ಭಾರತೀಯ ನೈಸರ್ಗಿಕ ಇತಿಹಾಸ
From Wikipedia, the free encyclopedia
ಭಾರತ ದಲ್ಲಿ ನೈಸರ್ಗಿಕ ಇತಿಹಾಸ ವು ಬಹಳ ಹಿಂದಿನ ದಾಖಲಿತ ಇತಿಹಾಸವನ್ನು ಹೊಂದಿದ್ದು, ವೇದಗಳ ಕಾಲದಷ್ಟು ಹಿಂದಕ್ಕೆ ಹೋಗುತ್ತದೆ. ಮೊದಲೆಲ್ಲ ನೈಸರ್ಗಿಕ ಇತಿಹಾಸ ಸಂಶೋಧನೆಯು ಪ್ರಾಗ್ಜೀವಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರಗಳ ವಿಸ್ತೃತ ಕ್ಷೇತ್ರವನ್ನು ಒಳಗೊಂಡಿತ್ತು. ಇಂದು ಈ ಅಧ್ಯಯನಗಳನ್ನು ಪರಿಸರವಿಜ್ಞಾನದ ಅಡಿಯಲ್ಲಿ ಪರಿಗಣಿಸಲಾಗುತ್ತದೆ. ಆದರೆ ಹಿಂದಿನ ಕಾಲದಲ್ಲಿ ಇಂತಹ ಸಂಶೋಧನೆಗಳನ್ನು ಮುಖ್ಯವಾಗಿ ಹವ್ಯಾಸಿಗಳು, ಹೆಚ್ಚಾಗಿ ವೈದ್ಯರು, ನಾಗರಿಕ ಸೇವೆಯಲ್ಲಿರುವವರು ಮತ್ತು ಸೇನಾ ಅಧಿಕಾರಿಗಳು ಕೈಗೆತ್ತಿಕೊಳ್ಳುತ್ತಿದ್ದರು.
ಭಾರತದಲ್ಲಿ ಆಧುನಿಕ ನೈಸರ್ಗಿಕ ಇತಿಹಾಸದ ಬೆಳವಣಿಗೆಗೆ ಮೂಲಕಾರಣರು ಬ್ರಿಟಿಶ್ ವಸಾಹತುಶಾಹಿಗಳು ಮತ್ತು ಬ್ರಿಟನ್ನಿನಲ್ಲಿ ನಡೆದ ನೈಸರ್ಗಿಕ ಇತಿಹಾಸದ ಬೆಳವಣಿಗೆ ಎನ್ನಬಹುದು. ಆದರೂ ಭಾರತವು ಅಪಾರ ವೈವಿಧ್ಯತೆಯುಳ್ಳ ಭೂಲಕ್ಷಣ, ಸಸ್ಯಗಳು ಮತ್ತು ಪ್ರಾಣಿಗಳನ್ನು ಹೊಂದಿದ್ದು, ಇನ್ನಿತರ ಉಷ್ಣವಲಯದ ವಸಾಹತುಗಳಂತೆ ಬ್ರಿಟನ್ನಿನಲ್ಲಿ ಮತ್ತು ವಿಶ್ವದ ಬೇರೆಡೆಗಳಲ್ಲಿ ನೈಸರ್ಗಿಕ ಇತಿಹಾಸದ ಕುರಿತು ಆಸಕ್ತಿಯನ್ನು ಹೆಚ್ಚಿಸಿತು ಎನ್ನಲು ಹಲವಾರು ಪುರಾವೆಗಳಿವೆ.[1] ಭಾರತದಲ್ಲಿ ನೈಸರ್ಗಿಕ ಇತಿಹಾಸವು ಹಳೆಯ ಸಂರಕ್ಷಣಾ ಪರಂಪರೆಗಳು, ಜನಪದ ಮತ್ತು ಕಲೆಯಿಂದಲೂ ಶ್ರೀಮಂತಗೊಂಡಿದೆ.[2]