From Wikipedia, the free encyclopedia
ಮತಿಕೆಟ್ಟನ್ ಷೋಲಾ ರಾಷ್ಟ್ರೀಯ ಉದ್ಯಾನವನವು ಭಾರತದ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಉಡುಂಬಂಚೋಲಾ ತಾಲೂಕಿನ ಪೂಪಾರಾ ಗ್ರಾಮದಲ್ಲಿದೆ.[೧] ಈ ಉದ್ಯಾವನವನ್ನು ೨೧ ನವೆಂಬರ್ ೨೦೦೩ ರಂದು ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು. ಕೇಂದ್ರ ಸರ್ಕಾರವು ಶೂನ್ಯದಿಂದ ಒಂದು ಕಿಲೋಮೀಟರ್ ವರೆಗೆ ಗಡಿಯ ಸುತ್ತ ಪರಿಸರ ಸೂಕ್ಷ್ಮ ವಲಯ ಎಂದು ಅಧಿಸೂಚಿಸಿದೆ. ಈ ಉದ್ಯಾನವನವು ಎರವಿಕುಲಂ ರಾಷ್ಟ್ರೀಯ ಉದ್ಯಾನವನ ಮತ್ತು ಪಂಪಡಂ ಷೋಲಾ ರಾಷ್ಟ್ರೀಯ ಉದ್ಯಾನವನದಂತಹ ಇತರ ಮೀಸಲು ಅರಣ್ಯಗಳ ನಡುವೆ ಇದೆ.
ನಂಜನ್ದಾರ್ ಮೆಟ್ಟು ಮತ್ತು ಉಚ್ಚಿಲುಕುತ್ ಮೆಟ್ಟು ಎಂಬ ಎರಡು ವೀಕ್ಷಣಾ ಕೇಂದ್ರಗಳಿವೆ. ಈ ಪರ್ವತಗಳಿಂದ ತಮಿಳುನಾಡನ್ನು ನೋಡಬಹುದು.
ಈ ಪ್ರದೇಶವನ್ನು ೧೮೯೭ ರಲ್ಲಿ ತಿರುವಾಂಕೂರು ಸರ್ಕಾರವು ಮೀಸಲು ಅರಣ್ಯ ಎಂದು ಅಧಿಸೂಚಿಸಿತು. ಮತಿಕೆಟ್ಟನ್ ಷೋಲಾ ಉದ್ಯಾನವನವು ರಾಷ್ಟ್ರೀಯ ಉದ್ಯಾನವನವಾಗುವ ಮೊದಲು ಭೂಮಿಯ ಒಂದು ಭಾಗವನ್ನು ಏಲಕ್ಕಿ ಉತ್ಪಾದನೆಗೆ ಗುತ್ತಿಗೆಗೆ ನೀಡಲಾಗಿತ್ತು. ಮತಿಕೆಟ್ಟನ್ ಷೋಲಾ ಉದ್ಯಾನವನದ ಪರಿಸರ, ಪ್ರಾಣಿಸಂಕುಲ, ಸಸ್ಯಸಂಪತ್ತು, ಭೌಗೋಳಿಕ ಸಂಪತ್ತು ಮತ್ತು ಅದರ ಪರಿಸರವನ್ನು ರಕ್ಷಿಸಲು ಇದನ್ನು ೨೧ ನವೆಂಬರ್ ೨೦೦೩ ರಂದು ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು.[೨]
ಮತಿಕೆಟ್ಟನ್ನ್ನ ಉತ್ತರ ಭಾಗದಲ್ಲಿನ ಖಾಸಗಿ ಸಂಸ್ಥೆಗಳು, ಹಾಗೆಯೇ ಗುಡಲೂರು ವ್ಯಾಪ್ತಿಯ ಚಿನ್ನಮನೂರು ಫಾರೆಸ್ಟ್ ಬೀಟ್ನ ದಕ್ಷಿಣ ಭಾಗದಲ್ಲಿರುವ ಅರಣ್ಯಗಳು ಮತ್ತು ಜನವಸತಿಯಿಂದಾಗಿ ಮುನ್ನಾರ್ ವಿಭಾಗದಿಂದ ಮತಿಕೆಟ್ಟನ್ ಷೋಲಾಕ್ಕೆ ಬರುವ ಆನೆಗಳು ಬೋಡಿನಾಯಕನೂರ್ ಮತ್ತು ಕೊಟ್ಟಮಲೈ ಪ್ರದೇಶಗಳ ನಡುವೆ ಸಿಕ್ಕಿಹಾಕಿಕೊಳ್ಳುತ್ತವೆ.
ಮತಿಕೆಟ್ಟನ್ ಷೋಲಾವನ್ನು ಪೂಪಾರಾದಿಂದ ಮುನ್ನಾರ್ ಮೂಲಕ ಮುನ್ನಾರ್ - ಕುಮಿಲಿ ಹೆದ್ದಾರಿಯಲ್ಲಿ ತಲುಪಬಹುದು. ಕೋತಮಂಗಲಂ ಮೂಲಕ ಇಡುಕ್ಕಿ ಮಾರ್ಗದಲ್ಲಿ ಪೂಪಾರಾವನ್ನು ಸಹ ತಲುಪಬಹುದು. ಮಧುರೈ ವಿಮಾನ ನಿಲ್ದಾಣ ಮತ್ತು ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣಗಳು. ತಿರುವಲ್ಲಾ ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ.[೩]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.