ಮರ್ಸಿಡಿಸ್-ಬೆನ್ಜ್
From Wikipedia, the free encyclopedia
ಮರ್ಸಿಡಿಸ್-ಬೆನ್ಜ್ ಎಂಬುದು ಐಷಾರಾಮಿ ವಾಹನಗಳು/ಕಾರುಗಳು, ಬಸ್ಗಳು, ಸಾರೋಟು/ಜಟಕಾ/ಕೋಚುಗಳು, ಹಾಗೂ ಟ್ರಕ್ಗಳ ಜರ್ಮನ್ ಉತ್ಪಾದಕ ಸಂಸ್ಥೆ. ಪ್ರಸ್ತುತ ಇದು ಮೂಲ ಕಂಪೆನಿ, ಡೈಮ್ಲರ್ AG (ಹಿಂದಿನ ಡೈಮ್ಲರ್ ಕ್ರಿಸ್ಲರ್ AG)ನ ವಿಭಾಗ ಮಾತ್ರವೇ ಆಗಿದ್ದು, ಹಿಂದೆ ಡೈಮ್ಲರ್ -ಬೆನ್ಝ್/ಬೆನ್ಜ್ನ ಮಾಲೀಕತ್ವದಲ್ಲಿತ್ತು. ಮರ್ಸಿಡಿಸ್-ಬೆನ್ಜ್ ಕಾರ್ಲ್ ಬೆನ್ಝ್/ಬೆನ್ಜ್'ರ ೧೮೮೬ರ,[1] ಜನವರಿಯಲ್ಲಿ ನಿರ್ಮಿಸಲಾದ ಪ್ರಥಮ ಪೆಟ್ರೋಲ್-ಚಾಲಿತ ಮೋಟರ್ಸೈಕಲ್/ಮೋಟಾರುದ್ವಿಚಕ್ರ/ದ್ವಿಚಕ್ರವಾಹನ ಹಾಗೂ ಗಾಟ್ಲೀಬ್ ಡೈಮ್ಲರ್ರ ವಾಹನ ಹಾಗೂ ಅದೇ ವರ್ಷದಲ್ಲಿ ವಾಸ್ತುಶಿಲ್ಪಿ/ಎಂಜಿನಿಯರ್ ವಿಲ್ಹೆಲ್ಮ್ ಮೇಬ್ಯಾಚ್/ಮೇಬಾಷ್'ರು ೧೮೭೩ರ ಬೊಲ್ಲೀ ಹಬೆ-ಎಂಜಿನ್ ವಾಹನಕ್ಕೆ ಪೆಟ್ರೋಲ್ ಎಂಜಿನ್ ಸೇರಿಸಿ ನಿರ್ಮಿಸಿದ ಪರಿವರ್ತಿತ ವಾಹನಗಳನ್ನು ಆಧರಿಸಿದೆ. ಮರ್ಸಿಡಿಸ್ ವಾಹನವನ್ನು ಮೊದಲಿಗೆ ೧೯೦೧ರಲ್ಲಿ ಡೈಮ್ಲರ್ ಮೊಟೊರೆನ್ ಜೆ/ಗೆಸೆಲ್ಷಾಫ್ಟ್ ಸಂಸ್ಥೆಯು ಮಾರುಕಟ್ಟೆಗೆ ಬಿಟ್ಟಿತು. ಡೈಮ್ಲರ್ -ಬೆನ್ಝ್/ಬೆನ್ಜ್ ಕಂಪೆನಿಯ ಹೆಸರಿನಡಿ ಕಾರ್ಲ್ ಬೆನ್ಝ್/ಬೆನ್ಜ್'ರ ಹಾಗೂ ಗಾಟ್ಲೀಬ್ ಡೈಮ್ಲರ್'ರ ಕಂಪೆನಿಗಳ ವಿಲೀನವಾದ ನಂತರ ಮೊದಲ ಮರ್ಸಿಡಿಸ್-ಬೆನ್ಜ್ ಬ್ರಾಂಡ್ ಹೆಸರಿನ ವಾಹನಗಳನ್ನು ೧೯೨೬ರಲ್ಲಿ ಉತ್ಪಾದಿಸಲಾಯಿತು.[1] ಮರ್ಸಿಡಿಸ್-ಬೆನ್ಜ್ ಅನೇಕ ತಾಂತ್ರಿಕ ಹಾಗೂ ಸುರಕ್ಷತಾ ಹೊಸತನಗಳನ್ನು ಪರಿಚಯಿಸಿದ್ದು, ಹಲವು ವರ್ಷಗಳ ನಂತರ ಅವು ಇತರೆ ವಾಹನಗಳಲ್ಲಿ ಸಾಮಾನ್ಯವಾಗಿ ಲಭ್ಯವಾಗುವಂತಿವೆ.[2]
![]() | |
ಸಂಸ್ಥೆಯ ಪ್ರಕಾರ | Division of Daimler AG |
---|---|
ಸ್ಥಾಪನೆ | 1881 (1881) |
ಸಂಸ್ಥಾಪಕ(ರು) | Gottlieb Daimler, Karl Benz |
ಮುಖ್ಯ ಕಾರ್ಯಾಲಯ | Stuttgart, Baden-Württemberg |
ವ್ಯಾಪ್ತಿ ಪ್ರದೇಶ | Worldwide (except Mercedes-Benz vehicles and services with other distributors worldwide) |
ಪ್ರಮುಖ ವ್ಯಕ್ತಿ(ಗಳು) | Dieter Zetsche, CEO |
ಉದ್ಯಮ | Automotive industry |
ಉತ್ಪನ್ನ | Automobiles Trucks Buses Internal combustion engines |
ಸೇವೆಗಳು | Automotive financial services |
ಪೋಷಕ ಸಂಸ್ಥೆ | Daimler AG |
ಜಾಲತಾಣ | Mercedes-Benz.com |