀಸ್ ಎಂಬ ವಿಜ್ಞಾನಿ ಈ ರಕ್ತಪರಿಚಲನೆಯನ್ನು ಪರಿಚಯಿಸಿದವ)
ಮುಂಭಾಗದ ಮೆದುಳಿನ ಪರಿಚಲನೆಯು ಮೆದುಳಿನ ಮುಂಭಾಗದ ಭಾಗಕ್ಕೆ ರಕ್ತ ಪೂರೈಕೆಯು ವ್ಯವಸ್ಥೆ. ಇದು ಕೆಳಗಿನ ಅಪಧಮನಿಗಳಿಂದ ಪೂರೈಸಲಾಗುವುದು. (ಶೀರ್ಷಧಮನಿ ಅಪಧಮನಿ= ಕೆರೋಟಿಡ್ ಆರ್ಟರಿಗಳು):
1.ಆಂತರಿಕ ಶೀರ್ಷಧಮನಿ ಅಪಧಮನಿ: ಕುತ್ತಿಗೆ ಸಾಮಾನ್ಯ ಶೀರ್ಷಧಮನಿ ಅಪಧಮನಿಯ ಒಂದೇ ದೊಡ್ಡ ಅಪಧಮನಿಯ ಎಡ ಮತ್ತು ಬಲ ಕವಲುಗಳು; ಇವು ತಲೆಬುರುಡೆಯ ಒಳಗೆ ಪ್ರವೇಶ ಮಾಡುವುವು. ಇದಕ್ಕೆ ಬದಲಾಗಿ ಮುಂಭಾಗದ ಮೆದುಳಿನ ಶೀರ್ಷಧಮನಿ ಅಪಧಮನಿಯ ಬಾಹ್ಯ ಶಾಖೆಗಳು ಮುಖದ ಅಂಗಾಂಶಗಳಿಗೆ ರಕ್ತ ಪೂರೈಕೆ ಮಾಡುವುವು. . ಆಂತರಿಕ ಶೀರ್ಷಧಮನಿ ಅಪಧಮನಿಯ ಶಾಖೆಗಳು ಮಧ್ಯಮ ಮೆದುಳಿನ ಅಪಧಮನಿ ರೂಪಿಸಲು ಮುಂದುವರಿಯುತ್ತದೆ.
2.ಮುಂಭಾಗದ ಮೆದುಳಿನ ಅಪಧಮನಿ (ಎಸಿಎ)-(Anterior cerebral artery :ACA)
ಮುಂಭಾಗದ ಸಂವಹನ ಅಪಧಮನಿ: ಮೆದುಳಿನ ಚಾವಣಿ ಒಳಗಿನ ಮತ್ತು ತಲದ ನಾಳಗಳ ಜೊತೆಗೆ, ಮುಂಭಾಗದ ಮಿದುಳಿನ ಈ ಎರಡೂ ಅಪಧಮನಿಗಳನ್ನು ಸಂಪರ್ಕಿಸುತ್ತದೆ.
3.(ಮಧ್ಯ ಮೆದುಳಿನ ಆರ್ಟರಿ :ಎಂಸಿಎ) (Middle cerebral artery: MCA)
ಹಿಂಭಾಗದ ಮೆದುಳಿನ ಪರಿಚಲನೆ: ಹಿಂಭಾಗದ ಮೆದುಳಿನ ಪರಿಚಲನೆಯು ಮೆದುಳಿನ ಹಿಂಭಾಗಕ್ಕೆ, ರಕ್ತ ಪೂರೈಕೆಯು ವ್ಯವಸ್ಥೆ. ಆಕ್ಸಿಪಿಟಲದ ಹಾಲೆಗಳು, ಕಿರುಮೆದುಳು ಮತ್ತು ಮೆದುಳುಕಾಂಡ ಸೇರಿದಂತೆ ಮೆದುಳಿನ ಪರಿಲನೆ. ಇದು ಕೆಳಗಿನ ಅಪಧಮನಿಗಳಿಂದ ಪೂರೈಸಲಾಗುತ್ತದೆ.
ಬೆನ್ನುಮೂಳೆ ಅಪಧಮನಿಗಳು: ಸಬ್ ಕ್ಲೇವಿಯನ್ ಅಪಧಮನಿಗಳಿಂದ ಸಣ್ಣ ಅಪಧಮನಿಗಳ ಶಾಖೆಗಳು. ಪ್ರಾಥಮಿಕವಾಗಿ ಭುಜಗಳು, ಪಾರ್ಶ್ವದ ಎದೆ ಮತ್ತು ತೋಳುಗಳಿಗೆ ರಕ್ತ ಪೂರೈಕೆ ಮಾಡುವುದು. ಬುರುಡೆ ಚಿಪ್ಪಿನೊಳಗೆ ಈ ಎರಡು ಬೆನ್ನುಮೂಳೆ ಅಪಧಮನಿಗಳು ತಲದ ಅಪಧಮನಿಯೊಂದಿಗೆ ಬೆಸೆಯುವುದು.. ಜೋಡಿ; ಆಂತರಿಕ ಶೀರ್ಷಧಮನಿ ಅಪಧಮನಿ (ಶುದ್ಧರಕ್ತನಾಳ) (ಮುಂದಿನ ಮೆದುಳಿನ ಸರಬರಾಜು ವ್ಯವಸ್ಥೆ) ಮತ್ತು ಬೆನ್ನುಮೂಳೆಯ ಅಪಧಮನಿಗಳು (ಹಿಂಭಾಗದ ಮೆದುಳು ಮತ್ತು ಮೆದುಳಿನ ಬುಡಕ್ಕೆ ಸರಬರಾಜು ವ್ಯವಸ್ಥೆ).[15]
ಉದರಕ್ಕೆ ಶುದ್ಧ ರಕ್ತ ಪೂರೈಕೆ: ಉದರದ ಶುದ್ಧ ರಕ್ತನಾಳವನ್ನು ಕೊಯಿಲಿಯಾಕ್ ಕಾಂಡ(ಸ್ಟೆಮ್); ಉದರದ ನಾಳ , ಅಥವಾ ಟ್ತಂಕಸ್ ಕೊಇಲಿಯಾಕಸ್ ಎಂದು ಕರಯುತ್ತಾರೆ, ಇದು ಹೊಟ್ಟೆಯಲ್ಲಿರುವ ಅಯೋರ್ಟಾದ ಮೊದಲ ಪ್ರಮುಖ ಶಾಖೆ. ಉದ್ದ 1.25 ಸೆಂ.ಮೀ. ಮಾನವರಲ್ಲಿ ಎದೆಗೂಡಿನ ವರ್ಟೆಬ್ರಾದ 12 (ಟಿ 12) ಮಣಿಯ ಬಳಿ ಅಯೋರ್ಟಾದಿಂದ ಹೊರಟ ಕವಲುನಾಳ. ಇದು ಕಿಬ್ಬೊಟ್ಟೆಯ ಅಯೋರ್ಟಾದ ಮೂರು ಮುಂಭಾಗದ ಕವಲುಗಳಲ್ಲಿ ಮಧ್ಯದ ಶಾಖೆ. (ಇತರ ಮೇಲನ ಮತ್ತು ಕೆಳಗಿನ ಮೆಸಂಟರೀಯ ಶುದ್ಧರಕ್ತನಾಳಗಳು ಇವೆ). ಸಣ್ಣ ಕರುಳಿನ ಉದರದ ನಾಳ ಮತ್ತು ಮೇಲಿನ ಮೆಸಂಟರೀಯ ಶುದ್ಧರಕ್ತನಾಳದಿಂದ ರಕ್ತದ ಪೂರೈಕೆಯನ್ನು ಸ್ವೀಕರಿಸುವುದು. ಇವು ಅರ್ಯೋಟಾದ ಎರಡು ಶಾಖೆಗಳು. ಕಿಬ್ಬೊಟ್ಟೆ (ಡಿಯೋಡಿನಂ) ಕೊಯಿಲಿಯಾಕ್ ಕಾಂಡದಿಂದ ಮೇಲಿನ ಮೇದೋಜೀರ-ಕಿಬ್ಬೊಟ್ಟೆ ಶುದ್ಧ ರಕ್ತನಾಳದ ಮೂಲಕ ಶುದ್ಧ ರಕ್ತವನ್ನು ಪಡೆಯುವುದು. ಮತ್ತು (via the superior pancreaticoduodenal artery) ಮೂಲಕ ಉದರದ ಕಾಂಡದ ನಾಳ ಕೆಳಗಿನ ಮೆಸೆಂಟ್ರಿಕ್ ಮೆಸಂಟರೀಯ ಶುದ್ಧರಕ್ತ ನಾಳದಿಂದಲೂ (the inferior pancreaticoduodenal artery) ರಕ್ತವನ್ನು ಪಡೆಯುತ್ತದೆ. ಈ ಎರಡು ಅಪಧಮನಿಗಳು ಎರಡೂ ಮಿಡ್ಲೈನ್ ಮತ್ತು ಅಡ್ಡಕೂಡು (ಮಧ್ಯದಲ್ಲಿ ಕೂಡಿಕೊಂಡಿವೆ) ಪೂರೈಸಲು ಮುಂಭಾಗದ ಮತ್ತು ಹಿಂಭಾಗದ ಶಾಖೆಗಳನ್ನು ಹೊಂದಿವೆ.
ಯಕೃತ್ತು: ಯಕೃತ್ತಿನ ಅಪಧಮನಿ ಮತ್ತು ಅಭಿಧಮನಿ ಎಂಬ ಎರಡು ಶುದ್ಧ ದೊಡ್ಡ ರಕ್ತ ನಾಳಗಳಿಗೆ ಸಂಪರ್ಕ ಹೊಂದಿದೆ. ಇವು (ಅಯೋರ್ಟಾ) ಮಹಾಪಧಮನಿಯ ಆಮ್ಲಜನಕಭರಿತ ರಕ್ತವನ್ನು ಒಯ್ಯುತ್ತದೆ. ಯಕೃತ್ತಿನ ಅಪಧಮನಿಗಳು ಅಭಿಧಮನಿ ಇಡೀ ಜೀರ್ಣಾಂಗವ್ಯೂಹದಿಂದ ಜೀರ್ಣವಾಗಿರುವ ಪೋಷಕಾಂಶಗಳಿಂದ ಶ್ರೀಮಂತವಾಗಿದೆ, ಮತ್ತು ಗುಲ್ಮ ಮತ್ತು ಮೇದೋಜೀರಕ ಗ್ರಂಥಿಯಿಂದಲೂ ರಕ್ತವನ್ನು ಪಡೆಯುತ್ತದೆ. ಆದರೆ. [8]ಈ ರಕ್ತ ನಾಳಗಳು ಯಕೃತ್ತಿನ ಸೈನಸಾಯ್ಡ್ಗಳು ಎಂದು ಸಣ್ಣ ಸೂಕ್ಷ್ಮನಾಳಗಳಾಗಿ ವಿಭಾಗಿಸಲ್ಪಡುತ್ತವೆ, ನಂತರ ಅವು ಯಕೃತ್ತಿನ ಸೂಕ್ಷ್ಮ ನಾಳಗಳಾದ ಕಿರುಹಾಲೆಗಳಿಗೆ ಸೇರುತ್ತವೆ. [16]
ರಕ್ತದ ಆಹಾರ ಸಂಗ್ರಹಣೆ
ಸಣ್ಣಕರುಳಿನಲ್ಲಿ ಲೆಕ್ಟೀಲ್ (ದುಗ್ಧನಾಳ)ಎಂಬ ಆಹಾರ ನಾಳಗಳಿವೆ. ಇಂಥ ಏರ್ಪಾಟಿನಿಂದ ಆಹಾರವನ್ನು ರಕ್ತಕ್ಕೊದಗಿಸುವ ಬಹುದೊಡ್ಡ ಕೆಲಸ ಇಲ್ಲಿ ನಡೆಯುತ್ತದೆ. ಇಲ್ಲಿ ಸೂಕ್ಷ್ಮ ರಕ್ತನಾಳಗಳೂ ಲೆಕ್ಟೀಲುಗಳೂ ಜೊತೆಗೂಡಿ ಕೆಲಸ ಮಾಡುತ್ತವೆ. ಕರುಳಿನ ಒಳಗೋಡೆಯಲ್ಲಿ ಸೂಕ್ಷ್ಮ ಲೋಮಗಳ ಮೈತುಂಬ ಸಣ್ಣ ಕಣಗಳಿವೆ. ಅಲ್ಲಿ ಪಚನಗೊಂಡ ಗ್ಲಿಜರೀನು ಮತ್ತು ಕೊಬ್ಬಿನ ದ್ರಾವಕಗಳಂಥ ವಸ್ತುಗಳು ಬೆರೆತು ಹಾಲಿನಂಥ ಒಂದು ದ್ರವವಾಗುತ್ತದೆ. (ಲೆಕ್ಟೊ=ಹಾಲು). ಅದನ್ನು ಸಾಗಿಸುವ ನಾಳವೇ ದುಗ್ಧನಾಳ ಈ ಲೆಕ್ಟೀಲುಗಳು ತಮ್ಮ ದ್ರವ್ಯವನ್ನು ಸೂಕ್ಷ್ಮ ರಕ್ತನಾಳಗಳಿಗೆ ಮುಟ್ಟಿಸುತ್ತವೆ. ಇಲ್ಲಿರುವ ಲೋಮಗಳಲ್ಲಿ ಎಮಿನೋ ದ್ರಾವಕಗಳು ಸಿದ್ಧವಾಗುತ್ತವೆ. ಹೀಗೆ ಶರೀರ ಹೀರಬಲ್ಲ ಹತ್ತಾರು ರೂಪದ ಸಕ್ಕರೆಗಳನ್ನು ಗ್ಲೂಕೊಚಿನಂತಹ ಸುಲಭ ಜೀರ್ಣಕಾರಿರೂಪಕ್ಕೆ ತರುತ್ತದೆ. ಈ ಕರುಳಿಗೆ ಬರುವ ಸೂಕ್ಷ್ಮ ರಕ್ತನಾಳಗಳು ಅಲ್ಲಿ ಸಿದ್ಧವಾದ ದ್ರವ ರೂಪದ ಆಹಾರವನ್ನು ಹೀರುತ್ತವೆ. ಅಲ್ಲಿರುವ ದುಗ್ಧನಾಳಗಳು, ಲಿಂಫ್ ನಾಳಗಳು ಇವೇಕೆಲಸ ಮಾಡುತ್ತವೆ. (ಲೆಕ್ಟೀಲುಗಳು ಜೀರ್ಣಗೊಂಡ ಕೊಬ್ಬನ್ನು ಸ್ವೀಕರಿಸುತ್ತವೆ.ಅ-೧
ಪಿತ್ತಜನಕಾಂಗದ ಕೆಲಸ
ಯಕೃತ್ತಿನಲ್ಲಿ(ಪಿತ್ತಜನಕಾಂಗ):ಹೀಗೆ ಸಿದ್ಧವಾದ ಗ್ಲೂಕೊಜೆನ್ ಎಂಬರೂಪಕ್ಕೆ ಬಂದ ಆಹಾರವನ್ನು ಲೆಕ್ಟೀಲುಗಳು ಹೀರಿಕೊಂಡು, ಅವು ಮುಂದುವರಿದು ಥೆರೋಸಿಕ್ ಎಂಬ ಒಂದೇ ನಾಳವಾಗುತ್ತದೆ. ಇವು ಮೂತ್ರಪಿಂಡಗಳಿರುವಲ್ಲಿಗೆ ಹೋಗಿ (ಶುದ್ದಗೊಂಡು) ಮೇಲಕ್ಕೇರಿ ನಮ್ಮೆಡ ತೋಳಿನ ಬಳಿಯಲ್ಲಿ ಮುಖ್ಯ ರಕ್ತ ನಾಳಕ್ಕೆ ತಾನು ತಂದ ಆಹಾರವನ್ನು ಒಪ್ಪಿಸುತ್ತದೆ.
ಇದರಂತೆ ಕರುಳಿನಲ್ಲಿರುವ ಆಹಾರವನ್ನು ಹೀರಿ ಸಾಗಿಸುವ ಸೂಕ್ಷ್ಮ ನಾಳಗಳು ಒಂದು ಗೂಡಿ (ಪೋರ್ಟಲ್ ವೆಯಿನ್) ಯಕೃತ್ತನ್ನು ಸೇರುತ್ತವೆ. ಅವು ತರುವ ಚಮಿನೊ ದ್ರಾವಕಗಳು ಅಲ್ಲಿ ಶೇಖರಗೊಳ್ಳಬಹುದು ಅಥವಾ ಮುಂದುವರಿಯಬಹುದು. ಮುಂದಣ ಅವಯುವಗಳಲ್ಲಿ ಹೀರಲ್ಪಡಬಹುದು. ರಕ್ತ ತರುವ ಸಕ್ಕರೆಯ ಅಂಶವು ಗ್ಲೈಕೋಜೆನ್ ಆಗಿ ಯಕೃತ್ತಿನಲ್ಲಿ ಸಂಗ್ರಹವಾಗಬಹುದು. ಆದರೆ ಈ ಗ್ಲೈಕೊಜೆನ್ ಕೊಬ್ಬಾಗಿ ಮಾರ್ಪಟ್ಟು ಬೇರೆಕಡೆ ಸಂಗ್ರಹವಾಗುವ ಸಾಧ್ಯತೆ ಇದೆ.
ಹೀಗೆ ಪಚನಾಂಗಗಳಾದ ಸಣ್ಣ ಕರುಳು, ದೊಡ್ಡ ಕರುಳು ಗಳನ್ನು ಸೂಕ್ಷ್ಮ ರಕ್ತನಾಳಗಳು ವ್ಯಾಪಿಸಿ ಅವು ಒದಗಿಸುವ ಸಕ್ಕರೆಯ ಅಂಸಗಳನ್ನು ಒಡೆದಿರುವ ಪ್ರೋಟೀನುಗಳಿಂದಾದ ಎಮಿನೊ ದ್ರಾವಕಗಳನ್ನು ಪಡೆದ ಮೇಲೆ ಅವೇ ಸೂಕ್ಷ್ಮ ರಕ್ತ ನಾಳಗಳು ಒಂದುಗೂಡಿ ದೊಡ್ಡ ರಕ್ತನಾಳವಾಗಿ ಯಕೃತ್ತನ್ನು (ಲಿವರ್-ಪಿತ್ತಜನಕಾಂಗ) ಸೇರುತ್ತದೆ. ಪುನಃ ಯಕೃತ್ತಿನಲ್ಲಿ ಉಪನಾ -ಸೂಕ್ಷ್ಮ ನಾಳಗಳಾಗಿ ಹಬ್ಬಿಕೊಳ್ಳುತ್ತವೆ. ಆಹಾರವನ್ನು ಹೊತ್ತು ತಂದಿರುವ ರಕ್ತ ಇದು. ತಂದ ಆಹಾರವನ್ನು ಸ್ವಲ್ಪ ಅಲ್ಲಿ ದಾಸ್ತಾನಿಗೆ ಕೊಡಬಹುದು; ಉಳಿದದ್ದನ್ನು ಮುಂದಕ್ಕೆ ಸಾಗಿಸುವುದು. ಅಲ್ಲಿಂದ ಈ ಸೂಕ್ಷ್ಮ ನಾಳಗಳು ಪುನಹ ಒಂದೇ ನಾಳವಾಗಿ (ಇನ್’ಫೀರಿಯರ್ ವಿನಾಕೇವಾ) ಹೃದಯದ ಬಲಭಾಗವಾದ ಮೇಲ್ಕೋಣೆಗೆ ಬರುತ್ತದೆ.ಅ-೧
ಮೂತ್ರಪಿಂಡ ಅಥವಾ ಕಲಿಜಗಳ ಕೆಲಸ
ಎರಡನೆಯ ಸಂಚಲನ ವ್ಯವಸ್ಥೆ ಕಲಜಗಳಿಗೆ ಹೋಗೆವ ವ್ಯವಸ್ಥೆ. ಈ ವ್ಯವಸ್ಥೆಯಿಂದ ರಕ್ತವು ಹೊಟ್ಟೆಯ ಹಿಂಭಾಗ, ಬೆನ್ನುಮೂಳೆಯ ಹಿಂದೆ ಅಕ್ಕಪಕ್ಕ ಇರುವ ಕಲಿಜಗಳಿಗೆ ಸಂಚರಿಸುತ್ತದೆ. ಕಲಿಜಗಳು ಅದರೊಳಗೆ ಸೇರಿದ ಯಾವತ್ತು ಕಶ್ಮಲವನ್ನು ಹೀರಿಕೊಂಡು ರಕ್ತವನ್ನು ಮುಂದೆ ಕಳಿಸುವುದು. ಶ್ವಾಸಕೋಶಗಳು ಅಂಗಾರಾಮ್ಲವನ್ನು ಮಾತ್ರಾ ತೆಗೆದರೆ ಕಲಿಜಗಳು ಹಲವಾರು ಬಗೆಯ ಕಶ್ಮಲಗಳನ್ನು ಎಂದರೆ ಅನಗತ್ಯ ಲವಣಗಳನ್ನು, ಸಸಾರಜನಕ (ಯೂರಿಯಾ)ವನ್ನು, ಕೆಲವು ವಿಷವಸ್ತುಗಳನ್ನು, ಹೆಚ್ಚಿನ ನೀರನ್ನು ಹೀರಿಕೊಂಡು ಅಥವಾ ತಡೆಹಿಡಿದು, ನಂತರ ಬೇರೆದಾರಿಯಿಂದ ಮೂತ್ರದ ಮೂಲಕ ಅವನ್ನು ವಿಸರ್ಜಿಸುತ್ತವೆ.ಅ-೧
ಮೂತ್ರಪಿಂಡದಲ್ಲಿ ರಕ್ತಶುದ್ಧೀಕರಣ ಕ್ರಿಯೆಯನ್ನು ವಿಡಿಯೊದಲ್ಲಿ ನೋಡಿ:[]
ಮೇಲಿನ ದೇಹಬಾಗಕ್ಕೆ ಮತ್ತು ಕೆಳಗಿನ ದೇಹ ಬಾಗಕ್ಕೆ ರಕ್ತ ಪೂರೈಕೆ ಮಾಡುವ ಎರಡು ವರ್ಗಗಳಾಗಿಯೂ ರಕ್ತ ಪರಿಚಲನೆಯನ್ನು ವಿವರಿಸಬಹುದು. ಹೀಗೆ ಎರಡು ವರ್ಗಗಳಾಗಿ ವಿಂಗಡಿಸಿದ ಪರಿಚಲನಾಕ್ರಮ- ಸಂಕ್ಷಿಪ್ತ ವಿವರಣೆ:
ಆಮ್ಲಜನಕ ಯುಕ್ತ ರಕ್ತ
ಆಮ್ಲಜನಕೀಕರಿಸಿದ ರಕ್ತವು ಶ್ವಾಸಕೋಶದಿಂದ ಹೊರಟು (ಶುದ್ಧರಕ್ತ) ಶ್ವಾಸಾಭಿಧಮನಿ ಮೂಲಕ ಹೃದಯದ ಎಡ ಹೃತ್ಕರ್ಣವನ್ನು ಪ್ರವೇಶಿಸುತ್ತದೆ. ಈ ಆಮ್ಲಜನಕಯುಕ್ತ ರಕ್ತವು ಹೃದಯದ ಎಡ ಹೃತ್ಕರ್ಣದಿಂದ ಹೃದಯ ಎಡ ಹೃತ್ಕುಕ್ಷಿಗೆ (ಎಲ್.ವಿ.) ತಳ್ಳಲ್ಪಡುವುದು. ನಂತರ ದೇಹದ ಎಲ್ಲಾ ಅಂಗಾಂಶಗಳಿಗೆ ಇದು ಪ್ರಮುಖ ಮಹಾಪಧಮನಿಯ ಮೂಲಕ ಹೃದಯ ದಿಂದ ಹೊರಡುವುದು. ನಂತರ ಅಯೋರ್ಟಾ ಮಹಾಪಧಮನಿಯು ಹಿಂದೆ ಹೇಳಿದಂತೆ ದೇಹದ ವಿವಿಧ ಭಾಗಗಳಿಗೆ ಅನೇಕ ಶುದ್ಧರಕ್ತನಾಳವಾಗಿ ಕವಲೊಡೆದು ದೇಹದ ಇತರ ಮೇಲಿನ ದೇಹಬಾಗಕ್ಕೆ ಮತ್ತು ಕೆಳಗಿನ ದೇಹ ಬಾಗಕ್ಕೆ ರಕ್ತ ಪೂರೈಕೆ ಮಾಡುವ ಎರಡು ವರ್ಗಗಳಾಗುವುದು.
ಮೇಲಿನ ದೇಹದಕ್ಕೆ ರಕ್ತ ಪೂರೈಕೆ
ಅಯೋರ್ಟಾ ಶುದ್ಧರಕ್ತನಾಳವು (ಮಹಾಪಧಮನಿಯ) ಅಂತಿಮವಾಗಿ ತೋಳುಗಳಿಗೆ ಅಂತಿಮವಾಗಿ ಹಸ್ತಗಳನ್ನು ತಲುಪುವ ಕೆಲವು ಸಬ್ ಕ್ಲೇವಿಯನ್ ರಕ್ತನಾಳಕ್ಕೆ ರಕ್ತವನ್ನು ಒದಗಿಸುತ್ತದೆ ಮತ್ತು ತಲೆಗೆ ರಕ್ತ ವಾಹಕವಾದ ಶೀರ್ಷಧಮನಿ ಅಪಧಮನಿಗಳು ರಕ್ತವನ್ನು ಪೂರೈಸುತ್ತವೆ (ಹಿಂದೆ ವಿವರಿಸಿದೆ.).
ಕೆಳಭಾಗದ ದೇಹಕ್ಕೆ: ರಕ್ತ ಪೂರೈಕೆ:
ಈ ದೊಡ್ಡ ಅಯೋರ್ಟಾದ ಕವಲು ರಕ್ತ ವಾಹಕವಾದ ಹೆಪಟಿಕ್ ಶುದ್ಧರಕ್ತವು ನಾಳದ (ಯಕೃತ್ತಿನ ಅಪಧಮನಿಗಳು) ಮೂಲಕ ಪಿತ್ತಜನಕಾಂಗಕ್ಕೆ ಅಥವಾ ಯಕೃತ್ತಿಗೆ ರಕ್ತ ಪೂರೈಸುವುದು. ಮೆಸಂಟರೀಯ ಶುದ್ಧ ರಕ್ತನಾಳ ಸಣ್ಣ ಕರುಳಿಗೆ ರಕ್ತ ವಾಹಕವಾಗಿದೆ,ರೆನಲ್ ಶುದ್ಧರಕ್ತ ಅಪಧಮನಿಗಳು ಮೂತ್ರಪಿಂಡಗಳಿಗೆ ರಕ್ತ ಒದಗಿಸುವುವು, ಮತ್ತು ಇಲಿಯಾಕ್ ಶುದ್ಧರಕ್ತ ಅಪಧಮನಿಗಳು ಕಾಲುಗಳಿಗೆ ರಕ್ತ ಸಾಗಿಸುವ ಅಪಧಮನಿಗಳು (ಕೆಲವು ಅಂತಿಮವಾಗಿ ಪಾದಗಳನ್ನು ಮುಟ್ಟುತ್ತದೆ).
ಆಮ್ಲಜನಕರಹಿತ ರಕ್ತ
ರಕ್ತ ಅಂಗಾಂಶಗಳ ಹಾಗೂ ಅಂಗಗಳಲ್ಲಿ ಸಂಚರಿಸಿದಾಗ ಇದು ಆಮ್ಲಜನಕ ಮತ್ತು ಇತರ ಪೋಷಕಾಂಶಗಳನ್ನು ಅವಕ್ಕೆ ಸರಬರಾಜುಮಾಡಿ, ರಕ್ತ ಆಮ್ಲಜನಕ ರಹಿತವಾದಾಗ ಶ್ವಾಸಕೋಶದ ರಕ್ತಪರಿಚಲನಾ ವ್ಯವಸ್ಥೆಗೆ ಮರಳಿ ಮರಳುವುದು. ಇದು ಮೇಲಿನ ದೇಹದ ಮತ್ತು ಕೆಗಿನ ದೇಹದ ರಕ್ತಪರಿಚಲನೆ ಎಂದು ಸಂಕ್ಷೇಪಿಸಿ ಹೇಳುವ ಕ್ರಮ.
ಮೇಲಿನ ದೇಹದ ರಕ್ತ ಮರಳಿ ಬರುವ ಚಲನೆ:
ತಲೆಯಿಂದ ಗಂಟಲಿನ ಜುಗ್ಯಲರ್ ಮಲನ ರಕ್ತನಾಳದ ಮೂಲಕ,ಮತ್ತು ಕೈಗಳ ರಕ್ತವು ಸಬ್’ಕ್ಲೇವಿಯನ್ ಮಲಿನ ರಕ್ತನಾಳಗಳ ಮೂಲಕ ಮರಳಿಬರುವುದು. ಮೇಲಿನ ದೇಹದ ಎಲ್ಲಾ ರಕ್ತ ಪ್ರಮುಖ ಮಲಿನ ರಕ್ತ ಸುಪೀರಿಯರ್ ವಿನಾಕೇವಾ ನಾಳಗಳ ಮೂಲಕ ಹೃದಯದ ಬಲಬದಿಯ ಹೃತ್ಕುಕ್ಷಿಗೆ ರಕ್ತ ಹಿಂದಿರುಗಿಸುತ್ತದೆ
ಕೆಳಗಿನ ದೇಹದ ರಕ್ತ ಮರಳಿ ಬರುವ ಚಲನೆ
ಸಣ್ಣ ಕರುಳಿನಿಂದ ರಕ್ತವು ಹೆಪಾಟಿಕ್ ವೆಯಿನ್ ಮೂಲಕ ಹಾದು ಯಕೃತ್ತಿಗೆ (ಪಿತ್ತಜನಕಾಂಗಕ್ಕೆ) ಮರಳುತ್ತದೆ. ಹೆಪಾಟಿಕ್ ವೆಯಿನ್ ಮೂಲಕ (ಯಕೃತ್ತು) ಪಿತ್ತಜನಕಾಂಗದಿಂದ ಹೆಪಾಟಿಕ್ ವೆಯಿನ್ ಮೂಲಕ ಮೂತ್ರಪಿಂಡಗಳಿಗೆ ಬಂದು ಶುದ್ಧಗೊಂಡು ಮೂತ್ರಪಿಂಡಗಳ ರಕ್ತನಾಗಳ ಮೂಲಕ, ಮತ್ತು ಇಲಿಯಾಕ್ ವೈಯಿನ್ ಗಳ ಮೂಲಕ ಕಾಲುಗಳಿಂದ ರಕ್ತ ಮರಳುತ್ತದೆ. ದೇಹದ ಪ್ರಮುಖ ರಕ್ತನಾಳಗಳಲ್ಲಿ ರಕ್ತದ ಎಲ್ಲಾ ರಕ್ತ ಇನ್ಫೀರಿಯರ್ ವಿನಾಕೇವಾ ಮಲಿನರಕ್ತನಾಳದ ಮೂಲಕ ಹೃದಯದ ಬಲ ಹೃತ್ಕರ್ಣಕ್ಕೆ ಮರುಪ್ರವೇಶಿಸಿಸುವುದು. ಹೀಗೆ ಸುಪೀರಿಯರ್ ವಿನಾಕೇವ ಮತ್ತು ಇನ್ ಫೀರಿಯರ್ ವಿನಾಕೇವದ ಆಮ್ಲಜನಕರಹಿತ ರಕ್ತವನ್ನು ಹೃದಯದ ಬಲ ಹೃತ್ಕುಕ್ಷಿಗೆ ತಳ್ಳುವುದು. ಹೃದಯದೊಳಗಿಂದ ತಳ್ಳಿದ ಆಮ್ಲಜನಕರಹಿತ ರಕ್ತವು ಶ್ವಾಸಕೋಶದ ಮಲಿನರಕ್ತನಾಳದ ಮೂಲಕ ಶ್ವಾಸಕೋಶಗಳಿಗೆ ಬರುವುದು.ಈ ಆಮ್ಲಜನಕರಹಿತ ರಕ್ತ ಶ್ವಾಸಕೋಶವನ್ನು ಪ್ರವೇಶಿಸುತ್ತದೆ ಮತ್ತು ಶ್ವಾಸಕೋಶಗಳಲ್ಲಿ ಇಂಗಾಲಾಮ್ಲವನ್ನು ಬಿಟ್ಟುಕೊಟ್ಟು ಆಮ್ಲಜನಕ ಪಡೆದು ಆಮ್ಲಜನಕಯುಕ್ತ ರಕ್ತವಾಗಿ ಮೊದಲಿನಂತೆ ಆವರ್ತನ ಮತ್ತೆ ಆರಂಭವಾಗುತ್ತದೆ.[17]
ಹೃದಯದ ಸ್ವತಂತ್ರ ಮಿಡಿತ:
ದೇಹದ ಇತರ ಭಾಗಗಳಲ್ಲಿರುವ ಸ್ನಾಯುಗಳಿಗೂ, ನರತಂತುಗಳಿಗೂ ಹೃದಯದ ಸ್ನಾಯುಗಳಿಗೂ ನರತಂತುಗಳಿಗೂ ವ್ಯತ್ಯಾಸವಿದೆ. ಕಾರಣ ಹೃದಯದ ಸ್ನಾಯುಗಳು ಮಾಡಬೇಕಾದ ಕೆಲಸಗಳೇ ಬೇರೆ. ಕೈ ಇಲ್ಲವೆ ಕಾಲಿನ ನರ ತುಂಡಾದರೆ ಅದರ ಮುಂದಿನ ಭಾಗದಲ್ಲಿ ಚಲನೆ ನಿಲ್ಲುತ್ತದೆ. ಹೃದಯದ ಸ್ನಾಯುಗಳು ಇತರೆ ಸ್ನಾಯುಗಳಂತೆ ಕೇಂದ್ರವ್ಯವಸ್ಥೆಗೆ ಸೇರಿದ್ದರೂ ಕೇಂದ್ರ ವ್ಯವಸ್ಥೆಗೆ ಒಳಗಾಗದೆಯೂ ಕೆಲಸಮಾಡಬಲ್ಲವು. ಅಕಸ್ಮಾತ್ ನರಗಳ ಸಂಪರ್ಕ ಕಡಿದರೂ ಕೆಲಸ ಮಾಡಬಲ್ಲವು. ಕಪ್ಪೆಯೊಂದರ ಹೃದಯ ಮತ್ತು ಮಿದುಳನ್ನು ಕೂಡಿಸುವ ನರವನ್ನು ಕತ್ತರಿಸಿದರೂ ಅದರ ಹೃದಯ ತಾಸುಗಟ್ಟಲೆ ಮಿಡಿಯಬಲ್ಲದು. ಆದ್ದರಿಂದ ಹೃದಯದ ಮಿಡಿತ ಸ್ವತಂತ್ರವಾದುದು ಎನ್ನಬಹುದು! ಅದರ ಸ್ನಾಯುಗಳು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತರಂಗ ತರಂಗವಾಗಿ ಸಂಚರಿಸುವುದು ಕಾಣುತ್ತದೆ. ರಕ್ತನಾಳದ ಸ್ನಾಯು ಸಂಕೋಚನ ತರಂಗಗಳು ಹೃದಯದ ಮೇಲ್ಕೋಣೆಗೆ ಮುಂದುವರಿದು ಅಲ್ಲಿಂದ ಕೆಳಕೋಣೆಗೆ ಸಂಚರಿಸಿ ಬರುತ್ತವೆ.
ಹೃದಯದಲ್ಲಿ ಹೃದಯದಲ್ಲಿ ಒಂದು ಮಿನಿ ಡೈನಮೋ ಮತ್ತೊಂದು ಬ್ಯಾಕ್ ಅಪ್ ಡೈನಮೋಇರುವ ವಿಷಯ ಹಿಂದೆ ಹೇಳಿದೆ. ಅದಲ್ಲದೆ ಒಂದು ಪ್ರೇರಕ ದ್ರವ್ಯವೂ ಅದರಲ್ಲಿದೆ. ಅದನ್ನು ಪ್ರತ್ಯೇಕಿಸಿ ಸಂಗ್ರಹಿಸಿ ತನ್ನ ಕ್ರಿಯೆ ನಿಂತ ಹೃದಯಕ್ಕೆ 3ದಿನಗಳ ನಂತರ ಚುಚ್ಚಿ ಸೇರಸಿದಾಗ ಅದು ಮತ್ತೆ ಮಿಡಿಹುವುದು ಕಂಡಿದೆ. ಈ ಚಲನೆಯ ತರಂಗವನ್ನು ನಿಯಂತ್ರಿಸುವ ಇನ್ನೊಂದು ವ್ಯವಸ್ಥೆ ನರಗಳ ಗಂಟು -ಆರಿಕ್ಯುಲೊ ವೆಂಟ್ರಿಚುಲರ್ ಬಂಡಲ್.
ಹೃದಯದ ಸ್ನಾಯುಗಳಿಗೆ ಆಹಾರ ಬೇಕು ಅದಕ್ಕೆ ದೇಹಕ್ಕೆಲ್ಲಾ ಆಹಾರ ಒದಗಿಸುವ ಅಯೋರ್ಟಾ ಶುದ್ಧರಕ್ತನಾಳ ಆರಂಭದಲ್ಲೇ ಅದರ ಎರಡು ಚಿಕ್ಕ ಶಾಖೆಗಳು ಹೃದಯದ ಸ್ನಾಯುಗಳಿಗೆ ಶುದ್ಧರಕ್ತವನ್ನೊದಗಿಸುತ್ತದೆ. ಈ ಆಹಾರ ವಸ್ತುಗಳಲ್ಲಿ ಅಡುಗೆ ಉಪ್ಪು ಒಂದು ಮುಖ್ಯ ಪದಾರ್ಥ.
ಉದಾಹರಣೆಗೆ ಒಂದು ಆಮೆಯ ಹೃದಯದ ತುಣುಕನ್ನು ಕತ್ತರಿಸಿ ತೆಗೆದು ಉಪ್ಪು ನೀರಿನಲ್ಲಿ ಮುಳುಗಿಸಿಟ್ಟರೆ ಅದು ಸ್ವಲ್ಪ ಹೊತ್ತು ಮಿಡಿಯುತ್ತದೆ. ಹಾಗೆಯೇ ಕ್ಯಾಲಸಿಯಂ ಕ್ಲೋರೈಡ್ ಅಥವಾ ಪಟ್ಯಾಸಿಯಮ್ ಕ್ಲೊರೈಡ್ ಸೇರಿಸಿದಾಗ ಅದು ಪುನಹ ಮಿಡಿಯುವುದು ಕಂಡಿದೆ,
ಹೃದಯಕ್ಕೆ ಮಿದುಳಿನ ಸಂಪರ್ಕ
ಹೃದಯಕ್ಕೆ ಕೇಂದ್ರನರ ವ್ಯವಸ್ಥೆಗೂ ಸಂಬಂಧವಿದೆ; ಅಲ್ಲಿಂದಲೂ ಕೆಲವು ನರಗಳು ಹೃದಯಕ್ಕೆ ಬಂದಿವೆ. ಆ ನರಗಳೂ ಹೃದಯದ ಮಿಡಿತಗಳನ್ನು ಹೆಚ್ಚು ಕಡಿಮೆ ಮಾಡಬಲ್ಲವು. ಭಯ ಕೋಪ ಮೊದಲಾದ ಸಂದರ್ಭಗಳಲ್ಲಿ ಈ ನರಗಳ ದೆಸೆಯಿಂದ ಹೇದಯ ಬಡಿತ ಚುರುಕಾಗುತ್ತದೆ. ಆಗ ನಮ್ಮ ದೇಹದಲ್ಲಿ ರಕ್ತ ಸಂಚಾರ ಹೆಚ್ಚಿ ವಿಶೇಷ ಶ್ರಮವನ್ನು ವಹಿಸಲು ಸಿದ್ಧವಾಗುತ್ತದೆ. ತೀರಾ ಭಯದಲ್ಲಿ ಬಡಿತ ಕಡಿಮೆಯಾಗಿ ಕಡಿಮೆಯಾಗಿ ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿ ಎಚ್ಚರ ತಪ್ಪಬಹುದು.
ನಾಡಿಬಡಿತ
ಹೃದಯದಿಂದ ಶುದ್ಧ ರಕ್ತ ಅಯೋರ್ಟಾದ ಮೂಲಕ ಹೊರ ಹರಿಯುವುದು ಗೊತ್ತಿದೆ. ಅಂಥಾ ಶುದ್ಧರಕ್ತ ನಾಳಗಳ ಗೋಡೆಗಳು ಸದಾ ಹಿಗ್ಗಿ ಕುಗ್ಗಬಲ್ಲ ಸ್ನಾಯುಗಳಿಂದ ಕೂಡಿದೆ. ಅಂಥ ಸ್ನಾಯುಗಳ ಸ್ಥಿತಿಸ್ಥಾಪಕ ಗುಣಗಳಿಂದಾಗಿ ರಕ್ತ ಪ್ರವಾಹವು ಸಮಭರದ ಒಂದು ಪ್ರವಾಹವಾಗಿ ಮಾರ್ಪಡುತ್ತದೆ. ಈ ಶುದ್ಧರಕ್ತ ನಾಳಗಳಲ್ಲಿ ರಕ್ತ ತರಂಗ ತರಂಗವಾಗಿಯೇ ಮುಂದುವರಿಯುತ್ತದೆ. ದೊಡ್ಡ ನಾಳ ಉಪನಾಳವಾಗಿ ಒಡೆದರೂ ಈ ಮಿಡಿತದ ಆವರ್ತನೆ ಇರುತ್ತದೆ. ಶುದ್ಧರಕ್ತ ನಾಳದ ಉಪನಾಳವನ್ನು ಕತ್ತರಿಸಿದಾಗಲೂ ರಕ್ತ ಮಿಡುಕಿ ಮಿಡುಕಿ ಉಕ್ಕುವುದು. ಆದರೆ ಅಶುದ್ಧರಕ್ತನಾಳದಲ್ಲಿ ಈ ಆವರರ್ತನೆ ಕಾಣುವುದಿಲ್ಲ; ಬದಲು ಸಮಗತಿಯಿಂದ ಹರಿಯುತ್ತದೆ.
ನಮ್ಮ ಕೈಯನ್ನು ಹಿಡಿದು ರಕ್ತನಾಳದ (ರೇಡಿಯಲ್ ಆರ್ಟರಿ)ಮೇಲೆ ಬೆರಳಿಟ್ಟು ಮಿಡಿತಗಳನ್ನು ಎಣಿಸುತ್ತಾರೆ. ಅದನ್ನು ನಾಡಿ ಮಿಡಿತ ಎನ್ನುತ್ತೇವೆ. ಅದರಿಂದ ವೈದ್ಯರು ಎದೆ ಬಡಿತಕ್ಕೆ ಸಮನಾಗಿದೆಯೇ (72)-ಎಂದು ದೇಹಾರೋಗ್ಯವನ್ನು ಪರಿಶೀಲಿಸುತ್ತಾರೆ. ರಕ್ತನಾಳಗಳು ಶಕ್ತಿಗುಂದಿರುವುದೂ ಅದರಿಂದ ತಿಳಿಯುವುದು.
ಶುದ್ಧರಕ್ತನಾಳ ಅವುಗಳ ಉಪನಾಳ ಹೋದಲ್ಲೆಲ್ಲಾ ಅದರ ಜೊತೆಗೆ ಎರಡು ಜಾತಿಯ ನರಗಳು ಹೋಗುತ್ತವೆ. ಅವು ಈ ನಾಳಗಳ ಹಿಗ್ಗುವಿಕೆ ಕುಗ್ಗುವಿಕೆಯನ್ನು ನಿಯಂತ್ರಸುತ್ತವೆ. ರಕ್ತ ನಾಳಗಳನ್ನು ಹಿಗ್ಗಿಸು ಮತ್ತು ಕುಗ್ಗಿಸಲು ಬೇರೆ ಬೇರೆ ಜಾತಿಯ ನರಗಳಿವೆ. ಭಯವಾದಾಗ ಹೃದಯ ಹೆಚ್ಚು ಮಿಡಿದರೂ, ಈ ನರಗಳ ಕ್ರಿಯೆಯಿಂದ ರಕ್ತನಾಳ ಸಂಕೋಚಗೊಂಡು ರಕ್ತಪೂರೈಕೆ ನಮ್ಮ ಮುಖಕ್ಕೆ ಕಡಿಮೆಯಾಗಿ ಮುಖ ಬಿಳಿಚುತ್ತದೆ. ಅದೇ ನಾಚಿಕೆಯಾದಾಗ ಮಿದುಳಿನ ಸಂಪರ್ಕದಿಂದ ಇನ್ನೊಂದು ಜಾತಿಯ ನರಗಳು ಈ ನಾಳಗಳನ್ನು ಹಿಗ್ಗಿಸುತ್ತವೆ. ಅದರಿಂದ ಮುಖಕ್ಕೆ ಹೆಚ್ಚು ರಕ್ತ ಪಸರಿಸಿ ಮುಖ ಕೆಂಪಡರುತ್ತದೆ.
ರಕ್ತ ನಾಳದಿಂದ ಆಹಾರ ಒದಗಣೆ
ಈ ಶುದ್ಧರಕ್ತನಾಳಗಳ ಗೋಡೆಗಳು ದಪ್ಪನಾಗಿದ್ದು ಅವು ನೇರವಾಗಿ ಯಾವ ಅಂಗಕ್ಕೂ ಆಹಾರ ದ್ರವ್ಯಗಳನ್ನು ಒಡಗಿಸಲಾರವು. ಅವು ಉಪನಾಳಗಳಾಗಿ ಸೂಕ್ಷ್ಮ ನಾಳಗಳಾಗಬೇಕು. ಮತ್ತೂ ಸೂಕ್ಷ್ಮ ನಾಳಗಳಾಗಿ ಒಂದೊಂದೇ ರಕ್ತಕಣ ದಾಟುವಷ್ಟು ಸೂಕ್ಷ್ಮವಾದಾಗ ಮಾತ್ರಾ ದೇಹದ ಜೀವಕೋಶಗಳಿಗೆ ಆಹಾರ ವಿತರಣೆಯಾಗುವುದು. ಆ ಅತಿ ಸೂಕ್ಷ್ಮ ರಕ್ತನಾಳಗಳೂ (ಕ್ಯಾಪಿಲರೀಸ್)ಕೂಡಾ ಸಂಕೋಚ ವಿಸ್ತಾರಹೊಂದುವ ಗುಣಹೊಂದಿವೆ. ಹಾಗಾಗಿ ಚರ್ಮದ ಮೇಲೆ ಸ್ವಲ್ಪ ಪೆಟ್ಟಾದರೂ ಅಲ್ಲಿ ಕ್ಷಣ ಬಿಳಚಿ ಮತ್ತೆ ತಡೆದು ಕೆಂಪಾಗುವುದು.ಅ-೧
ನಾವು ಬಹಳ ಹೊತ್ತು ನಿಂತಲ್ಲಿಯೇ ನಿಂತರೆ; ಅಥವಾ ಮಲಗಿದವರು ಗಡಿಬಿಡಿಯಲ್ಲಿ ತಕ್ಷಣ ಎದ್ದು ನಿಂತರೆ ಕೆಲವೊಮ್ಮೆ ಕಣ್ನು ಕತ್ತಲೆ ಕಟ್ಟಿ ಕೆಳಕ್ಕೆ ಬಿದ್ದುಬಿಡುವುದುಂಟು. ಶಾಲೆಗಳಲ್ಲಿ ಡ್ರಿಲ್ ಮಾಡುವಾಗ ಅಥವಾ ಪ್ರಾರ್ಥನೆ ಮಾಡುವಾಗ ಮಕ್ಕಳು ತಲೆತಿರುಗಿ ಕೆಳಗೆ ಬೀಳುವುದುಂಟು. ಮಕ್ಕಳು ದೂರದಿಂದ ಓಡಿ ಬಂದೋ ಆಟವಾಡಿ ಬಂದೋ ತಕ್ಷಣ ನಿಶ್ಚಲವಾಗಿ ನೀಂತಾಗ ಕಣ್ಣು ಕತ್ತಲೆಗಟ್ಟಿ ಬೀಳುವುದನ್ನು ಕೆಲವು ಸಲ ಕಾಣುತ್ತೇವೆ.. ಮೆದುಳಿನಲ್ಲಿ ರಕ್ತ ಕಡಿಮೆಯಾಗುವುದೇ ಇದಕ್ಕೆ ಕಾಟಣ. ತಕ್ಷಣ ಬೀಳುವುದೇ ಇದಕ್ಕೊಂದು ಅನಿವಾರ್ಯ ಚಿಕಿತ್ಸೆ. ಹಾಗೆ ನಿಂತಾಗ ತಲೆ ಹೃದಯಕ್ಕಿಂತ ಎತ್ತರದಲ್ಲಿತ್ತು. ಭೂಮಿಯ ಗುರುತ್ವ ಶಕ್ತಿಯಿಂದ ರಕ್ತ ಕೆಳಕ್ಕೆ ಹೆಚ್ಚಾಗಿ ಇಳಿಯಿತು. (ಕೆಲವರಲ್ಲಿ ಮಾತ್ರಾ ಹೀಗಾಗುವುದು) ಬೀಳುವುದರಿಂದ ತಲೆ ಹೃದಯದ ಮಟ್ಟಕ್ಕೆ ಮಗ್ಗುಲಿಗೆ ಬರುತ್ತದೆ. ಆಗ ಮೆದುಳಿಗೆ ರಕ್ತ ಸುಲಭವಾಗಿ ಹರಿಯುತ್ತದೆ. ಹಾಗೆ ಬಿದ್ದವರನ್ನು ಕೂಡಲೇ ಎತ್ತಿ ಕುಳ್ಳಿರಿಸುವುದು ತಪ್ಪು ಮತ್ತು ಅಪಾಯ. ಭಯವುಂಟಾದಾಗಲೂ ಅತೀವ ದುಃಖವಾದಾಗಲೂ ಹೀಗೆಯೇ ಮೆದುಳಿಗೆ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಈ ಬಗೆಯ ಸಂದರ್ಭಗಳಲ್ಲಿ ವ್ಯಕ್ತಿಯನ್ನು ಹಾಗೇ ಮಲಗಿಸಿ ಮೆದುಳಿಗೆ ಹೆಚ್ಚು ರಕ್ತಹರಿಯಲು ಕಾಲಗಳನ್ನು ಸ್ವಲ್ಪ ಎತ್ತರದಲ್ಲಿರಿಸಬೇಕು. ಸಾಮಾನ್ಯವಾಗಿ 15 - 20 ನಿಮಿಷಗಳಲ್ಲಿ ಪರಿಸ್ಥಿತಿ ಸರಿಹೋಗುತ್ತದೆ. ತಕ್ಷಣ ವ್ಯಕ್ತಿಯನ್ನು ಕೂರಿಸಿದರೆ ಅಥವಾ ನಿಲ್ಲಿಸಿದರೆ ಮೆದುಳಿಗೆ ರಕ್ತ ಪೂರೈಕೆಯಾಗದೆ ಮೆದುಳಿನ ನರಕೋಶಗಳಿಗೆ ಖಾಯಂ ಆಘಾತವಾಗಬಹುದು. ಅದಾಗದಿದ್ದರ ವೈದ್ಯರನ್ನು ಕರೆಸಬೇಕು ಅಥವಾ ಮಲಗಿದ ಸ್ಥಿತಿಯಲ್ಲಿಯೇ ವೈದ್ಯರಲ್ಲಿ ಕೊಂಡೊಯ್ಯಬೇಕು. ಅವರು ಗ್ಲೂಕೋಸೋ ಅಥವಾ ಉಪ್ಪುನೀರಿನ ಇಂಜೆಕ್ಷನ್ ಕೊಡುವುದರ ಮೂಲಕ ರಕ್ತದ ಹರಿವು ಹೆಚ್ಚುವಂತೆ ಮಾಡುವರು. ಪರಿಸ್ಥಿತಿ ಸರಿಹೋಗುವುದು.ಅ-೧
ಜಠರ ಮತ್ತು ಕರುಳಿಗೂ ಮಿದುಳಿಗೂ ನೇರ ಸಂಬಂದವಿದೆ. ಅದ್ದರಿಂದ ಕೋಪ ತಾಪ ಮೊದಲಾದ ತೀವ್ರ ಭಾವನೆಗಳು ಜಠರ ರಸದ ಒಸರರುವಿಕೆಯನ್ನು ತಡೆಹಿಡಿಯಬಹುದು, ಅದರಿಂದ ಆಹಾರ ಪಚನವಾಗದೆ ವಾಯುಪ್ರಕೋಪವಾಗಬಹುದು. ಅತಿ ಸಿಟ್ಟು ಕೋಪ ದುಃಕದಿಂದ ಅತಯಾಗಿ ರಸ ಉತ್ಪತ್ತಿಯಾಗಿ ಅಲ್ಲಿ ಉತ್ಪತ್ತಿಆದ ಹೈಡ್ರೋಕ್ಲೋರಿಕ್ ಆಮ್ಲದಿಂದ ಹೊಟ್ಟೆಯಲ್ಲಿ ಹುಣ್ಣಾಗಬಹುದು. ಆದ್ದರಿಂದ ಆಹಾರವನ್ನು ಶಾಂತಮನಸ್ಸಿನಿಂದ ಸೇವಿಸಬೇಕೆಂದು ಹೇಳುವರು. ಚಿಕ್ಕ ಮಕ್ಕಳಲ್ಲಂತೂ ಶಾಂತವಾಗಿ ಉಣಿಸುವುದು ಬಹಳ ಮುಖ್ಯ.ಅ-೧
ಮೆದುಳು ಹೊಟ್ಟೆಯಮೇಲೆ ನೇರ ಪರಿಣಾಮ ಬೀರುವುದು. ಉದಾಹರಣೆಗೆ, ತಿನ್ನುವ ಯೋಚನೆಯೇ ಹೊಟ್ಟೆಯಲ್ಲಿನ ರಸವನ್ನು ಬಿಡುಗಡೆ ಮಾಡಬಹುದು. ಈ ಸಂಪರ್ಕವು ಎರಡೂ ರೀತಿಯಲ್ಲಿ ಹೋಗುತ್ತದೆ. ಒಂದು ತೊಂದರೆಗೊಳಗಾದ ಹೊಟ್ಟೆ, ಕರುಳು, ಮೆದುಳಿಗೆ ಸಂಕೇತಗಳನ್ನು ಕಳುಹಿಸಬಹುದು. ಅಂತೆಯೇ ಒಂದು ತೊಂದರೆಗೊಳಗಾದ ಮೆದುಳು ಹೊಟ್ಟೆ ಕರುಳುಗಳಿಗೆ ಸಂಕೇತಗಳನ್ನು ಕಳುಹಿಸಬಹುದು. “ಆದ್ದರಿಂದ, ವ್ಯಕ್ತಿಯ ಹೊಟ್ಟೆ ಅಥವಾ ಕರುಳಿನ ಯಾತನೆಯು ಆತಂಕ, ಒತ್ತಡ, ಅಥವಾ ಖಿನ್ನತೆಯ ಕಾರಣ ಅಥವಾ ಉತ್ಪನ್ನ ವಾಗಿರಬಹುದು. ಏಕೆಂದರೆ ಮೆದುಳು ಮತ್ತು ಜಠರಗರುಳಿನ (ಜಿಐ) ವ್ಯವಸ್ಥೆಯು ನಿಕಟವಾಗಿ ಸಂಪರ್ಕಹೊಂದಿದೆ.
ಉದಾಹರಣೆಗೆ ವ್ಯಕ್ತಿಯು ಯಾವುದೇ ಸ್ಪಷ್ಟ ದೈಹಿಕ ಕಾರಣವಾಗಿ ಜೀರ್ಣಕ್ರಿಯೆಯಲ್ಲಿ ತೊಂದರೆ ಅನುಭವಿಸುತ್ತಿರುವ ನಿದರ್ಶನಗಳಲ್ಲಿ, ವಿಶೇಷವಾಗಿ ಕಾರ್ಯಸಂಬಂಧಿತ, ನಿಜ ಕಾರಣವಾದ ಒತ್ತಡ ಮತ್ತು ಭಾವನೆಯ ಪಾತ್ರವನ್ನು ಪರಿಗಣಿಸದೆಯೇ ತೊಂದರೆಗೀಡಾದ ಜೀರ್ಣಾಗ ಕರುಳಿನ ಅಸ್ವಸ್ಥತೆಗಳನ್ನು ಸರಿಪಡಿಸುವುದು ಕಷ್ಟ”.[18]
ಜೀರ್ಣಾಂನಾಳ ಬಾಯಿಯಿಂದ ದೊಡ್ಡ ಕರುಳಿನ ವರೆಗೆ ಆಹಾರ ಜೀರ್ಣಕ್ರಿಯೆಯಲ್ಲಿ ಸತತತೊಡಗಿದ್ದರೂ ಆ ಅಂಗಗಳು ಯಾವುವೂ ಜೀರ್ನಿಸಿದ ಆಹಾರವನ್ನು ಸ್ವಲ್ಪವೂ ಸ್ವಂತಕ್ಕೆ ಉಪಯೋಗಿಸಲಾರವು (ನಿಸ್ವಾರ್ಥ ಸೇವೆ). ರಕ್ತಪರಿಚಲನೆಯಲ್ಲಿ ಅಯೋರ್ಟಾದಿಂದ ಕವಲೊಡೆದ ರಕ್ತನಾಳಗಳು ಸೂಕ್ಷ್ಮ , ಮತ್ತೂ ಸೂಕ್ಷ್ಮ ನಾಳಗಳಾಗಿ ಕರುಳಿನಲ್ಲಿ ಪಸರಿಸಿ ಪ್ರತಿಯೊಂದು ಜೀರ್ಣಾಮಗದ ಯಾವತ್ತೂ ಅಂಗಗಳಿಗೆಅಥವಾ ಆ ಅಂಗಗಳ ಜೀವಕೋಶಗಳಿಗೆ ಉಣಬಡಿಸುವುದು. ಅದೇ ಸಮಯದಲ್ಲಿ ಹಿಮ್ಮದುಳಿಂದ ಬಂದ ವೇಗಸ್ ನರವು ಮೆದುಳಿನ ಉದ್ರೇಕ ಸಾಂತ ಬಾಔನೆಗಳಿಗೆ ಅನುಗುಣವಾಗಿ ರಕ್ತದ ಚಲನ ವೇಗವನ್ನು ನಿಯಂತ್ರಿಸುವುದು.
ವೇಗಸ್ ನರವು ಮೆಡ್ಯುಲಾದಿಂದ ಹೊರಹೊಮ್ಮುತ್ತವೆ.ನಾಲ್ಕು (ನ್ಯೂಕ್ಲಿಯಸ್ಗಳು) ಒಮ್ಮುಖವಾದ ನರತಂತುಗಳನ್ನು ಒಳಗೊಂಡಿದೆ. ವೇಗಸ್ ನರದ ಬೆನ್ನಿನ ಒಳಾಂಗಗಳ ನರತಂತುಗಳು (ನ್ಯೂಕ್ಲಿಯಸ್) ವಿಶೇಷವಾಗಿ ಕರುಳಿಗೆ ಕ್ರಮಾಗತ ಚಲನೆಗೆ ಪ್ರಚೊದಕ ಸಂದೇಶಗಳನ್ನ (parasympathetic output) ಕಳುಹಿಸುವುದು, ಈ ನರವು ಸಣ್ಣ ಕರುಳಿನ ಸ್ರವಿಸುವಿಕೆಯನ್ನು ಉತ್ತೇಜಿಸುವುದು.
ಕರುಳಿನ ಸ್ರಾವಕವಾದ ಮುಖ್ಯ ಶಾರೀರಿಕ ಕೆಲಸವನ್ನು ಅಪಾಯಕಾರಿ ರೋಗಕಾರಕಗಳು ಅಥವಾ ಎನ್ಟರೊಟಾಕ್ಸಿನ್ (enterotoxins. ವಿರುದ್ಧ ರಕ್ಷಣೆ ಖಚಿತಪಡಿಸಿಕೊಳ್ಳಲು ಸೂಕ್ತ ರಸ ಮಿಶ್ರಣಕ್ಕೆ ಮತ್ತು ಪೌಷ್ಟಿಕಾಂಶಗಳ ಹೀರುವಿಕೆಗೆ ಮತ್ತು ಪರಿಣಾಮಕಾರಿ ರಕ್ಷಷಣಾಕ್ರಮ ಕೈಗಳ್ಳಲು ಉತ್ತೇಜಿಸುವುದು. ಕರುಳಿನ ಒಳಗೆ ಸಂಯೋಜಿತಗೊಂಡ ಜೀವಕೋಶಗಳು ಲುಮೆನ್ ಒಳಗೆ ಕ್ಲೋರೈಡ್ ಹೆಚ್ಚು ದ್ರವವನ್ನುಂಟುಮಾಡಲು ಸ್ರವಿಸುವುದು. ದ್ರವದ ಶೇಖರಣೆ ಪರಿಣಾಮವಾಗಿ. ಈ ಬಗೆಯ ಪ್ರತಿಫಲಿತ ಕ್ರಿಯೆ ನರವ್ಯೂಹದ . (ಇ.ಎನ್.ಎಸ್=ಎಂಟರಿಕ್ ನರ್ವಸ್ ವ್ಯವಸ್ಥೆಯ ಒಳಗೆ) ನರಮಾರ್ಗದಲ್ಲಿ ಹಾದಿಯಲ್ಲಿ ಕ್ಲೋರೈಡ್ ಸ್ರಾವಕ ನಿಯಂತ್ರಣಕ್ಕೆ ಬರುವುದು ಸಂಭವಿಸುತ್ತದೆ.[19]
ಜೀವಂತ ಕೋಶಗಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ ಅಂಥ ಸಂದರ್ಭದಲ್ಲಿ ದೇಹದಲ್ಲಿರುವ ಅನಗತ್ಯ ಹಾಗೂ ಕೆಲಸಕ್ಕೆ ಬಾರದ ಭಾಗಗಳನ್ನು (ಕಾಂಪೊನೆಂಟ್ಸ್) ಕೋಶಗಳು ತಿನ್ನುತ್ತವೆ. ಇದರಿಂದ ಎಮಿನೊ ಆಮ್ಲ ಹಾಗೂ ಅಗತ್ಯ ಪೌಷ್ಟಿಕಾಂಶ ಉತ್ಪತ್ತಿಯಾಗಿ ಕೋಶಗಳಿಗೆ ಶಕ್ತಿ ದೊರೆತು, ಅವು ಸಹಜ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗುತ್ತದೆ. ಈ ಕ್ರಿಯೆಗೆ ಸ್ವಯಂ ಭಕ್ಷಣೆ (autophagy) ಎನ್ನಲಾಗುತ್ತದೆ. ಸ್ವಯಂ ಭಕ್ಷಣೆಯಿಂದಾಗಿ ಕೋಶಗಳು ಹಸಿವಿನಿಂದ ರಕ್ಷಣೆ ಪಡೆಯುವುದಷ್ಟೇ ಅಲ್ಲ, ಸಮತೋಲನವನ್ನೂ ಕಾಪಾಡಿಕೊಳ್ಳುತ್ತವೆ. ಈ ಕ್ರಿಯೆಯೇ ಕೋಶಗಳ ದೀರ್ಘಾಯುಷ್ಯದ ಗುಟ್ಟು.
ಸ್ವಯಂಭಕ್ಷಣೆಯಿಂದಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ಸಮಸ್ಯೆ ಇದ್ದಲ್ಲಿ ಪಾರ್ಕಿನ್ಸನ್ನಂಥ ನರಸಂಬಂಧಿ ಕಾಯಿಲೆ ಉಂಟಾಗುವ ಸಾಧ್ಯತೆಯೂ ಹೆಚ್ಚು. ಸ್ವಯಂಭಕ್ಷಕಗಳು, ಕೋಶಗಳು ಹಾಗೂ ಜೀವಕಣಗಳನ್ನು ಆರೋಗ್ಯವಾಗಿಡುತ್ತವೆ. ದೋಷಯುಕ್ತ ಕೋಶಗಳನ್ನು ಹಾಗೂ ದೋಷಯುಕ್ತ ಪ್ರೊಟೀನ್ ಅಂಶಗಳನ್ನು ತೆಗೆದುಹಾಕಿ ದೇಹವನ್ನು ಸೋಂಕು ಹಾಗೂ ಕ್ಯಾನ್ಸರ್ನಿಂದ ರಕ್ಷಿಸುತ್ತವೆ.[20]