ಬ್ರಿಸ್ಬೇನ್
From Wikipedia, the free encyclopedia
ಬ್ರಿಸ್ಬೇನ್ (/[unsupported input]ˈbrɪzbən/),[6] ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ ರಾಜ್ಯದ ರಾಜಧಾನಿಯಾಗಿದ್ದು, ಅತ್ಯಂತ ಜನನಿಬಿಡ ನಗರವಾಗಿದೆ. ಅಲ್ಲದೇ ಇದು ಆಸ್ಟ್ರೇಲಿಯಾದ ಮೂರನೇ ಅತ್ಯಂತ ಹೆಚ್ಚು ಜನಸಾಂದ್ರತೆಯುಳ್ಳ ನಗರವಾಗಿದೆ.[1] ಬ್ರಿಸ್ಬೇನ್ನ ಮೆಟ್ರೋಪಾಲಿಟನ್ (ಮಹಾನಗರದ) ಪ್ರದೇಶವು ಸರಿಸುಮಾರು 2 ಮಿಲಿಯನ್ನಷ್ಟು ಜನಸಂಖ್ಯೆಯನ್ನು ಹೊಂದಿದೆ.
Brisbane | |||||||||
---|---|---|---|---|---|---|---|---|---|
Bskylinemontage.png Top: Brisbane CBD, centre left: Brisbane City Hall, centre right: Shrine of Remembrance, centre: Story Bridge, bottom left: Conrad Treasury Casino, bottom right: Wheel of Brisbane. | |||||||||
Coordinates | 27°28′4″S 153°01′40″E | ||||||||
Population | 2,004,262(2009)[1][2][3] (3rd) | ||||||||
• Density | ೯೧೮/km2 (2,380/sq mi) (2006)[4] | ||||||||
Established | 1824 | ||||||||
Area | ೫,೯೦೪.೮ km2 (೨,೨೭೯.೯ sq mi)[5] | ||||||||
Time zone | AEST (UTC+10) | ||||||||
Location |
| ||||||||
LGA(s) | Brisbane, Ipswich, Logan, Moreton Bay, Redland, Scenic Rim | ||||||||
Region | South East Queensland | ||||||||
County | Stanley | ||||||||
State electorate(s) | various (38) | ||||||||
Federal Division(s) |
| ||||||||
|
ಬ್ರಿಸ್ಬೇನ್ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಮೂಲ ವಸಾಹತಿನ ಮೇಲೆ ನಿಂತಿದ್ದು, ಬ್ರಿಸ್ಬೇನ್ ನದಿಯ ತಿರುವಿನಲ್ಲಿದೆ. ನದಿಯ ಮುಖದಿಂದ ಮೊರ್ಟನ್ ಕೊಲ್ಲಿಯವರೆಗೆ ಸರಿಸುಮಾರು 23 ಕಿಲೋಮೀಟರ್ ದೂರದಲ್ಲಿದೆ. ಮೆಟ್ರೋಪಾಲಿಟನ್ ಪ್ರದೇಶವು, ಕೊಲ್ಲಿ ಮತ್ತು ಗ್ರೇಟ್ ಡಿವೈಡಿಂಗ್ ರೇಂಜ್ ನ ನಡುವೆ ಬ್ರಿಸ್ಬೇನ್ ನದಿ ಕಣಿವೆಯ ಒಳಹರಿವಿನ ಬಯಲಿನೊಂದಿಗೆ ಎಲ್ಲಾ ಕಡೆಗಳಲ್ಲಿ ಹರಡಿದೆ. ನಗರದ ಆಡಳಿತವನ್ನು ಅನೇಕ ನಗರಪಾಲಿಕೆಗಳು ನಿರ್ವಹಿಸುತ್ತಿದ್ದರು ಅವು ಬ್ರಿಸ್ಬೇನ್ ಸಿಟಿ ಕೌನ್ಸಿಲ್ ನ ಸುತ್ತಲು ಕೇಂದ್ರೀಕೃತವಾಗಿವೆ. ಇದು ವ್ಯಾಪಕ ಪ್ರದೇಶದ ಮತ್ತು ಬ್ರಿಸ್ಬೇನ್ ಮಹಾನಗರದಲ್ಲಿರುವ ಜನಸಂಖ್ಯೆಯ ಮೇಲೆ ನ್ಯಾಯಾಧಿಕಾರವನ್ನು ಹೊಂದಿದೆ. ಅಲ್ಲದೇ ಜನಸಂಖ್ಯೆಯಿಂದಾಗಿ ಇದು ಆಸ್ಟ್ರೇಲಿಯಾದ ಅತ್ಯಂತ ದೊಡ್ಡ ಸ್ಥಳೀಯ ಸರ್ಕಾರಿ ಪ್ರದೇಶವಾಗಿದೆ.
ಬ್ರಿಸ್ಬೇನ್ ನದಿಯಿಂದಾಗಿ ನಗರಕ್ಕೆ ಈ ಹೆಸರನ್ನು ಇಡಲಾಗಿದೆ. ಈ ನದಿಗೆ 1821 ರಿಂದ 1825 ರವರೆಗೆ ನ್ಯೂ ಸೌತ್ ವೇಲ್ಸ್ನ ಗವರ್ನರ್ ಆಗಿದ್ದಂತಹ ಸರ್ ಥಾಮಸ್ ಬ್ರಿಸ್ಬೇನ್ರವರ ಹೆಸರನ್ನು ಇಡಲಾಗಿತ್ತು. ರೆಡ್ ಕ್ಲಿಫೆಯಲ್ಲಿನ ದಂಡನೆಯ ನೆಲೆ ಕ್ವೀನ್ಸ್ಲ್ಯಾಂಡ್ನಲ್ಲಿ ಸ್ಥಾಪಿಸಿದ ಮೊದಲ ಯುರೋಪಿಯನ್ ವಸಾಹತಾಗಿದೆ,28 kilometres (17 mi) ಇದನ್ನು 1824 ರಲ್ಲಿ ಸ್ಥಾಪಿಸಲಾಗಿದ್ದು, ಇದು ಬ್ರಿಸ್ಬೇನ್ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ನ ಉತ್ತರಕ್ಕಿದೆ. ಈ ನೆಲೆಯನ್ನು ಶೀಘ್ರದಲ್ಲಿ ಬಿಟ್ಟುಬಿಟ್ಟು, 1825 ರಲ್ಲಿ ನಾರ್ತ್ ಕೀಗೆ ಸರಿಸಲಾಯಿತು. 1842ರಿಂದ ಮುಕ್ತ ವಲಸಿಗರಿಗೆ ಅನುಮತಿಯನ್ನು ನೀಡಲಾಯಿತು. 1859 ರಲ್ಲಿ ಕ್ವೀನ್ಸ್ಲ್ಯಾಂಡ್ಅನ್ನು ನ್ಯೂ ಸೌತ್ ವೇಲ್ಸ್ನಿಂದ ಪ್ರತ್ಯೇಕವಾದ ವಸಾಹತು ಎಂದು ಘೋಷಿಸಿದಾಗ ಬ್ರಿಸ್ಬೇನ್ಅನ್ನು ರಾಜಧಾನಿಯನ್ನಾಗಿ ಆಯ್ಕೆಮಾಡಲಾಯಿತು.
ಮಹಾಯುದ್ಧ II ರ ಸಮಯದಲ್ಲಿ ಮಿತ್ರರಾಷ್ಟ್ರಗಳ ಕಾರ್ಯಾಚರಣೆಯಲ್ಲಿ ನಗರವು, ಜನರಲ್ ಡೌಗ್ಲಾಸ್ ಮ್ಯಾಕ್ ಅರ್ಥರ್ ರವರಿಗೆ ಸೌತ್ ವೆಸ್ಟ್ ಪೆಸಿಫಿಕ್ ಹೆಡ್ ಕ್ವಾಟರ್ಸ್ ಆಗುವುದರೊಂದಿಗೆ ಪ್ರಮುಖ ಪಾತ್ರವನ್ನು ವಹಿಸಿದೆ. 1982 ರ ಕಾಮನ್ ವೆಲ್ತ್ ಕ್ರೀಡಾಕೂಟಗಳು, ವಲ್ಡ್ ಎಕ್ಸ್ ಪೊ '88 ಮತ್ತು 2001 ರಲ್ಲಿ ಅಂತಿಮ ಗುಡ್ ವಿಲ್ ಆಟಗಳನ್ನು ಒಳಗೊಂಡಂತೆ ಬ್ರಿಸ್ಬೇನ್ ನಲ್ಲಿ ದೊಡ್ಡ ದೊಡ್ಡ ಅನೇಕ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳು ನಡೆದಿವೆ. 2008 ರಲ್ಲಿ, ಲಾಗ್ ಬರೋಗ್ ವಿಶ್ವವಿದ್ಯಾನಿಲಯ ನಡೆಸಿದಂತಹ ವಿಶ್ವ ನಗರಗಳ ಅಧ್ಯಯನ ತಂಡದ ಪಟ್ಟಿಯಲ್ಲಿ ಬ್ರಿಸ್ಬೇನ್ ಅನ್ನು ಗಾಮಾ ವಲ್ಡ್ ಸಿಟಿ+ ಎಂದು ವಿಂಗಡಿಸಲಾಗಿದೆ.[7] ಇಷ್ಟೇ ಅಲ್ಲದೇ 2009 ರಲ್ಲಿ ದಿ ಎಕನಾಮಿಸ್ಟ್ ನಿಯತಕಾಲಿಕೆ ಇದಕ್ಕೆ ವಿಶ್ವದಲ್ಲೇ 16 ನೇ ಅತ್ಯಂತ ವಾಸಯೋಗ್ಯ ನಗರವೆಂಬ ಸ್ಥಾನವನ್ನು ನೀಡಿದೆ.