ಮಧುಮೇಹ ಮೆಲ್ಲಿಟಸ್ 2ನೇ ವಿಧ
ಅಧಿಕ ರಕ್ತದ ಸಕ್ಕರೆಯ ಅಂಶ ಹಾಗೂ ಇನ್ಸುಲಿನ್ ಪ್ರತಿರೋಧವನ್ನು ಹೊಂದಿರುವ ಒಂದು ವಿದವಾದ ಡಯಾಬಿಟಿಸ್ ಮೆಲ್ಲಿಟಸ್ / From Wikipedia, the free encyclopedia
Main article: Diabetes mellitus
ಮಧುಮೇಹ ರೋಗ 2 (ಇದನ್ನು ಮೊದಲು ನಾನ್-ಇನ್ಸುಲಿನ್ ಅವಲಂಬಿತ ಮಧುಮೇಹ (ಎನ್ಐಡಿಡಿಎಮ್) ಅಥವಾ ವಯಸ್ಕ ಸ್ಥಿತಿ ಮಧುಮೇಹ ರೋಗವೆನ್ನಲಾಗಿತ್ತು ) ಕ್ರಮಬದ್ಧವಲ್ಲದ ಚಯಾಪಚಯ ಕ್ರಿಯೆಯಿಂದ ಉಂಟಾಗುವಂತಹದಾಗಿದ್ದು, ರಕ್ತದಲ್ಲಿ ಹೆಚ್ಚಿನ ಗ್ಲುಕೋಸ್ ಅಂಶ ಇನ್ಸುಲಿನ್ನ ನಿರೋಧಕತೆ ಮತ್ತು ಇನ್ಸುಲಿನ್ನ ಕೊರತೆಗಳು ಇದರ ಪ್ರಮುಖ ಲಕ್ಷಣಗಳು.[2] ಮಧುಮೇಹ ರೋಗವನ್ನು ಹೆಚ್ಚಾದ ವ್ಯಾಯಾಮ ಮತ್ತು ಆಹಾರ ಪದ್ಧತಿಯ ಬದಲಾವಣೆಗಳಿಂದ ಹತೋಟಿಗೆ ತರಬಹುದು. ಈ ಪರಿಸ್ಥಿತಿ ಮುಂದುವರೆದಲ್ಲಿ, ಔಷಧೋಪಚಾರ ಅಗತ್ಯವಾಗುತ್ತದೆ.
Quick Facts ICD-10, ICD-9 ...
ಮಧುಮೇಹ ಮೆಲ್ಲಿಟಸ್ 2ನೇ ವಿಧ | |
---|---|
Classification and external resources | |
ICD-10 | E11 |
ICD-9 | 250.00, 250.02 |
DiseasesDB | 3661 |
MedlinePlus | 000313 |
eMedicine | article/117853 |
MeSH | D003924 |
Close
ಇದು ಮಧುಮೇಹ 1 ರಂತೆ ಅಲ್ಲ, ಕೀಟೊಅಸಿಡೋಸಿಸ್ ಕಡೆಗೆ ಅಲ್ಪ ಪ್ರಮಾಣದ ಒಲವು ತೋರಿಸುತ್ತದೆ.[3] ಇಲ್ಲಿ ಉಂಟಾಗಬಹುದಾದ ಒಂದು ಪರಿಣಾಮವೆಂದರೆ ನಾನ್ ಕೀಟೊನಿಕ್ ಹೈಪರ್ ಗ್ಲೈಸೆಮಿಯಾ ಇದರಿಂದಾಗಿ ರಕ್ತದಲ್ಲಿ ಗ್ಲುಕೋಸ್ನ ಪ್ರಮಾಣ ಧೀರ್ಘಕಾಲ ಇರುವುದರಿಂದ ಹೃದಯ ಘಾತದ ತೊಂದರೆ, ಪಾರ್ಶ್ವವಾಯು, ಮತ್ತು ಮೂತ್ರ ಪಿಂಡದ ವಿಫಲತೆ ಉಂಟಾಗುತ್ತದೆ.