ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ
From Wikipedia, the free encyclopedia
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE )(ಹಿಂದಿ:राष्ट्रीय शेअर बाज़ार Rashtriya Śhare Bāzaār)(ರಾಷ್ಟ್ರೀಯ ಷೇರು ವಿನಿಮಯ), ಭಾರತದ ಮುಂಬಯಿನಲ್ಲಿ ಸ್ಥಾಪಿತವಾಗಿರುವ ಒಂದು ಷೇರು ವಿನಿಮಯ ಕೇಂದ್ರ. ಮಾರುಕಟ್ಟೆ ಬಂಡವಾಳೀಕರಣದಲ್ಲಿ ಇದು ವಿಶ್ವದಲ್ಲೇ ೧೦ನೇ ಅತ್ಯಂತ ದೊಡ್ಡ ಷೇರು ವಿನಿಮಯ ಕೇಂದ್ರವಾಗಿದೆ ಹಾಗು ಸಾಮಾನ್ಯ ಷೇರುಗಳು ಹಾಗು ಮೂಲ ವ್ಯಾಪಾರ ಎರಡಕ್ಕೂ ಪ್ರತಿನಿತ್ಯದ ವಹಿವಾಟಿನ ಮೊತ್ತ ಹಾಗು ವ್ಯವಹಾರಗಳ ಸಂಖ್ಯೆಯಿಂದ ಭಾರತದ ಅತ್ಯಂತ ದೊಡ್ಡ ಕೇಂದ್ರವೆನಿಸಿದೆ.[2] NSE ಸುಮಾರುUS$ ೧.೫೯ ಲಕ್ಷ ಕೋಟಿಯಷ್ಟು ಮಾರುಕಟ್ಟೆ ಬಂಡವಾಳೀಕರಣವನ್ನು ಹೊಂದಿರುವುದರ ಜೊತೆಗೆ ಡಿಸೆಂಬರ್ ೨೦೧೦ರ ಹೊತ್ತಿಗೆ NSEಯಲ್ಲಿ ೧,೫೫೨ಕ್ಕೂ ಅಧಿಕ ಸಂಸ್ಥೆಗಳು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ.[3] ಇತರ ಹಲವಾರು ವಿನಿಮಯ ಕೇಂದ್ರಗಳು ಅಸ್ತಿತ್ವದಲ್ಲಿದ್ದರೂ, NSE ಹಾಗು ಬಾಂಬೆ ಸ್ಟಾಕ್ ಎಕ್ಸ್ಚೇಂಜ್, ಭಾರತದ ಅತ್ಯಂತ ಪ್ರಮುಖ ಷೇರು ವಿನಿಮಯ ಕೇಂದ್ರಗಳಾಗಿವೆ, ಜೊತೆಗೆ ಇವುಗಳ ನಡುವೆ ದೊಡ್ಡ ಪ್ರಮಾಣದಲ್ಲಿ ಷೇರು ವಹಿವಾಟು ನಡೆಯುತ್ತದೆ. NSEಯ ಪ್ರಮುಖ ಬೆಲೆ ಸೂಚ್ಯಂಕವೆಂದರೆ S&P CNX ನಿಫ್ಟಿ, ಇದು NSE NIFTY (ನಿಫ್ಟಿ) ಎಂದು ಪರಿಚಿತವಾಗಿದೆ(ರಾಷ್ಟ್ರೀಯ ಷೇರು ವಿನಿಮಯ ಫಿಫ್ಟಿ), ಇದು ಮಾರುಕಟ್ಟೆ ಬಂಡವಾಳೀಕರಣದ ಮೂಲಕ ಒತ್ತು ನೀಡಲಾಗಿರುವ ಐವತ್ತು ಪ್ರಮುಖ ಷೇರುಗಳ ಬೆಲೆ ಸೂಚ್ಯಂಕವಾಗಿದೆ.
राष्ट्रीय शेअर बाज़ार | |
NSE Logo | |
ಪ್ರಕಾರ | Stock Exchange |
---|---|
ಸ್ಥಳ | Mumbai, India |
ನಿರ್ದೇಶಾಂಕಗಳು | 19°3′37″N 72°51′35″E |
ಸ್ಥಾಪನೆ | 1992 |
ಮಾಲೀಕ | National Stock Exchange of India Limited |
ಮುಖ್ಯ ವ್ಯಕ್ತಿಗಳು | Ravi Narain (MD) |
ಚಲಾವಣೆಯ ನಾಣ್ಯ/ಹಣ | Indian rupee (₹) |
No. of listings | 1,552 |
ಮಾರುಕಟ್ಟೆ ಬಂಡವಾಳ | US$1.59 trillion (Dec 2010)[1] |
ಸೂಚ್ಯಂಕಗಳು | S&P CNX Nifty CNX Nifty Junior S&P CNX 500 |
ಜಾಲತಾಣ | www.nse-india.com |
NSE ಪ್ರಮುಖ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು, ವಿಮೆ ಸಂಸ್ಥೆಗಳು ಹಾಗು ಭಾರತದ ಇತರ ಮಧ್ಯವರ್ತಿ ಹಣಕಾಸು ಸಂಸ್ಥೆಗಳ ಪರಸ್ಪರ ಒಡೆತನವನ್ನು ಹೊಂದಿದೆ ಆದರೆ ಇದರ ಸ್ವಾಮ್ಯ ಹಾಗು ನಿರ್ವಹಣೆಯು ಪ್ರತ್ಯೇಕ ಅಸ್ತಿತ್ವಗಳಾಗಿ ಕಾರ್ಯನಿರ್ವಹಿಸುತ್ತವೆ.[4] ಇಲ್ಲಿ ಕಡೇಪಕ್ಷ ಇಬ್ಬರು ವಿದೇಶಿ ಬಂಡವಾಳ ಹೂಡಿಕೆದಾರರಿದ್ದಾರೆ, NYSE ಯುರೋನೆಕ್ಸ್ಟ್ ಹಾಗು ಗೋಲ್ಡ್ಮನ್ ಸಚ್ಸ್, ಇವರು NSEಯಲ್ಲಿ ಹೂಡಿಕೆಯನ್ನು ಮಾಡಿದ್ದಾರೆ.[5]As of 2006[update], ಒಟ್ಟಾರೆ ೨೭೯೯ NSE VSAT ಟರ್ಮಿನಲ್ ಗಳು, ಭಾರತದಾದ್ಯಂತ ೧೫೦೦ ನಗರಗಳ ವ್ಯಾಪ್ತಿಯನ್ನು ಹೊಂದಿವೆ.[6] ಸಾಮಾನ್ಯ ಷೇರುಗಳ ವಹಿವಾಟಿನ ಸಂಖ್ಯಾದೃಷ್ಟಿಯಿಂದ NSE ವಿಶ್ವದ ಮೂರನೇ ಅತ್ಯಂತ ದೊಡ್ಡ ಷೇರು ವಿನಿಮಯ ಕೇಂದ್ರವೆನಿಸಿದೆ.[7] ೧೬.೬%ರಷ್ಟು ದಾಖಲೆ ಬೆಳವಣಿಗೆಯೊಂದಿಗೆ ಇದು ವಿಶ್ವದ ಎರಡನೇ ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿರುವ ಷೇರು ವಿನಿಮಯ ಕೇಂದ್ರವಾಗಿದೆ.[8]