ಬ್ರಿಟ್ನಿ ಸ್ಪಿಯರ್ಸ್
From Wikipedia, the free encyclopedia
ಬ್ರಿಟ್ನಿ ಜೀನ್ ಸ್ಪಿಯರ್ಸ್ (ಆಂಗ್ಲ:Britney Jean Spears, ಜನನ ಡಿಸೆಂಬರ್ ೨,೧೯೮೧) - ಒಬ್ಬ ಅಮೆರಿಕಾದ ಸಂಗೀತಗಾರ್ತಿ ಮತ್ತು ಮನೋರಂಜನೆಗಾರ್ತಿ. ಮಿಸ್ಸಿಸಿಪ್ಪಿಯಲ್ಲಿ ಜನನವಾಯಿತು ಮತ್ತು ಬಾಲ್ಯದ ಬೆಳವಣಿಗೆ ಲೌಸಿಯಾನ ದಲ್ಲಿ, ಸ್ಪಿಯರ್ಸ್ ಮೊದಲು ೧೯೯೨ ರಲ್ಲಿ ನ್ಯಾಷನಲ್ ಟೆಲಿವಿಷನ್ನಲ್ಲಿ ಕಾಣಿಸಿಕೊಂಡಳು, ಹಾಗೆಯೇ ಮುಂದುವರೆದು ಡಿಸ್ನಿ ಚಾನೆಲ್ನ ಟಿ.ವಿ.ಯಲ್ಲಿ ೧೯೯೩ ರಿಂದ ೧೯೯೪ ಸ್ಟಾರ್ ಸರ್ಚ್ ಕಾರ್ಯಕ್ರಮದಲ್ಲಿ ಸ್ಪರ್ಧಿ ಯಾಗಿ ಕಾಣಿಸಿಕೊಂಡು ಹಾಗೂ ೧೯೯೩ ರಿಂದ ೧೯೯೪ರಲ್ಲಿ ಡಿಸ್ನಿ ಚಾನೆಲ್ನ ದಿ ನ್ಯೂ ಮಿಕ್ಕಿ ಮೌಸ್ ಕ್ಲಬ್ ಸರಣಿಯ ತಾರೆಯಾಗಿ ಮೆರೆದಳು. ೧೯೯೭ ರಲ್ಲಿ , ಸ್ಪಿಯರ್ಸ್ ಜೈವ್ನೊಂದಿಗೆ ಧ್ವನಿ ಮುದ್ರಣ ಒಪ್ಪಂದವೊಂದಕ್ಕೆ ಸಹಿ ಹಾಕಿ, ತನ್ನ ಪ್ರಥಮ ಆಲ್ಬಮ್ ಅನ್ನು ಬಿಡುಗಡಗೊಳಿಸಿದಳು ... ೧೯೯೯ರಲ್ಲಿ ಬೇಬಿ ಒನ್ ಮೋರ್ ಟೈಮ್ . ಈ ಮೊದಲನೆಯ ಆಲ್ಬಮ್ ಬಿಲ್ಬೋರ್ಡ್ 200ನಲ್ಲಿ ಅಗ್ರ ಸ್ಥಾನ ಪಡೆಯಿತು ಹಾಗೂ ವಿಶ್ವದಾದ್ಯಂತ ೨೫ ಮಿಲಿಯನ್ ಗೂ ಹೆಚ್ಚಾದ ಪ್ರತಿಗಳು ಮಾರಾಟವಾದವು. ಸೋಫೋ ಮೋರ್ ಆಲ್ಬಮ್ ನ ಬಿದುಗಡೆಯೊಂದಿಗೆ ಆಕೆಯ ಯಶಸ್ಸು ಮುಂದುವರೆಯಿತು ಊಪ್ಸ್ !... ೨೦೦೦ದಲ್ಲಿ ಐ ಡಿಡ್ ಇಟ್ ಅಗೈನ್ ನಿಂದ ಅವಳು ಪಾಪ್ ಐಕಾನ್ ಆಗಿ ಗುರುತಿಸಲ್ಪಟ್ಟಳು ಹಾಗೂ ೧೯೯೦ರ ಕೊನೆಯ ಭಾಗದಲ್ಲಿ ಯುವ ಪಾಪ್ನ ಮರುಹುಟ್ಟಿನ ಸಮಯದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಕೀರ್ತಿಗಳಿಸಿದಳು.[1]
Britney Spears | |
---|---|
![]() Spears performing "Circus" at the O2 Arena on June 6, 2009. | |
ಹಿನ್ನೆಲೆ ಮಾಹಿತಿ | |
ಜನ್ಮನಾಮ | Britney Jean Spears |
ಮೂಲಸ್ಥಳ | Kentwood, Louisiana, United States |
ಸಂಗೀತ ಶೈಲಿ | Pop, dance-pop, R&B |
ವೃತ್ತಿ | Entertainer |
ವಾದ್ಯಗಳು | Vocals, piano |
ಸಕ್ರಿಯ ವರ್ಷಗಳು | 1993–present |
Labels | Jive |
Associated acts | The New Mickey Mouse Club, innosense |
ಅಧೀಕೃತ ಜಾಲತಾಣ | www.britneyspears.com www.britney.com |
೨೦೦೧ರಲ್ಲಿ ಬ್ರಿಟ್ನೆ ಯನ್ನು ಬಿಡುಗಡೆಗೊಳಿಸಿದಳು ಮತ್ತು -- ಕ್ರಾಸ್ ರೋಡ್ಸ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದಳು. ತನ್ನ ನಾಲ್ಕನೆಯ ಸ್ಟೂಡಿಯೋ ಆಲ್ಬಮ್ ಇನ್ ದಿ ಝೋನ್ ೨೦೦೩ರಲ್ಲಿ ಬಿಡುಗಡೆಮಾಡುವಾಗ ಆಕೆ ಅದರ ಮೇಲಿನ ರಚನಾತ್ಮಕ ನಿಯಂತ್ರಣವನ್ನು ಹೊಂದಿದ್ದಳು.ತನ್ನ ನಾಲ್ಕೂ ಆಲ್ಬಮ್ಗಳಿಗೂ ಅಗ್ರಸ್ಥಾನ ಪಡೆದ ಏಕೈಕ ಮಹಿಳಾ ಕಲಾವಿದೆ ಎಂದು ನೀಲ್ಸೆನ್ ಸೌಂಡ್ಸ್ಕ್ಯಾನ್ ಯುಗದಲ್ಲಿಯೇ ಪ್ರಸಿದ್ಧಿಯಾಗಿದ್ದಳು. ಆಕೆಯ ಐದನೇ ಸ್ಟುಡಿಯೋ ಆಲ್ಬಮ್ , ಬ್ಲಾಕ್ ಔಟ್ ೨೦೦೭ ರಲ್ಲಿ ಬಿಡುಗಡೆಯಾಯಿತು. ಆಕೆಯ ಆರನೆಯ ಸ್ಟುಡಿಯೋ ಆಲ್ಬಮ್ ಸರ್ಕಸ್ ೨೦೦೮ರಲ್ಲಿ ಬಿಡುಗಡೆಯಾಯಿತು, ಅದು ಕೂಡ ಬಿಲ್ಬೋರ್ಡ್ 200 ಆಲ್ಬಮ್ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು
ಜೋಂಬ ಲೇಬಲ್ ಗುಂಪು ಮತ್ತು ಸೋನಿ ಸಂಗೀತದ ಪ್ರಕಾರ ಸ್ಪಿಯರ್ಸ್ನ ೮೫ಮಿಲಿಯನ್ ರೆಕಾರ್ಡ್ ಗಳು ವಿಶ್ವದಾದ್ಯಂತ ಮಾರಾಟವಾಗಿದೆ.[2][3][4] ಯು.ಎಸ್ನ ಎಂಟನೆ ಅತಿ ಹೆಚ್ಚು ಮಾರಾಟವುಳ್ಳ ಧ್ವನಿ ಮುದ್ರಣಗಳನ್ನು ಮಾಡಿದ ಹೆಣ್ಣು ಕಲಾವಿದೆ ಎಂದು ಗುರುತಿಸಲಾಗಿದೆ. ೩೨ ಮಿಲಿಯನ್ ಆಲ್ಬಮ್ ಕಾಪಿಗಳುಳ್ಳ ಧ್ವನಿ ಸುರುಳಿಯನ್ನು RIAA ಪ್ರಮಾಣಿಸಿದೆ,[5] ಪ್ರಸ್ತುತ ದೇಶದಲ್ಲಿ ಐದನೆಯ ಸ್ಥಾನದಲ್ಲಿರುವ ಅತಿ ಹೆಚ್ಚು ಮಾರಾಟವಾಗುವ ದಶಕದ ಕಲಾವಿದೆ, ಅಲ್ಲದೆ ಉನ್ನತ ಮಟ್ಟದ ಹೆಣ್ಣು ಕಲಾವಿದೆ.[6] ಫೋರ್ಬ್ಸ್ ೨೦೦೯ ವರದಿ ಮಾಡಿರುವಂತೆ ಸ್ಪಿಯರ್ಸ್ ೧೩ನೆಯ ಅತಿ ಹೆಚ್ಚು ಪ್ರಖ್ಯಾತಿಗಳಿಸಿದ ವ್ಯಕ್ತಿ, ಮತ್ತು ೨೦೦೯ರಲ್ಲಿ $೩೫ ಮಿಲಿಯನ್ ಡಾಲರ್ಸ್ ಗಳಿಸುವ ಮೂಲಕ ೨ನೆಯ ಅತಿ ಹೆಚ್ಚು ಗಳಿಸಿದ ವರ್ಷದ ಯುವ ಸಂಗೀತಗಾರ್ತಿ ಎನ್ನಿಸಿಕೊಂಡಿದ್ದಾಳೆ.[7][8]