![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/5d/Indian_Grey_Hornbill_I_IMG_4051.jpg/640px-Indian_Grey_Hornbill_I_IMG_4051.jpg&w=640&q=50)
ಭಾರತೀಯ ಬೂದು ಮಂಗಟ್ಟೆ
From Wikipedia, the free encyclopedia
ಭಾರತೀಯ ಬೂದು ಮಂಗಟ್ಟೆ ಅಥವಾ ಭಾರತೀಯ ಬೂದು ಹಾರ್ನ್ಬಿಲ್ (ಓಸಿಸೆರಾಸ್ ಬಿರೋಸ್ಟ್ರಿಸ್ ) ಪಕ್ಷಿಯು ಭಾರತೀಯ ಉಪಖಂಡದಲ್ಲಿ ಕಂಡುಬರುವ ಸಾಧಾರಣವಾದ ಮಂಗಟ್ಟೆ ಪಕ್ಷಿಯಾಗಿದೆ. ಇವು ಬಹುತೇಕವಾಗಿ ವೃಕ್ಷನಿವಾಸಿಯಾಗಿದ್ದು ಸಾಧಾರಣವಾಗಿ ಜೋಡಿಗಳಾಗಿ ಕಂಡುಬರುತ್ತವೆ. ಅವುಗಳ ದೇಹದಾದ್ಯಂತ ಬೂದು ಬಣ್ಣದ ಗರಿಗಳನ್ನು ಹೊಂದಿರುತ್ತವಲ್ಲದೆ ನಸು ಬೂದು ಬಣ್ಣದ ಅಥವಾ ಮಬ್ಬು ಬಿಳಿ ಬಣ್ಣದ ಉದರಭಾಗವನ್ನು ಹೊಂದಿರುತ್ತವೆ. ಇದರ ಕೊಂಬು ಕಪ್ಪು ಇಲ್ಲವೇ ದಟ್ಟ ಬೂದು ಬಣ್ಣದ್ದಾಗಿದ್ದು ಕೊಂಬಿನ ಬಾಗುವಿಕೆಯ ಬಿಂದುವಿನವರೆಗೆ ವಿಸ್ತರಿಸಿರುವ ಶಿಖೆಯನ್ನು ಹೊಂದಿರುತ್ತದೆ[2]. ಅಗಲವಾದ ಭಾರೀ ಸಾಲುಮರಗಳನ್ನು ಬಳಸಲು ಅವಕಾಶವಿರುವ ಹಾಗೂ ಅಂತಹಾ ಮರಗಳನ್ನು ಹೊಂದಿರುವ ರಸ್ತೆಗಳಿಂದ ಕೂಡಿದ ಮಹಾನಗರ ಪ್ರದೇಶಗಳಲ್ಲಿ ಮಂಗಟ್ಟೆ ತಳಿಗಳಲ್ಲಿ ಒಂದು ವಿಧದ ಪಕ್ಷಿಗಳು ಕಂಡುಬರುತ್ತದೆ.
Quick Facts ಭಾರತೀಯ ಬೂದು ಮಂಗಟ್ಟೆ, Conservation status ...
Close