ಭಾರತದಲ್ಲಿ ಪ್ರವಾಸೋದ್ಯಮ
From Wikipedia, the free encyclopedia
ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ. ಇದು ರಾಷ್ಟ್ರೀಯ GDPಗೆ 6.23% ಹಾಗೂ ಭಾರತದಲ್ಲಿ ಒಟ್ಟು ಉದ್ಯೋಗಕ್ಕೆ 8.78%ರಷ್ಟು ಕೊಡುಗೆ ನೀಡುತ್ತದೆ. ವಾರ್ಷಿಕ 5 ದಶಲಕ್ಷಕ್ಕಿಂತಲೂ ಹೆಚ್ಚು ವಿದೇಶೀ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದಾರೆ. ಅಂತೆಯೇ, 562 ದಶಲಕ್ಷ ದೇಶೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ.[1] ಭಾರತದ ಪ್ರವಾಸೋದ್ಯಮ ಸೇವಾ ವಲಯವು 2008ರಲ್ಲಿ ಸುಮಾರು US$100 ಶತಕೋಟಿ ಆದಾಯ ಗಳಿಸಿತು. ವಾರ್ಷಿಕ 9.4% ಅಭಿವೃದ್ಧಿ ದರದಲ್ಲಿ, 2018ರೊಳಗೆ US$275.5 ಶತಕೋಟಿ ಆದಾಯ ತರುವ ಸಾಧ್ಯತೆಯಿದೆ.[2] ಭಾರತದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ಪ್ರವಾಸೋದ್ಯಮ ಸಚಿವಾಲಯವು ಪ್ರಮುಖ ಸಂಪರ್ಕ ಸೇತುವಾಗಿದೆ. ಇದು 'ಅದ್ಭುತ ಭಾರತ' ಅಭಿಯಾನ ಹಮ್ಮಿಕೊಂಡಿದೆ.
ವಿಶ್ವ ಪರ್ಯಟನ ಮತ್ತು ಪ್ರವಾಸೋದ್ಯಮ ಸಮಿತಿ ಯ ಪ್ರಕಾರ, ಪರ್ಯಟನ ವಲಯದಲ್ಲಿ ಅತಿ ಹೆಚ್ಚು ಅಭಿವೃದ್ಧಿಯ ಸಾಮರ್ಥ್ಯ ಹೊಂದಿರುವ ಭಾರತ ಉಪಖಂಡ[3] ಕ್ಕೆ ಮುಂದಿನ ಹತ್ತು ವರ್ಷಗಳ ವರೆಗೆ ಪ್ರವಾಸೋದ್ಯಮಕ್ಕೆ ಪೂರಕವಾದ ಅಗತ್ಯ ಸಾಮರ್ಥ್ಯವಿದೆ. ವಿಶ್ವದಲ್ಲೇ ಅತಿ ಜನಪ್ರಿಯ ಪ್ರವಾಸೀ ಕೇಂದ್ರಬಿಂದುವಾಗಿ ಹೊರಹೊಮ್ಮಲಿದೆ.[4] 2007ರಲ್ಲಿ ಬಿಡುಗಡೆಯಾದ ಪರ್ಯಟನ ಮತ್ತು ಪ್ರವಾಸೋದ್ಯಮ ಪೈಪೋಟಿಯ ವರದಿ ಯ ಪ್ರಕಾರ, ಭಾರತ ದರಗಳ ಸ್ಫರ್ಧೆಯಲ್ಲಿ ಆರನೆಯ ಸ್ಥಾನ ಹಾಗೂ ಸುರಕ್ಷತೆ ಹಾಗೂ ಭದ್ರತೆಯ ವಿಚಾರದಲ್ಲಿ 39ನೆಯ ಸ್ಥಾನದಲ್ಲಿದೆ.[5] ಹೊಟೆಲ್ ಕೊಠಡಿಗಳ ಕೊರತೆ ಸೇರಿದಂತೆ ಅಲ್ಪ ಮತ್ತು ಮಧ್ಯಮಾವಧಿಯ ಹಿನ್ನಡೆಯುಂಟಾದರೂ,[6] ಪ್ರವಾಸೋದ್ಯದ ಆದಾಯವು 2007ರಿಂದ 2017ರ ವರೆಗಿನ ಅವಧಿಯಲ್ಲಿ 42%ರಷ್ಟು ವೃದ್ಧಿ ಕಾಣಲಿದೆ.[7]
ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರವು ಗಮನಾರ್ಹ ಅಭಿವೃದ್ಧಿ ಹೊಂದುತ್ತಿದೆ. 2010ರಲ್ಲಿ ದೆಹಲಿಯಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟವು ಭಾರತದ ಪ್ರವಾಸೋದ್ಯಮಕ್ಕೆ ಗಮನಾರ್ಹ ಪ್ರೋತ್ಸಾಹ ನೀಡುವ ನೀರಿಕ್ಷೆ ಇದೆ.