ಬ್ರಹ್ಮಪುತ್ರ
From Wikipedia, the free encyclopedia
ಹಲವು ರಾಷ್ಟ್ರಗಳ ಎಲ್ಲೆಯನ್ನು ಮೀರಿ ಹರಿಯುವ ಬ್ರಹ್ಮಪುತ್ರ ಏಷ್ಯಾದ ಪ್ರಮುಖ ನದಿಗಳಲ್ಲಿ ಒಂದು. ನೈಋತ್ಯ ಟಿಬೆಟ್ ನ ಮಾನಸಸರೋವರದ"ಚೆಮಯಂಗ್ ಡಂಗ್" ಬಳಿ ಉಗಮಿಸುವ ಈ ನದಿ ಅಲ್ಲಿ ಯಾರ್ಲುಂಗ್ ಟ್ಸಾಂಗ್ಪೋ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಮುಂದೆ ದಕ್ಷಿಣ ಟಿಬೆಟ್ ನಲ್ಲಿ ಹರಿಯುವಾಗ ಡಿಯಾಂಗ್ ಎಂದು ಕರೆಸಿಕೊಳ್ಳುವುದು. ಆ ನಂತರ ಹಿಮಾಲಯವನ್ನು ದಾಟಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಸ್ಸಾಮ್ ರಾಜ್ಯಗಳಲ್ಲಿ ನೈಋತ್ಯಾಭಿಮುಖವಾಗಿ ಹರಿಯುವುದು.