ಮಂಡಲವು (ಅಕ್ಷರಶಃ "ವರ್ತುಲ") ಭಾರತೀಯ ಧರ್ಮಗಳಾದ ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಬ್ರಹ್ಮಾಂಡವನ್ನು ಪ್ರತಿನಿಧಿಸುವ ಆಧ್ಯಾತ್ಮಿಕ ಹಾಗೂ ಧರ್ಮಾಚರಣೆಯ ಸಂಕೇತವಾಗಿದೆ. ಸಾಮಾನ್ಯ ಬಳಕೆಯಲ್ಲಿ, "ಮಂಡಲ" ಶಬ್ದವು ತತ್ತ್ವ ಮೀಮಾಂಸಕದ ರೀತಿಯಲ್ಲಿ ಅಥವಾ ಸಾಂಕೇತಿಕವಾಗಿ ಅಂತರಿಕ್ಷವನ್ನು ಪ್ರತಿನಿಧಿಸುವ ಯಾವುದೇ ರೇಖಾಚಿತ್ರ, ನಕ್ಷೆ ಅಥವಾ ಜ್ಯಾಮಿತೀಯ ವಿನ್ಯಾಸಕ್ಕೆ ಜಾತಿವಿಶಿಷ್ಟವಾದ ಪದವಾಗಿದೆ; ಅಂದರೆ ಬ್ರಹ್ಮಾಂಡದ ಅಣುರೂಪ.
ಕೇಂದ್ರಬಿಂದುವಿನೊಂದಿಗೆ ಒಂದು ವರ್ತುಲವನ್ನು ಹೊಂದಿರುವ ನಾಲ್ಕು ದ್ವಾರಗಳಿರುವ ಚೌಕವು ಬಹುತೇಕ ಮಂಡಲಗಳ ಮೂಲ ರೂಪವಾಗಿದೆ. ಪ್ರತಿ ದ್ವಾರವು ಆಂಗ್ಲ ಟಿ ಅಕ್ಷರದ ಸಾಮಾನ್ಯ ಆಕಾರದಲ್ಲಿರುತ್ತದೆ.[1] ಹಲವುವೇಳೆ ಮಂಡಲಗಳು ತ್ರಿಜ್ಯೀಯ ಸಮತೋಲನವನ್ನು ಹೊಂದಿರುತ್ತವೆ.
ಋಗ್ವೇದದಲ್ಲಿ ಈ ಪದವು ಕೃತಿಯ ವಿಭಾಗಗಳ ಹೆಸರಾಗಿ ಕಾಣಿಸಿಕೊಳ್ಳುತ್ತದೆ, ಮತ್ತು ಇಂದಿನವರೆಗೂ ವೈದಿಕ ಕ್ರಿಯಾವಿಧಿಗಳು ನವಗ್ರಹ ಮಂಡಲದಂತಹ ಮಂಡಲಗಳನ್ನು ಬಳಸುತ್ತವೆ. ಮಂಡಲಗಳನ್ನು ಬೌದ್ಧ ಧರ್ಮದಲ್ಲಿಯೂ ಬಳಸಲಾಗುತ್ತದೆ.
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.