ಮಂದಾರ್ಮನಿ
From Wikipedia, the free encyclopedia
ಮಂದಾರ್ಮನಿ ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ಒಂದು ಕಡಲಬದಿಯ ವಿಹಾರ ಗ್ರಾಮವಾಗಿದೆ. ಇದು ಬಂಗಾಳ ಕೊಲ್ಲಿಯ ಉತ್ತರ ತುದಿಯಲ್ಲಿ ಪೂರ್ವ ಮೇದಿನೀಪುರ್ ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಪಶ್ಚಿಮ ಬಂಗಾಳದ ಅತಿ ದೊಡ್ಡ ಕಡಲಬದಿ ವಿಹಾರಧಾಮಗಳಲ್ಲಿ ಒಂದಾಗಿದ್ದು ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದೆ.
ಇದು ಕೊಲ್ಕತ್ತ-ದೀಘಾ ಮಾರ್ಗದಲ್ಲಿ ಕೊಲ್ಕತ್ತ ವಿಮಾನ ನಿಲ್ದಾಣದಿಂದ ಹೆಚ್ಚುಕಡಿಮೆ ೧೮೦ ಕಿ.ಮಿ. ದೂರದಲ್ಲಿದೆ. ಸುಮಾರು ೧೩ ಕಿ.ಮಿ. ಉದ್ದದ ಬೀಚ್ನ ಮೇಲೆ ತೆವಳುವ ಕೆಂಪು ಏಡಿಗಳು ಮಂದಾರ್ಮನಿಯ ವಿಶೇಷ ಆಕರ್ಷಣೆಯಾಗಿದೆ. ಇದು ಭಾರತದಲ್ಲಿನ ಅತಿ ಉದ್ದದ ಚಾಲನೆ ಮಾಡಬಲ್ಲ ಬೀಚ್ ಎಂದು ವಾದಿಸಲಾಗಿದೆ.[1][2] ಇದು ಕೊಂಟಾಯ್ ಉಪವಿಭಾಗ ಪ್ರದೇಶದಡಿ ಸ್ಥಿತವಾಗಿದೆ.