ಬ್ರೆಟ್ ಹಾರ್ಟ್
From Wikipedia, the free encyclopedia
ಬ್ರೆಟ್ ಸಾರ್ಜೆಂಟ್ ಹಾರ್ಟ್ (ಜುಲೈ 2 1957ರಲ್ಲಿ ಜನನ) ಕೆನಡಾದ ವೃತ್ತಿಪರ ಹಾಗೂ ಹವ್ಯಾಸಿ ಕುಸ್ತಿಪಟು ಮತ್ತು ಲೇಖಕ. ಪ್ರಸಕ್ತ ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೇನ್ಮೆಂಟ್(WWE)ಗೆ ಸಹಿ ಹಾಕಿದ್ದು, ಅದರ ರಾ ಬ್ರಾಂಡ್ನಲ್ಲಿ ಕಾಣಿಸಿಕೊಂಡಿದ್ದಾನೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಅವರ ವೃತ್ತಿಜೀವನದ ಉದ್ದಕ್ಕೂ ಬ್ರೆಟ್ "ಹಿಟ್ಮ್ಯಾನ್" ಹಾರ್ಟ್ ಎಂಬ ಹೆಸರಿನಲ್ಲಿ ಕುಸ್ತಿಯಾಡಿದರು. ರಿಂಗ್ ವೇಷಭೂಷಣವನ್ನು ಮತ್ತು "ಕಾರ್ಯರೂಪಕ್ಕೆ ತರುವ ಶ್ರೇಷ್ಠತೆ"ಯನ್ನು ಉಲ್ಲೇಖಿಸಿ "ದಿ ಪಿಂಕ್ ಎಂಡ್ ಬ್ಲಾಕ್ ಅಟ್ಯಾಕ್"[3][4] ಮೊದಲಾದ ಹೆಸರುಗಳಿಂದ ಜನಪ್ರಿಯನಾದ.[5] ಅವನು ಹಾರ್ಟ್ ವ್ರೆಸಲಿಂಗ್ ಫ್ಯಾಮಿಲಿಯ ಸದಸ್ಯನಾಗಿದ್ದ.
Born | (1957-07-02) ೨ ಜುಲೈ ೧೯೫೭ (ವಯಸ್ಸು ೬೭)[1] Calgary, Alberta, ಕೆನಡಾ[1] |
---|---|
Professional wrestling career | |
Ring name(s) | Bret Hart[1] Brett Hart[1] Buddy Hart[1] |
Billed height | 1.86 m (6 ft 1 in) |
Billed weight | 106.3 kg (234 lb) |
Billed from | Calgary, Alberta, Canada |
Trained by | Stu Hart[1] Katsuji Adachi[1] Kazuo Sakurada Harley Race[1] |
Debut | 1976[2] |
ಪ್ರೌಢಶಾಲೆ ಮತ್ತು ಕಲ್ಗಾರಿಯುದ್ಧಕ್ಕೂ ಹವ್ಯಾಸಿ ಕುಸ್ತಿ ಪಂದ್ಯಾವಳಿಗಳ ಯಶಸ್ಸಿನ ಹಿನ್ನೆಲೆಯಲ್ಲಿ,[6] ಹಾರ್ಟ್ ಹವ್ಯಾಸಿ ಕುಸ್ತಿಗೆ 1976ರಲ್ಲಿ ತನ್ನ ತಂದೆWWE ಹಾಲ್ ಆಫ್ ಫೇಮರ್ ಸ್ಟು ಹಾರ್ಟ್ ಕಂಪೆನಿ ಸ್ಟಾಂಪಡೆ ವ್ರೆಸ್ಲಿಂಗ್ಗೆ ಚೊಚ್ಚಲ ಪ್ರವೇಶ ಮಾಡಿದ. ಇಸವಿ 1984ರಲ್ಲಿ ಅವನು ವಿಶ್ವ ಕುಸ್ತಿ ಒಕ್ಕೂಟ(WWF; ಈಗ WWE)ಗೆ ಸಹಿಹಾಕಿದ ಮತ್ತು ಭಾವಿ ಬಾವಮೈದುನ ಜಿಮ್ ನೈಡ್ಹಾರ್ಟ್ ಜೋಡಿಯಾಗಿ ಯಶಸ್ವಿ ಟ್ಯಾಗ್ ತಂಡ ದಿ ಹಾರ್ಟ್ ಫೌಂಡೇಶನ್ ರಚಿಸಿ, ಸಿಂಗಲ್ಸ್ ವೃತ್ತಿಜೀವನವನ್ನು ಕೂಡ ನಡೆಸಿದ. WWF ಆಡಳಿತ ಮಂಡಳಿಯು ತಂಡವನ್ನು 1991ರಲ್ಲಿ ಪ್ರತ್ಯೇಕಿಸಿದಾಗ,ಹಾರ್ಟ್ ತನ್ನ ಸಿಂಗಲ್ಸ್ ವೃತ್ತಿಜೀವನವನ್ನು ಮುಂದುವರಿಸಿ, ತನ್ನ ಪ್ರಥಮ WWF ಚಾಂಪಿಯನ್ಶಿಪ್ ಮುಂದಿನ ವರ್ಷವೇ ಗೆದ್ದುಕೊಂಡ. "90ರ ಮಧ್ಯಾವಧಿಯಲ್ಲಿ ಬ್ರೆಟ್ "ಹಿಟ್ಮ್ಯಾನ್" ಹಾರ್ಟ್ ರೀತಿಯಲ್ಲಿ ಜನಪ್ರಿಯರಾದ ಸೂಪರ್ಸ್ಟಾರ್ಗಳು ಇದ್ದರೆ ಕೆಲವೇ ಮಂದಿ" ಎಂದು WWE ಪ್ರತಿಪಾದಿಸಿದೆ.[7] ಇಸವಿ 1997ರಲ್ಲಿ ಮಾಂಟ್ರಿಯಲ್ ಸ್ಕ್ರೂಜಾಬ್ ನಂತರ WWF ತೊರೆದ ಹಾರ್ಟ್ ಲಾಭಕರ ವಿಶ್ವ ಚಾಂಪಿಯನ್ಶಿಪ್ ಕುಸ್ತಿ(WCW)ಒಪ್ಪಂದ ಮಾಡಿಕೊಂಡ.ಅಲ್ಲಿ ಅವನು 2000ದಲ್ಲಿ ನಿವೃತ್ತಿಯಾಗುವ ತನಕ ಮುಂದುವರಿದ ಚಾಂಪಿಯನ್ಷಿಪ್ ಯಶಸ್ಸನ್ನು ಗಳಿಸಿದ. ಅವನು 2010ರಲ್ಲಿ WWEಗೆ ಹಿಂತಿರುಗಿ ಅನೇಕ ಬಾರಿ ಕಾಣಿಸಿಕೊಂಡ ಹಾಗೂ ಮಾಲೀಕ ವಿನ್ಸ್ ಮೆಕ್ಮೋಹನ್ ಜತೆ ಪೈಪೋಟಿಯಲ್ಲಿ ಭಾಗಿಯಾದ. ಹಾರ್ಟ್ ತನ್ನ ವೃತ್ತಿಪರ ಕುಸ್ತಿಜೀವನದಲ್ಲಿ ಖಳನಾಯಕ ಮತ್ತು ಫ್ಯಾನ್ಫೇವರಿಟ್ ಎರಡೂ ರೀತಿಯಲ್ಲಿ ಸ್ಪರ್ಧಿಸಿದ್ದಾನೆ ಹಾಗೂ ಸರ್ವಕಾಲಿಕ ಮಹಾನ್ ವೃತ್ತಿಪರ ಕುಸ್ತಿಪಟುಗಳಲ್ಲಿ ಒಬ್ಬ ಎಂದು ಉದ್ಯಮದಲ್ಲಿ ಪರಿಗಣಿಸಲ್ಪಟ್ಟಿದ್ದಾನೆ.[5][6] ಅನೇಕ ಮಂದಿ ಹೆಸರಾಂತ ವೃತ್ತಿಪರ ಕುಸ್ತಿಪಟುಗಳು ಹಾರ್ಟ್ ತನ್ನ ನೆಚ್ಚಿನ ಎದುರಾಳಿಗಳಲ್ಲಿ ಒಬ್ಬ ಎಂದು ಹೆಸರಿಸಿದ್ದಾರೆ.[8][9][10][11][12][13]
ತನ್ನ ವೃತ್ತಿಪರ ಕುಸ್ತಿ ಜೀವನದ ವಿವಿಧ ಕಂಪೆನಿಗಳಲ್ಲಿ ಹಾರ್ಟ್ 31 ಚಾಂಪಿಯನ್ಶಿಪ್ಗಳನ್ನು ಹೊಂದಿದ್ದ ಹಾಗೂ ಅವನನ್ನು 7 ಬಾರಿ ವಿಶ್ವಚಾಂಪಿಯನ್:ಐದು ಬಾರಿ WWF ಚಾಂಪಿಯನ್[14] ಮತ್ತು ಎರಡು ಬಾರಿ WCW ವಿಶ್ವಹೆವಿವೇಟ್ ಚಾಂಪಿಯನ್[15] ಹಾಗೂ ಎರಡನೇ WWF ಟ್ರಿಪಲ್ ಕ್ರೌನ್ ಚಾಂಪಿಯನ್ ಎಂದು WWE ಅವನನ್ನು ಗುರುತಿಸಿದೆ.[16] ಅವನು WCW ಯುನೈಟೆಡ್ ಸ್ಟೇಟ್ಸ್ ಹೆವಿವೇಟ್ ಚಾಂಪಿಯನ್ಶಿಪ್ ನಾಲ್ಕು ಬಾರಿ ಹೊಂದಿದ್ದಾನೆ : ಸಂಸ್ಥೆಯ ಇತಿಹಾಸದಲ್ಲಿ ಬಹುತೇಕ ಆಧಿಪತ್ಯವನ್ನು ಸಾಧಿಸಿದ್ದ.[17] ಚಾಂಪಿಯನ್ಶಿಪ್ಗಳ ಜತೆಗೆ,ಅವನು 1994ರ ರಾಯಲ್ ರಂಬಲ್ ಸಹ-ವಿಜೇತ(ಲೆಕ್ಸ್ ಲೂಜರ್ ಜತೆಯಲ್ಲಿ),WWE ಇತಿಹಾಸದಲ್ಲಿ 1991ರ ಪಂದ್ಯಾವಳಿ ಮತ್ತು 1993ರಲ್ಲಿ ಪ್ರಥಮ ಕಿಂಗ್ ಆಫ್ ದಿ ರಿಂಗ್ ಪೇ-ಪರ್-ವಿವ್ಯೂ ಗೆಲುವು ಗಳಿಸುವ ಮೂಲಕ ಎರಡು ಬಾರಿ ಕಿಂಗ್ ಆಫ್ ದಿ ರಿಂಗ್ ಪಡೆದ ಏಕೈಕ ಕುಸ್ತಿಪಟು. ಕ್ರೀಡಾ ಮನರಂಜನೆಯ ದೊಡ್ಡ ಹೆಸರುಗಳಲ್ಲಿ ಒಬ್ಬನಾದ ಹಾರ್ಟ್ನನ್ನು[5] ಮಾಜಿ ತೆರೆಯಮೇಲಿನ ಎದುರಾಳಿ ಸ್ಟೋನ್ ಕೋಲ್ಡ್ ಸ್ಟೀವ್ ಆಸ್ಟಿನ್ WWE ಹಾಲ್ ಆಫ್ ಫೇಮ್ಗೆ ಸೇರ್ಪಡೆ ಮಾಡಿದ.[18] ವ್ರೆಸಲ್ಮ್ಯಾನಿಯ XXVI ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿನ್ಸ್ ಮೆಕ್ಮಹೋನ್ರನ್ನು ಎದುರಿಸುವ ಸಲುವಾಗಿ ನಿವೃತ್ತಿಯಿಂದ ಹೊರಬಂದು, ಅದರಲ್ಲಿ ಜಯಗಳಿಸಿದ.[19]