ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕ
From Wikipedia, the free encyclopedia
ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕ ವನ್ನು ಅನೇಕ ಸಲ ಸಂಕ್ಷಿಪ್ತವಾಗಿ ಬ್ರಾಡ್ಬ್ಯಾಂಡ್ ಎಂದು ಕರೆಯಲಾಗುತ್ತದೆ, ಅತಿ ಹೆಚ್ಚು ಮಾಹಿತಿ ಪ್ರಸರಣ ವೇಗದ ಅಂತರಜಾಲ ಸಂಪರ್ಕ, ಇದು 56k ಮೊಡೆಮ್ ಬಳಸಿ ಡಯಲ್ ಅಪ್ ಸಂಪರ್ಕ ಪಡೆದುಕೊಳ್ಳುವುದಕ್ಕಿಂತ ಭಿನ್ನವಾದ ಸಂಪರ್ಕ ವ್ಯವಸ್ಥೆ.
ಡಯ ಅಪ್ ಮೊಡೆಮ್ಗಳು ಸೆಕೆಂಡಿಗೆ 56 kbit/s (ಒಂದು ಸೆಕೆಂಡಿಗೆ ಕಿಲೋಬಿಟ್ಗಳು) ಗಿಂತ ಕಡಿಮೆ ಬೈಟ್ರೇಟ್ ದರಕ್ಕೆ ಸೀಮಿತ ಮತ್ತು ಇದರಲ್ಲಿ ದೂರವಾಣಿ ಸಂಪರ್ಕದ ಸಂಪೂರ್ಣ ಬಳಕೆಯ ಅಗತ್ಯವ್ವಿದೆ, ಆದರೆ ಬ್ರಾಡ್ಬ್ಯಾಂಡ್ ತಂತ್ರಜ್ಞಾನಗಳು ಇದಕ್ಕಿಂತ ಎರಡರಷ್ಟು ವೇಗವನ್ನು ಒದಗಿಸುತ್ತವೆ ಮತ್ತು ಸಾಮಾನ್ಯವಾಗಿ ದೂರವಾಣಿ ಸಂಪರ್ಕಕ್ಕೆ ತಡೆ ಉಂಟುಮಾಡುವುದಿಲ್ಲ.
ಬ್ರಾಡ್ಬ್ಯಾಂಡಿನ ನಿರೂಪದಲ್ಲಿ 64 kbit/sನಿಂದ 2.0 Mbit/s[1] ತನಕ, ಅನೇಕ ಕನಿಷ್ಟ ಬ್ಯಾಂಡ್ ವಿಸ್ತಾರಗಳನ್ನು ಬಳಸಿದರೂ 2006 ರ OECD ವರದಿ[2] ಬ್ರಾಡ್ಬ್ಯಾಂಡನ್ನು ಡೌನ್ಲೋಡ್ ವ್ಯವಸ್ಥೆ ಮತ್ತು ಮಾಹಿತಿ ಪ್ರಸರಣ ವೇಗ 256 kbit/sಗೆ ಸಮನಾಗಿರಬೇಕು, ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು ಎಂಬುದಾಗಿ ನಿಖರ ನಿರೂಪ ಕೊಡುತ್ತದೆ.ಅಮೇರಿಕಾ ಸಂಯುಕ್ತಸಂಸ್ಥಾನದ (US) ಫೆಡರಲ್ ಕಮ್ಯುನಿಕೇಷನ್ ಕಮಿಷನ್ (FCC) ಪ್ರಾಥಮಿಕ ಬ್ರಾಡ್ಬ್ಯಾಂಡನ್ನು ಕನಿಷ್ಟ ಪಕ್ಷ ಒಂದು ದಿಕ್ಕಿನಲ್ಲಿ (ಇಂಟರ್ನೆಟ್ ಬಳಕೆದಾರನ ಕಂಪ್ಯೂಟರಿಗೆ) ಅಥವಾ ಮೇಲು ಹಂತದಲ್ಲಿ (ಬಳಕೆದಾರನ ಕಂಪ್ಯೂಟರಿನಿಂದ ಇಂಟರ್ನೆಟ್ಗೆ), 2009ರಂತೆ ಮಾಹಿತಿ ಪ್ರಸರಣ ವೇಗ ಸೆಕೆಂಡಿಗೆ 768 ಕಿಲೋಬಿಟ್ಸ್ (Kbps), ಅಥವಾ ಸೆಕೆಂಡಿಗೆ 768,000 ಬಿಟ್ಸ್ ಇರಬೇಕೆಂದು ನಿರೂಪಿಸುತ್ತದೆ.[3] ಇರುವ ಪರಿಸ್ಥಿತಿ ಏನೆಂದರೆ ಮಾರುಕಟ್ಟೆಗಳು ವೇಗದ ಸೇವೆಗಳನ್ನು ಒದಗಿಸುತ್ತಿರುವಾಗ ಬ್ರಾಡ್ಬ್ಯಾಂಡಿನ ನಿರೂಪದ ಮಿತಿಯನ್ನು ವಿಸ್ತರಿಸಬೇಕು.[4]
ಮಾಹಿತಿದರಗಳನ್ನು ಗರಿಷ್ಟ ಡೌನ್ಲೋಡ್ ಎಂಬ ಅರ್ಥದಲ್ಲಿ ನಿರೂಪಿಸಲಾಗಿದೆ ಏಕೆಂದರೆADSLನಂತಹ ಅನೇಕ ಸಾಮಾನ್ಯ ಗ್ರಾಹಕ ಬ್ರಾಡ್ಬ್ಯಾಂಡ್ ತಂತ್ರಜ್ಞಾನಗಳು ಡೌನ್ಲೋಡ್ಗಿಂತ ಹೆಚ್ಚು ನಿಧಾನವಾದ ಗರಿಷ್ಟ ಮಾಹಿತಿ ಅಪ್ಲೋಡ್ ಸಾಮರ್ಥ್ಯದ "ಅಸಿಮೆಟ್ರಿಕ್"—ಸ್ವಭಾವ ಹೊಂದಿವೆ.
"ಬ್ರಾಡ್ಬ್ಯಾಂಡ್ ಪೆನೆಟ್ರೇಷನ್" ಅನ್ನು ಈಗ ನಿರ್ಣಾಯಕ ಆರ್ಥಿಕ ಸೂಚಕವಾಗಿ ಕಾಣಲಾಗುತ್ತಿದೆ.[2][5]